ಭಾರತದಲ್ಲಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಮಾನ್ಸೂನ್ ಅಬ್ಬರ ಜೋರಾಗಿದ್ದು, ಮಾನ್ಸೂನ್ ಸಂದರ್ಭದಲ್ಲಿ ವಾಹನ ತಾಂತ್ರಿಕ ಅಂಶಗಳ ರಕ್ಷಣೆಯು ಒಂದು ಹರಸಾಹಸವೇ ಸರಿ. ಇದಕ್ಕಾಗಿ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಗ್ರಾಹಕರಿಗಾಗಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದೆ.

ಭಾರತದಲ್ಲಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಮಾನ್ಸೂನ್ ವೇಳೆ ವಾಹನಗಳಲ್ಲಿ ಎದುರಾಗಬಹುದಾದ ತಾಂತ್ರಿಕ ಅಂಶಗಳ ಸಮಸ್ಯೆಗಳ ಪರಿಹಾರಕ್ಕಾಗಿ ಫೋಕ್ಸ್‌ವ್ಯಾಗನ್ ಕಂಪನಿಯು ಹಲವಾರು ಸರ್ವಿಸ್ ಪ್ಯಾಕೇಜ್ ಪ್ರಕಟಿಸಿದ್ದು, ಆಸಕ್ತ ಗ್ರಾಹಕರು ನಿಗದಿತ ಅವಧಿಯೊಳಗೆ ದೇಶಾದ್ಯಂತ ಸೇವೆಯಲ್ಲಿರುವ ಫೋಕ್ಸ್‌ವ್ಯಾಗನ್ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ಸ್ಟ್ಯಾಂಡರ್ಡ್ ಸರ್ವಿಸ್‌ ಪ್ಯಾಕೇಜ್ ಹೊರತುಪಡಿಸಿ ಹೆಚ್ಚುವರಿ ಮೊತ್ತಗಳಿಗೆ ಮಾನ್ಸೂನ್ ಪ್ಯಾಕೇಜ್ ಸರ್ವಿಸ್ ಪಡೆಯಬಹುದಾಗಿದೆ.

ಭಾರತದಲ್ಲಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಈಗಾಗಲೇ ಜೂನ್ 1ರಿಂದಲೇ ದೇಶದ ಪ್ರಮುಖ ನಗರಗಳಲ್ಲಿ ಮಾನ್ಸೂನ್ ಕೇರ್ ಆರಂಭಿಸಿದ್ದು, ಮಾನ್ಸೂನ್ ಕೇರ್ ಸರ್ವಿಸ್‌ಗಳ ಮೇಲೆ ರಿಯಾಯ್ತಿ ಸಹ ಘೋಷಣೆ ಮಾಡಿದೆ.

ಭಾರತದಲ್ಲಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಮಾನ್ಸೂನ್ ಕೇರ್ ಸರ್ವಿಸ್‌ಗಳ ಬೆಲೆಯಲ್ಲಿ ಶೇ.25 ರಷ್ಟು ಕಡಿತ ಮಾಡಿರುವುದಾಗಿ ಹೇಳಿಕೊಂಡಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಪ್ರಮುಖ ಸರ್ವಿಸ್‌ಗಳನ್ನು ಹೊರತುಪಡಿಸಿ ಹತ್ತು ಸಾಮಾನ್ಯ ತಾಂತ್ರಿಕ ಅಂಶಗಳನ್ನು ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ ಸೇವೆ ಒದಗಿಸುವುದಾಗಿ ಪ್ರಕಟಸಿದೆ.

ಭಾರತದಲ್ಲಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಕೋವಿಡ್ ಪರಿಣಾಮ ಆಯಾ ರಾಜ್ಯಗಳ ಸುರಕ್ಷಾ ಮಾರ್ಗಸೂಚಿಗಳಿಗೆ ಅನುಗುಣವಾಗ ಮಾನ್ಸೂನ್ ಕೇರ್ ಆರಂಭಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಈ ತಿಂಗಳು ಪೂರ್ತಿಯಾಗಿ ಮಾನ್ಸೂನ್ ಕೇರ್ ಅಭಿಯಾನ ಕೈಗೊಳ್ಳುತ್ತಿದ್ದು, ಆಸಕ್ತ ಗ್ರಾಹಕರಿಗಾಗಿ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಲಾಗುತ್ತಿದೆ.

ಭಾರತದಲ್ಲಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿನ ತನ್ನ ಕಾರುಗಳ ಸರಣಿ ಹೆಚ್ಚಿಸುತ್ತಿದ್ದು, ತನ್ನ ಸಹ ಸಂಸ್ಥೆಯಾದ ಸ್ಕೋಡಾ ಕಂಪನಿ ಜೊತೆಗೂಡಿ ಹಲವಾರು ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಶೀಘ್ರದಲ್ಲೇ ಕಂಪನಿಯು ಟೈಗನ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೊಚ್ಚ ಹೊಸ ಟೈಗನ್ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಸ್ಟ್ಯಾಂಡರ್ಡ್ ಜೋಡಣೆಯೊಂದಿಗೆ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರಿನಲ್ಲಿ ಪೊಲೊ ಹ್ಯಾಚ್‌ಬ್ಯಾಕ್‌ನಲ್ಲಿ ಬಳಕೆ ಮಾಡಲಾಗಿರುವ 108-ಬಿಎಚ್‌ಪಿ ಸಾಮರ್ಥ್ಯದ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 148-ಬಿಎಚ್‌ಪಿ ಸಾಮರ್ಥ್ಯದ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಟೈಗನ್‌ನಲ್ಲಿ ಜೋಡಿಸಲಾಗಿದೆ.

ಭಾರತದಲ್ಲಿ ಮಾನ್ಸೂನ್ ಕಾರ್ ಕೇರ್ ಸರ್ವಿಸ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರಿನ ಬೆಲೆಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ .16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಬಹುದೆಂದು ನೀರಿಕ್ಷಿಸಲಾಗಿದ್ದು, ಕಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಫೋಕ್ಸ್‌ವ್ಯಾಗನ್ ಮೊದಲ ಬಾರಿಗೆ ಎಂಟ್ರಿ ನೀಡುತ್ತಿರುವುದು ವಿಶೇಷವಾಗಿದೆ.

Most Read Articles

Kannada
English summary
Volkswagen Monsoon Car Care Services Announced in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X