ಬಿಡಿಭಾಗಗಳ ಖರೀದಿ ವೇಳೆ ಆಗುವ ಮೋಸ ತಪ್ಪಿಸಲು ಹೊಸ ಯೋಜನೆ ಜಾರಿಗೆ ತಂದ ಟೊಯೊಟಾ

ಹೊಸ ವಾಹನಗಳ ಖರೀದಿಸುವುದು ಎಷ್ಟು ಕಷ್ಟವೋ ಅಷ್ಟೇ ವಾಹನಗಳನ್ನು ಧೀರ್ಘಕಾಲದ ವರೆಗೆ ನಿರ್ವಹಣೆ ಮಾಡುವುದು ಕೂಡಾ ಒಂದು ಸವಾಲಿನ ಕೆಲಸ ಅಂದರೆ ತಪ್ಪಾಗುವುದಿಲ್ಲ. ಅದಕ್ಕಾಗಿ ವಾಹನ ಮಾರಾಟದ ನಂತರ ದೊರೆಯುವ ಸೇವೆಗಳ ಆಧಾರದಲ್ಲಿ ವಾಹನ ತಯಾಕರ ಮೇಲೆ ಗ್ರಾಹಕರ ವಿಶ್ವಾಸ ನಿರ್ಧಾರವಾಗುತ್ತದೆ.

ಮೋಸ ತಪ್ಪಿಸಲು ಹೊಸ ಯೋಜನೆ ಜಾರಿಗೆ ತಂದ ಟೊಯೊಟಾ

ಕೇವಲ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸಿದರೂ ಗ್ರಾಹಕರ ಸೇವೆಗಳನ್ನು ಸಮರ್ಥವಾಗಿ ಪೂರೈಸುವಲ್ಲಿ ವಿಫಲವಾದಲ್ಲಿ ಅದು ಭವಿಷ್ಯದಲ್ಲಿ ವಾಹನ ತಯಾರಕ ಕಂಪನಿಗಳೇ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಇದೇ ಕಾರಣಕ್ಕೆ ವಾಹನ ತಯಾರಕ ಕಂಪನಿಗಳು ಹೊಸ ವಾಹನ ಮಾಡುವುದಷ್ಟೇ ಅಲ್ಲ ಮಾರಾಟ ನಂತರದ ಸೇವೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಗಮನಹರಿಸುತ್ತವೆ.

ಮೋಸ ತಪ್ಪಿಸಲು ಹೊಸ ಯೋಜನೆ ಜಾರಿಗೆ ತಂದ ಟೊಯೊಟಾ

ಭಾರತದಲ್ಲಿ ಸದ್ಯ ಟೊಯೊಟಾ ಕಂಪನಿಯು ಸಹ ವಿವಿಧ ಕಾರು ಮಾದರಿಗಳ ಮಾರಾಟದೊಂದಿಗೆ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಬಿಡಿಭಾಗಗಳ ಸೇವೆಗಳನ್ನು ಮತ್ತಷ್ಟು ಪ್ರಯಾಣಿಕೃತಗೊಳಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಮೋಸ ತಪ್ಪಿಸಲು ಹೊಸ ಯೋಜನೆ ಜಾರಿಗೆ ತಂದ ಟೊಯೊಟಾ

ಗ್ರಾಹಕರು ಮತ್ತು ಕಂಪನಿ ನಡುವಿನ ವಿಶ್ವಾರ್ಹತೆ ಹೆಚ್ಚಿಸಲು ಮುಂದಾಗಿರುವ ಟೊಯೊಟಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಬಿಡಿಭಾಗಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಆರಂಭಿಸಿದೆ.

ಮೋಸ ತಪ್ಪಿಸಲು ಹೊಸ ಯೋಜನೆ ಜಾರಿಗೆ ತಂದ ಟೊಯೊಟಾ

ಉತ್ಪಾದಕರಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಪ್ರಮಾಣಿಕೃತ ಬಿಡಿಭಾಗಗಳನ್ನು ಒದಗಿಸುವ 'ಟೊಯೊಟಾ ಪಾರ್ಟ್ಸ್ ಕನೆಕ್ಟ್' ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಇಲ್ಲಿ ಗ್ರಾಹಕರು ಮೂರನೇ ವ್ಯಕ್ತಿ ಹಸ್ತಕ್ಷೇಪವಿಲ್ಲದೆ ಕಂಪನಿಯಿಂದ ನೇರವಾಗಿ ಬಿಡಿಭಾಗಗಳನ್ನು ಖರೀದಿಸಬಹುದು.

ಮೋಸ ತಪ್ಪಿಸಲು ಹೊಸ ಯೋಜನೆ ಜಾರಿಗೆ ತಂದ ಟೊಯೊಟಾ

ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ಬೆಲೆಗಳಿಗೆ ಬಿಡಿಭಾಗಗಳ ಖರೀದಿ ಮತ್ತು ಪ್ರಮಾಣಿಕೃತ ಬಿಡಿಭಾಗಗಳನ್ನು ಖರೀದಿಸಲು ಇದು ನೆರವಾಗಲಿದ್ದು, ಬ್ರಾಂಡ್ ಸರ್ವಿಸ್ ಸೆಂಟರ್‌ಗಳಿಂದ ಅಥವಾ ಇತರೆ ಸರ್ವಿಸ್ ಸೆಂಟರ್‌ಗಳಿಂದ ಬಿಡಿಭಾಗಗಳ ಸೇವೆಯಲ್ಲಿ ಆಗಬಹುದಾದ ಮೋಸ ತಪ್ಪಿಸಲು ಇದು ಸಹಕಾರಿಯಾಗಲಿದೆ.

ಮೋಸ ತಪ್ಪಿಸಲು ಹೊಸ ಯೋಜನೆ ಜಾರಿಗೆ ತಂದ ಟೊಯೊಟಾ

ಸದ್ಯ ಟೊಯೊಟಾ ಕಂಪನಿಯು ಬೆಂಗಳೂರು ಸೇರಿದಂತೆ ದೇಶದ 12 ನಗರಗಳಲ್ಲಿ ಮಜಾರಿಗೆ ತಂದಿದ್ದು, ಗ್ರಾಹಕರು ನೇರವಾಗಿ ಟೊಯೊಟಾ ವೆಬ್‌ಸೈಟ್ ಮೂಲಕ ಬಿಡಿಭಾಗಗಳನ್ನು ಖರೀದಿಸಬಹುದು.

ಮೋಸ ತಪ್ಪಿಸಲು ಹೊಸ ಯೋಜನೆ ಜಾರಿಗೆ ತಂದ ಟೊಯೊಟಾ

ಈ ವರ್ಷಾಂತ್ಯಕ್ಕೆ ದೇಶಾದ್ಯಂತ 'ಟೊಯೊಟಾ ಪಾರ್ಟ್ಸ್ ಕನೆಕ್ಟ್' ಯೋಜನೆಯನ್ನು ವಿಸ್ತರಿಸಲಿರುವ ಟೊಯೊಟಾ ಕಂಪನಿಯು ಪ್ರಮಾಣಿಕೃತ ಬಿಡಿಭಾಗಗಳೊಂದಿಗೆ ತನ್ನ ಗ್ರಾಹಕರಿಗೆ ಹೆಚ್ಚಿನ ವಿಶ್ವಾರ್ಹತೆ ಖಚಿತಪಡಿಸುತ್ತಿದೆ.

ಮೋಸ ತಪ್ಪಿಸಲು ಹೊಸ ಯೋಜನೆ ಜಾರಿಗೆ ತಂದ ಟೊಯೊಟಾ

'ಟೊಯೊಟಾ ಪಾರ್ಟ್ಸ್ ಕನೆಕ್ಟ್' ಯೋಜನೆಯಲ್ಲಿ ಗ್ರಾಹಕರಿಗೆ ಆಕರ್ಷಕ ಬೆಲೆಯಲ್ಲಿ ಎಂಜಿನ್ ಆಯಿಲ್, ಬ್ಯಾಟರಿ, ಟೈರ್ ಇತ್ಯಾದಿಗಳ ವಿತರಣೆಯನ್ನು ಒಳಗೊಂಡಿದ್ದು, ಬಿಡಿಭಾಗಗಳ ಖರೀದಿ ನಂತರ ಬಿಡಿಭಾಗಗಳ ಜೋಡಣೆಗಾಗಿ ನಿಮ್ಮ ಹತ್ತಿರದ ಸರ್ವಿಸ್ ಸೆಂಟರ್‌ ಸೂಚಿಸುವ ಮೂಲಕ ನಿಮಗೆ ಅನುಕೂಲವಾಗುವ ಸಮಯಕ್ಕೆ ಸರ್ವಿಸ್ ಟೈಮ್ ಶೆಡ್ಯೂಲ್ ಮಾಡಬಹುದು.

Most Read Articles

Kannada
Read more on ಟೊಯೊಟಾ toyota
English summary
Toyota Spare Parts Home Delivery Initiative Announced. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X