Just In
- 8 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 10 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 10 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 10 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಭಾರತದಲ್ಲಿ ಲಸಿಕೆ ಉತ್ಸವದ 4ನೇ ದಿನ ಲಸಿಕೆ ಪಡೆದ ಫಲಾನುಭವಿಗಳೆಷ್ಟು?
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..!
ಕೋವಿಡ್ ನಂತರ ಬೆಳವಣಿಗೆ ಹಾದಿಯಲ್ಲಿರುವ ಆಟೋ ಉದ್ಯಮವು ಕಳೆದ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಜೋರಾಗಿದೆ. ಹಾಗಾದ್ರೆ ಮಾರ್ಚ್ ಅವಧಿಯಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳ ಬಗೆಗೆ ಈ ಲೇಖನದಲ್ಲಿ ತಿಳಿಯೋಣ.

ಸಿಟ್ರನ್ ಸಿ5 ಏರ್‌ಕ್ರಾಸ್ ಎಸ್‌ಯುವಿ
ಭಾರತದಲ್ಲಿ ಮೊದಲ ಬಾರಿಗೆ ಕಾರು ಮಾರಾಟ ಆರಂಭಿಸುತ್ತಿರುವ ಸಿಟ್ರನ್ ಕಂಪನಿಯ ಮೊದಲ ಕಾರು ಮಾದರಿಯಾಗಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಇದೇ ತಿಂಗಳು ಮಧ್ಯಂತರದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಇಂದಿನಿಂದಲೇ ಆರಂಭಿಸಲಿರುವ ಸಿಟ್ರನ್ ಕಂಪನಿಯು ಮುಂದಿನ ಕೆಲವೇ ವಾರಗಳಲ್ಲಿ ಹೊಸ ಕಾರಿನ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಲಿದೆ.

ಸಿ5 ಏರ್‌ಕ್ರಾಸ್ ಕಾರು 4,500 ಎಂಎಂ ಉದ್ದ, 2,099 ಎಂಎಂ ಅಗಲ, 1,710 ಎಂಎಂ ಎತ್ತರ ಮತ್ತು 2,730 ಎಂಎಂ ವೀಲ್ಹ್‌ಬೆಸ್‌ನೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿದೆ. ಕಂಪನಿಯು ಹೊಸ ಕಾರಿನಲ್ಲಿ 2.0-ಲೀಟರ್(1,997ಸಿಸಿ) ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 25 ಲಕ್ಷದಿಂದ ರೂ. 28 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

ಸ್ಕೋಡಾ ಕುಶಾಕ್
2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಸ್ಕೋಡಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕುಶಾಕ್ ಹೆಸರಿನೊಂದಿಗೆ ಇದೇ ತಿಂಗಳು 18ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳುತ್ತಿದ್ದು, ಅನಾವರಣಗೊಂಡ ಕೆಲವೇ ದಿನಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಕುಶಾಕ್ ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯ ಆದ್ಯತೆ ಮೇರೆಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಮಾದರಿಯಾಗಿ 1.-0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪರಿಚಯಿಸುತ್ತಿದ್ದು,ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದೊಂದಿಗೆ ಮಾರಾಟಗೊಳ್ಳಬಹುದಾಗಿದೆ.

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್
ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ತನ್ನ ಎಂಟ್ರಿ ಲೆವಲ್ ಎ-ಕ್ಲಾಸ್ ಲಿಮೋಸಿನ್ ಆವೃತ್ತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಾರಿನ ಕಾರ್ಯಕ್ಷಮತೆ ಕುರಿತಂತೆ ಫಸ್ಟ್ ಡ್ರೈವ್ ಆಯೋಜಿಸಿತ್ತು. ಹೊಸ ಕಾರು ಇದೇ ತಿಂಗಳು 25ರಂದು ಮಾರುಕಟ್ಟೆ ಪ್ರವೇಶಿಸುವುದು ಖಚಿತವಾಗಿದ್ದು, ಎಂಟ್ರಿ ಲೆವಲ್ ಐಷಾರಾಮಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರುವ ಎ-ಕ್ಲಾಸ್ ಲಿಮೋಸಿನ್ ಕಾರು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಹೊಸ ಎ-ಕ್ಲಾಸ್ ಕಾರಿನಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಸ್ಟ್ಯಾಂಡರ್ಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದೆ.

2021ರ ಜೀಪ್ ರ‍್ಯಾಂಗ್ಲರ್ ಎಸ್‍ಯುವಿ
ಮೇಡ್ ಇನ್ ಇಂಡಿಯಾ 2021ರ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯು ಈ ತಿಂಗಳು ಮಧ್ಯಂತರದಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದ್ದು, ಹೊಸ ರ‍್ಯಾಂಗ್ಲರ್ ಎಸ್‍ಯುವಿಯನ್ನು ಮೊದಲ ಬಾರಿಗೆ ಸ್ಥಳೀಯವಾಗಿ ಉತ್ಪಾದನೆ ಮಾಡಿರುವುದರಿಂದ ಹೊಸ ಕಾರಿನ ಬೆಲೆ ಇಳಿಮುಖವಾಗುವ ಸಾಧ್ಯತೆಗಳಿವೆ.

268-ಬಿಎಚ್‌ಪಿ ಪ್ರೇರಿತ 2.0-ಲೀಟರ್ ಹೈ ಪವರ್ ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ರ‍್ಯಾಂಗ್ಲರ್ ಎಸ್‍ಯುವಿ ಫ್ಹೋರ್ ವ್ಹೀಲ್ ಡ್ರೈವ್ ಹೈ ಮತ್ತು ಲೋ ಮೋಡ್ ಗಳನ್ನು ಹೊಂದಿದ್ದು, ಈ ಹೊಸ ಫ್ಹೋರ್ ವ್ಹೀಲ್ ಡ್ರೈವ್ ಆಟೋ ಮೋಡ್ ಜೊತೆಗೆ ಟ್ರ್ಯಾಕ್ಷನ್ ಸ್ಲಿಪ್ ಸೆನ್ಸಾರ್ ಗಳನ್ನು ಒಳಗೊಂಡಿರಲಿದೆ.

ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿ
ಜೆಎಲ್ಆರ್ ಕಂಪನಿಯು ತನ್ನ ಮೊದಲ ಆಲ್-ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯಾದ ಜಾಗ್ವಾರ್ ಐ-ಪೇಸ್ ಎಸ್‌ಯುವಿ ಕಾರು ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳು 9ರಂದು ಬಿಡುಗಡೆಗೊಳಿಸಲು ಸಜ್ಜಾಗಿದ್ದು, 90 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ.

ಹೊಸ ಕಾರು 395 ಬಿಹೆಚ್‍ಪಿ ಪವರ್ ಮತ್ತು 696 ಎನ್ಎಂ ಟಾರ್ಕ್ ಅನ್ನು ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್‌ಗೆ 470 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಕೇವಲ 4.8 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳಲಿದ್ದು, ಸಾಮಾನ್ಯ ಕಾರು ಮಾದರಿಗಿಂತಲೂ ಶೇ.20ರಷ್ಟು ಹೆಚ್ಚು ದುಬಾರಿಯಾಗಬಹುದಾಗಿದೆ.

ಬಿಎಂಡಬ್ಲ್ಯು ಎಂ340ಐ
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಂ340ಐ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಹೊಸ ಕಾರು ಮಾರ್ಚ್ 10 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಹೊಸ ಕಾರಿನಲ್ಲಿ ಎಂ ಪರ್ಫಾರ್ಮೆನ್ಸ್ ನಂತೆ ಡೈನಾಮಿಕ್ಸ್ ನೀಡುವುದರೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುವ ಮಾದರಿಯಂತೆ ರೀ ಟ್ಯೂನ್ ಮಾಡಲಾಗಿದ್ದರೂ ಸಾಮಾನ್ಯ ಮಾದರಿಯಲ್ಲಿರುವ 3.0-ಲೀಟರ್, ಆರು ಸಿಲಿಂಡರ್ ಮೋಟಾರ್ ಎಂಜಿನ್ ಅನ್ನು ಅಳವಡಿಸಲಾಗುತ್ತಿದೆ.