ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಕೇಂದ್ರ ಸಚಿವ ನಿತಿನ್ ಗಡ್ಕರಿ ರವರು, ಇತ್ತೀಚೆಗೆ ಜಾರಿಗೊಳಿಸಲಾದ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದ ನಂತರ ಖರೀದಿಸುವ ವಾಹನಗಳಿಗೆ ಹೆಚ್ಚಿನ ತೆರಿಗೆ ರಿಯಾಯಿತಿ ನೀಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರವು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನಡೆದ ಸರ್ಕಾರದಿಂದ ಅನುಮೋದಿತ ಮಾರುತಿ ಸುಜುಕಿ ಟೊಯೊಟ್ಸು ಸ್ಕ್ರ್ಯಾಪಿಂಗ್ ಹಾಗೂ ಮರುಬಳಕೆ ಸೌಲಭ್ಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಸ್ಕ್ರ್ಯಾಪೇಜ್ ನೀತಿಯು ಮಾಲಿನ್ಯವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಅವರು ಹೇಳಿದರು. ಹೊಸ ನೀತಿಯ ಅಡಿಯಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದ ನಂತರ ಖರೀದಿಸುವ ಹೊಸ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ 25% ನಷ್ಟು ತೆರಿಗೆ ವಿನಾಯಿತಿ ನೀಡುತ್ತಿವೆ. ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರ್ಯಾಪೇಜ್ ನೀತಿಯಡಿ ನೀಡಬಹುದಾದ ಪ್ರೋತ್ಸಾಹ ಧನವನ್ನು ಹೆಚ್ಚಿಸುವಂತೆ ಜಿಎಸ್‌ಟಿ ಕೌನ್ಸಿಲ್‌ಗೆ ಮನವಿ ಮಾಡಿರುವುದಾಗಿ ಗಡ್ಕರಿ ಹೇಳಿದರು.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಪ್ರೋತ್ಸಾಹ ಧನದ ಕುರಿತು ಅಂತಿಮ ನಿರ್ಧಾರವನ್ನು ಹಣಕಾಸು ಇಲಾಖೆ ಹಾಗೂ ಜಿಎಸ್‌ಟಿ ಕೌನ್ಸಿಲ್ ತೆಗೆದುಕೊಳ್ಳುತ್ತವೆ ಎಂದು ಅವರು ಮಾಹಿತಿ ನೀಡಿದರು. ವಾಹನ ಸ್ಕ್ರ್ಯಾಪೇಜ್ ನೀತಿಯು ಮಧ್ಯಸ್ಥಗಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಏಕೆಂದರೆ ಸ್ಕ್ರ್ಯಾಪೇಜ್ ನೀತಿಯು ಉತ್ಪಾದನೆಯನ್ನು ಉತ್ತೇಜಿಸಿ, ಉದ್ಯೋಗವನ್ನು ಸೃಷ್ಟಿಸುತ್ತದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಎಸ್‌ಟಿ ಮೂಲಕ ಪ್ರತಿ ವರ್ಷ ರೂ. 40,000 ಕೋಟಿಗಳವರೆಗೆ ಆದಾಯ ಗಳಿಸಲು ನೆರವಾಗುತ್ತದೆ.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಘೋಷಿಸಿದ್ದರು. ಸ್ಕ್ರ್ಯಾಪ್ ನೀತಿ ಜಾರಿಯಾದ ನಂತರ ಈಗ ಹಳೆಯ ವಾಹನಗಳನ್ನು ಸರ್ಕಾರದ ಪ್ರಮಾಣೀಕೃತ ಸ್ಕ್ರ್ಯಾಪಿಂಗ್ ಕೇಂದ್ರಗಳಲ್ಲಿ ಸ್ಕ್ರ್ಯಾಪ್ ಮಾಡಬಹುದು. ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದ ನಂತರ ವಾಹನ ವಿತರಕರು ಪ್ರಮಾಣಪತ್ರಗಳನ್ನು ನೀಡುತ್ತಾರೆ.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಅದರ ಆಧಾರದ ಮೇಲೆ ಹೊಸ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಸಾರಿಗೆ ಇಲಾಖೆಯ ಮಾಹಿತಿಯ ಪ್ರಕಾರ, ಸಾರಿಗೆಯೇತರ ಖಾಸಗಿ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ 25% ಹಾಗೂ ಸಾರಿಗೆ ಅಥವಾ ವಾಣಿಜ್ಯ ವಾಹನಗಳಿಗೆ 15% ವರೆಗೆ ರಿಯಾಯಿತಿ ನೀಡಲಾಗಿದೆ. ರಾಷ್ಟ್ರೀಯ ವಾಹನ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ಹೊಸ ನಿಯಮಗಳನ್ನು ಕೇಂದ್ರ ಮೋಟಾರು ವಾಹನಗಳ (ಇಪ್ಪತ್ನಾಲ್ಕನೇ ತಿದ್ದುಪಡಿ) ನಿಯಮಗಳು, 2021 ಎಂದು ಕರೆಯಲಾಗುವುದು.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಈ ನಿಯಮವು 2022ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಪ್ರಮಾಣಪತ್ರ ನೀಡಿದ ದಿನಾಂಕದಿಂದ ಎಂಟು ವರ್ಷಗಳ ನಂತರ ಸಾರಿಗೆ ವಾಹನಗಳಿಗೆ ಹಾಗೂ ಹದಿನೈದು ವರ್ಷಗಳ ನಂತರ ಸಾರಿಗೆಯೇತರ ವಾಹನಗಳಿಗೆ ಯಾವುದೇ ಪ್ರಯೋಜನವನ್ನು ನೀಡಲಾಗುವುದಿಲ್ಲ. ಸ್ಕ್ರ್ಯಾಪಿಂಗ್ ಪ್ರಮಾಣಪತ್ರ ಪಡೆದ ನಂತರ ಅದರ ಪ್ರಯೋಜನವನ್ನು ಪಡೆಯಲು ನಿಗದಿತ ಸಮಯದೊಳಗೆ ಹೊಸ ವಾಹನವನ್ನು ಖರೀದಿಸಬೇಕು.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಮುಂದಿನ ವರ್ಷದಿಂದ ಎಲ್ಲಾ ಹಳೆಯ ಖಾಸಗಿ ಹಾಗೂ ವಾಣಿಜ್ಯ ವಾಹನಗಳ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರವು ಹೆಚ್ಚಿಸಲಿದೆ. 2022ರ ಏಪ್ರಿಲ್ 1ರಿಂದ, 15 ವರ್ಷ ಹಳೆಯದಾದ ಬೈಕ್, ಕಾರು ಅಥವಾ ಬಸ್‌ನ ಮರು ನೋಂದಣಿಗಾಗಿ ಎಂಟು ಪಟ್ಟು ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಈ ನೀತಿಯು ದೆಹಲಿಯ ವಾಹನ ಮಾಲೀಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ದೆಹಲಿ ಎನ್‌ಸಿ‌ಆರ್ ಪ್ರದೇಶದಲ್ಲಿ ಈಗಾಗಲೇ 10 ವರ್ಷ ಹಳೆಯ ಡೀಸೆಲ್ ವಾಹನ ಹಾಗೂ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ಸಂಚಾರವನ್ನು ನಿಷೇಧಿಸಲಾಗಿದೆ. ಹೊಸ ಶುಲ್ಕದ ದರಗಳು 2022ರ ಏಪ್ರಿಲ್ ನಿಂದ ಜಾರಿಗೆ ಬರಲಿವೆ. ಇನ್ನು ಮುಂದೆ 15 ವರ್ಷ ಹಳೆಯ ದ್ವಿಚಕ್ರ ವಾಹನ ನೋಂದಣಿಗೆ ರೂ. 300 ಬದಲು ರೂ. 1,000 ಹಾಗೂ 15 ವರ್ಷ ಹಳೆಯ ಕಾರಿನ ನೋಂದಣಿ ನವೀಕರಣಕ್ಕೆ ರೂ. 5,000 ಶುಲ್ಕ ಪಾವತಿಸಬೇಕಾಗುತ್ತದೆ.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಅದೇ ರೀತಿ ಬಸ್‌ಗಳು ಅಥವಾ ಟ್ರಕ್‌ಗಳಂತಹ 15 ವರ್ಷ ಹಳೆಯ ಸಾರ್ವಜನಿಕ ಹಾಗೂ ವಾಣಿಜ್ಯ ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರ ನವೀಕರಣಕ್ಕೆ ಈಗ ಇರುವ ದರಕ್ಕಿಂತ ಎಂಟು ಪಟ್ಟು ಹೆಚ್ಚು ದರ ವಿಧಿಸಲಾಗುತ್ತದೆ. ಈ ವಾಹನಗಳ ನವೀಕರಣ ಶುಲ್ಕವನ್ನು ರೂ. 10,000 ಗಳಿಂದ ರೂ. 12,500 ಗಳವರೆಗೆ ನಿಗದಿಪಡಿಸಲಾಗಿದೆ. ಆಮದು ಮಾಡಿದ ಬೈಕ್‌ ಹಾಗೂ ಕಾರುಗಳ ನೋಂದಣಿ ನವೀಕರಣವು ಇನ್ನು ಮುಂದೆ ದುಬಾರಿಯಾಗಲಿದೆ.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಆಮದು ಮಾಡಿದ ದ್ವಿಚಕ್ರ ವಾಹನಗಳಿಗೆ ರೂ. 10 ಸಾವಿರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ರೂ. 40 ಸಾವಿರ ನವೀಕರಣ ಶುಲ್ಕ ನಿಗದಿಪಡಿಸಲಾಗಿದೆ. ಇದೇ ವೇಳೆ ವಾಹನ ವಿತರಕರ ವ್ಯಾಪಾರವನ್ನು ರಕ್ಷಿಸಲು ಕಾನೂನನ್ನು ಜಾರಿಗೆ ತರಬೇಕು ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಫಾಡಾ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ವಾಹನ ಡೀಲರ್ಸ್ ಅಸೋಸಿಯೇಷನ್ ​​ಅಕ್ಟೋಬರ್ 27 ರಂದು ಕೇಂದ್ರ ಸರ್ಕಾರದ ಮಧ್ಯಪ್ರವೇಶವನ್ನು ಕೋರಿ ನಿರ್ಣಯ ಮಂಡಿಸಿದೆ. ಇದರಿಂದ ಆಟೋಮೊಬೈಲ್ ವಿತರಕರಿಗೆ ರಕ್ಷಣೆ ಒದಗಿಸಲು ಸಾಧ್ಯವಾಗಲಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಾಹನ ಡೀಲರ್ಸ್ ಅಸೋಸಿಯೇಷನ್, ​​ಕಾರ್ ಕಂಪನಿ ಹಾಗೂ ಡೀಲರ್ ತಮ್ಮ ಪಾಲುದಾರಿಕೆಯ ಆರಂಭದಲ್ಲಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುತ್ತಾರೆ.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಇದು ಭಾರತೀಯ ಒಪ್ಪಂದ ಕಾಯಿದೆ ಅಡಿಯಲ್ಲಿ ಮಾನ್ಯವಾಗಿರುತ್ತದೆ. ಆದರೆ, ಕಾನೂನಿನಲ್ಲಿ ವಿತರಕರಿಗೆ ಯಾವುದೇ ಪರಿಹಾರವಿಲ್ಲ. ಈ ಹಿನ್ನೆಲೆಯಲ್ಲಿ ಫಾಡಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಸರ್ಕಾರವು ಆಟೋಮೊಬೈಲ್ ಡೀಲರ್ಸ್ ಪ್ರೊಟೆಕ್ಷನ್ ಆಕ್ಟ್ ಅನ್ನು ಜಾರಿಗೆ ತರಬೇಕು ಎಂದು ಹೇಳಿದೆ. ಇಂತಹ ಕಾನೂನುಗಳು ಭಾರತದಲ್ಲಿ ವಾಹನ ವಿತರಕರ ಹಕ್ಕುಗಳನ್ನು ರಕ್ಷಿಸುತ್ತವೆ.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಭಾರತದಲ್ಲಿ ಡೀಲರ್‌ಶಿಪ್ ಒಪ್ಪಂದಗಳಿಗೆ ನಿಗದಿತ ಅವಧಿ ಇಲ್ಲ. ಕೆಲವು ಒಪ್ಪಂದಗಳು ಒಂದು ವರ್ಷಕ್ಕಿಂತ ಕಡಿಮೆ ಇರುತ್ತವೆ. ಡೀಲರ್‌ಶಿಪ್ ವ್ಯವಹಾರವನ್ನು ಮುಚ್ಚಲು 3 - 5 ವರ್ಷಗಳ ಆವಧಿ ಬೇಕಾಗುತ್ತದೆ. ಡೀಲರ್‌ಗಳು ಮಾಡಿದ ಬೃಹತ್ ಹೂಡಿಕೆಯನ್ನು ಹಿಂಪಡೆಯಲು ಸಾಕಷ್ಟು ಅವಕಾಶಗಳನ್ನು ನೀಡದ ಕಾರಣ ಒಪ್ಪಂದದ ಅಲ್ಪಾವಧಿಯು ಡೀಲರ್‌ಗಳಿಗೆ ಹಾನಿಕಾರಕವಾಗಿದೆ ಎಂದು ಫಾಡಾ ಹೇಳಿದೆ.

ಹಳೆ ವಾಹನ ಸ್ಕ್ರ್ಯಾಪ್ ಮಾಡುವ ವಾಹನ ಮಾಲೀಕರಿಗೆ ಸಿಗಲಿದೆ ಮತ್ತಷ್ಟು ಪ್ರೋತ್ಸಾಹ ಧನ

ಭಾರತದಲ್ಲಿ ವಾಹನ ವಿತರಕರಿಗೆ ವ್ಯಾಪಾರ ಸಂರಕ್ಷಣಾ ಕಾನೂನಿನ ಅನುಪಸ್ಥಿತಿಯು ವಿತರಕರಿಗಿಂತ ಒಇಎಂಗಳಿಗೆ ಹೆಚ್ಚಿನ ನಮ್ಯತೆಯನ್ನು ನೀಡುತ್ತದೆ ಎಂದು ಫಾಡಾ ಹೇಳಿದೆ. ಇದು ಕಂಪನಿಯನ್ನು ಮುಚ್ಚುವ ಸಮಯದಲ್ಲಿ ಮಾತುಕತೆ ನಡೆಸುವ ವಿತರಕರ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರ ಜೊತೆಗೆ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ.

Most Read Articles

Kannada
English summary
Union government to offer more compensation for scrapping vehicles details
Story first published: Thursday, November 25, 2021, 14:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X