ಕೋವಿಡ್ ಎಫೆಕ್ಟ್: ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ವಾಹನ ಮಾರಾಟ ಸುಧಾರಿಸಲು ವಾಹನ ತಯಾರಿಕಾ ಕಂಪನಿಗಳು ಹಲವಾರು ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ವೈರಸ್ ಭೀತಿ ನಡುವೆ ಸುರಕ್ಷಿತ ವ್ಯಾಪಾರ ವಹಿವಾಟು ನಡೆಸಲು ಹರಸಾಹಸಪಡುತ್ತಿವೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಕೋವಿಡ್ ಸಂದರ್ಭದಲ್ಲಿ ಸುರಕ್ಷಿತ ವಾಹನ ಮಾರಾಟ ಕೈಗೊಳ್ಳಲು ಈಗಾಗಲೇ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ತೆರೆಯುವ ಮೂಲಕ ಗ್ರಾಹಕರು ಮತ್ತು ಮಾರಾಟಗಾರರ ನಡುವಿನ ಸಂಪರ್ಕವನ್ನು ಸಾಧ್ಯವಾದಷ್ಟು ಕಡಿತಗೊಳಿಸಿವೆ. ಕಾರು ಬುಕ್ಕಿಂಗ್‌ನಿಂದ ಕಾರು ವಿತರಣೆ ಹಂತದ ತನಕವು ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳ ಮೇಲೆ ಅಲಂಬಿತವಾಗಿರುವ ಆಟೋ ಕಂಪನಿಗಳಿಗೆ ಟೆಸ್ಟ್ ಡ್ರೈವ್ ಪ್ರಕ್ರಿಯೆಯು ಹೊಸ ಸವಾಲಾಗಿದೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ವಾಹನ ಖರೀದಿಯ ಪ್ರತಿಯೊಂದು ಪ್ರಕ್ರಿಯೆಯನ್ನು ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ಮೂಲಕ ಕೈಗೊಳ್ಳಲಾಗುತ್ತಿದ್ದರು ಟೆಸ್ಟ್ ಡ್ರೈವ್‌ಗಾಗಿ ಗ್ರಾಹಕರೊಂದಿಗೆ ಮಾರಾಟಗಾರರು ಸಂಪರ್ಕಿಸಬೇಕಾದ ಅನಿವಾರ್ಯತೆಯಿರುತ್ತದೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಈ ವೇಳೆಯೂ ಟೆಸ್ಟ್ ಡ್ರೈವ್ ವಾಹನಗಳನ್ನು ವಿವಿಧ ರಸಾಯನಿಕಗಳಿಂದ ಸ್ವಚ್ಚಗೊಳಿಸಿ ಹಸ್ತಾಂತರ ಮಾಡುವ ಕ್ರಮಗಳಿದ್ದರೂ ಟೆಸ್ಟ್ ಡ್ರೈವ್ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿರುವುದಕ್ಕೆ ಹೊಸ ಉಪಾಯ ರೂಪಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಗಳನ್ನು ನಡೆಸುತ್ತಿದೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ವರ್ಚುವಲ್ ಟೆಸ್ಟ್ ಡ್ರೈವ್ ಸಂದರ್ಭದಲ್ಲಿ ಅಧಿಕೃತ ಮಾರಾಟ ಪ್ರತಿನಿಧಿಗಳು ನಿಗದಿತ ಸಂಖ್ಯೆಯ ಗ್ರಾಹಕರನ್ನು ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ಸಂಪರ್ಕಿಸುವ ಮೂಲಕ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಟೆಸ್ಟ್ ಡ್ರೈವ್ ನಡೆಸಲಿದ್ದು, ಕೋವಿಡ್ ಸಂದರ್ಭದಲ್ಲಿ ಮಾರಾಟ ಪ್ರತಿನಿಧಿಗಳು ಮತ್ತು ಗ್ರಾಹಕರ ನಡುವೆ ಸಂಪರ್ಕದಿಂದ ವೈರಸ್ ಹರಡುವಿಕೆ ತಡೆಯಲು ಈ ಉಪಾಯ ಅನುಸರಿಸಲಾಗುತ್ತಿದೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಜಗತ್ತಿನಾದ್ಯಂತ ಒಂದನೇ ಅಲೆ, ಎರಡನೇ ಅಲೆ ನಂತರ ಮೂರನೇ ಅಲೆಯ ಕೋವಿಡ್ ಹೆಚ್ಚುವ ಭೀತಿಯಿರುವುದರಿಂದ ಸಂದರ್ಭಗಳಿಗೆ ಅನುಗುಣವಾಗಿ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಅನಿವಾರ್ಯತೆಗಳು ಎದುರಾಗಿದ್ದು, ಫೋರ್ಕ್ಸ್‌ವ್ಯಾಗನ್ ಕಂಪನಿಯು ಸಹ ಹೊಸದಾಗಿ ಟೆಸ್ಟ್ ಡ್ರೈವ್ ಸೌಲಭ್ಯವನ್ನು ಪ್ರಾಯೋಗಿಕವಾಗಿ ತನ್ನ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಆರಂಭಿಸಿದೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಇನ್ನು ಭಾರತದಲ್ಲೂ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಕೈಗೊಳ್ಳಲಾಗುತ್ತಿದೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಇದರ ನಡುವೆ ಹೊಸ ವಾಹನಗಳ ಖರೀದಿಗೆ ಬುಕ್ಕಿಂಗ್ ಸಲ್ಲಿಕೆ ತೀವ್ರ ಕಂಡಿರುವುದಲ್ಲದೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆ ಮಾಡಿದ್ದ ಲಕ್ಷಾಂತರ ಹೊಸ ವಾಹನ ಖರೀದಿದಾರರು ಬುಕ್ಕಿಂಗ್ ಹಿಂಪಡೆಯುತ್ತಿದ್ದಾರೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಕೋವಿಡ್ ಪರಿಣಾಮ ವಾಹನ ನೋಂದಣಿ ಪ್ರಕ್ರಿಯೆ ಸಾಧ್ಯವಿಲ್ಲದಿರುವುದರಿಂದಲೂ ಹೊಸ ವಾಹನ ವಿತರಣೆ ಪಡೆದುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದು, ಲಾಕ್‌ಡೌನ್ ವೇಳೆ ಹೊಸ ವಾಹನ ಪಡೆದುಕೊಂಡು ನೋಂದಣಿಯಾಗದೆ ಹಾಗೆಯೇ ಉಳಿದಿರುವ ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಮಹಾರಾಷ್ಟ್ರ ಸಾರಿಗೆ ಸಂಸ್ಥೆಯು ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿಸುವ ಗ್ರಾಹಕರಿಗೆ ವಾಹನ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯು ಕಾಗದ ರಹಿತ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನಗಳ ದಾಖಲೆಗಳನ್ನು ಲಗತ್ತಿಸಿದ್ದಲ್ಲಿ ವಿವಿಧ ಹಂತದ ಪರಿಶೀಲನೆ ನಂತರ ಸಾರಿಗೆ ಇಲಾಖೆಯು ಆನ್‌ಲೈನ್ ಮೂಲಕವೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಿದ್ದು, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ವಾಹನದ ನೋಂದಣಿ ಸಂಖ್ಯೆಯನ್ನು ವಿತರಿಸಲಾಗುತ್ತದೆ.

ಗ್ರಾಹಕರಿಗೆ ವರ್ಚುವಲ್ ಟೆಸ್ಟ್ ಡ್ರೈವ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೊಸ ನೋಂದಣಿ ಪ್ರಕ್ರಿಯೆಯಿಂದ ವಾಹನ ಮಾರಾಟ ಹೆಚ್ಚಳವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಫೇಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಶಿಯನ್ಸ್(FADA) ಸಂಸ್ಥೆಯು ಶೀಘ್ರದಲ್ಲೇ ದೇಶಾದ್ಯಂತ ಹೊಸ ನೋಂದಣಿ ಸೌಲಭ್ಯವನ್ನು ವಿಸ್ತರಿಸುವಂತೆ ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತಿದೆ.

Most Read Articles

Kannada
English summary
Volkswagen introduce virtual test drive experience on social media. Read in Kannada.
Story first published: Tuesday, June 15, 2021, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X