ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ದೇಶಾದ್ಯಂತ ಎಲ್ಲಾ ವಾಹನಗಳಿಗೆ ಒಂದೇ ಪಿಯುಸಿ (ಪೊಲ್ಯುಷನ್ ಅಂಡರ್ ಕಂಟ್ರೋಲ್) ಅಂದರೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಬಳಸಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಹೊರಡಿಸಿರುವ ಅಧಿಸೂಚನೆಯಲ್ಲಿ ಅಸ್ತಿತ್ವದಲ್ಲಿರುವ ವಾಹನಗಳ ಅವಧಿ ಮುಗಿದಿಲ್ಲದಿದ್ದರೆ ಒಂದೇ ವಾಹನಕ್ಕಾಗಿ ದೇಶದ ವಿವಿಧ ಸ್ಥಳಗಳಲ್ಲಿ ಹೊಸ ಪಿಯುಸಿಯನ್ನು ಪಡೆಯುವ ಅಗತ್ಯವಿಲ್ಲವೆಂದು ಹೇಳಲಾಗಿದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಪಿಯುಸಿ ಡೇಟಾಬೇಸ್‌ಗೆ ರಾಷ್ಟ್ರೀಯ ರಿಜಿಸ್ಟರ್‌ನೊಂದಿಗೆ ಲಿಂಕ್ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಹೇಳಿದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ಇನ್ನು ಮುಂದೆ ಪಿಯುಸಿ ಪ್ರಮಾಣ ಪತ್ರಗಳಲ್ಲಿ ಕ್ಯೂಆರ್ ಕೋಡ್ ಅನ್ನು ಮುದ್ರಿಸಲಾಗುತ್ತದೆ. ಈ ಕೋಡ್ ವಾಹನದ ವಿವರ, ವಾಹನ ಮಾಲೀಕರ ವಿವರ ಹಾಗೂ ಮಾಲಿನ್ಯ ಹೊರಸೂಸುವಿಕೆಯ ಸ್ಥಿತಿಯ ವಿವರಗಳನ್ನು ಹೊಂದಿರುತ್ತದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ಹೊಸ ಪಿಯುಸಿ ಪ್ರಮಾಣ ಪತ್ರಗಳಲ್ಲಿ ವಾಹನ ಮಾಲೀಕರ ಮೊಬೈಲ್ ಸಂಖ್ಯೆ, ಹೆಸರು, ವಿಳಾಸ, ಎಂಜಿನ್ ಸಂಖ್ಯೆ, ಚಾಸಿಸ್ ಸಂಖ್ಯೆಗಳು ಸಹ ಇರುತ್ತವೆ. ಡೇಟಾಬೇಸ್‌ನಿಂದ ನಿರ್ದಿಷ್ಟ ವಾಹನದ ಬಗೆಗಿನ ವಿವರಗಳನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ಕೇಂದ್ರ ಮೋಟಾರು ವಾಹನ ಕಾಯ್ದೆ 1989ರ ಅಡಿಯಲ್ಲಿ ದೇಶಾದ್ಯಂತ ಪಿಯುಸಿ ಪ್ರಮಾಣ ಪತ್ರಕ್ಕೆ ಏಕ ರೂಪವನ್ನು ನೀಡಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು 2021ರ ಜೂನ್ 14ರಂದು ಅಧಿಸೂಚನೆ ಹೊರಡಿಸಿದೆ ಎಂದು ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ಈ ಪ್ರಮಾಣ ಪಾತ್ರದಲ್ಲಿ ಮಾಲೀಕರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಮೊಬೈಲ್ ಸಂಖ್ಯೆಗೆ ಮಾನ್ಯತೆ ಬಗ್ಗೆ ಹಾಗೂ ಶುಲ್ಕದ ಬಗ್ಗೆ ಎಸ್‌ಎಂಎಸ್ ಕಳುಹಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ಪಿಯುಸಿ ಪ್ರಮಾಣ ಪತ್ರದ ನಿಯಮಗಳಲ್ಲಿ ಹೊಸ ಬದಲಾವಣೆ ತರುವುದರ ಜೊತೆಗೆ, ಸರ್ಕಾರವು ಮೊದಲ ಬಾರಿಗೆ ರಿಜೆಕ್ಷನ್ ಸ್ಲಿಪ್ ಪರಿಕಲ್ಪನೆಯನ್ನು ಪರಿಚಯಿಸಿದೆ. ಪರೀಕ್ಷಾ ಫಲಿತಾಂಶದ ಮೌಲ್ಯವು ಗರಿಷ್ಠ ಅನುಮತಿ ಮೌಲ್ಯಕ್ಕಿಂತ ಹೆಚ್ಚಿದ್ದರೆ ವಾಹನ ಮಾಲೀಕರಿಗೆ ಏಕ ರೂಪದ ರಿಜೆಕ್ಷನ್ ಸ್ಲಿಪ್ ನೀಡಲಾಗುತ್ತದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ಯಾವುದೇ ಕೇಂದ್ರಗಳಲ್ಲಿ ಮಾಲಿನ್ಯ ತಪಾಸಣೆ ಸಾಧನವು ಕಾರ್ಯನಿರ್ವಹಿಸದಿದ್ದಲ್ಲಿ ಈ ದಾಖಲೆಯನ್ನು ಸೇವಾ ಕೇಂದ್ರಗಳಲ್ಲಿ ವಾಹನಗಳನ್ನು ಪಡೆಯಲು ಅಥವಾ ಪಿಯುಸಿ ಕೇಂದ್ರಗಳಲ್ಲಿ ಬಳಸಬಹುದಾಗಿದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ವಾಹನವು ಅತಿಯಾಗಿ ಮಾಲಿನ್ಯವನ್ನು ಹೊರಸೂಸುವ ಸಂದರ್ಭದಲ್ಲಿ ವಾಹನ ಸವಾರ ಅಥವಾ ಆ ವಾಹನದ ಉಸ್ತುವಾರಿ ಹೊತ್ತಿರುವ ವ್ಯಕ್ತಿಯು ಆ ವಾಹನದ ಪಿಯುಸಿ ಪ್ರಮಾಣ ಪತ್ರವನ್ನು ಸಲ್ಲಿಸಲು ವಿಫಲವಾದರೆ ವಾಹನ ಮಾಲೀಕರು ದಂಡವನ್ನು ಪಾವತಿಸ ಬೇಕಾಗುತ್ತದೆ ಎಂದು ಹೇಳಲಾಗಿದೆ.

ದೇಶಾದ್ಯಂತ ಏಕ ರೂಪದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬಳಸಲು ಅನುಮೋದನೆ ನೀಡಿದ ಸಾರಿಗೆ ಇಲಾಖೆ

ಚಾಲಕನು ನಿಗದಿತ ಸಮಯದೊಳಗೆ ಮಾನ್ಯ ಮಾಲಿನ್ಯ ಪ್ರಮಾಣಪತ್ರವನ್ನು ತೆಗೆದುಕೊಳ್ಳಲು ವಿಫಲವಾದರೆ ನೋಂದಣಿ ಪ್ರಾಧಿಕಾರವು ವಾಹನದ ನೋಂದಣಿಪ್ರಮಾಣಪತ್ರವನ್ನು ಅಥವಾ ಪರವಾನಗಿಯನ್ನು ಅಮಾನತುಗೊಳಿಸುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

Most Read Articles

Kannada
English summary
Uniform pollution under control certificate for all vehicles across India. Read in Kannada.
Story first published: Saturday, June 19, 2021, 12:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X