ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳ ಮಾರಾಟವನ್ನು ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ವಿಸ್ತರಿಸುವ ಯೋಜನೆಯಲ್ಲಿದ್ದು, ಕಂಪನಿಯ ಹೊಸ ಐಡಿ ಸರಣಿಯಲ್ಲಿ ಎಸ್‌ಯುವಿ, ಕ್ರಾಸ್ ಓವರ್ ಎಸ್‌ಯುವಿ, ಕೂಪೆ ಮತ್ತು ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಮ್ಯಾಡುಲರ್ ಎಲೆಕ್ಟ್ರಿಕ್ ಡ್ರೈವ್ ಮ್ಯಾಟ್ರಿಕ್ಸ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಗೊಂಡಿರುವ ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ ಇವಿ ಕಾರು ಮಾದರಿಗಳು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದು, ಐಡಿ.4 ಎಲೆಕ್ಟ್ರಿಕ್ ಸರಣಿ ಕಾರುಗಳ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ವಿಚಾರದಲ್ಲೂ ಗಮನಸೆಳೆಯುತ್ತಿದೆ.

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

2025ರ ವೇಳೆಗೆ ವಿಶ್ವಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ 20ಕ್ಕೂ ಹೆಚ್ಚು ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಕಂಪನಿಯು ಇತ್ತೀಚೆಗೆ ಹೊಸ ಪ್ಲ್ಯಾಟ್‌ಫಾರ್ಮ್ ಆಧರಿತ ಐಡಿ.4 ಜಿಟಿಎಕ್ಸ್, ಐಡಿ.6 ಎಸ್‌ಯುವಿ ಕಾರು ಸರಣಿಯನ್ನು ಅನಾವರಣಗೊಳಿಸಿದೆ.

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಐಡಿ.4 ಜಿಟಿಎಕ್ಸ್ ಎಲೆಕ್ಟ್ರಿಕ್ ಪರ್ಫಾಮೆನ್ಸ್ ಎಸ್‌ಯುವಿ ಕಾರಿನ ಜೊತೆಯಲ್ಲಿ ಐಡಿ.5 ಎಲೆಕ್ಟ್ರಿಕ್ ಕೂಪೆ ಮಾದರಿಯನ್ನು ಸಹ ಅಭಿವೃದ್ದಿಗೊಳಿಸಲಾಗುತ್ತಿದ್ದು, ಹೊಸ ಕಾರು 2022ರ ವೇಳೆಗೆ ವಿವಿಧ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿದೆ.

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಐಡಿ ಸರಣಿಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಬಹುತೇಕ ಎಸ್‌ಯುವಿ ಮಾದರಿಗಳನ್ನೇ ಅಭಿವೃದ್ದಿಪಡಿಸಿದ್ದು, ಮೊದಲ ಬಾರಿಗೆ ಸೆಡಾನ್ ಮಾದರಿಗಾಗಿ ಐಡಿ.5 ಕೂಪೆ ನೆಮ್‌ಪ್ಲೇಟ್ ಮೀಸಲಿಟ್ಟಿದೆ. ಹೊಸ ಕಾರನ್ನು ಇತ್ತೀಚೆಗೆ ಅನಾವರಣಗೊಳಿಸಲಾದ ಐಡಿ.4 ಜಿಟಿಎಕ್ಸ್ ಮಾದರಿಯೊಂದಿಗೆ ಮೊದಲ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಹೊಸ ಐಡಿ.5 ಎಲೆಕ್ಟ್ರಿಕ್ ಕಾರು ಮಾದರಿಯು ಐಡಿ.4 ಮಾದರಿ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮತ್ತು ಜಿಟಿಎಕ್ಸ್ ಪವರ್‌ಟ್ರೈನ್ ಹಂಚಿಕೊಳ್ಳಲಿದ್ದು, ಹೊಸ ಕಾರು ಆರಂಭಿಕವಾಗಿ ಯುರೋಪ್ ಮತ್ತು ಅಮೆರಿಕದಲ್ಲಿ ತದನಂತರವಷ್ಟೇ ಇತರೆ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ.

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಐಡಿ.5 ಮಾದರಿಯ ಚಿತ್ರಗಳನ್ನು ಹೊರತುಪಡಿಸಿ ಹೊಸ ಕಾರಿನ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಳ್ಳದ ಫೋಕ್ಸ್‌ವ್ಯಾಗನ್ ಕಂಪನಿಯು ಭವಿಷ್ಯ ವಾಹನಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಸದ್ಯ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಹಲವಾರು ಕಠಿಣಕ್ರಮಗಳನ್ನು ಜಾರಿಗೆ ತರುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ ಉತ್ಪಾದನೆಯತ್ತ ಹೆಚ್ಚು ಗಮಹರಿಸುತ್ತಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಐಡಿ.4 ಆವೃತ್ತಿಯು ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಪ್ರತಿ ಚಾರ್ಜ್‌ಗೆ 510ಕಿ.ಮೀ ಗೂ ಅಧಿಕ ಮೈಲೇಜ್ ಹಿಂದಿರುಗಿಸುವ ವೈಶಿಷ್ಟ್ಯತೆ ಹೊಂದಿದೆ.

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಜೊತೆಗೆ ಹೊಸ ಕಾರಿನಲ್ಲಿ ಸಾಮಾನ್ಯ ಕಾರುಗಳಂತೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ರಿಯರ್ ವೀಲ್ಹ್ ಡ್ರೈವ್ ಸಿಸ್ಟಂ ಪಡೆದುಕೊಂಡಿರುವ ಹೊಸ ಕಾರಿನಲ್ಲಿ ಕ್ವಿಕ್ ಚಾರ್ಜ್ ಮೂಲಕ 30 ನಿಮಿಷ ಕಾಲ ಚಾರ್ಜ್ ಮಾಡಿದ್ದಲ್ಲಿ 320 ಕಿ.ಮೀ ಮೈಲೇಜ್ ಸುಲಭವಾಗಿ ಪಡೆಯಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಐಡಿ.5 ಎಲೆಕ್ಟ್ರಿಕ್ ಕೂಪೆ ಬಿಡುಗಡೆ ಮಾಡಲಿದೆ ಫೋಕ್ಸ್‌ವ್ಯಾಗನ್

ಆರಂಭಿಕ ಹಂತವಾಗಿ ಐಡಿ.4 ಎಲೆಕ್ಟ್ರಿಕ್ ಕಾರಿನಲ್ಲಿ ರಿಯರ್ ಡ್ರೈವ್ ಸಿಸ್ಟಂ ನೀಡಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಗ್ರಾಹಕರ ಬೇಡಿಕೆಗೆ ಆಧರಿಸಿ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಮಾದರಿಯನ್ನು ನೀಡಲಿದ್ದು, ರಿಯರ್ ಡ್ರೈವ್ ಸಿಸ್ಟಂ ಹೊಂದಿರುವ ಕಾರು ಮಾದರಿಯು 204-ಬಿಎಚ್‌ಪಿ ಮಾಡಿದ್ದಲ್ಲಿ ಆಲ್ ವೀಲ್ಹ್ ಡ್ರೈವ್ ಮಾದರಿಯು 295-ಬಿಎಚ್‌ಪಿ ಉತ್ಪಾದನೆ ಮಾಡಲಿದೆ.

Most Read Articles

Kannada
English summary
Volkswagen Revealed ID.5 Coupe Teaser. Read in Kannada.
Story first published: Friday, April 30, 2021, 0:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X