ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಫೋಕ್ಸ್‌ವ್ಯಾಗನ್ ಇಂಡಿಯಾ(Volkswagen India) ಕಂಪನಿಯು ತನ್ನ ಹೊಚ್ಚ ಹೊಸ ಟೈಗನ್(Taigun) ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದೇ ತಿಂಗಳು 24ರಂದು ಅಧಿಕೃತವಾಗಿ ಬಿಡುಗಡೆಗೊಳ್ಳಲಿರುವ ಹೊಸ ಕಾರು ಖರೀದಿಗೆ ಉತ್ತಮ ಬೇಡಿಕೆ ಹರಿದುಬರುತ್ತಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಫೋಕ್ಸ್‌ವ್ಯಾಗನ್ ಕಂಪನಿಯು ಸಹ ತನ್ನ ಸಹಭಾಗಿತ್ವ ಸಂಸ್ಥೆಯಾದ ಸ್ಕೋಡಾ ಆಟೋ ಕಂಪನಿ ಜೊತೆಗೂಡಿ ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಬುಕ್ಕಿಂಗ್ ಆರಂಭಿಸಿದ ನಂತರ ಇದುವರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದಾರೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಟೈಗನ್ ಕಾರು ಖರೀದಿಗಾಗಿ ಫೋಕ್ಸ್‌ವ್ಯಾಗನ್ ಕಂಪನಿಯು ರೂ.25 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿದ್ದು, ಹೊಸ ಕಾರು ಖರೀದಿಗಾಗಿ ನಿಗದಿತ ಅವಧಿಯಲ್ಲಿ ಬುಕ್ಕಿಂಗ್ ದಾಖಲಿಸುವ ಗ್ರಾಹಕರಿಗೆ ರೂ. 5 ಸಾವಿರ ಗಿಫ್ಟ್ ವೋಚರ್ ಪ್ರಕಟಿಸಿದೆ. ಗಿಫ್ಟ್ ವೋಚರ್ ಮೂಲಕ ಆಕ್ಸೆಸರಿಸ್ ಪ್ಯಾಕೇಜ್ ಖರೀದಿಗಾಗಿ ಇಲ್ಲವೇ ವಿಸ್ತರಿತ ಸರ್ವಿಸ್ ಪ್ಯಾಕೇಜ್ ಖರೀದಿಗಾಗಿ ಬಳಕೆ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಹೊಸ ಟೈಗನ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆ ಅನುಸಾರವಾಗಿ ಸ್ಟ್ಯಾಂಡರ್ಡ್ ಮತ್ತು ಜಿಟಿ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಸಹಭಾಗೀತ್ವ ಸಂಸ್ಥೆಯಾದ ಸ್ಕೋಡಾ ಕುಶಾಕ್ ಕಾರು ಮಾದರಿಯಲ್ಲೇ ಫೋಕ್ಸ್‌ವ್ಯಾಗನ್ ಟೈಗನ್ ಕೂಡಾ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಎಂಕ್ಯೂಬಿ ಎ0 ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಉತ್ಪಾದನೆಗೊಂಡಿರುವ ಹೊಸ ಕಾರು ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ವಿನ್ಯಾಸವು ಕಾರಿನ ಬೇಡಿಕೆ ಹೆಚ್ಚಿಸಲಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಜೊತೆಗೆ ಹೊಸ ಕಾರನ್ನು ಕಂಪನಿಯು ಸ್ಥಳೀಯವಾಗಿ ಉತ್ಪಾದನೆಗೊಂಡಿರುವ ಶೇ.95 ರಷ್ಟು ಬಿಡಿಭಾಗಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಆಮದು ಬಿಡಿಭಾಗಗಳನ್ನು ತಗ್ಗಿಸಿರುವುದರಿಂದ ಬೆಲೆಯಲ್ಲೂ ಕೂಡಾ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮವಾಗಿರುವ ನೀರಿಕ್ಷೆಗಳಿವೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಟೈಗನ್ ಕಾರಿನಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಎಲ್‍ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್ಸ್ ಇಂಟ್ರಾಗ್ರೆಟೆಡ್ ಡಿಆರ್‌ಎಲ್ಎಸ್ ಜೋಡಣೆ ಹೊಂದಿದ್ದು, ಫಂಕ್ಷನಲ್ ಟರ್ನ್ ಇಂಡಿಕೇಟರ್, ಎಲ್‍ಇ‍‍ಡಿ ಲೈಟ್ ಬಾರ್‌, ಮುಂಭಾಗದಲ್ಲಿ ಸ್ಕಫ್ ಪ್ಲೇಟ್, 17-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವಿಂಡೋ ಹಾಗೂ ಡೋರ್ ಹ್ಯಾಂಡಲ್ ಮೇಲೆ ಕ್ರೋಮ್ ವಿನ್ಯಾಸ ಮತ್ತು ಕಾರಿನ ಸುತ್ತಲೂ ಬಾಡಿ ಕ್ಲ್ಯಾಡಿಂಗ್ ನೀಡಲಾಗಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಹೊಸ ಕಾರಿನ ಒಳಭಾಗದ ವಿನ್ಯಾಸವು ಸಹ ಸಾಕಷ್ಟು ಪ್ರೀಮಿಯಂ ಫೀಚರ್ಸ್‌ಗಳಿಂದ ಕೂಡಿದ್ದು, ಅಡ್ವಾನ್ಸ್ ಟೆಕ್ನಿಕಲ್ ಫೀಚರ್ಸ್‌ಗಳಾದ 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ 8-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌‌, ಅಂಡ್ರಾಯಿಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ ಕಾರ್ ಕನೆಕ್ಟ್ ಟೆಕ್ನಾಲಜಿ ಹೊಂದಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಹಾಗೆಯೇ ಹೊಸ ಕಾರು ವರ್ಚುವಲ್ ಕಾಕ್‌ಪಿಟ್‌ನೊಂದಿಗೆ ಬ್ಲ್ಯಾಕ್ ಆ್ಯಂಡ್ ಗ್ರೇ ಡ್ಯುಯಲ್ ಕಲರ್ ಡ್ಯಾಶ್‌ಬೋರ್ಡ್ ಹೊಂದಿದ್ದು, ಮುಂಭಾಗದಲ್ಲಿ ವೆಂಟಿಲೆಟೆಡ್ ಸೀಟ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, ಸೆಂಟ್ರಲ್ ಆರ್ಮ್ ರೆಸ್ಟ್, ರಿಯರ್ ಎಸಿ ವೆಂಟ್ಸ್, ಕೀ ಲೆಸ್ ಎಂಟ್ರಿ, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಹೊಂದಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಸುರಕ್ಷತೆಗೂ ಹೊಸ ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ ಒಟ್ಟು 40 ಸುರಕ್ಷಾ ಫೀಚರ್ಸ್‌ಗಳು ಟೈಗನ್ ಕಾರಿನಲ್ಲಿವೆ. 6 ಏರ್‌ಬ್ಯಾಗ್(ಟಾಪ್ ಎಂಡ್ ಮಾದರಿಯಲ್ಲಿ) ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೊಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿ ಹಲವು ಸೌಲಭ್ಯಗಳಿವೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಟೈಗನ್ ಕಾರು ಪ್ರಮುಖ ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದ್ದು, ಆರಂಭಿಕ ಮಾದರಿಗಳಲ್ಲಿ ಪೊಲೊ ಹ್ಯಾಚ್‌ಬ್ಯಾಕ್‌ ಟರ್ಬೊದಲ್ಲಿ ಬಳಕೆ ಮಾಡಲಾಗಿರುವ 113-ಬಿಎಚ್‌ಪಿ ಸಾಮರ್ಥ್ಯದ 1.0-ಲೀಟರ್ ಟಿಎಸ್ಐ ಪೆಟ್ರೋಲ್ ನೀಡಲಾಗಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಟಾಪ್ ಎಂಡ್ ಮಾದರಿಗಳಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಆರಂಭಿಕ ವೆರಿಯೆಂಟ್‌ಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್‌ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್‌ಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಜಿಎಸ್ ಡ್ಯಯುಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

1.0-ಲೀಟರ್ ಟಿಎಸ್ಐ ಪೆಟ್ರೋಲ್ ಮಾದರಿಯು 113-ಬಿಎಚ್‌ಪಿ, 175 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ 1.5-ಲೀಟರ್ ಪೆಟ್ರೋಲ್ ಮಾದರಿಯು 148-ಬಿಎಚ್‌ಪಿ, 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಕಾರಿನ ಆಯ್ಕೆಯು ಸ್ಕೋಡಾ ಕುಶಾಕ್ ಮಾದರಿಯಲ್ಲೂ ಒಂದೇ ರೀತಿಯಾಗಿದೆ.

ಬಿಡುಗಡೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ Volkswagen Taigun

ಈ ಮೂಲಕ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 16.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಬಹುದೆಂದು ನೀರಿಕ್ಷಿಸಲಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಕಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಮೊದಲ ಬಾರಿಗೆ ಎಂಟ್ರಿ ನೀಡುತ್ತಿರುವುದು ಮತ್ತೊಂದು ವಿಶೇಷವಾಗಿದೆ.

Most Read Articles

Kannada
English summary
Volkswagen received more than 10 000 pre bookings for taigun suv ahead of launch
Story first published: Monday, September 20, 2021, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X