ಲ್ಯಾಂಡ್ ಕ್ರೂಸರ್ ಪ್ರಡೊದ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಲ್ಯಾಂಡ್ ಕ್ರೂಸರ್ ಬ್ರ್ಯಾಂಡ್‌ನ 70 ವರ್ಷದ ಸಂಭ್ರಮದ ಭಾಗವಾಗಿ ಲ್ಯಾಂಡ್ ಕ್ರೂಸರ್ ಪ್ರಡೊದ ಹೊಸ ಸ್ಪೆಷಲ್ ಎಡಿಷನ್ ಮಾದರಿಯನ್ನು ಅನಾವರಣಗೊಳಿದೆ. ಪ್ರಸ್ತುತ ತಲೆಮಾರಿನ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ಕೊನೆಯ ಮಾದರಿಯಾಗಿ ಇದನ್ನು ಪರಿಚಯಿಸಲಾಗುತ್ತಿದೆ.

ಲ್ಯಾಂಡ್ ಕ್ರೂಸರ್ ಪ್ರಡೊದ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅನಾವರಣಗೊಂಡ ಸ್ಪೆಷಲ್ ಎಡಿಷನ್ ಆದ ಲ್ಯಾಂಡ್ ಕ್ರೂಸರ್ ಪ್ರಡೊ ಎಸ್‍ಯುವಿ ಕೆಲವು ಕಾಸ್ಮೆಟಿಕ್ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಲ್ಯಾಂಡ್ ಕ್ರೂಸರ್ ಪ್ರಡೊ 70ನೇ ಆನಿವರ್ಸರಿ ಎಡಿಷನ್ ಬ್ಲ್ಯಾಕ್ ಗ್ರಿಲ್ ಅನ್ನು ಹೊಂದಿದೆ. ಇದರಲ್ಲಿ ಹೆಡ್‌ಲೈಟ್ ಟ್ರಿಮ್, ಫಾಗ್ ಲ್ಯಾಂಪ್, ಮಿರರ್ ಕ್ಯಾಪ್ಸ್, ರೂಫ್ ರೈಲ್ಸ್ ಮತ್ತು ಹಿಂಭಾಗದ ಹ್ಯಾಚ್ ಟ್ರಿಮ್ ಅನ್ನು ಹೊಂಡಿದೆ.

ಲ್ಯಾಂಡ್ ಕ್ರೂಸರ್ ಪ್ರಡೊದ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಈ ಸ್ಪೆಷಲ್ ಎಡಿಷನ್ 12-ಸ್ಪೋಕ್ 18-ಇಂಚಿನ ವ್ಹೀಲ್ ಗಳಿವೆ. ಇನ್ನು ಆನಿವರ್ಸರಿ ಎಡಿಷನ್ ಒಳಭಾಗದಲ್ಲಿಯು ಸೂಕ್ಷ್ಮವಾದ ನವೀಕರಣಗಳನ್ನು ಪಡೆದುಕೊಂಡಿದೆ. ಸೀಟುಗಳು, ಸೆಂಟರ್ ಕನ್ಸೋಲ್, ನೀ ಪ್ಯಾಡ್‌ಗಳು ಮತ್ತು ಡೋರ್ ಪ್ಯಾನೆಲ್ ಳನ್ನು ಒಳಗೊಳ್ಳುವ ಸ್ಯಾಡಲ್ ಟಂಗ್ ಗ್ರೇ ಬಣ್ಣದ ಲೆದರ್ ನಿಂದ ಕೂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಲ್ಯಾಂಡ್ ಕ್ರೂಸರ್ ಪ್ರಡೊದ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಇದು ಡ್ಯಾಶ್‌ಬೋರ್ಡ್‌ನ ಬದಿಯಲ್ಲಿ ಬ್ರಷ್-ಫಿನಿಶ್ ಮತ್ತು ಸಿಲ್ವರ್ ಬಣ್ಣದ ಟ್ರಿಮ್ ಅನ್ನು ಪಡೆಯುತ್ತದೆ. ಬಿಡಿಭಾಗಗಳ ವಿಭಾಗದಲ್ಲಿ ಸೇರಿಸಲು ಕೆಲವು ಸಣ್ಣ ಆಯ್ಕೆಗಳಿವೆ. ಈ ಎಸ್‍ಯುವಿಯಲ್ಲಿ 70ನೇ ಆನಿವರ್ಸರಿ ಎಡಿಷನ್ ಎಂಬ ಬ್ಯಾಡ್ಜ್ ಅನ್ನು ಹೊಂದಿದೆ.

ಲ್ಯಾಂಡ್ ಕ್ರೂಸರ್ ಪ್ರಡೊದ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ 70ನೇ ಆನಿವರ್ಸರಿ ಲಿಮಿಟೆಡ್ ಎಡಿಷನ್ ವೈಟ್ ಪರ್ಲ್ ಕ್ರಿಸ್ಟಲ್, ಬ್ಲ್ಯಾಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ರೆಡ್ ಮೈಕಾ, ಮತ್ತು ಅವಂಟೆ-ಗಾರ್ಡ್ ಬ್ರೌನ್ಸ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಲ್ಯಾಂಡ್ ಕ್ರೂಸರ್ ಪ್ರಡೊದ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಈ ಆನಿವರ್ಸರಿ ಲಿಮಿಟೆಡ್ ಎಡಿಷನ್ ಐದು ಅಥವಾ ಏಳು ಸೀಟುಗಳ ಸಂರಚನೆಗಳನ್ನು ಆಯ್ಕೆ ಮಾಡುವ ಅವಕಾಶವಿದೆ. ಇನ್ನು ಈ ಎಸ್‍ಯುವಿಯು 2.8-ಲೀಟರ್ ಡೀಸೆಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಈಗಾಗಲೇ ಟೊಯೋಟಾ ಫಾರ್ಚೂನರ್‌ನಲ್ಲಿ ಇರುವ ಎಂಜಿನ್ ಆಯ್ಕೆಗಳಾಗಿವೆ.

ಲ್ಯಾಂಡ್ ಕ್ರೂಸರ್ ಪ್ರಡೊದ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಇನ್ನು ಟೊಯೊಟಾ ಕಂಪನಿಯು ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಜಾಗತಿಕವಾಗಿ ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಇದೇ ತಿಂಗಳ 9 ರಂದು ಅನಾವರಣವಾಗಲಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಲ್ಯಾಂಡ್ ಕ್ರೂಸರ್ ಪ್ರಡೊದ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಇತ್ತೀಚೆಗೆ ತನ್ನ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ಹೊಸ ಟೀಸರ್ ವಿಡಿಯೋ ಬಿಡುಗಡೆಗೊಳಿಸುವ ಮೂಲಕ ಅನಾವರಣವಾಗುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷಕ್ಕೆ ಭಾರತಕ್ಕೆ ಬರಬಹುದು.

ಲ್ಯಾಂಡ್ ಕ್ರೂಸರ್ ಪ್ರಡೊದ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ದಕ್ಷಿಣ ಆಫ್ರಿಕಾದ ಮಾರುಕಟ್ಟೆಗಳಲ್ಲಿ, ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಜಿಎಕ್ಸ್-ಆರ್, ಜಿಆರ್-ಎಸ್ ಮತ್ತು ಝಡ್‌ಎಕ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಈ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಅನಾವರಣವಾಗುವ ಸಮಯದಲ್ಲಿ ಬಹಿರಂಗಪಡಿಸಬಹುದು.

Most Read Articles

Kannada
Read more on ಟೊಯೊಟಾ toyota
English summary
Toyota Land Cruiser Prado 70th Anniversary Edition Unveiled. Read In Kannada.
Story first published: Friday, June 4, 2021, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X