Just In
Don't Miss!
- News
"ಕಾಂಗ್ರೆಸ್ ಈಗ ಒಡೆದ ಮನೆ; ಮೂರು ಗುಂಪುಗಳ ನಡುವೆ ನಿರಂತರ ಗುದ್ದಾಟ''
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Sports
ಶ್ರೀಲಂಕಾ ವಿರುದ್ಧದ ಸರಣಿಗೆ ವಿಂಡೀಸ್ ತಂಡ ಪ್ರಕಟ, ಗೇಲ್ ವಾಪಸ್
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
ಫೋಕ್ಸ್ವ್ಯಾಗನ್ ಇಂಡಿಯಾ ಕಂಪನಿಯು ಹೊಸ ವರ್ಷದ ಸಂಭ್ರಮಕ್ಕಾಗಿ ತನ್ನ ಜನಪ್ರಿಯ ಕಾರು ಮಾದರಿಗಳಾದ ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಮಾದರಿಗಳ ಮೇಲೆ ಸೀಮಿತ ಅವಧಿಗಾಗಿ ಆಫರ್ ಘೋಷಣೆ ಮಾಡಲಾಗಿದ್ದು, ಗ್ರಾಹಕರು ಪೊಲೊ ಮತ್ತು ವೆಂಟೊ ಕಾರುಗಳಲ್ಲಿ ಸ್ಪೆಷಲ್ ಎಡಿಷನ್ಗಳನ್ನು ಸಹ ಖರೀದಿ ಮಾಡಬಹುದಾಗಿದೆ.

ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಕಂಪನಿಯು ಕಾರ್ಪೊರೇಟ್ ರಿಯಾಯಿತಿ, ವಿನಿಮಯ ಬೋನಸ್ ಮತ್ತು ನಗದು ರಿಯಾಯಿತಿ ನೀಡುತ್ತಿದ್ದು, ಹೊಸ ವರ್ಷದ ಸಂಭ್ರಮದಲ್ಲಿ ಕಾರುಗಳ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಉತ್ತಮ ಅವಕಾಶ ಎನ್ನಬಹುದು. ಫೋಕ್ಸ್ವ್ಯಾಗನ್ ಹೊಸ ಕಾರುಗಳ ಮೇಲೆ ರೂ. 45 ಸಾವಿರದಿಂದ ರೂ. 1.25 ಲಕ್ಷ ತನಕ ಆಫರ್ಗಳು ಲಭ್ಯವಿದ್ದು, ಹೊಸ ಆಫರ್ಗಳು ವಿವಿಧ ವೆರಿಯೆಂಟ್ಗಳ ಖರೀದಿ ಆಧಾರದ ಮೇಲೆ ಅನ್ವಯವಾಗುತ್ತವೆ.

ಫೋಕ್ಸ್ವ್ಯಾಗನ್ ಕಂಪನಿಯು ಪೊಲೊ ಹ್ಯಾಚ್ಬ್ಯಾಕ್ ಕಾರು ಖರೀದಿ ಮೇಲೆ ರೂ. 20 ಸಾವಿರ ಎಕ್ಸ್ಚೆಂಜ್ ಡಿಸ್ಕೌಂಟ್, ರೂ.10 ಸಾವಿರ ಲೊಯಾಲಿಟಿ ಬೋನಸ್, ರೂ.15 ಸಾವಿರ ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ.

ಹೊಸ ಆಫರ್ ವೆಂಟೊ ಸೆಡಾನ್ ಮಾದರಿಯ ಖರೀದಿ ಮೇಲೆ ಗ್ರಾಹಕರು ಹೈ ಲೈನ್ ಆವೃತ್ತಿಯ ಮೇಲೆ ರೂ. 40 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.25 ಸಾವಿರ ಎಕ್ಸ್ಚೆಂಜ್ ಆಫರ್ ಪಡೆದುಕೊಳ್ಳಬಹುದಾಗಿದ್ದು, ಆಟೋಮ್ಯಾಟಿಕ್ ರೆಡ್ ಅಂಡ್ ವೈಟ್ ಎಡಿಷನ್ ಮೇಲೆ ರೂ.25 ಸಾವಿರ ಎಕ್ಸ್ಚೆಂಜ್ ಬೋನಸ್ ನೀಡಲಾಗುತ್ತಿದೆ.

ಫೋಕ್ಸ್ವ್ಯಾಗನ್ ಕಂಪನಿಯು ವೆಂಟೊ ಆರಂಭಿಕ ಆವೃತ್ತಿಗಳ ಮೇಲೆ ರೂ.20 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ.15 ಸಾವಿರ ಲೊಯಾಲಿಟಿ ಬೋನಸ್ ನೀಡುತ್ತಿದ್ದು, ಹೈ ಲೈನ್ ಆವೃತ್ತಿಯನ್ನು ಖರೀದಿ ಗ್ರಾಹಕರಿಗೆ ಮಾತ್ರವೇ ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದೆ. ಇನ್ನುಳಿದ ಸಾಮಾನ್ಯ ಮಾದರಿಗಳ ಮೇಲೆ ಕಾರ್ಪೊರೇಟ್ ರಿಯಾಯಿತಿ, ವಿನಿಮಯ ಬೋನಸ್ ಲಭ್ಯವಿದ್ದು, ಹೊಸ ಆಫರ್ಗಳು ಮುಂದಿನ ಕೆಲವೇ ದಿನಗಳ ಕಾಲ ಮಾತ್ರ ಲಭ್ಯವಿರಲಿವೆ.

ಹೊಸ ಆಫರ್ಗಳಲ್ಲಿ ಫೋಕ್ಸ್ವ್ಯಾಗನ್ ಕಂಪನಿಯು ಹೈ ಎಂಡ್ ಮಾದರಿಗಳಾದ ಟಿ-ರಾಕ್ ಮತ್ತು ಟಿಗ್ವಾನ್ ಕಾರುಗಳ ಮೇಲೆ ಯಾವುದೇ ಆಫರ್ ನೀಡಿಲ್ಲವಾದರೂ ನಿಗದಿತ ಅವಧಿಯಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಸರ್ವಿಸ್ ಸೇವೆಗಳು ಲಭ್ಯವಾಗಲಿವೆ ಎನ್ನಲಾಗಿದೆ.

ಇನ್ನು ಫೋಕ್ಸ್ವ್ಯಾಗನ್ ಕಂಪನಿಯು ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳಲ್ಲಿ ಬಿಡುಗಡೆ ಮಾಡಲಾದ ರೆಡ್ ಅಂಡ್ ವೈಟ್ ಆವೃತ್ತಿಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದು, ಹೊಸ ಬಣ್ಣದ ಆಯ್ಕೆಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸ್ಪೆಷಲ್ ಎಡಿಷನ್ ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 9.19 ಲಕ್ಷಕ್ಕೆ ಮತ್ತು 11.49 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಹೊಸ ಕಾರುಗಳು ಬಣ್ಣಗಳ ಆಯ್ಕೆ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲೇ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿವೆ.

ರೆಡ್ ಆ್ಯಂಡ್ ವೈಟ್ ಪೊಲೊ ಮತ್ತು ವೆಂಟೊ ಕಾರುಗಳ ಮಾದರಿಗಳಿಗಾಗಿ ಯಾವುದೇ ಹೆಚ್ಚುವರಿ ದರ ವಿಧಿಸದ ಫೋಕ್ಸ್ವ್ಯಾಗನ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಮಾರಾಟ ಮಾಡಲಿದ್ದು, ಸ್ಪೆಷಲ್ ಎಡಿಷನ್ ಮಾದರಿಗಳು ಹೈ ಎಂಡ್ ವೆರಿಯೆಂಟ್ಗಳಲ್ಲಿ ಪರಿಚಯಿಸಲಾಗಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಪೊಲೊ ಮತ್ತು ವೆಂಟೊ ಹೈಲೈನ್ ಆಟೋಮ್ಯಾಟಿಕ್ ವೆರಿಯೆಂಟ್ಗಳಲ್ಲಿ ಸ್ಪೆಷಲ್ ಎಡಿಷನ್ ಆಫರ್ ಮಾಡಲಾಗುತ್ತಿದ್ದು, ರೆಡ್ ಆ್ಯಂಡ್ ವೈಟ್ ಮಾದರಿಯು ಫ್ಯಾಶ್ ರೆಡ್, ಸನ್ಸೆಟ್ ರೆಡ್ ಮತ್ತು ಕ್ಯಾಂಡಿ ವೈಟ್ ಬಣ್ಣಗಳನ್ನು ಆಧರಿಸಿ ಸ್ಪೆಷಲ್ ಎಡಿಷನ್ ಅಭಿವೃದ್ದಿಗೊಳಿಸಿದೆ.