ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಕೇಂದ್ರ ಸಾರಿಗೆ ಇಲಾಖೆಯು ಇತ್ತೀಚಿಗೆ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ 2021 ರ ಜುಲೈ 14 ರವರೆಗೆ ದೇಶದಲ್ಲಿ 3.54 ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನು ವಿತರಿಸಲಾಗಿದೆ. ಈ ವರ್ಷದ ಫೆಬ್ರವರಿ 14 ರಿಂದ ಫಾಸ್ಟ್‌ಟ್ಯಾಗ್‌ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ನಂತರ ಫಾಸ್ಟ್‌ಟ್ಯಾಗ್ ಬಳಕೆ ದೇಶಾದ್ಯಂತ 80% ನಿಂದ 96% ಗಳಿಗೆ ಏರಿಕೆಯಾಯಿತು. ಟೋಲ್ ಶುಲ್ಕ ವಹಿವಾಟು ಫಾಸ್ಟ್‌ಟ್ಯಾಗ್ ಆಧಾರಿತ ಪ್ರಕ್ರಿಯೆಯ ಮೂಲಕ ಸುಗಮವಾಗಿ ಸಾಗುತ್ತಿದೆ ಎಂದು ಕೇಂದ್ರ ಸಾರಿಗೆ ಇಲಾಖೆ ತಿಳಿಸಿದೆ. ಫಾಸ್ಟ್‌ಟ್ಯಾಗ್‌ ಬಳಕೆಗಾಗಿ ಸಾರಿಗೆ ಇಲಾಖೆಯು ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಜುಲೈ 14 ರಿಂದ ಹೆದ್ದಾರಿಗಳಲ್ಲಿರುವ ಎಲ್ಲಾ ಪಥಗಳಲ್ಲಿ ಫಾಸ್ಟ್‌ಟ್ಯಾಗ್ ಆಧಾರಿತ ಟೋಲ್ ಶುಲ್ಕ ಸಂಗ್ರಹವನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳನಿಯಮ 2008 ರ ಪ್ರಕಾರ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಬಳಸದ ವಾಹನಗಳಿಗೆ ಟೋಲ್ ಶುಲ್ಕಕ್ಕಿಂತ ಎರಡು ಪಟ್ಟು ಹೆಚ್ಚು ಶುಲ್ಕ ವಿಧಿಸಲಾಗುತ್ತದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ವಿಳಂಬ ಮಾಡದೆ ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳ ವಾಹನ ಸವಾರರು ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಿದ್ದಾರೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿಜಿಟಲ್ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್‌ಟ್ಯಾಗ್ ಬಳಸಲಾಗುತ್ತದೆ. ಫಾಸ್ಟ್‌ಟ್ಯಾಗ್‌ ಬಳಕೆಯು, ಟೋಲ್ ಸಂಗ್ರಹ ಪ್ರಕ್ರಿಯೆಯನ್ನುವೇಗವಾಗಿ, ಸುಗಮವಾಗಿಸುವುದರ ಜೊತೆಗೆ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರು ದೀರ್ಘ ಕಾಲ ಕಾಯುವುದನ್ನು ತಡೆಯುತ್ತದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಫಾಸ್ಟ್‌ಟ್ಯಾಗ್ ಒಂದು ಸ್ಟಿಕ್ಕರ್ ಆಗಿದ್ದು, ಅದನ್ನು ವಾಹನಗಳ ಮುಂಭಾಗದ ಗಾಜಿನ ಮೇಲೆ ಅಳವಡಿಸಲಾಗುತ್ತದೆ. ಫಾಸ್ಟ್‌ಟ್ಯಾಗ್‌ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟೆಕ್ನಾಲಜಿ (ಆರ್‌ಎಫ್‌ಐಡಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಟೋಲ್ ಪ್ಲಾಜಾ ಮೂಲಕ ವಾಹನಗಳು ಹಾದುಹೋದಾಗ, ಟೋಲ್ ಶುಲ್ಕವು ಆಟೋಮ್ಯಾಟಿಕ್ ಆಗಿ ಬ್ಯಾಂಕ್ ಅಥವಾ ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಲಾದ ಪ್ರಿಪೇಯ್ಡ್ ಖಾತೆಯಿಂದ ಕಡಿತಗೊಳ್ಳುತ್ತದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಇದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಂತು ಟೋಲ್ ಶುಲ್ಕವನ್ನು ಪಾವತಿ ಮಾಡುವುದು ತಪ್ಪುತ್ತದೆ. ಫಾಸ್ಟ್‌ಟ್ಯಾಗ್‌ ಸಮಯವನ್ನು ಉಳಿಸುವುದರ ಜೊತೆಗೆ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಇನ್ನು ಮುಂದೆ ಉತ್ಪಾದನೆಯಾಗುವ ಎಲ್ಲಾ ಪ್ರಯಾಣಿಕ ನಾಲ್ಕು ಚಕ್ರ ವಾಹನಗಳು, ಬಸ್ಸುಗಳು, ಟ್ರಕ್'ಗಳು, ಲಾರಿಗಳು ಹಾಗೂ ಕಮರ್ಷಿಯಲ್ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ದ್ವಿಚಕ್ರ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸುವ ಅಗತ್ಯವಿಲ್ಲ. ಫಾಸ್ಟ್‌ಟ್ಯಾಗ್‌ಗಳನ್ನು ದೇಶದ ಯಾವುದೇ ಟೋಲ್ ಪ್ಲಾಜಾಗಳಲ್ಲಿ ಖರೀದಿಸಬಹುದು. ಫಾಸ್ಟ್‌ಟ್ಯಾಗ್ ಖರೀದಿಸಲು ವಾಹನ ನೋಂದಣಿ ದಾಖಲೆಗಳನ್ನು ಹಾಗೂ ವಾಹನ ಸವಾರರ ಐಡಿಗಳನ್ನು ಸಲ್ಲಿಸಬೇಕಾಗುತ್ತದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಟೋಲ್ ಪ್ಲಾಜಾಗಳ ಹೊರತಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಸೇರಿದಂತೆ 22 ಬ್ಯಾಂಕುಗಳ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸಬಹುದು.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಇನ್ನು ಇ ಕಾಮರ್ಸ್ ಪ್ಲಾಟ್‌ಫಾರಂಗಳಾದ ಪೇಟಿಎಂ, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್'ಗಳ ಮೂಲಕವೂ ಫಾಸ್ಟ್‌ಟ್ಯಾಗ್‌ಗಳನ್ನು ಖರೀದಿಸಬಹುದು. ದೇಶದ ಆಯ್ದ ಪೆಟ್ರೋಲ್ ಬಂಕ್'ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಗ್ರಾಹಕರು ಇಂಧನ ಖರೀದಿಸುವ ಸೌಲಭ್ಯವನ್ನು ಆರಂಭಿಸಲಾಗಿದೆ.

ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಿಸಿದ ಸಾರಿಗೆ ಇಲಾಖೆ

ಐಸಿಐಸಿಐ ಬ್ಯಾಂಕಿನೊಂದಿಗೆ ಲಿಂಕ್ ಮಾಡಲಾದ ಫಾಸ್ಟ್‌ಟ್ಯಾಗ್ ಬಳಕೆದಾರರು ದೇಶಾದ್ಯಂತವಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್'ಗಳಲ್ಲಿ ಕ್ಯಾಶ್ ಲೆಸ್ ಆಗಿ ಇಂಧನ ಖರೀದಿಸಬಹುದು. ಈ ಸೌಲಭ್ಯವು ದೇಶಾದ್ಯಂತವಿರುವ ಸುಮಾರು 3,000 ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್'ಗಳಲ್ಲಿ ಲಭ್ಯವಿದೆ.

Most Read Articles

Kannada
English summary
Union transport ministry issued more than 3.5 crore fastags across India. Read in Kannada.
Story first published: Monday, July 26, 2021, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X