ವಿತರಣೆ ಆರಂಭಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್

2021ರ ಟಿ-ರಾಕ್ ಎಸ್‍ಯುವಿ ಕಾರು ಮಾದರಿಯನ್ನು ಕಳೆದ ತಿಂಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದ ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸುವ ಮೂಲಕ ವಿತರಣೆಗೆ ಸಜ್ಜಾಗುತ್ತಿದ್ದು, ಹೊಸ ಕಾರು ಈಗಾಗಗೇ ಫೋಕ್ಸ್‌ವ್ಯಾಗನ್ ಪ್ರಮುಖ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಕೋವಿಡ್ ಪರಿಣಾಮ ಸದ್ಯ ಹೊಸ ವಾಹನಗಳ ವಿತರಣೆಗಾಗಿ ಹಲವಾರು ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಡೀಲರ್ಸ್‌ಗಳು ಈಗಾಗಲೇ ಬುಕ್ಕಿಂಗ್ ಮಾಡಲಾಗಿರುವ ಮತ್ತು ಸ್ಟಾಕ್ ಮಾಡಲಾದ ವಾಹನಗಳನ್ನು ಮಾತ್ರ ವಿತರಣೆ ಕೈಗೊಳ್ಳಲಾಗುತ್ತಿದೆ. ಅಂತಾರಾಜ್ಯಗಳ ನಡುವಿನ ಸಂಪರ್ಕಕ್ಕೆ ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿರುವುದರಿಂದ ಹೊಸ ವಾಹನಗಳ ಸಾಗಾಣಿಕೆಯಲ್ಲಿ ತೊಂದರೆ ಉಂಟಾಗಿದ್ದು, ಫೋಕ್ಸ್‌ವ್ಯಾಗನ್ ಕಂಪನಿಯು ಸಹ ಹೊಸ ಕಾರು ವಿತರಣೆಯನ್ನು ಲಾಕ್‌ಡೌನ್ ಸಡಿಲಗೊಂಡ ನಂತರವೇ ಕಾರ್ಯಾಚರಣೆ ನಡೆಸುವ ಸಿದ್ದತೆಯಲ್ಲಿದೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಸದ್ಯ ಕೆಲವೇ ಕೆಲವು ಶೋರೂಂಗಳಲ್ಲಿ ಮಾತ್ರವೇ 2021ರ ಟಿ-ರಾಕ್ ಮಾದರಿಗಳು ತಲುಪಿದ್ದು, ಎಕ್ಸ್ ಶೋರೂಂ ಪ್ರಕಾರ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.21.35 ಲಕ್ಷ ಬೆಲೆ ಹೊಂದಿದೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಹೊಸ ಆಮದು ನೀತಿ ಅಡಿಯಲ್ಲಿ ಭಾರತದಲ್ಲಿ ಮಾರಾಟಗೊಳ್ಳುವ ಟಿ-ರಾಕ್ ಕಾರು ಮಾದರಿಯು ಸೀಮಿತ ಸಂಖ್ಯೆಯ ಮಾರಾಟ ಸೌಲಭ್ಯ ಹೊಂದಿದ್ದು, ಒಂದು ಬಾರಿ ಬುಕ್ಕಿಂಗ್ ಸ್ಪಿಕರಿಸಿದ ನಂತರ ಮೂರು ಹಂತದಲ್ಲಿ ಹೊಸ ಕಾರನ್ನು ವಿತರಣೆ ಮಾಡಲಾಗುತ್ತಿದೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಸಿಬಿಯು ಆಮದು ನೀತಿ ಅಡಿಯಲ್ಲಿ ಸಂಪೂರ್ಣವಾಗಿ ವಿದೇಶ ಮಾರುಕಟ್ಟೆಯಲ್ಲೇ ನಿರ್ಮಾಣಗೊಂಡು ಭಾರತದಲ್ಲಿ ಮಾರಾಟವಾಗುವ ಹೊಸ ಕಾರು ಪ್ರತಿ ಸ್ಪರ್ಧಿ ಕಾರು ಮಾದರಿಗಿಂತಲೂ ಹಲವಾರು ವಿಶೇಷತೆಗಳನ್ನು ಹೊಂದಿದ್ದು,ಹೊಸ ಕಾರು ಕಳೆದ ವರ್ಷದ ಮಾದರಿಗಿಂತಲೂ ಕೆಲವು ಹೊಸ ಬದಲಾವಣೆಗಳೊಂದಿಗೆ ಹೆಚ್ಚುವರಿಯಾಗಿ ರೂ.1.36 ಲಕ್ಷ ಹೆಚ್ಚುವರಿ ದರ ಪಡೆದುಕೊಂಡಿದೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಟಿಗ್ವಾನ್ ಆಲ್-ಸ್ಪೇಸ್ ಮತ್ತು ಟಿಗ್ವಾನ್ 5 ಸೀಟರ್ ಎಸ್‍ಯುವಿ ನಡುವಿನ ಸ್ಥಾನದಲ್ಲಿ ಟಿ-ರಾಕ್ ಅನ್ನು ಇರಿಸಲಾಗಿದ್ದು, ಹೊಸ ಕಾರು ಹಳೆಯ ಮಾದರಿಯಂತೆಯೇ ತಾಂತ್ರಿಕವಾಗಿ ಬಲಿಷ್ಠವಾಗಿದೆ. ಟಿ-ರಾಕ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಲೀಕ್ ಗ್ರಿಲ್ ಅನ್ನು ಹೊಂದಿದ್ದು, ಎರಡೂ ಬದಿಯಲ್ಲಿ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ನೀಡಲಾಗಿದೆ. ಈ ಎಸ್‍‍ಯುವಿನ ಹೊಸ ಬಂಪರ್ ಅನ್ನು ಹೊಂದಿದ್ದು, ದೊಡ್ಡ ಮಡ್ ಗ್ರಿಲ್ ಏರ್ ಇನ್‍‍ಟೇಕ್ ಹೊಂದಿದೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಹೊಸ ಎಸ್‍‍ಯುವಿಯ ಮುಂಭಾಗದಲ್ಲಿ ಎಲ್‍ಇ‍ಡಿ ಡಿಆರ್‍ಎಲ್‍ಗಳನ್ನು ಸಹ ಅಳವಡಿಸಲಾಗಿದ್ದು, 5 ಸ್ಪೋಕ್ ಅಲಾಯ್ ವ್ಹೀಲ್, ಹಿಂಭಾಗದಲ್ಲಿ ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಎಲ್‍ಇಡಿ ಟೈಲ್‍ ಲೈಟ್‍, ಹಿಂಭಾಗದಲ್ಲಿ ಬಂಪರ್ ಮತ್ತು ಸ್ಕಫ್ ಪ್ಲೇಟ್‍‍ಗಳನ್ನು ಹೊಂದಿವೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಹಾಗೆಯೇ ಹೊಸ ಎಸ್‍‍ಯುವಿಯಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಸುರಕ್ಷತೆಗಾಗಿ ಟಿ-ರಾಕ್ ಕಾರು ಮಾದರಿಯಲ್ಲಿ ಕಂಪನಿಯು ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಒಳಗೊಂಡಿದ್ದು, ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿದೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍‍ಯುವಿನಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯಿದ್ದು, ಈ ಎಂಜಿನ್ 148 ಬಿ‍ಹೆಚ್‍ಪಿ ಪವರ್ ಮತ್ತು 250 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಅನ್ನು ನೀಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

2021ರ ಫೋಕ್ಸ್‌ವ್ಯಾಗನ್‍ ಟಿ-ರಾಕ್ ಎಸ್‍ಯುವಿಯು ಕೇವಲ 8.4 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದ್ದು, ಹೊಸ ಟಿ-ರಾಕ್ ಎಸ್‍ಯುವಿಯು ಪ್ರತಿ ಗಂಟೆಗೆ 205 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Most Read Articles

Kannada
English summary
Volkswagen T-Roc Arrives At Dealerships Ahead Of Deliveries. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X