ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಜಪಾನ್ ಮೂಲದ Toyota ಕಂಪನಿಯು ತನ್ನ ಮೂರನೆಯ ತಲೆಮಾರಿನ ವಿಯೋಸ್(Yaris) ಕಾರನ್ನು ಮೊದಲು 2013 ರಲ್ಲಿ ಪರಿಚಯಿಸಲಾಯಿತು, ಈ ಕಾರು ಏಷ್ಯಾದ ವಿವಿಧ ಮಾರುಕಟ್ಟೆಗಳಲ್ಲಿ ವರ್ಷದಿಂದ ವರ್ಷಕ್ಕೆ ಹಲವಾರು ನವೀಕರಣಗಳನ್ನು ಪಡೆಯಿತು. ಈ Toyota ಸೆಡಾನ್ ಈಗ ಹೊಸ ರೂಪದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಈ ನ್ಯೂ ಜನರೇಷನ್ ಸೆಡಾನ್ 2022ರ ಮೂರನೇ ತ್ರೈಮಾಸಿಕದಲ್ಲಿ ಅಧಿಕೃತವಾಗಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಮುಂದಿನ ತಲೆಮಾರಿನ ಟೊಯೋಟಾ ವಯೋಸ್ (Yaris) ಆಗಸ್ಟ್ 2022ರಲ್ಲಿ ಥಾಯ್ ಕಾರ್ ಮಾರುಕಟ್ಟೆಗೆ ಬರಲು ನಿರ್ಧರಿಸಲಾಗಿದೆ, ನಂತರ ಇತರ ಅಂತರಾಷ್ಟ್ರೀಯ ಮಾರುಕಟ್ಟೆಗಳು ಮುಂಬರುವ ಮಾದರಿ, 'D92A' ಎಂಬ ಸಂಕೇತನಾಮವನ್ನು ಹೊಂದಿದ್ದು, ಇದನ್ನು ಡೈಹತ್ಸು ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (DNGA) ನಲ್ಲಿ ನಿರ್ಮಿಸಲಾಗುವುದು. ಈ ಪ್ಲಾಟ್‌ಫಾರ್ಮ್, ಟೊಯೊಟಾ ರೈಜ್‌ಗೆ ಸಹ ಆಧಾರವಾಗಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಇದು Toyota ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್‌ನ (TNGA) ಕಡಿಮೆ ಬೆಲೆಯ ಆವೃತ್ತಿಯಾಗಿದೆ. ಹೊಸ ಪ್ಲಾಟ್‌ಫಾರ್ಮ್‌ನೊಂದಿಗೆ, ನ್ಯೂ ಜನರೇಷನ್ ವಯೋಸ್ ಅಥವಾ Yaris ಕಾರು ಬಿಡುಗಡೆಯಾಗಲಿದೆ ಜಪಾನಿನ ಕಾರ್ ದೈತ್ಯ ವಾಹನಕ್ಕೆ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯನ್ನು ಸೇರಿಸಲು ಯೋಜಿಸುತ್ತಿದೆ ಎಂದು ವರದಿಯು ಹೇಳುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಆದರೆ ಇದು ಒಂದು ವರ್ಷದ ನಂತರ, ಆಗಸ್ಟ್ 2023 ರ ಸುಮಾರಿಗೆ ಪರಿಚಯಿಸಲ್ಪಡುತ್ತದೆ. ಜಾಗತಿಕ ಆಟೋಮೊಬೈಲ್ ಉದ್ಯಮವನ್ನು ಎಲೆಕ್ಟ್ರಿಕ್ ವಾಹನಕೆಕ್ ಹೆಚ್ಚಿನ ಪ್ರಮುಖ್ಯತೆಯನ್ನು ನೀಡುವುದರಿಂದ ಇದು ಕೂಡ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಬರಬಹುದು.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಈ Yaris ಹೈಬ್ರಿಡ್ ಬಗ್ಗೆ ಯಾವುದೇ ವಿವರಗಳು ಇನ್ನೂ ಲಭ್ಯವಿಲ್ಲ. ಟೊಯೊಟಾ ಪ್ರಿಯಸ್ ಸಿ ನಲ್ಲಿ ಲಭ್ಯವಿರುವ 1.5-ಲೀಟರ್ ಪೆಟ್ರೋಲ್/ಎಲೆಕ್ಟ್ರಿಕ್ ಹೈಬ್ರಿಡ್ ಸೆಟಪ್ ಅನ್ನು ಬಳಸುವ ಸಾಧ್ಯತೆಯಿದೆ. ಇದರಲ್ಲಿ ಗ್ಯಾಸೋಲಿನ್ ಎಂಜಿನ್ 61.2 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ನ್ಯೂ ಜನರೇಷನ್ Toyota Yaris ಕಾರಿನ ಬಗ್ಗೆ ಮುಂದಿನ ವರ್ಷದಲ್ಲಿ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಬಹುದು. ವಿಯೋಸ್ ಪ್ರಸ್ತುತ ವಿವಿಧ ಮಾರುಕಟ್ಟೆಗಳಲ್ಲಿ ವಿವಿಧ ಹೆಸರುಗಳಲ್ಲಿ ಮಾರಾಟವಾಗುತ್ತಿದೆ, ಭಾರತದಲ್ಲಿ ಇದು ಯಾರಿಸ್ ಎಂಬ ಹೆಸರಿನಲ್ಲಿ ಮಾರಾಟದಲ್ಲಿದೆ

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಆದರೆ ಇಂಡಿಯಾ-ಸ್ಪೆಕ್ ಯಾರಿಸ್ ಅನ್ನು ನಿಲ್ಲಿಸಲು ನಿರ್ಧರಿಸಲಾಗಿದೆ, ಇನ್ನು ಟೊಯೊಟಾ ಕಂಪನಿಯು ಉತ್ಪಾದನೆಯನ್ನು ಈಗಾಗಲೇ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ. ಇದರ ಸ್ಥಾನಕ್ಕೆ ಮಾರುತಿ ಸಿಯಾಜ್ ರಿಬ್ಯಾಡ್ಜ್ ಆವೃತ್ತಿಯಾದ ಬೆಲ್ಟಾ ಕಾರನ್ನು ಟೊಯೊಟಾ ಕಂಪನಿಯು ಪರಿಚಯಿಸಲಿದೆ. ಟೊಯೊಟಾ ಯಾರಿಸ್ ಕಾರು ಮಾರುತಿಯ ಸಿಯಾಜ್ ಮಾದರಿಯ ಅದೇ ವಿಭಾಗದಲ್ಲಿ ಮಾರಾಟವಾಗುತ್ತಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಭಾರತದಲ್ಲಿ Yaris ಸೆಡಾನ್ ಮಾರಾಟದಲ್ಲಿ ದೊಡ್ಡ ಕುಸಿತವಾಗಿದೆ. ಮತ್ತೊಂದೆಡೆ ಅದೇ ವಿಭಾಗದ ಮಾರುತಿ ಸುಜುಕಿ ಸಿಯಾಜ್ ಉತ್ತಮವಾಗಿ ಮಾರಾಟವಾಗುತ್ತಿದೆ. ಇದರಿಂದ ಜಪಾನ್ ಮೂಲದ Toyota ಕಂಪನಿಯು ಸಿಯಾಜ್ ರಿಬ್ಯಾಡ್ಜ್ ಮಾದರಿಯನ್ನು ತರಲು ಮುಂದಾಗಿದೆ. ಟೊಯೊಟಾ ಇತ್ತೀಚೆಗೆ ಭಾರತದಲ್ಲಿ ಬೆಲ್ಟಾ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದೇ ಹೆಸರನ್ನು ಹೊಸ ರಿಬ್ಯಾಡ್ಜ್ ಮಾದರಿಗೆ ನೀಡಲಾಗುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಜಪಾನ್ ಮೂಲದ ಎರಡು ದೈತ್ಯ ವಾಹನ ತಯಾರಕರ ನಡುವಿನ ಸಹಭಾಗಿತ್ವದಲ್ಲಿ ರಿಬ್ಯಾಡ್ಜ್ ಅಗಿ ಮಾರಾಟವಾಗುವ ಮೂರನೇ ಮಾದರಿ ಸಿಯಾಜ್ ಆಗಿರಬಹುದು. ಮಾರುತಿ ಸುಜುಕಿ ಸಿಯಾಜ್ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಸಿಯಾಜ್‌ನ ರಿಬ್ಯಾಡ್ ಬೆಲ್ಟಾ ಮಾದರಿಯು ಕೂಡ ಅದೇ 1.5-ಲೀಟರ್ ಕೆ-ಸೀರೀಸ್ ಎಂಜಿನ್ ಅನ್ನು ಹೊಂದಿರಲಿದೆ. ಇದರೊಂದಿಗೆ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದಿಂದ ಬ್ರ್ಯಾಂಡ್‌ನ (ಎಸ್‌ವಿಹೆಚ್ಎಸ್) ಸ್ಮಾರ್ಟ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿರಬಹುದು. ಇದು 104 ಬಿ‍‍ಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಫೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಟಾರ್ಕ್ ಕನ್ವಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಜೆಯನ್ನು ಕೂಡ ನೀಡಲಾಗುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ರಿಬ್ಯಾಡ್ಜ್ ಮಾದರಿಯು ಕೂಡ ಡ್ಯಾಶ್‍‍ಬೋರ್ಡ್‍ನಲ್ಲಿ ಬ್ಲ್ಯಾಕ್ ಮತ್ತು ಸಿಲ್ವರ್ ಆಕ್ಸೆಂಟ್‍‍ಗಳು, ಡೋರ್ ಟ್ರಿಮ್ಸ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಆಪಲ್ ಕರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಇರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಕೂಡ ಒಳಗೊಂಡಿರುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಇನ್ನು ಈ ಸೆಡಾನ್ ಕಾರಿನಲ್ಲಿ ಸುರಕ್ಷತಾ ಫೀಚರ್ಸ್ ಗಳಾಗಿ ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಕೀ ಲೆಸ್ ಎಂಟ್ರಿ, ಮಲ್ಟಿಪಲ್ ಏರ್‍‍ಬ್ಯಾಗ್‍, ಇಬಿ‍ಡಿಯೊಂದಿಗೆ ಎಬಿಎಸ್, ಆಟೋಮ್ಯಾಟಿಕ್ ಕ್ಲೈಮೆಂಟ್, ರಿಯರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್ ಮತ್ತು ಇತರ ಫೀಚರ್ಸ್‍‍ಗಳನ್ನು ಹೊಂದಿರಲಿದೆ. ಇದರೊಂದಿಗೆ ಕೆಲವು ನೂತನ ಫೀಚರ್ಸ್ ಗಳನ್ನು ನೀಡಬಹುದು.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Toyota Yaris

ಈ ಹಿಂದೆ ಮಾರುತಿ ಸುಜುಕಿ ಕಾರುಗಳ ರಿಬ್ಯಾಡ್ಜ್ ಮಾದರಿಗಳಾಗಿ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಎಂಬ ಮಾದರಿಗಳನ್ನು ಬಿಡುಗಡೆಗೊಳಿಸಿ ಉತ್ತಮ ಮಾರಾಟವನ್ನು ಪಡೆದಿದೆ. ಅಲ್ಲದೇ Yaris ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದೆ. ಈ ಎಲ್ಲಾ ಕಾರಣದಿಂದ ಯಾರಿಸ್ ಸ್ಥಾನಕ್ಕೆ ಜನಪ್ರಿಯ ಸಿಯಾಜ್ ಸೆಡಾನ್ ರಿಬ್ಯಾಡ್ಜ್ ಮಾದರಿಯನ್ನು ತರಲು ನಿರ್ಧರಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ರಿಬ್ಯಾಡ್ಜ್ ಮಾದರಿಯು ಕೂಡ ಗ್ರಾಹಕರನ್ನು ಸೆಳೆಯಬಹುದು,

Most Read Articles

Kannada
Read more on ಟೊಯೊಟಾ toyota
English summary
Toyota yaris premium sedan will get a new gen model details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X