ಕ್ಯಾಸ್ಪರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಮೈಕ್ರೊ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಹೊಸ ಮೈಕ್ರೊ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹ್ಯುಂಡೈ ಮೈಕ್ರೊ ಎಸ್‍ಯುವಿಗೆ ಎಎಕ್ಸ್1 ಎಂಬ ಕೋಡ್ ನೇಮ್ ಅನ್ನು ನೀಡಿದ್ದರು, ಈ ಮೈಕ್ರೊ ಎಸ್‍ಯುವಿಯು ಕ್ಯಾಸ್ಪರ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ.

ಕ್ಯಾಸ್ಪರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಮೈಕ್ರೊ ಎಸ್‍ಯುವಿ

ಈ ಹೊಸ ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯು ಈ ವರ್ಷದ ಕೊನೆಯಲ್ಲಿ ಕೊರಿಯಾದಲ್ಲಿ ಬಿಡುಗಡೆಯಾಗಲಿದೆ. ಇನ್ನು ಭಾರತದಲ್ಲಿ ಈ ಮೈಕ್ರೊ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹ್ಯುಂಡೈ ಕೊರಿಯಾದಲ್ಲಿ ಕ್ಯಾಸ್ಪರ್ ನೇಮ್‌ಪ್ಲೇಟ್ ಅನ್ನು ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸಿದೆ. ಹ್ಯುಂಡೈ ಕ್ಯಾಸ್ಪರ್ ಭಾರತದಲ್ಲಿ ಮತ್ತು ಇತರ ಮಾರುಕಟ್ಟೆಗಳಲ್ಲಿ ವಿಭಿನ್ನ ಹೆಸರಿನೊಂದಿಗೆ ಬರಬಹುದು.

ಕ್ಯಾಸ್ಪರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಮೈಕ್ರೊ ಎಸ್‍ಯುವಿ

ಇದು ಹ್ಯುಂಡೈಯ ಚಿಕ್ಕ ಎಸ್ಯುವಿಯಾಗಿದ್ದು, ಸಬ್-ಮೀಟರ್ ಎಸ್‍ಯುವಿಗಿಂತ ಕೆಳಗಿರುತ್ತದೆ. ಕ್ಯಾಸ್ಪರ್ ಹ್ಯುಂಡೈನ ಕೆ1 ಕಾಂಪ್ಯಾಕ್ಟ್ ಕಾರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಪ್ರಸ್ತುತ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಸ್ಯಾಂಟ್ರೊಗೆ ಆಧಾರವಾಗಿದೆ.

ಕ್ಯಾಸ್ಪರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಮೈಕ್ರೊ ಎಸ್‍ಯುವಿ

ಹೊಸ ಹ್ಯುಂಡೈ ಕ್ಯಾಸ್ಪರ್ 3,595 ಎಂಎಂ ಉದ್ದ, 1,595 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರವನ್ನು ಹೊಂದಿರಲಿದೆ ಎಂದು ವರದಿಗಳಾಗಿದೆ. ಇದು ಸ್ಯಾಂಟ್ರೊ ಹ್ಯಾಚ್‌ಬ್ಯಾಕ್‌ಗಿಂತ ಚಿಕ್ಕದಾಗಿದೆ.

ಕ್ಯಾಸ್ಪರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಮೈಕ್ರೊ ಎಸ್‍ಯುವಿ

ಕ್ಯಾಸ್ಪರ್ ಮಾರುತಿ ಸುಜುಕಿ ಇಗ್ನಿಸ್, ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಎಚ್‌ಬಿಎಕ್ಸ್ ಕಾನ್ಸೆಪ್ಟ್ ಆಧಾರಿತ ಮೈಕ್ರೊ ಎಸ್‌ಯುವಿಗಿಂತ ಚಿಕ್ಕದಾಗಿರುತ್ತದೆ.

ಕ್ಯಾಸ್ಪರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಮೈಕ್ರೊ ಎಸ್‍ಯುವಿ

ಹೊಸ ಹ್ಯುಂಡೈ ಎಎಕ್ಸ್ 1 ಮಿನಿ ಎಸ್‌ಯುವಿ ಜಿಜಿಎಂ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು.ಕಾರಿನ ಪ್ರಾಯೋಗಿಕ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಸಾಮೂಹಿಕ ಉತ್ಪಾದನೆಯು ಸೆಪ್ಟೆಂಬರ್ ತಿಂಗಳಿನಿಂದ ಪ್ರಾರಂಭವಾಗಲಿದೆ.

ಕ್ಯಾಸ್ಪರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಮೈಕ್ರೊ ಎಸ್‍ಯುವಿ

ಹ್ಯುಂಡೈ ಆರಂಭದಲ್ಲಿ ಮೈಕ್ರೊ ಎಸ್‌ಯುವಿಯ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸಲಿದ್ದು, ಅದರ ನಂತರ 2023 ರಲ್ಲಿ ಎಲೆಕ್ಟ್ರಿಕ್ ಮಾದರಿಯಾಗಿ ಪರಿಚಯಿಸಲಿದೆ. ಈ ಮೈಕ್ರೊ ಎಸ್‍ಯುವಿಯು ಬೋರ್ಗ್‌ವರ್ನರ್ ಇಂಟಿಗ್ರೇಟೆಡ್ ಡ್ರೈವ್ ಮಾಡ್ಯೂಲ್ (ಐಡಿಎಂ) ಅನ್ನು ಪಡೆಯುತ್ತದೆ,

ಕ್ಯಾಸ್ಪರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಮೈಕ್ರೊ ಎಸ್‍ಯುವಿ

ಇದು ಮಾಡ್ಯುಲರ್ ಘಟಕದಲ್ಲಿ ಎಲೆಕ್ಟ್ರಿಕ್ ಮೋಟರ್, ಗೇರ್‌ಬಾಕ್ಸ್ ಮತ್ತು ಪವರ್ ಎಲೆಕ್ಟ್ರಾನಿಕ್ ಅನ್ನು ಒಳಗೊಂಡಿರುತ್ತದೆ. ಹ್ಯುಂಡೈ ಕ್ಯಾಸ್ಪರ್ ಗ್ರ್ಯಾಂಡ್ ಐ10 ನಿಯೋಸ್ ಕಾರಿನಲ್ಲಿರುವ ಅದೇ 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುವ ಸಾಧ್ಯತೆಯಿದೆ.

ಕ್ಯಾಸ್ಪರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಮೈಕ್ರೊ ಎಸ್‍ಯುವಿ

ಈ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮೈಕ್ರೊ ಎಸ್‍ಯುವಿಯ ಲೊ ವೆರಿಯೆಂಟ್ ಗಳು 1.1-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹುದು. ಈ ಎಂಜಿನ್ ಗಳೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಬಹುದು.

Most Read Articles

Kannada
English summary
Hyundai Casper Micro Suv India Launch In 2022. Read In Kannada.
Story first published: Saturday, July 17, 2021, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X