ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಹಲವಾರು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ನೌಕರರು ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದ್ದಾರೆ. ಕಂಪನಿಯ 3,350 ಉದ್ಯೋಗಿಗಳು ಕೆಲಸಕ್ಕೆ ಮರಳಿದ್ದು, ಉತ್ಪಾದನಾ ಘಟಕದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ವರದಿಯಾಗಿದೆ.

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ನೌಕರರು ಹಾಗೂ ಕಂಪನಿಯ ನಡುವೆ ಹೊಂದಾಣಿಕೆ ಏರ್ಪಾಡುವಂತೆ ಮಾಡಿದ ಕರ್ನಾಟಕ ಸರ್ಕಾರಕ್ಕೆ ಹಾಗೂ ಕಾರ್ಮಿಕ ಇಲಾಖೆಗೆ ಟೊಯೊಟಾ ಕಂಪನಿಯುಧನ್ಯವಾದ ಸಲ್ಲಿಸಿದೆ. ಬಿಡದಿಯಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯ ನೌಕರರು ಕಳೆದ ವರ್ಷದ ನವೆಂಬರ್‌ನಿಂದ ಮುಷ್ಕರ ನಡೆಸುತ್ತಿದ್ದರು.

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಇದರಿಂದಾಗಿ ಕಂಪನಿಯ ಉತ್ಪಾದನೆಗೆ ತೊಂದರೆಯಾಗುತ್ತಿತ್ತು. ಟೊಯೊಟಾ ಕಂಪನಿಯು ನವೆಂಬರ್‌ನಲ್ಲಿ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದರಿಂದ ಉಳಿದ ನೌಕರರು ಆಕ್ರೋಶಗೊಂಡು ಮುಷ್ಕರ ನಡೆಸುತ್ತಿದ್ದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ನಿಯಮ ಮತ್ತು ಶಿಸ್ತು ಉಲ್ಲಂಘಿಸಿದ್ದಾರೆ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ದುರ್ವತನೆ ತೋರಿಸಿದ್ದಾರೆ ಎಂಬ ಕಾರಣಕ್ಕೆ ಕೆಲವು ನೌಕರರನ್ನು ಕೆಲಸದಿಂದತೆಗೆದುಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯ ಉಳಿದ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದರು.

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಕಂಪನಿಯನ್ನು ಲಾಕ್ ಔಟ್ ಮಾಡಿದ್ದು, ಕಾರುಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ಸರಿಯಾದ ಸಮಯಕ್ಕೆ ಬುಕ್ ಮಾಡಿದ ಕಾರುಗಳನ್ನು ತಲುಪಿಸಲು ಸಾಧ್ಯವಾಗುತ್ತಿರಲಿಲ್ಲವೆಂದು ಟೊಯೊಟಾ ಕಂಪನಿ ಹೇಳಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕರ್ನಾಟಕ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗಳು ಕಂಪನಿ ಹಾಗೂ ಕಾರ್ಮಿಕರ ನಡುವೆ ಸಾಮರಸ್ಯ ಮೂಡಿಸಿ ಮುಷ್ಕರವನ್ನು ಕೊನೆಗೊಳಿಸಲು ಯಶಸ್ವಿಯಾಗಿವೆ.

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಮಾರ್ಚ್ 5ರೊಳಗೆ ಕೆಲಸಕ್ಕೆ ಮರಳುವಂತೆ ಹಾಗೂ ಪರಸ್ಪರ ನಂಬಿಕೆಯ ಆಧಾರದ ಮೇಲೆ ಕೆಲಸ ಮಾಡುವಂತೆ ಹಾಗೂ ಭವಿಷ್ಯದಲ್ಲಿ ಪರಸ್ಪರ ತಿಳುವಳಿಕೆಯ ನಿಯಮಗಳನ್ನು ಗೌರವಿಸುವಂತೆ ಕಂಪನಿಯು ಮನವಿ ಮಾಡಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ತನ್ನ ಫೆಬ್ರವರಿ ತಿಂಗಳ ವಾಹನ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ ಕಂಪನಿಯು ಕಳೆದ ತಿಂಗಳು 14,075 ಯುನಿಟ್ ಪ್ಯಾಸೆಂಜರ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಈ ಮಾರಾಟ ಪ್ರಮಾಣವು 2020ರ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ 36%ನಷ್ಟು ಹೆಚ್ಚಾಗಿದೆ. 2020ರ ಫೆಬ್ರವರಿ ತಿಂಗಳಿನಲ್ಲಿ ಕಂಪನಿಯು 10,352 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಕಂಪನಿಯು ಸಗಟು ಮಾರಾಟದಲ್ಲಿ 27%ನಷ್ಟು ಹೆಚ್ಚಳವನ್ನು ದಾಖಲಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಂಪನಿಯ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಈ ವರ್ಷ ಪ್ರೋತ್ಸಾಹದಾಯಕ ರೀತಿಯಲ್ಲಿ ಆರಂಭವಾಗಿದೆ ಎಂದು ಹೇಳಿದ್ದಾರೆ.

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಜನವರಿ ತಿಂಗಳ ಮಾರಾಟವು ಹಿಂದಿನ ತಿಂಗಳುಗಳಿಗಿಂತ ಉತ್ತಮವಾಗಿತ್ತು. ಫೆಬ್ರವರಿ ತಿಂಗಳ ಮಾರಾಟವೂ ಉತ್ತಮವಾಗಿದೆ. ಟೊಯೊಟಾ ಕಂಪನಿಯು ಈ ವರ್ಷದ ಜನವರಿ ತಿಂಗಳಿನಲ್ಲಿ 11,126 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ

ಟೊಯೊಟಾ ಕಂಪನಿಯು ಕಳೆದ ಆರು ತಿಂಗಳಲ್ಲಿ ಟೊಯೊಟಾ ಅರ್ಬನ್ ಕ್ರೂಸರ್, ಫಾರ್ಚೂನರ್ ಫೇಸ್‌ಲಿಫ್ಟ್ ಹಾಗೂ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಸೇರಿದಂತೆ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ಹೊಸ ಕಾರುಗಳನ್ನು ಬಿಡುಗಡೆ ಮಾಡಿದ ನಂತರ ಮಾರಾಟ ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

Most Read Articles

Kannada
Read more on ಟೊಯೊಟಾ toyota
English summary
Toyota workers union calls off strike officially. Read in Kannada.
Story first published: Wednesday, March 3, 2021, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X