ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಸೇರಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ಸಂಗತಿ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಕರೋನಾ ಸಾಂಕ್ರಾಮಿಕದ ನಡುವೆಯೂ ಸುಮಾರು 1.20 ಲಕ್ಷ ಜನರು ರಸ್ತೆ ಅಪಘಾತಗಳಿಂದ ಮೃತ ಪಟ್ಟಿದ್ದಾರೆ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಅಂದರೆ ಪ್ರತಿ ದಿನ ಸರಾಸರಿ 328 ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳನ್ನು ತಪ್ಪಿಸಲು ಹಾಗೂ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ರವರು ಎಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕು ಎಂದು ಹೇಳಿದ್ದಾರೆ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಭಾರತದಲ್ಲಿ ಹೆಚ್ಚಿನ ಜನರು ಖರೀದಿಸುವ ಬಜೆಟ್ ಕಾರುಗಳನ್ನು ಹೆಚ್ಚು ಏರ್ ಬ್ಯಾಗ್ ಗಳೊಂದಿಗೆ ಉತ್ಪಾದಿಸಬೇಕೆಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಸಣ್ಣ ಗಾತ್ರದ ಬಜೆಟ್ ಕಾರುಗಳಲ್ಲಿ ಹೆಚ್ಚಿನ ಏರ್ ಬ್ಯಾಗ್‌ಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಬಹುದು ಹಾಗೂ ರಸ್ತೆ ಅಪಘಾತಗಳಿಂದ ಉಂಟಾಗುವ ಸಾವುಗಳನ್ನು ತಡೆಯಬಹುದು ಎಂದು ಅವರು ಹೇಳಿದ್ದಾರೆ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಕಾರು ತಯಾರಕ ಕಂಪನಿಗಳು ತಮ್ಮ ಸಣ್ಣ ಗಾತ್ರದ ಬಜೆಟ್ ಕಾರುಗಳಲ್ಲಿ ಹೆಚ್ಚು ಏರ್‌ ಬ್ಯಾಗ್‌ಗಳನ್ನು ನೀಡುವ ಮೂಲಕ ರೂ. 3,000 ಗಳಿಂದ ರೂ. 4,000 ಗಳವರೆಗೆ ಹೆಚ್ಚುವರಿ ದರ ವಿಧಿಸಬಹುದು ಎಂದು ಅವರು ಹೇಳಿದ್ದಾರೆ. ಈಗ ಐಷಾರಾಮಿ ಕಾರುಗಳಲ್ಲಿ ಮಾತ್ರ 8 ಏರ್‌ ಬ್ಯಾಗ್‌ಗಳನ್ನು ನೀಡಲಾಗುತ್ತಿದೆ. ಬಜೆಟ್ ಕಾರುಗಳಲ್ಲಿ 2 - 3 ಏರ್ ಬ್ಯಾಗ್ ಗಳನ್ನು ಮಾತ್ರ ನೀಡಲಾಗುತ್ತಿದೆ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿತಿನ್ ಗಡ್ಕರಿ, ನೀವು (ಆಟೋಮೊಬೈಲ್ ಕಂಪನಿಗಳು) ಶ್ರೀಮಂತರು ಖರೀದಿಸುವ ಕಾರುಗಳಲ್ಲಿ 8 ಏರ್‌ ಬ್ಯಾಗ್‌ಗಳನ್ನು ಒದಗಿಸುತ್ತೀರಿ. ಬಜೆಟ್ ಕಾರುಗಳಲ್ಲಿ ಕೇವಲ 2 - 3 ಏರ್‌ ಬ್ಯಾಗ್‌ಗಳನ್ನು ಮಾತ್ರ ನೀಡುತ್ತೀರಿ. ಮಧ್ಯಮ ವರ್ಗದವರು ಹಾಗೂ ಅದಕ್ಕಿಂತ ಕೆಳ ವರ್ಗದವರು ಬಳಸುವ ಕಾರುಗಳಲ್ಲಿ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ವಾಹನಗಳಿಗೆ ಹೆಚ್ಚಿನ ತೆರಿಗೆ ವಿಧಿಸುವುದರ ಮೂಲಕ, ಕಠಿಣ ಸುರಕ್ಷತಾ ನಿಯಮಗಳನ್ನು ಹಾಗೂ ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸುವ ಮೂಲಕ ವಾಹನಗಳ ಬೆಲೆ ಏರಿಸುವಂತೆ ಮಾಡಿದ್ದಾರೆ ಎಂದು ಕೆಲವು ಕಂಪನಿಗಳು ಕೇಂದ್ರ ಸಾರಿಗೆ ಸಚಿವರನ್ನು ಟೀಕಿಸುತ್ತಿವೆ. ಈ ವರ್ಷದ ಜೂನ್‌ ತಿಂಗಳಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಕಾರುಗಳಲ್ಲಿ ಫ್ರಂಟ್ ಏರ್ ಬ್ಯಾಗ್ ಗಳನ್ನು ಅಳವಡಿಸುವ ಗಡುವನ್ನು ವಿಸ್ತರಿಸಿದೆ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಕೇಂದ್ರ ಸಾರಿಗೆ ಇಲಾಖೆಯು ಅಸ್ತಿತ್ವದಲ್ಲಿರುವ ಕಾರು ಮಾದರಿಗಳ ಮುಂಭಾಗದ ಚಾಲಕ ಹಾಗೂ ಸಹ ಚಾಲಕರ ಸೀಟುಗಳಲ್ಲಿ ಏರ್‌ ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ಗಡುವನ್ನು 4 ತಿಂಗಳು ಅಂದರೆ ಈ ವರ್ಷದ ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ಕರೋನಾ ವೈರಸ್ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ವಾಹನ ತಯಾರಕ ಕಂಪನಿಗಳಿಗೆ ನೀಡಲಾಗಿದ್ದ ಹಲವು ರೀತಿಯ ಗಡುವುಗಳನ್ನು ವಿಸ್ತರಿಸಲಾಗುತ್ತಿದೆ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಅದೇ ರೀತಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಹೊಂದಿರುವ ಹೊಸ ಕಾರುಗಳ ಬಿಡುಗಡೆಯನ್ನು ಮುಂದಿನ ವರ್ಷದ ಏಪ್ರಿಲ್ 1ಕ್ಕೆ ಮುಂದೂಡಲಾಗಿದೆ. ಕೇಂದ್ರ ಸರ್ಕಾರವು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಈ ಘೋಷಣೆಯನ್ನು ಹೊರಡಿಸಿತ್ತು. ಈ ಮುನ್ನ ಚಾಲಕನಿಗೆ ಮಾತ್ರ ಏರ್‌ಬ್ಯಾಗ್ ಕಡ್ಡಾಯವಾಗಿತ್ತು ಎಂಬುದು ಗಮನಾರ್ಹ. ಅಪಘಾತಗಳು ಸಂಭವಿಸಿದಾಗ ಏರ್ ಬ್ಯಾಗ್ ಗಳು ಪ್ರಯಾಣಿಕರ ಜೀವವನ್ನು ಉಳಿಸುತ್ತವೆ ಎಂಬುದು ಸರ್ಕಾರದ ಅಭಿಪ್ರಾಯ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಆದರೆ ಏರ್‌ ಬ್ಯಾಗ್‌ಗಳಿಂದ ಕೆಲವು ಅನಾನುಕೂಲತೆಗಳಿವೆ. ಇವುಗಳಲ್ಲಿ ಪ್ರಮುಖ ಅನಾನುಕೂಲವೆಂದರೆ ಏರ್‌ ಬ್ಯಾಗ್‌ಗಳ ಹಠಾತ್ ವಿಸ್ತರಣೆ. ಅಪಘಾತದ ಸಮಯವನ್ನು ಹೊರತುಪಡಿಸಿ ದೊಡ್ಡ ರಸ್ತೆ ಗುಂಡಿಗಳಲ್ಲಿ ಕಾರು ಅನಿರೀಕ್ಷಿತವಾಗಿ ಅಪ್ಪಳಿಸಿದಾಗ ಏರ್‌ ಬ್ಯಾಗ್‌ಗಳು ವಿಸ್ತರಿಸಿ ಕೊಂಡ ಹಲವು ಘಟನೆಗಳು ಈ ಹಿಂದೆ ವರದಿಯಾಗಿದ್ದವು. ಏರ್ ಬ್ಯಾಗ್ ಗಳ ಹಠಾತ್ ವಿಸ್ತರಣೆಯಿಂದಾಗಿ ತೊಂದರೆಗಳಾಗುತ್ತವೆ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಜೊತೆಗೆ ವಿಸ್ತರಿಸಿದ ಏರ್‌ಬ್ಯಾಗ್‌ಗಳನ್ನು ಡ್ಯಾಶ್‌ಬೋರ್ಡ್ ಹಾಗೂ ಸ್ಟೀಯರಿಂಗ್ ವ್ಹೀಲ್‌ಗೆ ಮರು ಸೇರ್ಪಡೆಗೊಳಿಸುವುದಕ್ಕೆ ದುಬಾರಿ ವೆಚ್ಚವಾಗುತ್ತದೆ. ದುಬಾರಿ ವೆಚ್ಚವಾದರೂ ರಸ್ತೆ ಅಪಘಾತಗಳಾದಾಗ ಏರ್ ಬ್ಯಾಗ್ ಗಳು ಪ್ರಯಾಣಿಕರ ಪ್ರಾಣ ಉಳಿಸುತ್ತವೆ ಎಂಬುದು ಸುಳ್ಳಲ್ಲ. ಈಗ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಬೆಲೆಯ ಆಧಾರದ ಮೇಲೆ ಏರ್‌ಬ್ಯಾಗ್‌ಗಳನ್ನು ವಿವಿಧ ಸಂಖ್ಯೆಯಲ್ಲಿ ನೀಡಲಾಗುತ್ತದೆ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಕಾರು ಅಪಘಾತದ ಸಂದರ್ಭಗಳಲ್ಲಿ ಏರ್‌ಬ್ಯಾಗ್‌ಗಳು ಕಾರು ಚಾಲಕರನ್ನು ಹಾಗೂ ಅವರೊಂದಿಗೆ ಪ್ರಯಾಣಿಸುವ ಇತರ ಪ್ರಯಾಣಿಕರ ಜೀವವನ್ನು ರಕ್ಷಿಸುತ್ತವೆ. ಅಪಘಾತದ ಸಮಯದಲ್ಲಿ ಕಾರಿನ ಏರ್ ಬ್ಯಾಗ್ ವಿಸ್ತರಿಸಿದರೆ ಅವುಗಳನ್ನು ಬದಲಾಯಿಸಬೇಕಾಗುತ್ತದೆ. ಹಾಗೆಯೇ ಸೆನ್ಸಾರ್ ಗಳನ್ನು ಸಹ ಮರು ಹೊಂದಿಸಬೇಕು. ಇಲ್ಲದಿದ್ದರೆ ಅನಾಹುತಗಳಾಗುವುದು ಖಚಿತ.

ಎಲ್ಲಾ ಕಾರುಗಳಲ್ಲೂ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕೆಂದ ಕೇಂದ್ರ ಸಚಿವ

ಏರ್ ಬ್ಯಾಗ್‌ಗಳಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ, ಕಾರು ಅದರ ಬಗ್ಗೆ ನಿಮಗೆ ತಿಳಿಸುತ್ತದೆ. ಏರ್‌ಬ್ಯಾಗ್‌ಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ಡ್ಯಾಶ್‌ಬೋರ್ಡ್‌ನಲ್ಲಿರುವ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ. ಈ ಲೈಟ್ ಆನ್ ಆದರೆ ಏರ್‌ಬ್ಯಾಗ್‌ಗಳಲ್ಲಿ ಏನೋ ದೋಷವಿದೆ ಎಂದು ಅರ್ಥ.

Most Read Articles

Kannada
English summary
Union transport minister asks car companies to provide more air bags in budget cars details
Story first published: Tuesday, September 21, 2021, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X