ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

Volvo - Eicher Commercial Vehicles (VECV) ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್ ಗಳನ್ನು ಬಿಡುಗಡೆಗೊಳಿಸಿದೆ. ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಬಸ್ಸುಗಳನ್ನು ಸ್ವಲ್ಪ ಮಟ್ಟಿಗೆ ಕಸ್ಟಮೈಸ್ ಮಾಡಬಹುದು ಎಂದು VECV ತಿಳಿಸಿದೆ. ಈ ಹೊಸ ಬಸ್‌ಗಳನ್ನು ನಮ್ಮ ಬೆಂಗಳೂರಿನ ಹೊಸಕೋಟೆಯಲ್ಲಿರುವ ವೋಲ್ವೋ ಬಸ್ ಉತ್ಪಾದನಾ ಘಟಕದಲ್ಲಿ ಈಗಿರುವ 12.4 ಮೀಟರ್ ಐಷರ್ ಚಾಸಿಸ್ ಬಳಸಿ ಉತ್ಪಾದಿಸಲಾಗುವುದು.

ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

ಈ ಹೊಸ ಬಸ್ ಸರಣಿಯು ದೇಶದಲ್ಲಿ ಬಸ್ ಪ್ರಯಾಣಕ್ಕೆ ಹೊಸ ಮಾನದಂಡವನ್ನು ಹೊಂದಿಸಲಿದೆ ಎಂದು VECV ಹೇಳಿದೆ. ಬಸ್ ಬಿಡುಗಡೆ ನಂತರ ಮಾತನಾಡಿದ VECV ಬಸ್ ವಿಭಾಗದ ಅಧ್ಯಕ್ಷರಾದ ಆಕಾಶ್ ಪಾಸಿರವರು, ಎಲ್ಲಾ ಮಾರುಕಟ್ಟೆ ವಿಭಾಗಗಳಲ್ಲಿ ಸಂಪೂರ್ಣ ಮಾರುಕಟ್ಟೆ ಹೊಂದಿದ ಆರ್ಥಿಕತೆ, ಮಿಡ್ ಪ್ರೀಮಿಯಂ ಹಾಗೂ ಪ್ರೀಮಿಯಂ ಬಸ್ಸುಗಳನ್ನು ಒದಗಿಸುವ ನಮ್ಮ ಚಾಲನೆಯಲ್ಲಿ ಇದು ಮೊದಲ ಮೈಲಿಗಲ್ಲಾಗಿದೆ.

ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

ರಾಷ್ಟ್ರೀಯ ಪರವಾನಗಿಯನ್ನು ಹೊರತಂದ ನಂತರ ನಿರ್ವಾಹಕರು ಹೆಚ್ಚು ದೂರವನ್ನು ವಿಶ್ವಾಸಾರ್ಹವಾಗಿ ಸರಿದೂಗಿಸಲು ಗುಣಮಟ್ಟದ ಬಸ್‌ಗಳನ್ನು ಹುಡುಕುತ್ತಾರೆ. ಅವುಗಳು ಸಮತೋಲನಕ್ಕಾಗಿ ಕರೆ ನೀಡುತ್ತವೆ. ಹೊಸ ಉತ್ಪನ್ನಗಳು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯ ಅಗತ್ಯತೆಗಳಿಗೆ ಪರಿಪೂರ್ಣ ಉತ್ತರವಾಗಿವೆ. ಸಂಪೂರ್ಣ ಕಾರ್ಖಾನೆ ನಿರ್ಮಿತ ಈ ಕೋಚ್ ಹಾಗೂ ಸ್ಲೀಪರ್ ಬಸ್ಸುಗಳು ರೈಲು ಹಾಗೂ ವಿಮಾನ ಪ್ರಯಾಣಕ್ಕೆ ಸಮನಾದ ಅನುಭವನ್ನು ನೀಡುತ್ತವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

VECV ಈ ಹೊಸ ಬಸ್‌ಗಳ ಮೂಲಕ ಮಿಡ್ ಪ್ರೀಮಿಯಂ ವಿಭಾಗಕ್ಕೆ ಹೊಸತನ ನೀಡಲು ಮುಂದಾಗಿದೆ. VECV ಕಂಪನಿಯು ಈ ವಿಭಾಗವನ್ನು ಬಸ್ ಮಾರುಕಟ್ಟೆಯಲ್ಲಿ ವೈಟ್ ಸ್ಪೇಸ್ ಎಂದು ಪರಿಗಣಿಸುತ್ತದೆ. ಈ ಬಗ್ಗೆ ಮಾತನಾಡಿದ VECVಯ ಎಂಡಿ ಹಾಗೂ ಸಿಇಒ ವಿನೋದ್ ಅಗರ್ವಾಲ್ ರವರು, ಒಂದು ವರ್ಷದ ಹಿಂದೆ, ಭಾರತೀಯ ಬಸ್ ಉದ್ಯಮದಲ್ಲಿನ ಬೆಳವಣಿಗೆಗಳನ್ನು ರೂಪಿಸುವ ಸ್ಪಷ್ಟ ಗುರಿಯೊಂದಿಗೆ ನಾವು ವಿಇಸಿವಿಯೊಳಗೆ ಬಸ್ ವಿಭಾಗವನ್ನು ರಚಿಸುವುದಾಗಿ ತಿಳಿಸಿದ್ದೆವು.

ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

ಇಂದು ಹೊಸ ಸರಣಿಯನ್ನು ಬಿಡುಗಡೆಗೊಳಿಸುತ್ತಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಐಶರ್ ಕಂಪನಿಯ ಸ್ಥಳೀಯ ಉಪಸ್ಥಿತಿ ಹಾಗೂ ಮೌಲ್ಯವು ಎಂಜಿನಿಯರಿಂಗ್‌ನಲ್ಲಿ ಪರಿಣತಿ ಹೊಂದಿರುವ ವೋಲ್ವೋ ಬಸ್ಸುಗಳನ್ನು ಭಾರತದ ಪ್ರೀಮಿಯಂ ಬಸ್ ವಿಭಾಗದಲ್ಲಿ ಸಮರ್ಥವಾಗಿಸುತ್ತವೆ. ಈ ಬಸ್ ಗಳು ನಿಜವಾಗಿಯೂ ಅತ್ಯುತ್ತಮವಾದ ಎರಡೂ ಪ್ರಪಂಚಗಳನ್ನು ಸಂಯೋಜಿಸುತ್ತವೆ ಎಂದು ಹೇಳಿದರು.

ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

ಬಸ್ ಮಾರುಕಟ್ಟೆ ಪುನರುಜ್ಜೀವನದ ಹಾಡಿಯಲ್ಲಿದೆ. ಶಾಲೆಗಳು ಪುನರಾರಂಭವಾಗುತ್ತಿವೆ. ನಾವು ಶಾಲೆಗಳಿಂದ ಬಸ್ ಗಳಿಗೆ ಹೆಚ್ಚು ಬೇಡಿಕೆ ನಿರೀಕ್ಷಿಸುತ್ತಿದ್ದೇವೆ. ಕಚೇರಿಗಳು ಸಹ ತೆರೆಯುತ್ತಿದ್ದು, ಎಸ್‌ಟಿ‌ಯುಗಳು ಬಸ್ ಖರೀದಿಯನ್ನು ಆರಂಭಿಸಿವೆ. ದೇಶದ ಎಲ್ಲೆಡೆ ಲಸಿಕೆ ಹಾಕುತ್ತಿರುವುದರಿಂದ ಕೋವಿಡ್ ಭೀತಿ ಕಡಿಮೆಯಾಗಿದ್ದು, ಅಂತರ್ ನಗರ ಪ್ರಯಾಣವೂ ಸಹ ಆರಂಭವಾಗುತ್ತಿದೆ.

ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

ಕೋವಿಡ್‌ನ ಮೂರನೇ ಅಲೆಯ ಆತಂಕವೂ ಕಡಿಮೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಖರೀದಿ ನಡೆಯದೇ ಇರುವುದರಿಂದ, ಬಸ್‌ಗಳ ಖರೀದಿ ಪ್ರಮಾಣವು ಮೊದಲಿನಂತೆ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು. ಈ ಹೊಸ ಬಸ್ಸುಗಳನ್ನು ಐಷರ್‌ ಕಂಪನಿಯ 12.4 ಮೀಟರ್ ಚಾಸಿಸ್‌ನಲ್ಲಿ ನಿರ್ಮಿಸಲಾಗುವುದು. ಅವುಗಳು ವೋಲ್ವೋ ಕಂಪನಿಯ 5.1 ಲೀಟರ್ VEDX5 ಎಂಜಿನ್‌ನಿಂದ ಚಾಲಿತವಾಗುತ್ತವೆ.

ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

VECV ಕಂಪನಿಯ ಪ್ರಕಾರ, ಈ ಎಂಜಿನ್ 210 ಬಿ‌ಹೆಚ್‌ಪಿ ಪವರ್ ಹಾಗೂ 1200 ಆರ್‌ಪಿಎಂನಲ್ಲಿ 825 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಬೆಸ್ಟ್ ಇನ್ ಕ್ಲಾಸ್ ಎನ್ನಬಹುದಾದ ಇಂಧನ ದಕ್ಷತೆಯನ್ನು ನೀಡುತ್ತದೆ. ಈ ಬಸ್ಸುಗಳು ಏರ್ ಕಂಡಿಶನ್ ಹೊಂದಿರುವ 43 ಸೀಟುಗಳ ಆವೃತ್ತಿಯಲ್ಲಿ ಅತ್ಯುತ್ತಮ ದರ್ಜೆಯ 11,300 ಲೀಟರ್ ಲಗೇಜ್ ಸ್ಪೇಸ್ ಹೊಂದಿವೆ.

ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

ಹೊಸ ವಿಸಿಇವಿ ಬಸ್‌ನ ಸ್ಲೀಪರ್ ಆವೃತ್ತಿಯು 30 ಬರ್ತ್‌ಗಳನ್ನು ಹೊಂದಿದೆ. ಈ ಬರ್ತ್‌ಗಳಲ್ಲಿ ಹೆಚ್ಚಿನ ಭದ್ರತೆ ಹಾಗೂ ಸುರಕ್ಷತೆಗಾಗಿ ಹೆಚ್ಚು ಎತ್ತರದ ಪಾರ್ಟಿಷನ್ ಗಳನ್ನು ನೀಡಲಾಗಿದೆ. ಈ ಬಸ್ಸಿನಲ್ಲಿರುವ ಅತ್ಯಂತ ಗಮನಾರ್ಹವಾದ ಫೀಚರ್ ಗಳಲ್ಲಿ ಕ್ರೂಸ್ ಕಂಟ್ರೋಲ್, ಫ್ಯೂಯಲ್ ಕೋಚಿಂಗ್, ಎಮ್ಬೂಸ್ಟರ್ ಪ್ಲಸ್, ಇಂಟೆಲಿಜೆಂಟ್ ಇಂಜಿನ್ ಪ್ರೊಟೆಕ್ಷನ್ ಸಿಸ್ಟಂಗಳು ಸೇರಿವೆ.

ಇದರ ಜೊತೆಗೆ ಈ ಬಸ್ಸುಗಳಲ್ಲಿ ಎಲ್ಇಡಿ ಆಂಬಿಯೆಂಟ್ ಲೈಟಿಂಗ್, ಎಸಿ ಲೌವರ್ಸ್, ರೀಡಿಂಗ್ ಲೈಟ್ಸ್, ಯುಎಸ್‌ಬಿ ಪೋರ್ಟ್‌ ಸೇರಿದಂತೆ ಇನ್ನೂ ಹಲವು ಫೀಚರ್ ಗಳನ್ನು ನೀಡಲಾಗಿದೆ. ಇದರ ಹೊರತಾಗಿ, ಹೊಸ ಬಸ್ಸುಗಳು ಚಾಲಕನ ದಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತವೆ. ಈ ಬಸ್ಸುಗಳಲ್ಲಿ ಬಳಸಲಾಗಿರುವ ವಸ್ತುಗಳು ಅಗ್ನಿನಿರೋಧಕಗಳೆಂದು ಪ್ರಮಾಣೀಕರಿಸಲ್ಪಟ್ಟಿವೆ.

ಹೊಸ ಸರಣಿಯ ಕೋಚ್ ಹಾಗೂ ಸ್ಲೀಪರ್ ಬಸ್'ಗಳನ್ನು ಬಿಡುಗಡೆಗೊಳಿಸಿದ VECV

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

VECV ಬಿಡುಗಡೆಗೊಳಿಸಿರುವ ಕೋಚ್ ಹಾಗೂ ಸ್ಲೀಪರ್ ಬಸ್ಸುಗಳು ಭಾರತದಲ್ಲಿ ಸಂಪೂರ್ಣವಾಗಿ ಹೊಸ ಶಕೆಯನ್ನು ಆರಂಭಿಸುತ್ತಿವೆ. ಈ ಹೊಸ ಬಸ್‌ಗಳಮೂಲಕ VECV ಕಂಪನಿಯು ಇಂಟರ್‌ಸಿಟಿ ಬಸ್ ಸೆಗ್ ಮೆಂಟಿನಲ್ಲಿ ಪ್ರಾಬಲ್ಯ ಹೊಂದುವ ಸಾಧ್ಯತೆಗಳಿವೆ. ಕರೋನಾ ವೈರಸ್ ಮಹಾಮಾರಿಯಿಂದ ಶಾಲಾ ಕಾಲೇಜುಗಳು ಸುಮಾರು ಒಂದೂವರೆ ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದವು. ಜೊತೆಗೆ ಐಟಿ ಕಂಪನಿಗಳು ತಮ್ಮ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ಆಯ್ಕೆ ನೀಡಿದ್ದವು. ಈಗ ನಿಧಾನವಾಗಿ ಶಾಲಾ ಕಾಲೇಜುಗಳು ಹಾಗೂ ಐಟಿ ಕಂಪನಿಗಳು ತೆರೆದು ಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಬಸ್ಸುಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆಗಳಿವೆ.

Most Read Articles

Kannada
English summary
Vecv launches new coach and sleeper buses in domestic market video details
Story first published: Tuesday, October 12, 2021, 18:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X