ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್(Volkswagen) ತನ್ನ ಹೊಸ ಪೊಲೊ ಟ್ರ್ಯಾಕ್(Polo Track) ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಪೊಲೊ ಟ್ರ್ಯಾಕ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ಹೊಸ ಪೊಲೊ ಟ್ರ್ಯಾಕ್ ಮಾದರಿಯು ಫೋಕ್ಸ್‌ವ್ಯಾಗನ್ ಕಂಪನಿಯಿಂದ ಮಾರುಕಟ್ಟೆಗೆ ಮೊದಲ ಕಾಂಪ್ಯಾಕ್ಟ್ ಫ್ಯಾಮಿಲಿ ಕಾರ್ ಆಗಿರುತ್ತದೆ. ಇದರೊಂದಿಗೆ, ಫೋಕ್ಸ್‌ವ್ಯಾಗನ್ ದಕ್ಷಿಣ ಅಮೆರಿಕಾದಲ್ಲಿ ಸುಮಾರು 1 ಬಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಿಸಿತು.2013 ರಲ್ಲಿ ಹೆಚ್ಚಿನ ಆರ್ಥಿಕ ಹಿಂಜರಿತದ ನಂತರ, ಈ ಹೂಡಿಕೆಯು ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಯಲ್ಲಿ ಗಮನಾರ್ಹವಾದ ಪುನರಾಗಮನವನ್ನು ಸೂಚಿಸುತ್ತದೆ ಎಂದು ಕಂಪನಿ ಹೇಳಿದೆ. ವಾಹನ ತಯಾರಕರು 2021 ರ ಹಣಕಾಸು ವರ್ಷದಲ್ಲಿ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ MQB ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಅದು ಬ್ರ್ಯಾಂಡ್‌ನ ಬಹು ಮಾದರಿಗಳಿಗೆ ಆಧಾರವಾಗಿದೆ. ಕಂಪನಿಯು ಮುಂಬರುವ ಕಾರಿನ ವಿವರಗಳನ್ನು ಇನ್ನು ಬಹಿರಂಗಪಡಿಸಿಲ್ಲ. 2023 ರಲ್ಲಿ ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಗೆ ತರಲು ಯೋಜಿಸುತ್ತಿದೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ಈ ಕಾಂಪ್ಯಾಕ್ಟ್ ಫ್ಯಾಮಿಲಿ ಕಾರು ಶೀಘ್ರದಲ್ಲೇ ಭಾರತಕ್ಕೆ ಬರಲಿದೆಯೇ ಎಂಬ ಬಗ್ಗೆ ಇನ್ನೂ ಯಾವುದೇ ಮಾತುಗಳಿಲ್ಲ. ಆದಾಗ್ಯೂ, ಕಂಪನಿಯು ಅದನ್ನು ಇಲ್ಲಿಗೆ ತರಲು ನಿರ್ಧರಿಸಿದರೆ, ಅದು ಕುಟುಂಬವನ್ನು ಸರಿಹೊಂದಿಸುವ ಅವಶ್ಯಕತೆಗಳಿಗೆ ಸರಿಹೊಂದುವಂತೆ ತೋರುತ್ತದೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ಫೋಕ್ಸ್‌ವ್ಯಾಗನ್ ಬ್ರೆಜಿಲ್‌ನಲ್ಲಿರುವ ತನ್ನ ಟೌಬಟೆ ಕಾರ್ಖಾನೆಯಲ್ಲಿ ಹೊಸ ಪೋಲೊ ಟ್ರ್ಯಾಕ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಫ್ಯಾಮಿಲಿ ಕಾರು ಶೀಘ್ರದಲ್ಲೇ ಭಾರತಕ್ಕೆ ಬರಲಿದೆಯೇ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಕಂಪನಿಯು ಈ ಪೊಲೊ ಟ್ರ್ಯಾಕ್ ಕಾರನ್ನು ಭಾರತಕ್ಕೆ ತರವುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿಗಳು ಬಹಿರಂಗವಾಗಬಹುದು.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ಫೋಕ್ಸ್‌ವ್ಯಾಗನ್ ಲ್ಯಾಟಿನ್ ಅಮೆರಿಕದ ಅಧ್ಯಕ್ಷ ಮತ್ತು ಸಿಇಒ ಪಾಬ್ಲೊ ಡಿ ಸಿ ಮಾತನಾಡಿ, ಈ ಪ್ರದೇಶದಲ್ಲಿ ಭವಿಷ್ಯದ ಹೂಡಿಕೆಗಳ ಉನ್ನತ ಮಟ್ಟವು ಫೋಕ್ಸ್‌ವ್ಯಾಗನ್'ಗೆ ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಯ ಮಹತ್ತರ ಪ್ರಾಮುಖ್ಯತೆಯನ್ನು ಪ್ರದರ್ಶಿಸುತ್ತದೆ ಎಂದು ಹೈಲೈಟ್ ಮಾಡಿದ್ದಾರೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

"ಇದು ಮೂರು ಪ್ರಮುಖ ಯಶಸ್ಸಿನ ಅಂಶಗಳನ್ನು ಆಧರಿಸಿದೆ: ಒಕ್ಕೂಟಗಳೊಂದಿಗಿನ ಒಮ್ಮತದ ಮೂಲಕ ನಮ್ಮ ಅತ್ಯುತ್ತಮ ಉತ್ಪಾದಕತೆ, ಇಡೀ ತಂಡದ ಅತ್ಯುತ್ತಮ ಪ್ರದರ್ಶನ ಮತ್ತು ಲ್ಯಾಟಿನ್ ಅಮೇರಿಕನ್ ಗ್ರಾಹಕರ ಆಶಯಗಳ ಮೇಲೆ ನಮ್ಮ ಬಲವಾದ ಗಮನ" ಎಂದು ಅವರು ಹೇಳಿದರು. ಇದರ ಜೊತೆಗೆ, ಫೋಕ್ಸ್‌ವ್ಯಾಗನ್ ಈ ಹೊಸ ಯೋಜಿತ ಹೂಡಿಕೆಗಳೊಂದಿಗೆ ಸುಸ್ಥಿರ ಚಲನಶೀಲತೆಯ ಸಾಫ್ಟ್‌ವೇರ್-ಆಧಾರಿತ ಪೂರೈಕೆದಾರರಾಗಿ ತನ್ನ ರೂಪಾಂತರವನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ಇದರೊಂದಿಗೆ ಫೋಕ್ಸ್‌ವ್ಯಾಗನ್ ತನ್ನ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಅನಾವರಣಗೊಳಿಸಿದೆ. ಈ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಹಲವಾರು ಹೊಸ ನವೀಕರಿರಣಗಳನ್ನು ಪಡೆದುಕೊಂಡಿದೆ. ಹೊಸ ತಲೆಮಾರಿನ ಪೊಲೊದಲ್ಲಿ ಬಳಸಲಾಗುವ ಅದೇ ಎಂಕ್ಯೂಬಿ ಎಒ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ನವೀಕರಿಸಿದ ಈ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಡಿಆರ್‌ಎಲ್‌ಗಳೊಂದಿಗೆ ಹನಿಕೊಬ್ ಮೆಶ್ ಗ್ರಿಲ್, ಹೊಸದಾಗಿ ವಿನ್ಯಾಸಗೊಳಿಸಲಾದ 'ಐಕ್ಯೂ 'ಲೈಟ್' ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳ ಜೊತೆಗೆ ಪೂರ್ಣ-ಅಗಲದ ಫ್ರಂಟ್ ಲೈಟ್ ಬಾರ್ ಅನ್ನು ಒಳಗೊಂಡಿರುವ ಸಂಪೂರ್ಣ ಹೊಸ ಮುಂಭಾಗದ ಫಾಸಿಕವನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ಈ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಲೈಟ್ ಬಾರ್ ಫೋಕ್ಸ್‌ವ್ಯಾಗನ್ ನ್‌ನಿಂದ ಬ್ಯಾಟರಿ-ಎಲೆಕ್ಟ್ರಿಕ್ ಐಡಿ ಮಾದರಿಗಳಿಗೆ ಮತ್ತು ಗಾಲ್ಫ್, ಆರ್ಟಿಯಾನ್ ಮತ್ತು ಟಿಗ್ವಾನ್ ನಂತಹ ಯಶಸ್ವಿ ಮಾದರಿಗಳ ಹೊಸ ವಾಹನ ಪೀಳಿಗೆಗೆ ಶೈಲಿಯ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರಿನಲ್ಲಿ ಹೊಸ ವಿನ್ಯಾಸದ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, ಗಾಲ್ಫ್‌ಗೆ ಹೋಲುತ್ತವೆ, ಮೊದಲ ಬಾರಿಗೆ ಈ ಹಾಟ್ ಹ್ಯಾಚ್ ಡೈನಾಮಿಕ್ ಟರ್ನ್ ಸಿಗ್ನಲ್‌ಗಳನ್ನು ಪಡೆಯುತ್ತದೆ. ಇತರೆ ಪ್ರಮುಖ ನವೀಕರಣಗಳು ಬ್ಯಾಕ್ ಮೀರರ್ ಮತ್ತು ರೂಫ್, ವೈಡರ್ ಟೇಲ್ ಲ್ಯಾಂಪ್, ರೆಡ್ ಬ್ರೇಕ್ ಕ್ಯಾಲಿಪರ್ಸ್, ಎರಡು ಎಕ್ಸಾಸ್ಟ್ ಟಿಪ್ಸ್ ಮತ್ತು ನವೀಕರಿಸಿದ ಹಿಂಭಾಗದ ಬಂಪರ್ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

ಈ ಕಾರಿನಲ್ಲಿ ಬೆಸ್ಪೋಕ್ ಚಾಸಿಸ್, ಮುಂಭಾಗದ ಆಕ್ಸಲ್ನಲ್ಲಿ ದೊಡ್ಡ ಸ್ಟೆಬಿಲೈಜರ್, ಹಿಂಭಾಗದಲ್ಲಿ ಗಟ್ಟಿಯಾದ ಆಕ್ಸಲ್ ಲೊಕೇಟಿಂಗ್ ಮೌಂಟ್ಸ್, ಮುಂಭಾಗದಲ್ಲಿ ಕಟ್ಟುನಿಟ್ಟಿನ ಜೋಡಣೆ ರಾಡ್ಗಳು ಮತ್ತು ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.ಹೊಸ ಪೊಲೊ ಜಿಟಿಐ ಮೊದಲ ಬಾರಿಗೆ ಫೋಕ್ಸ್‌ವ್ಯಾಗನ್‌ನ ಟ್ರಾವೆಲ್ ಅಸಿಸ್ಟ್ ಸಿಸ್ಟಂ ಅನ್ನು ಪಡೆಯುತ್ತದೆ. ಇದು ಲೇನ್ ಅಸಿಸ್ಟ್, ಸೈಡ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಹಿಂಭಾಗದ ಟ್ರಾಫಿಕ್ ಅಲರ್ಟ್ ಅನ್ನು ಒಳಗೊಂಡಿದೆ. ಇದರೊಂದಿಗೆ ಡಿಸ್ಕವರ್ ಮತ್ತು ಡಿಸ್ಕವರ್ ಪ್ರೊ ಮೀಡಿಯಾ ಸಿಸ್ಟಂಗಳನ್ನು ಒಳಗೊಂಡಿರುತ್ತದೆ.

ಬಿಡುಗಡೆಯಾಗಲಿದೆ ಹೊಸ Volkswagen Polo Track ಕಾರು

2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರಿನಲ್ಲಿ ಅದೇ 2.0 ಎಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಕಾರು 6.5 ಸೆಕೆಂಡುಗಳಲ್ಲಿ 0-632 ಮೈಲ್ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಹೊಸ ಪೊಲೊ ಟ್ರ್ಯಾಕ್ ಕಾರಿನ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.

Most Read Articles

Kannada
English summary
Volkswagen revealed polo track new teaser image details
Story first published: Tuesday, November 9, 2021, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X