ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಜರ್ಮನಿ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯಲ್ಲಿ ಟಿಗ್ವಾನ್ ಆಲ್‌ಸ್ಪೇಸ್ 7-ಸೀಟರ್ ಎಸ್‍ಯುವಿಯನ್ನು ಸ್ಥಗಿತಗೊಳಿಸಿದೆ. ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಟಿಗ್ವಾನ್ 5-ಸೀಟರ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಿಗ್ವಾನ್ 5-ಸೀಟರ್ ಮಾದರಿಯು ಸಂಪೂರ್ಣವಾಗಿ ಆಮದು ಮಾಡಿಕೊಂಡ ಟಿಗ್ವಾನ್ ಆಲ್‌ಸ್ಪೇಸ್ ಭಿನ್ನವಾಗಿ ಸ್ಥಳೀಯವಾಗಿ ಜೋಡಿಸಲಾದ ಮಾದರಿಯಾಗಿದೆ. ಟಿಗ್ವಾನ್ ಆಲ್‌ಸ್ಪೇಸ್ ಅನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಪ್ರಮುಖ ಎಸ್‍ಯುವಿಯಾಗಿ ಪರಿಚಯಿಸಲಾಯಿತು, ಆದರೆ ಇದೀಗ ಕಂಪನಿಯು ಈ ಎಸ್‍ಯುವಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಟಿಗ್ವಾನ್ ಆಲ್‌ಸ್ಪೇಸ್ 7-ಸೀಟರ್ ಎಸ್‍ಯುವಿಯ ಕೊನೆಯ ಸಾಲಿನ ಸೀಟುಗಳು ವಯಸ್ಕರಿಗೆ ಬದಲಾಗಿ ಮಕ್ಕಳಿಗೆ ಹೆಚ್ಚು ಸೂಕ್ತವಾಗಿತ್ತು.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಈ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿಯನ್ನು ಭಾರತಕ್ಕೆ ಸಿಕೆಡಿ ರೂಪದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು. ಈ ಎಸ್‍‍ಯುವಿಯಲ್ಲಿ 2.0 ಲೀಟರಿನ ಟರ್ಬೊ‍‍ಚಾರ್ಜ್ಡ್ ಟಿ‍ಎಸ್‍ಐ ಪೆಟ್ರೋಲ್ ಎಂಜಿನ್ ಅಳವಡಿಸಲಾಗುತ್ತದೆ. ಈ ಎಂಜಿನ್ 187 ಬಿ‍‍ಹೆಚ್‍‍ಪಿ ಪವರ್ ಹಾಗೂ 370 ಎನ್‍ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೆ ಫೋಕ್ಸ್‌ವ್ಯಾಗನ್ ಕಂಪನಿಯ 4 ಮೋಷನ್ ಆಲ್ ವ್ಹೀಲ್ ಡ್ರೈವ್ (ಎ‍‍ಡಬ್ಲ್ಯು‍‍ಡಿ) ಮೂಲಕ ಪವರ್ ಕಳುಹಿಸುತ್ತದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‍‍ಸ್ಪೇಸ್ ಐದು ಸೀಟ್‍‍ನ ಟಿಗ್ವಾನ್ ಹೊಂದಿರುವ ಅದೇ ಮಾದರಿಯ ವಿನ್ಯಾಸವನ್ನು ಕೂಡ ಹೊಂದಿದೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಮೂರನೇ ಸಾಲಿನ ಸೀಟಿಂಗ್‍‍ಗಳಿಗಾಗಿ ಟಿಗ್ವಾನ್ ಆಲ್‌ಸ್ಪೇಸ್ ಎಸ್‍‍ಯುವಿಯ ಗಾತ್ರ ಹಾಗೂ ವ್ಹೀಲ್‍‍ಬೇಸ್ ಅನ್ನು ಹೆಚ್ಚಿಸಲಾಗಿದೆ. ಹೊಸ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍ಯುವಿಯು ಇಂಟಿಗ್ರೇಟೆಡ್ ಎಲ್‍ಇ‍‍ಡಿ ಡಿ‍ಆರ್‍ಎಲ್ ಹೊಂದಿರುವ ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಟರ್ನ್ ಇಂಡಿಕೇಟರ್, ಎಲ್‍ಇ‍‍ಡಿ ಫಾಗ್ ಲ್ಯಾಂಪ್ ಹಾಗೂ ಹಿಂಭಾಗದಲ್ಲಿ ಎಲ್‍ಇ‍‍ಡಿ ಟೇಲ್‍‍ಲೈಟ್‍‍ಗಳನ್ನು ಹೊಂದಿದೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಈ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆದರ್‍‍ನಲ್ಲಿ ವ್ರಾಪ್ ಮಾಡಲಾದ ಮಲ್ಟಿಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಪ್ಯಾಡಲ್ ಶಿಫ್ಟರ್, ಪನೋರಾಮಿಕ್ ಸನ್‌ರೂಫ್, ಮೂರು ಜೋನ್ ಕ್ಲೈಮೆಟ್ ಕಂಟ್ರೋಲ್, ಒಆರ್‌ವಿಎಂಗಳಿಗೆ ಪವರ್ ಅಡ್ಜಸ್ಟಬಲ್ ಹಾಗೂ ಮೆಮೊರಿ ಫಂಕ್ಷನ್ ಗಳಿವೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಇದರ ಜೊತೆಗೆ ಪ್ರೀಮಿಯಂ ವಿಯೆನ್ನಾ ಲೆದರ್ ಅಪ್‍‍ಹೊಲೆಸ್ಟರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಹೀಟ್ ಇನ್ಸೂಲೇಟೆಡ್ ವಿಂಡ್‌ಶೀಲ್ಡ್, ಆಟೋ ಹೆಡ್‌ಲ್ಯಾಂಪ್‌, ರೇನ್ ಸೆನ್ಸಾರ್‌, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಕೀಲೆಸ್ ಎಂಟ್ರಿ ಹಾಗೂ ಡ್ರೈವ್ ಮೋಡ್ ಸೆಲೆಕ್ಟರ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್‍‍ಗಳನ್ನು ಹೊಂದಿದೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಈ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ 7-ಸೀಟರ್ ಎಸ್‍ಯುವಿಯನ್ನು ಸ್ಥಗಿತಗೊಳಿಸಿ ಹೊಸ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಫೋಕ್ಸ್‌ವ್ಯಾಗನ್ ತನ್ನ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‌ಯುವಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ 2021ರ ಡಿಸೆಂಬರ್ 7 ರಂದು ಬಿಡುಗಡೆಯಾಗಲಿದೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಫೋಕ್ಸ್‌ವ್ಯಾಗನ್ ಈಗಾಗಲೇ ಘೋಷಿಸಿದಂತೆ, ಕಂಪನಿಯು ಈ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದ ನಾಲ್ಕು ಎಸ್‌ಯುವಿಗಳಲ್ಲಿ ಒಂದಾಗಿದೆ. ಇನ್ನು ಅಧಿಕೃತ ಬಿಡುಗಡೆಗೂ ಮುನ್ನ ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಲ್ಲಿ ಹೊಸ ಟಿಗ್ವಾನ್ ಎಸ್‍ಯುವಿಯ ಹೆಸರನ್ನು ಪಟ್ಟಿಮಾಡಲಾಗಿದೆ. ಈ ಹೊಸ ಎಸ್‌ಯುವಿ ಡೀಸೆಲ್ ಎಂಜಿನ್ ಅನ್ನು ಕೈಬಿಡುತ್ತದೆ ಮತ್ತು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ. ಇದು ಸಣ್ಣ ವಿನ್ಯಾಸ ಬದಲಾವಣೆಗಳನ್ನು ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಸಹ ಸ್ವೀಕರಿಸುತ್ತದೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತಕ್ಕೆ ಹೊಸದಲ್ಲ, ಈ ಹಿಂದೆ ಮಾರಾಟದಲ್ಲಿತ್ತು. ಆದರೆ ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಟಿಗ್ವಾನ್ ಎಸ್‍ಯುವಿಯನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಟಿಗ್ವಾನ್ ಎಸ್‍ಯುವಿ ಎಲ್ಲಾ ಹೊಸ ವಿನ್ಯಾಸ, ನೂತನ ವೈಶಿಷ್ಟ್ಯಗಳು ಮತ್ತು ಹೊಸ ಎಂಜಿನ್ ಅನ್ನು ಪಡೆದುಕೊಂಡಿದೆ. ಈ ಹೊಸ ಟಿಗ್ವಾನ್ ಎಸ್‍ಯುವಿ ವಿನ್ಯಾಸ ದೇಶದಲ್ಲಿ ಮಾರಾಟವಾಗಿದ್ದ ಅದರ ಹಿಂದಿನ ಮಾದರಿಗೆ ಸ್ವಲ್ಪ ಹೋಲುತ್ತದೆ. ಆದರೆ ಕೆಲವು ಟ್ವೀಕ್‌ಗಳಿವೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ ನಯವಾದ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಎಲ್ಇಡಿ ಮ್ಯಾಟ್ರಿಕ್ಸ್ ತಂತ್ರಜ್ಞಾನವನ್ನು ಕೂಡಿದೆ. ಇನ್ನು ಕ್ರೋಮ್ ಫಿನಿಶಿಂಗ್ ಹೊಂದಿರುವ ವಿಂಡೋ ಲೈನ್ ಇದರ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತದೆ. ಹೊಸ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಸ್ಪ್ಲಿಟ್-ಸ್ಟೈಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬಂಪರ್‌ನಲ್ಲಿ ಕ್ರೋಮ್ ಅಸ್ಸೆಂಟ್ ಗಳು, ದೊಡ್ಡ ಪ್ರತಿಫಲಿತ ಸ್ಟ್ರಿಪ್ ಮತ್ತು ಬೂಟ್ ಲಿಡ್ ಮಧ್ಯದಲ್ಲಿ ಇರಿಸಲಾಗಿರುವ ವಿಡಬ್ಲ್ಯೂ ಬ್ಯಾಡ್ಜ್ ಅನ್ನು ಹೊಂದಿದೆ, ಇದರೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟ್ ಆಗಿರುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಇದರಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಕಫ್ ಪ್ಲೇಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು 30 ಮಾದರಿಯ ಅಂಬೈಟ್ ಲೈಟ್ ಗಳನ್ನು ಹೊಂದಿದೆ.

ಭಾರತದಲ್ಲಿ ಸ್ಥಗಿತಗೊಂಡ Volkswagen Tiguan AllSpace ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಸ್ಥಳೀಯವಾಗಿ ಸಿಕೆಡಿ (ಸಂಪೂರ್ಣ ನಾಕ್ ಡೌನ್) ಯುನಿಟ್ ಗಳ ಮೂಲಕ ಜೋಡಿಸಲಾಗುತ್ತದೆ. ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.26 ಲಕ್ಷದಿಂದ ರೂ.29 ಲಕ್ಷಗಳಾಗಿರಬಹುದು. ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯು ಅತ್ಯಾಧುನಿಕ ಫೀಚರ್ಸ್, ತಂತ್ರಜ್ಙಾನ ಮತ್ತು ಆಕರ್ಷಕ ವಿನ್ಯಾಸವನ್ನು ಒಳಗೊಂಡಿರುತ್ತದೆ.

Most Read Articles

Kannada
English summary
Volkswagen tiguan allspace suv discontinued from indian market read to find more details
Story first published: Monday, November 29, 2021, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X