ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಮುಂದಿನ 8-10 ದಿನಗಳಲ್ಲಿ ಫ್ಲೆಕ್ಸ್ ಇಂಧನ ಎಂಜಿನ್'ಗಳ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸರ್ಕಾರವು ಈ ಎಂಜಿನ್'ಗಳನ್ನು ಕಡ್ಡಾಯಗೊಳಿಸುವುದರ ಬಗ್ಗೆ ಚಿಂತನೆ ನಡೆಸುತ್ತಿದೆ.

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಇದರಿಂದ ರೈತರಿಗೆ ಅನುಕೂಲವಾಗುವುದರ ಜೊತೆಗೆ ಭಾರತದ ಆರ್ಥಿಕತೆ ಹೆಚ್ಚುತ್ತದೆ ಎಂದು ಗಡ್ಕರಿ ಹೇಳಿದ್ದಾರೆ. ಅವರು 2020-21ರ ರೋಟರಿ ಜಿಲ್ಲಾ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪರ್ಯಾಯ ಇಂಧನ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ ರೂ.60-62ಗಳಾದರೆ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ.100ಗಳಾಗಿದೆ.

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಎಥೆನಾಲ್ ಬಳಸುವ ಮೂಲಕ ಭಾರತೀಯರು ಪ್ರತಿ ಲೀಟರ್‌ಗೆ ರೂ.30-35 ಉಳಿತಾಯ ಮಾಡಬಹುದು. ಸಾರಿಗೆ ಸಚಿವನಾಗಿ ನಾನು ಪೆಟ್ರೋಲ್ ಎಂಜಿನ್ ಮಾತ್ರವಲ್ಲದೇ, ಫ್ಲೆಕ್ಸ್-ಇಂಧನ ಎಂಜಿನ್ ಸಹ ಇರಲಿ ಎಂದು ಆಟೋ ಮೊಬೈಲ್ ಉದ್ಯಮಕ್ಕೆ ಆದೇಶ ಹೊರಡಿಸಲಿದ್ದೇನೆ ಎಂದು ನಿತಿನ್ ಗಡ್ಕರಿ ಹೇಳಿದರು.

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಜನರಿಗೆ 100%ನಷ್ಟು ಕಚ್ಚಾ ತೈಲ ಅಥವಾ 100%ನಷ್ಟು ಎಥೆನಾಲ್ ಬಳಸುವ ಅವಕಾಶವಿದೆ. ವಾಹನ ತಯಾರಕ ಕಂಪನಿಗಳು ಬ್ರೆಜಿಲ್, ಕೆನಡಾ ಹಾಗೂ ಅಮೆರಿಕಾಗಳಲ್ಲಿ ಫ್ಲೆಕ್ಸ್ ಇಂಧನ ಎಂಜಿನ್'ಗಳನ್ನು ಉತ್ಪಾದಿಸುತ್ತಿವೆ ಎಂದು ಅವರು ಹೇಳಿದರು.

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಈ ಎಂಜಿನ್‌ಗಳೊಂದಿಗೆ ಗ್ರಾಹಕರು 100% ಪೆಟ್ರೋಲ್ ಅಥವಾ 100% ಬಯೋ-ಎಥೆನಾಲ್ ಬಳಸುವ ಆಯ್ಕೆಯನ್ನು ಪಡೆಯಬಹುದು. ಮಾಲಿನ್ಯವನ್ನು ಕಡಿಮೆ ಮಾಡಲು ಹಾಗೂ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಪೆಟ್ರೋಲ್‌ನೊಂದಿಗೆ 20%ನಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು 2025ಕ್ಕೆ ವಿಸ್ತರಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಸರ್ಕಾರವು ಕಳೆದ ವರ್ಷ 2022ರ ವೇಳೆಗೆ ಪೆಟ್ರೋಲ್‌ನಲ್ಲಿ 10%ನಷ್ಟು ಹಾಗೂ 2030ರ ವೇಳೆಗೆ 20%ನಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಿತ್ತು. ಈಗ 8.5%ನಷ್ಟು ಎಥೆನಾಲ್ ಅನ್ನು ಪೆಟ್ರೋಲ್'ನೊಂದಿಗೆ ಬೆರೆಸಲಾಗುತ್ತಿದೆ.

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

2014ರಲ್ಲಿ 38 ಕೋಟಿ ಲೀಟರ್'ಗಳಿದ್ದ ಎಥೆನಾಲ್ ಸಂಗ್ರಹ ಪ್ರಮಾಣವು ಈಗ 320 ಕೋಟಿ ಲೀಟರ್'ಗಳಿಗೆ ಏರಿಕೆಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಎಥೆನಾಲ್ ಪೆಟ್ರೋಲ್'ಗಿಂತ ಉತ್ತಮ ಇಂಧನವಾಗಿದ್ದು, ಆಮದು ಮೇಲಿನ ಅವಲಂಬನೆ ತಪ್ಪಿಸುವುದರ ಜೊತೆಗೆ ಮಾಲಿನ್ಯ ಮುಕ್ತವಾಗಿದೆ ಎಂದು ಅವರು ಹೇಳಿದರು.

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಫ್ಲೆಕ್ಸ್ ಇಂಧನ ಎಂಜಿನ್'ಗಳನ್ನು ಕಡ್ಡಾಯಗೊಳಿಸುವುದರಿಂದ ಭಾರತೀಯ ಆರ್ಥಿಕತೆಯು ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಗಡ್ಕರಿ ಹೇಳಿದರು. ಕೆಲವು ದೇಶಗಳಲ್ಲಿ ಸಕ್ಕರೆ ಹೆಚ್ಚುವರಿಯಾಗಿದ್ದಾರೆ, ಕೆಲವು ದೇಶಗಳಲ್ಲಿ ಗೋಧಿ ಹೆಚ್ಚುವರಿಯಾಗಿದೆ.

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಈ ಎಲ್ಲಾ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ನಮಗೆ ಸ್ಥಳವಿಲ್ಲ. ಆಹಾರ ಧಾನ್ಯಗಳ ಹೆಚ್ಚುವರಿಯು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ನಮ್ಮ ಸರ್ಕಾರವು ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಂತರರಾಷ್ಟ್ರೀಯ ಬೆಲೆ ಹಾಗೂ ದೇಶಿಯ ಮಾರುಕಟ್ಟೆ ಬೆಲೆಗಳಿಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಇದಕ್ಕಾಗಿ ಆಹಾರ ಧಾನ್ಯ ಹಾಗೂ ಕಬ್ಬಿನ ರಸವನ್ನು ಬಳಸಿ ಎಥೆನಾಲ್ ತಯಾರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ.97ಗಳಾದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.88 ಆಗಿದೆ.

Most Read Articles

Kannada
English summary
Union government to make Flex fuel engine mandatory. Read in Kannada.
Story first published: Tuesday, June 22, 2021, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X