ಹೊಸ ನವೀಕರಣಗಳೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

ಟಾಟಾ ಕಾರುಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಟಾಟಾ ಕಾರುಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟಾಟಾ ಕಾರುಗಳ ಸರಣಿಯಲ್ಲಿರುವ ನೆಕ್ಸಾನ್ ಎಸ್‍ಯುವಿ ಮಾದರಿಯ ಮಾರಾಟದಲ್ಲಿ ದಾಖಲೆಯ ಮಟ್ಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.

ಹೊಸ ನವೀಕರಣದೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

ಉತ್ತಮ ನಿರ್ಮಾಣ ಗುಣಮಟ್ಟ(ಬಿಲ್ಡ್ ಕ್ವಾಲಿಟಿ) ಮತ್ತು ಹೆಚ್ಚಿನ ಸುರಕ್ಷತೆಗೆ ಟಾಟಾ ಕಾರುಗಳು ಹೆಚ್ಚು ಜನಪ್ರಿಯವಾಗಿದೆ. ಟಾಟಾದ ಜನಪ್ರಿಯ ಮಾದರಿಯು ಕೂಡ ಉತ್ತಮ ಸುರಕ್ಷತೆ ಮತ್ತು ಹಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಇನ್ನು ಇತ್ತೀಚಿನ ನವೀಕರಣದ ಭಾಗವಾಗಿ, ಟಾಟಾ ಸೆಂಟರ್ ಕನ್ಸೋಲ್‌ನಲ್ಲಿನ ಫಿಸಿಕಲ್ ಬಟನ್ ಗಳನ್ನು ತೆಗೆದುಹಾಕಿದೆ. ಇದರಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಹೊಸ ನವೀಕರಣದೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

ಕುತೂಹಲಕಾರಿ ಅಂಶವೆಂದರೆ ಟಾಟಾ ಇದರ ಎಸಿಗೆ ಇರುವ ಎಕೋನಾಮಿ ಮೋಡ್ ಅನ್ನು ಸಹ ತೆಗೆದುಹಾಕಿದೆ. ಎಡಬಾಗದಲ್ಲಿರುವ ಎಸಿ ನಾಬ್'ಗೆ ಇಕಾನ್ ಬಟನ್ ಹೊಂದಿಲ್ಲ. ಇನ್ನು ವಾಲ್ಯೂಮ್ ಮತ್ತು ಟ್ಯೂನರ್‌ನ ನಾಬ್ ಗಳನ್ನು ತೆಗೆದುಹಾಕಲಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ನವೀಕರಣದೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

ಆದರೆ ಎಸಿ ವೆಂಟ್ಸ್ ಕೆಳಗೆ ಇರಿಸಲಾಗಿರುವ ಫಿಸಿಕಲ್ ಐಸಿಇ ಬಟನ್ ಗಳನ್ನು ಈಗ ನೆಕ್ಸಾನ್ ಅಕ್ಷರಗಳಿಂದ ಬದಲಾಯಿಸಲಾಗಿದೆ. ಈ ಹೊಸ ನವೀಕರಣಗಳೊಂದಿಗೆ ಟಾಟಾ ನೆಕ್ಸಾನ್ ಕಾರು ಡೀಲರ್ ಬಳಿ ಕಾಣಿಸಿಕೊಂಡಿದೆ.

ಹೊಸ ನವೀಕರಣದೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

ಇನ್ನು ಟಾಟಾ ನೆಕ್ಸಾನ್ ಕಾರಿನ ಬಗ್ಗೆ ಹೇಳುವುದಾದರೆ, ನೆಕ್ಸಾನ್ ಮಾದರಿಯು ಜನಪ್ರಿಯವಾದ ಸಬ್-ಕಾಂಪ್ಯಾಕ್ಟ್ ಎಯುವಿಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಸಬ್ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಜನಪ್ರಿಯ ಮಾದರಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ನವೀಕರಣದೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ನವೀಕರಣದೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾಆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ನವೀಕರಣದೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

2018ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಕಾರಣ ನೆಕ್ಸಾನ್ ದೇಶದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ರೇಟಿಂಗ್‌ ಅನ್ನು ಪಡೆದ ಭಾರತದ ಮೊದಲ ಕಾರು ಎಂಬ ಹೆಗ್ಗಳಿಕೆ ನೆಕ್ಸಾನ್ ಮಾದರಿಗೆ ಸಲ್ಲುತ್ತದೆ.

ಹೊಸ ನವೀಕರಣದೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

ಕಳೆದ ತಿಂಗಳು ಟಾಟಾ ನೆಕ್ಸಾನ್ ಮಾದರಿಯ 8,683 ಯುನಿಟ್‌ಗಳು ಮಾರಾಟವಾಗಿವೆ. ಟಾಟಾ ನೆಕ್ಸಾನ್ 2017 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿತು. ಬಿಡುಗಡೆಯಾದಗಿನಿಂದ ಗರಿಷ್ಠ ಮಾಸಿಕ ಮಾರಾಟವನ್ನು ಕಳೆದ ತಿಂಗಳು ಪಡೆದುಕೊಂಡಿದೆ. ಕಳೆದ ತಿಂಗಳು ಟಾಟಾ ನೆಕ್ಸಾನ್ ಮಾದರಿಯು ಅತಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಎಸ್‍ಯುವಿ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಹೊಸ ನವೀಕರಣದೊಂದಿಗೆ ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಮಾದರಿಯಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಸೇರ್ಪಡೆಯ ಹೊರತಾಗಿ, ನೆಕ್ಸಾನ್ ಎಕ್ಸ್‌ಎಂ(ಎಸ್) ವರಿಯೆಂಟ್‌ನಲ್ಲಿ ಹಲವು ಪ್ರೀಮಿಯಂ ಫೀಚರ್ ಗಳನ್ನು ಹೊಂದಿದೆ. ಈ ಎಕ್ಸ್‌ಎಂ(ಎಸ್) ವೆರಿಯೆಂಟ್‌ನಲ್ಲಿ ಹೆಡ್‌ಲ್ಯಾಂಪ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಸ್ಟೀಯರಿಂಗ್-ಮೌಂಟಡ್ ಕಂಟ್ರೋಲ್ ಗಳನ್ನು ಒಳಗೊಂಡಿದೆ.

Most Read Articles

Kannada
English summary
Updated Tata Nexon Reaches Dealerships. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X