ಸಿಯಾಜ್ ರೀಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಹೊಸ ರೀಬ್ಯಾಡ್ಜ್ ಆವೃತ್ತಿಯಾದ ಬೆಲ್ಟಾ ಸೆಡಾನ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಮಾರುತಿ ಸುಜುಕಿ ನಿರ್ಮಾಣದ ಸಿಯಾಜ್ ಆಧರಿಸಿ ಅಭಿವೃದ್ದಿಗೊಂಡಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಹೊಸ ಕಾರುಗಳ ಉತ್ಪಾದನೆಗಾಗಿ ಸಹಭಾಗೀತ್ವ ಘೋಷಣೆ ಮಾಡಿರುವ ಟೊಯೊಟಾ ಮತ್ತು ಸುಜುಕಿ ಕಂಪನಿಯು ಭಾರತದಲ್ಲಿ ಈಗಾಗಲೇ ಬಲೆನೊ ಮತ್ತು ವಿಟಾರಾ ಬ್ರೆಝಾ ಕಾರಿನ ರೀಬ್ಯಾಡ್ಜ್ ಮಾದರಿಗಳಾದ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಕಂಪನಿಯು ಮೂರನೇ ಕಾರು ಮಾದರಿಯಾಗಿ ಸಿಯಾಜ್ ಮಾದರಿಯ ರೀಬ್ಯಾಡ್ಜ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ರೀಬ್ಯಾಡ್ಜ್ ಹೊಂದಿರುವ ಮಾರುತಿ ಸಿಯಾಜ್ ಕಾರು ಮಾದರಿಯು ಬೆಲ್ಟಾ ಹೆಸರಿನಲ್ಲಿ ಬಿಡುಗಡೆಯಾಗಲಿದ್ದು, ರೀಬ್ಯಾಡ್ಜ್ ಮಾದರಿಯನ್ನು ಮಾರಾಟ ಮಾಡಲಿರುವ ಟೊಯೊಟಾ ಕಂಪನಿಯು ಹೊಸ ಕಾರನ್ನು ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ಮಾಡಲಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಆರಂಭಿಕ ಹಂತವಾಗಿ ಹೊಸ ಬೆಲ್ಟಾ ಕಾರನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪರಿಚಯಿಸುತ್ತಿದ್ದು, ಹೊಸ ಕಾರನ್ನು ಟೊಯೊಟಾ ಕಂಪನಿಯು ಭಾರತದಿಂದ ರಫ್ತುಗೊಳಿಸಲಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಇತ್ತೀಚೆಗೆ ತನ್ನ ಯಾರಿಸ್ ಸೆಡಾನ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿದ ನಂತರ ಯಾರಿಸ್ ಸ್ಥಾನಕ್ಕೆ ಹೊಸ ರೀಬ್ಯಾಡ್ಜ್ ಮಾದರಿಯನ್ನು ಪರಿಚಯಿಸಲು ನಿರ್ಧರಿಸಿದ್ದು, ಕಂಪನಿಯು ಶೀಘ್ರದಲ್ಲಿಯೇ ಹೊಸ ಕಾರನ್ನು ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಲಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಬೆಲ್ಟಾ ಮಾದರಿಯನ್ನು ಈಗಾಗಲೇ ಜಪಾನ್ ಮಾರುಕಟ್ಟೆಯಲ್ಲಿ 2005ರಿಂದ 2012ರ ತನಕ ಮಾರಾಟ ಮಾಡಿ ಸ್ಥಗಿತಗೊಳಿಸಿದ್ದು, ಇದೀಗ ಬೆಲ್ಟಾ ಮಾದರಿಯ ಹೆಸರನ್ನೇ ಸಿಯಾಜ್ ರೀಬ್ಯಾಡ್ಜ್ ಮಾದರಿಯೊಂದಿಗೆ ಮಾರಾಟ ಪುನಾರಂಭಿಸುತ್ತಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಮಧ್ಯಮ ಕ್ರಮಾಂಕದ ಹಲವು ಕಾರು ಮಾದರಿಗಳನ್ನು ಮಾರಾಟದಿಂದ ಸ್ಥಗಿತಗೊಳಿಸಿದ್ದು, ಪ್ರೀಮಿಯಂ ಕಾರುಗಳ ಮಾರಾಟ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಇದಕ್ಕಾಗಿಯೇ ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟವನ್ನು ರೀಬ್ಯಾಡ್ಜ್ ಆವೃತ್ತಿಗಳೊಂದಿಗೆ ಪ್ರಬಲಗೊಳಿಸುತ್ತಿರುವ ಟೊಯೊಟಾ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಬೆಲ್ಟಾ ಕಾರು ಮಾದರಿಯು ಕಂಪನಿಯ ಕಾರು ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ನೀರಿಕ್ಷೆಯಲ್ಲಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಹೊಸ ಕಾರು ಸಿಯಾಜ್ ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಳ್ಳಲಿದ್ದು, ರೀಬ್ಯಾಡ್ಜ್ ಆವೃತ್ತಿಯಲ್ಲಿ ಟೊಯೊಟಾ ಬ್ಯಾಡ್ಜ್ ಸೇರಿದಂತೆ ಮುಂಭಾಗದ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಹೊಸ ಬೆಲ್ಟಾ ಕಾರು ಸಿಯಾಜ್ ಮಾದರಿಯಲ್ಲಿರುವಂತೆ 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟಗೊಳ್ಳಲಿದ್ದು, ಹೊಸ ಕಾರಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು ಒಳಾಂಗಣ ವಿನ್ಯಾಸವು ಮೂಲ ಮಾದರಿಗಿಂತಲೂ ತುಸು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರಲಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಮೂಲ ಮಾದರಿಗಿಂತ ರೀಬ್ಯಾಡ್ಜ್ ಕಾರನ್ನು ತುಸು ಆಕರ್ಷಕಗೊಳಿಸುವುದಕ್ಕಾಗಿ ಕೆಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಹೊಸ ರೀಬ್ಯಾಡ್ಜ್ ಕಾರು ಮೂಲ ಸಿಯಾಜ್ ಕಾರು ಮಾದರಿಗಿಂತಲೂ ತುಸು ದುಬಾರಿಯಾಗಲಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಹಾಗೆಯೇ ಹೊಸ ಕಾರಿನ ಮೂಲಕ ಮಧ್ಯಮ ಗಾತ್ರ ಸೆಡಾನ್ ಪ್ರಿಯರನ್ನು ಸೆಳೆಯಲು ಹೊಸ ಕಾರಿನ ಮೇಲೆ ಹೆಚ್ಚುವರಿ ವಾರಂಟಿ ನೀಡಲು ನಿರ್ಧರಿಸಲಾಗಿದ್ದು, ಹೊಸ ಕಾರಿನ ಮೇಲೆ 3 ವರ್ಷ ಅಥವಾ 1 ಲಕ್ಷ ಕಿ.ಮೀ ಆಧರಿಸಿ ವಾರಂಟಿ ನೀಡಲಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಈಗಾಗಲೇ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಕಾರುಗಳ ಮೇಲೂ ಇದೇ ರೀತಿ ಹೆಚ್ಚುವರಿ ವಾರಂಟಿಗಳನ್ನು ನೀಡುತ್ತಿದ್ದು, ಹೊಸ ಕಾರು ಈ ವರ್ಷಾಂತ್ಯಕ್ಕೆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಮತ್ತು 2022ರ ಆರಂಭದಲ್ಲಿ ಭಾರತದಲ್ಲೂ ಬಿಡುಗಡೆಯಾಗಲಿದೆ.

ಹೊಚ್ಚ ಹೊಸ ಸಿಯಾಜ್ ರೀ ಬ್ಯಾಡ್ಜ್ ಬೆಲ್ಟಾ ಸೆಡಾನ್ ಅನಾವರಣಗೊಳಿಸಿದ ಟೊಯೊಟಾ

ಭಾರತದಲ್ಲಿ ರೀಬ್ಯಾಡ್ಜ್ ಕಾರು ಮಾದರಿಗಳಿಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಹೆಚ್ಚಿನ ಸಂಖ್ಯೆಯ ಕಾರು ಮಾರಾಟ ನೀರಿಕ್ಷೆಯಲ್ಲಿದ್ದು, ಬೆಲ್ಟಾ ನಂತರ ಮತ್ತಷ್ಟು ಹೊಸ ರೀಬ್ಯಾಡ್ಜ್ ಕಾರುಗಳು ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota revealed the belta sedan details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X