ಬಹಿರಂಗಗೊಂಡ ಫೋಕ್ಸ್‌ವ್ಯಾಗನ್ ಐಡಿ 6 ಎಲೆಕ್ಟ್ರಿಕ್ ಎಸ್‌ಯುವಿಯ ಚಿತ್ರಗಳು

ವಿಶ್ವದ ಪ್ರಮುಖ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಈಗಾಗಲೇ ತನ್ನ ಐಡಿ 3 ಕಾರಿನ ಉತ್ಪಾದನೆಯನ್ನು ಆರಂಭಿಸಿದೆ. ಈ ಕಾರಿನ ಬಿಡುಗಡೆಗೂ ಮುನ್ನ ಶೀಘ್ರದಲ್ಲಿಯೇ ಐಡಿ 4 ಕಾರನ್ನು ಬಿಡುಗಡೆಗೊಳಿಸಲಾಗುವುದು.

ಬಹಿರಂಗಗೊಂಡ ಫೋಕ್ಸ್‌ವ್ಯಾಗನ್ ಐಡಿ 6 ಎಲೆಕ್ಟ್ರಿಕ್ ಎಸ್‌ಯುವಿಯ ಚಿತ್ರಗಳು

ಈಗ ಫೋಕ್ಸ್‌ವ್ಯಾಗನ್ ಐಡಿ 6 ಕಾರಿಗೆ ಸಂಬಂಧಿಸಿದ ಸುದ್ದಿ ಹೊರ ಬಂದಿದೆ. ಈ ಕಾರ್ ಅನ್ನು ಎಲೆಕ್ಟ್ರಿಕ್ ಎಸ್‌ಯುವಿ ಲುಕ್'ನಲ್ಲಿ ಬಿಡುಗಡೆಗೊಳಿಸಲಾಗುವುದು.ಈ ಕಾರಿಗೆ ಸಂಬಂಧಿಸಿದ ಸುದ್ದಿಯನ್ನು ರೆಡ್ಡಿಟ್ ಎಂಬ ವಿದೇಶಿ ವೆಬ್‌ಸೈಟ್ ಪ್ರಕಟಿಸಿದೆ. ಈ ಮೂಲಕ ಫೋಕ್ಸ್‌ವ್ಯಾಗನ್ ಐಡಿ 6 ಎಸ್‌ಯುವಿಗೆ ಸಂಬಂಧಿಸಿದ ಚಿತ್ರಗಳು ಬಿಡುಗಡೆಯಾಗಿವೆ.

ಬಹಿರಂಗಗೊಂಡ ಫೋಕ್ಸ್‌ವ್ಯಾಗನ್ ಐಡಿ 6 ಎಲೆಕ್ಟ್ರಿಕ್ ಎಸ್‌ಯುವಿಯ ಚಿತ್ರಗಳು

ಈ ಚಿತ್ರಗಳು ಚೀನಾ ಸರ್ಕಾರದಿಂದ ಅನುಮತಿ ಪಡೆಯಲು ಈ ಕಾರ್ ಅನ್ನು ಕಳುಹಿಸಿದಾಗ ತೆಗೆದ ಚಿತ್ರಗಳು ಎಂದು ತಿಳಿದು ಬಂದಿದೆ. ಹೊಸ ಎಂಇಪಿ ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾಗಲಿರುವ ಐಡಿ 6 ಎಂದಿನಂತೆ ಅದೇ ಐಡಿ ರೂಮ್ಸ್ ಕಾನ್ಸೆಪ್ಟ್ ಮಾದರಿಯನ್ನು ಆಧರಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಹಿರಂಗಗೊಂಡ ಫೋಕ್ಸ್‌ವ್ಯಾಗನ್ ಐಡಿ 6 ಎಲೆಕ್ಟ್ರಿಕ್ ಎಸ್‌ಯುವಿಯ ಚಿತ್ರಗಳು

ಈ ಕಾನ್ಸೆಪ್ಟ್ ಮಾದರಿಯನ್ನು ಫೋಕ್ಸ್‌ವ್ಯಾಗನ್ 2019ರಲ್ಲಿ ಬಿಡುಗಡೆಗೊಳಿಸಿತು. ಈ ಎಲೆಕ್ಟ್ರಿಕ್ ಎಸ್‌ಯುವಿ ಫೋಕ್ಸ್‌ವ್ಯಾಗನ್‌ನ ಪೂರ್ಣ ಗಾತ್ರದ ಎಸ್‌ಯುವಿ ಮಾದರಿಯಾದ ಐಡಿ 4 ಮಾದರಿಗಿಂತ ಸ್ವಲ್ಪ ದೊಡ್ಡದಾಗಿದೆ.

ಬಹಿರಂಗಗೊಂಡ ಫೋಕ್ಸ್‌ವ್ಯಾಗನ್ ಐಡಿ 6 ಎಲೆಕ್ಟ್ರಿಕ್ ಎಸ್‌ಯುವಿಯ ಚಿತ್ರಗಳು

ಇದರಲ್ಲಿ ಅಳವಡಿಸಲಾಗಿರುವ 82 ಕಿ.ವ್ಯಾ ಬ್ಯಾಟರಿ ಪ್ಯಾಕ್ ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಕಾರು 450 ಕಿ.ಮೀಗಳವರೆಗೆ ಚಲಿಸುತ್ತದೆ. 302 ಬಿಹೆಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಬ್ಯಾಟರಿ 150 ಕಿ.ವ್ಯಾನ ಚಾರ್ಜರ್ ಮೂಲಕ 30 ನಿಮಿಷಗಳಲ್ಲಿ 80%ನಷ್ಟು ಚಾರ್ಜ್ ಆಗುತ್ತದೆ ಎಂದು ಹೇಳಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಹಿರಂಗಗೊಂಡ ಫೋಕ್ಸ್‌ವ್ಯಾಗನ್ ಐಡಿ 6 ಎಲೆಕ್ಟ್ರಿಕ್ ಎಸ್‌ಯುವಿಯ ಚಿತ್ರಗಳು

ಹೊಸ ಐಡಿ 6 ಎಲೆಕ್ಟ್ರಿಕ್ ಎಸ್‌ಯುವಿಯು ಫೋಕ್ಸ್‌ವ್ಯಾಗನ್ ಐಡಿ ರೂಮ್ಸ್ ಕಾನ್ಸೆಪ್ಟ್ ಮಾದರಿಯನ್ನು ಹೋಲುತ್ತದೆ. ಈ ಎಸ್‌ಯುವಿಯು ಉತ್ತಮವಾಗಿರುವುದರಿಂದ ಮೂರನೇ ಸಾಲಿನಲ್ಲಿ ವಿಶಾಲವಾದ ಜಾಗವನ್ನು ನಿರೀಕ್ಷಿಸಬಹುದು.

Most Read Articles

Kannada
English summary
Volkswagen ID 6 electric suv pictures unveiled. Read in Kannada.
Story first published: Saturday, February 6, 2021, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X