ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರು

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಇತ್ತೀಚೆಗೆ ಇಂಡಿಯಾ 2.0 ಯೋಜನೆಗಳ ಕೆಲವು ವಿವರಗಳನ್ನು ಹಂಚಿಕೊಂಡಿದೆ. ಇದರ ಜೊತೆಯಲ್ಲಿ ಈ ಯೋಜನೆಗಳ ಅಡಿಯಲ್ಲಿ ಮುಂಬರುವ ಮಾದರಿಗಳ ಬಗ್ಗೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರು

ಜರ್ಮನ್ ಉತ್ಪಾದಕರು ತನ್ನ ಇಂಡಿಯಾ 2.0 ಕಾರ್ಯಕ್ರಮದಡಿಯಲ್ಲಿ ತನ್ನ ಎಸ್‍ಯುವಿ ಸರಣಿಯ ವಿಸ್ತರಣೆಗೆ ಒತ್ತು ನೀಡಿದ್ದರೂ, ಅದು ಖಂಡಿತವಾಗಿಯೂ ಇತರ ವಿಭಾಗಗಳನ್ನು ಮರೆತಿಲ್ಲ. ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಪಿಟಿಐ ಅವರೊಂದಿಗಿನ ಇತ್ತೀಚಿನ ಮಾಧ್ಯಮ ಸಂವಾದದಲ್ಲಿ ಆಶಿಶ್ ಗುಪ್ತಾ ಅವರು ಭಾರತಕ್ಕೆ ಆರ್ಟಿಯನ್ ಬಿಡುಗಡೆಯ ಬಗ್ಗೆ ಹೇಳಿದ್ದಾರೆ.

ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರು

ಆರ್ಟಿಯೊನ್ ಜರ್ಮನ್ ಬ್ರಾಂಡ್‌ನ ಪ್ರಮುಖ ಐಷಾರಾಮಿ ಸೆಡಾನ್ ಆಗಿದ್ದು, ಸಿಬಿಯು ಮಾರ್ಗದ ಮೂಲಕ ಸಂಪೂರ್ಣ ಆಮದು ಮಾಡಿಕೊಳ್ಳುವ ಯುನಿಟ್ ಆಗಿ ದೇಶದಲ್ಲಿ ಲಭ್ಯವಿರಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರು

ಕಂಪನಿಯು ತನ್ನ ನಿಖರವಾದ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಭವಿಷ್ಯದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ವಿಡಬ್ಲ್ಯೂ ಯೋಜಿಸಿರುವ ಕಾರುಗಳ ಪಟ್ಟಿಯಲ್ಲಿ ಇದು ಖಂಡಿತವಾಗಿಯೂ ಇದೆ ಎಂದು ಆಶಿಶ್ ಗುಪ್ತಾ ಹೇಳಿದ್ದಾರೆ.

ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರು

ಆರ್ಟಿಯೊನ್ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಸೆಡಾನ್ ಆಗಿದೆ. ಇದು ಫುಲ್ ಎಲ್ಇಡಿ ಲೈಟ್ ಬಾರ್, ರೂಫ್‌ಲೈನ್ ಮತ್ತು ಮಸ್ಕ್ಲರ್ ಬಾನೆಟ್‌ನೊಂದಿಗೆ ವಿಶಾಲವಾದ ಗ್ರಿಲ್ ಅನ್ನು ಹೊಂದಿರುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರು

ಇನ್ನು ಈ ಕಾರಿನ ಸೈಡ್ ಪ್ರೋಫೈಲ್ ನಲ್ಲಿ ಅಲಾಯ್ ವ್ಹೀಲ್ ಮತ್ತು ಬ್ಲ್ಯಾಕ್ ಔಟ್ ಪಿಲ್ಲರ್‌ಗಳು ಮತ್ತು ನಯವಾದ ಒಆರ್‌ವಿಎಂಗಳನ್ನು ಒಳಗೊಂಡಿವೆ. ಹಿಂಭಾಗದಲ್ಲಿ ನಯವಾದ ಎಲ್ಇಡಿ ಟೈಲ್‌ಲೈಟ್‌ಗಳು, ಹಿಂಭಾಗದ ಬಂಪರ್‌ನಲ್ಲಿ ಕ್ರೋಮ್ ಟ್ರಿಮ್, ಹೊಸ ಡಿಫ್ಯೂಸರ್ ಮತ್ತು ಸ್ಪೋರ್ಟಿ ಕ್ವಾಡ್ ಎಕ್ಸಾಸ್ಟ್ ಅನ್ನು ಪಡೆಯುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರು

ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರಿನ ಒಳಭಾಗದಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಹೊಂದಿಕೆಯಾಗುವ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ, ಹರ್ಮನ್ ಕಾರ್ಡನ್ 12-ಸ್ಪೀಕರ್ ಆಡಿಯೊ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 30-ಬಣ್ಣದ ಆಂಬಿಯೆಂಟ್ ಲೈಟಿಂಗ್ ಸಿಸ್ಟಂ ಮತ್ತು ವೈರ್‌ಲೆಸ್ ಚಾರ್ಜಿಂಗ್‌ನಂತಹ ಫೀಚರ್ ಗಳನ್ನು ಇದು ಒಳಗೊಂಡಿರುತ್ತದೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರು

ಇನ್ನು ಈ ಐಷಾರಾಮಿ ಫೋಕ್ಸ್‌ವ್ಯಾಗನ್ ಸೆಡಾನ್ ನಲ್ಲಿ ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸುವ ಸಾಧ್ಯತೆಯಿದೆ, ಈ ಎಂಜಿನ್ 268 ಬಿಹೆಚ್‌ಪಿ ಪವರ್ ಮತ್ತು 350 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್‌ವ್ಯಾಗನ್ ಆರ್ಟಿಯೊನ್ ಕಾರು

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುತ್ತದೆ. ಭಾರತದಲ್ಲಿ ಬಿಡುಗಡೆಯಾದಾಗ ಆರ್ಟಿಯೊನ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.45-50 ಲಕ್ಷಗಳಾಗಿರಬಹುದು ಎಂದು ಅದಾಜಿಸಲಾಗಿದೆ.

Most Read Articles

Kannada
English summary
2021 Volkswagen Arteon Luxury Sedan Planned For India Launch. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X