ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿರುವುದರಿಂದ ದಿನನಿತ್ಯ ವಾಹನ ಬಳಸುವವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಈಗ ಹಿಂದೆಂದಿಗಿಂತಲೂ ಹೆಚ್ಚುತ್ತಿದೆ. ತಮಿಳುನಾಡಿನಲ್ಲಿ ಅಲ್ಲಿನ ಆಡಳಿತಾರೂಢ ಡಿಎಂಕೆ ನೇತೃತ್ವದ ಸರ್ಕಾರವು ಇಂಧನ ಬೆಲೆಗಳನ್ನು ತಗ್ಗಿಸಲು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 104.52 ಗಳಾಗಿದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100.59 ಗಳಾಗಿದೆ.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಉಳಿದ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಾಹನ ಸವಾರರು ಪರ್ಯಾಯ ಇಂಧನ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ವಾಹನ ಸವಾರರು ಈಗ ಪೆಟ್ರೋಲ್, ಡೀಸೆಲ್‌ ಎಂಜಿನ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನ ಹಾಗೂ ನೈಸರ್ಗಿಕ ಅನಿಲ (ಸಿಎನ್‌ಜಿ) ಮೂಲಕ ಚಲಿಸುವ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಸಿಎನ್‌ಜಿ ಚಾಲಿತ ವಾಹನಗಳ ಬಳಕೆ ಅತ್ಯಧಿಕ ಮಟ್ಟದಲ್ಲಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಿ‌ಎನ್‌ಜಿ ವಾಹನಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ. ಕಳೆದ 50 ದಿನಗಳಲ್ಲಿ ಸಿ‌ಎನ್‌ಜಿ ಚಾಲಿತ ವಾಹನಗಳ ಮಾರಾಟದಲ್ಲಿ ಸುಮಾರು 16% ನಷ್ಟು ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 111.34 ಗಳಾಗಿದ್ದರೆ, ಒಂದು ಲೀಟರ್ ಡೀಸೆಲ್ ಬೆಲೆ ರೂ. 102.23 ಗಳಾಗಿದೆ.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರು ಪರ್ಯಾಯ ಇಂಧನಗಳೊಂದಿಗೆ ಚಲಿಸುವ ವಾಹನಗಳ ಬಳಕೆಗೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಸಿ‌ಎನ್‌ಜಿ ಚಾಲಿತ ವಾಹನಗಳ ಸಂಖ್ಯೆ ಈ ಮಾತಿಗೆ ಪುಷ್ಟಿ ನೀಡುತ್ತದೆ. ಸಿ‌ಎನ್‌ಜಿ ವಾಹನಗಳ ಮಾರಾಟವನ್ನು ಉತ್ತೇಜಿಸಲು ಸೆಪ್ಟೆಂಬರ್ 10 ರಂದು ವಿಶೇಷ ಯೋಜನೆಗಳನ್ನು ಆರಂಭಿಸಲಾಗಿಯಿತು.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ನಂತರ ಸಿ‌ಎನ್‌ಜಿ ಆಟೋ, ಕಾರುಗಳು, ಲಘು ವಾಣಿಜ್ಯ ವಾಹನ ಹಾಗೂ ಭಾರೀ ವಾಣಿಜ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಗೇಲ್ ಗ್ಯಾಸ್ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಸದ್ಯಕ್ಕೆ 12,300 ಸಿಎನ್‌ಜಿ ವಾಹನಗಳು ಬಳಕೆಯಲ್ಲಿವೆ. ಇದರ ಜೊತೆಗೆ 1,690 ಹೊಸ ಸಿಎನ್‌ಜಿ ವಾಹನಗಳು ಸೇರಿಕೊಂಡಿವೆ. ಬೆಂಗಳೂರಿನಲ್ಲಿಯೇ 8,000 ಕ್ಕೂ ಹೆಚ್ಚು ಸಿ‌ಎನ್‌ಜಿ ವಾಹನಗಳು ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹ.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಕರ್ನಾಟಕದಲ್ಲಿ ಸಿ‌ಎನ್‌ಜಿ ವಾಹನಗಳ ಸಂಖ್ಯೆ ಹೆಚ್ಚಿದ್ದು, ರಾಜ್ಯದಲ್ಲಿ ಸಿ‌ಎನ್‌ಜಿ ಮಾರಾಟವೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ 50 ಹೊಸ ಸಿಎನ್‌ಜಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಅಕ್ಟೋಬರ್ ವೇಳೆಗೆ ರಾಜ್ಯದಲ್ಲಿ ಪ್ರತಿ ದಿನ 23,500 ಕೆ.ಜಿ ಸಿಎನ್‌ಜಿ ಅನಿಲವನ್ನು ಮಾರಾಟವಾಗುತ್ತಿದೆ. ಕಳೆದ ಸೆಪ್ಟೆಂಬರ್ ತಿಂಗಳವರೆಗೂ ಈ ಪ್ರಮಾಣ ದಿನಕ್ಕೆ ಕೇವಲ 20 ಸಾವಿರ ಕೆ.ಜಿಗಳಾಗಿತ್ತು.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಮುಂಬರುವ ದಿನಗಳಲ್ಲಿ ಸಿಎನ್‌ಜಿ ಬೇಡಿಕೆಯು ತೀವ್ರವಾಗಿ ಏರಿಕೆಯಾಗುವ ಸಾಧ್ಯತೆಗಳಿರುವುದರಿಂದ ರಾಜ್ಯ ಸರ್ಕಾರವು ಸಿ‌ಎನ್‌ಜಿ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಎಲ್‌ಪಿಜಿ ವಾಹನಗಳಿಗಿಂತ ಸಿಎನ್‌ಜಿ ವಾಹನಗಳು ಹೆಚ್ಚು ಲಾಭದಾಯಕವಾಗಿವೆ. ಇಂಧನ ಬೆಲೆ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ವಾಹನ ಸವಾರರು ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಇನ್ನು ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಡೀಸೆಲ್ ಕಾರುಗಳ ಮಾರಾಟ ಪ್ರಮಾಣವು ತೀವ್ರವಾಗಿ ಕುಸಿದಿದೆ. ಡೀಸೆಲ್ ಕಾರುಗಳ ಮಾರಾಟ ಕಡಿಮೆಯಾಗಲು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದೇ ಪ್ರಮುಖ ಕಾರಣವೆಂದು ಹೇಳಲಾಗಿದೆ. ಈ ಹಿಂದೆ ಜನರು ಡೀಸೆಲ್ ಕಾರುಗಳನ್ನು ಡೀಸೆಲ್ ಬೆಲೆ ಕಡಿಮೆ ಎಂಬ ಕಾರಣಕ್ಕೆ ಖರೀದಿಸುತ್ತಿದ್ದರು.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಆದರೆ ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಇದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಬಹುತೇಕ ಸರಿ ಸಮನಾಗಿದೆ. ಆದರೆ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳು ಐಷಾರಾಮಿ ಕಾರು ಸೆಗ್ ಮೆಂಟಿನಲ್ಲಿ ಇನ್ನೂ ಪ್ರಾಬಲ್ಯವನ್ನು ಹೊಂದಿವೆ. ಅಸೋಸಿಯೇಷನ್ ​​ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಎಎಂ) ಪ್ರಕಾರ, 2012 - 2013ರ ಅವಧಿಯಲ್ಲಿ ಪ್ಯಾಸೆಂಜರ್ ಕಾರ್ ಸೆಗ್ ಮೆಂಟಿನಲ್ಲಿ ಡೀಸೆಲ್ ಕಾರುಗಳ ಪಾಲು 58% ನಷ್ಟು ಇತ್ತು.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಆದರೆ ಈಗ ಈ ಪ್ರಮಾಣವು 17% ಗೆ ಕುಸಿದಿದೆ. ಆ ಸಮಯದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ರೂ. 25 ರಿಂದ 30 ರಷ್ಟು ಕಡಿಮೆ ಇತ್ತು. ಇದರಿಂದ ಜನರು ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳನ್ನು ಹೆಚ್ಚು ಖರೀದಿಸುತ್ತಿದ್ದರು. ಆದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ನಡುವಿನ ವ್ಯತ್ಯಾಸ ಕಡಿಮೆಯಾಗುತ್ತಿದ್ದಂತೆ ಗ್ರಾಹಕರು ಡೀಸೆಲ್ ಕಾರುಗಳಿಂದ ದೂರ ಸರಿದರು. ಸಿಯಾಮ್ ಮಾಹಿತಿಯ ಪ್ರಕಾರ, ಡೀಸೆಲ್ ಬೆಲೆ ಈಗ ಪೆಟ್ರೋಲ್ ಬೆಲೆಗಿಂತ ಕೇವಲ ರೂ. 7 ರಿಂದ ರೂ. 9 ಗಳಷ್ಟು ಮಾತ್ರ ಕಡಿಮೆಯಾಗಿದೆ.

ಗಗನಕ್ಕೇರಿದ ಇಂಧನ ಬೆಲೆ, ಸಿ‌ಎನ್‌ಜಿ ವಾಹನಗಳತ್ತ ಮುಖ ಮಾಡಿದ ವಾಹನ ಸವಾರರು

ಈ ಹಿನ್ನೆಲೆಯಲ್ಲಿ ಪ್ರಯಾಣಿಕ ಕಾರುಗಳ ಸೆಗ್ ಮೆಂಟಿನಲ್ಲಿ ಡೀಸೆಲ್ ಕಾರುಗಳ ಪಾಲು 17% ಗಳಿಗೆ ಇಳಿದಿದೆ. ಸಾಮಾನ್ಯವಾಗಿ ಡೀಸೆಲ್ ಕಾರುಗಳ ಬೆಲೆ ಪೆಟ್ರೋಲ್ ಕಾರುಗಳ ಬೆಲೆಗಿಂತ ಹೆಚ್ಚು. ಆದರೂ ಗ್ರಾಹಕರು ಇಂಧನ ವೆಚ್ಚವನ್ನು ಉಳಿಸುವ ಉದ್ದೇಶದಿಂದ ಡೀಸೆಲ್ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಪೆಟ್ರೋಲ್, ಡೀಸೆಲ್ ಬೆಲೆಗಳ ಅಂತರವು ಕಡಿಮೆಯಾಗುತ್ತಿರುವುದರಿಂದ, ಡೀಸೆಲ್ ಕಾರುಗಳ ಮೇಲಿನ ಆಕರ್ಷಣೆ ಕ್ಷೀಣಿಸುತ್ತಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Vehicle owners switching to cng vehicles in large number details
Story first published: Monday, October 25, 2021, 16:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X