ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ಜರ್ಮನಿ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಅನ್ನು ಯುರೋಪಿಯನ್ ಮಾರುಕಟ್ಟೆಗಾಗಿ ಅನಾವರಣಗೊಳಿಸಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಮಾದರಿಯು ನಿವಸ್ ಕ್ರಾಸ್ಒವರ್ ಅನ್ನು ಆಧರಿಸಿದೆ.

ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ನಿವಸ್ ಕ್ರಾಸ್ಒವರ್ ಕಳೆದ ವರ್ಷದಿಂದ ದಕ್ಷಿಣ ಅಮೆರಿಕಾದ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಈ ಹೊಸ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಯುರೋಪಿಯನ್ ಮಾರುಕಟ್ಟೆಗೆ ಕೆಲವು ಸಣ್ಣ ಬದಲಾವಣೆಗಳನ್ನು ಪಡೆಯುತ್ತದೆ. ಇದು ಹಿಂಭಾಗದಲ್ಲಿ ಕೂಪೆಯಂತಹ ರೂಫ್ ಲೈನ್ ಅನ್ನು ಉಳಿಸಿಕೊಂಡಿದೆ. ಆದರೆ ಇದರಿಂದ ಬೂಟ್ ಸ್ಪೇಸ್ ಹೆಚ್ಚು ದೊರೆಯುದಿಲಲ್ಲ. ಈ ಕ್ರಾಸ್ಒವರ್ ಮಾದರಿಯು 438 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಎಲ್ಇಡಿ ಹೆಡ್ ಲೈಟ್ ಗಳನ್ನು ಸ್ಟ್ಯಾಂಡರ್ಡ್ ಆಗಿ, ಆಧುನಿಕ ಆಪರೇಟಿಂಗ್ ಕಾನ್ಸೆಪ್ಟ್, ಸಂಪೂರ್ಣ ಡಿಜಿಟಲ್ ಕಾಕ್ಪಿಟ್ ಮತ್ತು ಇತರ ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ನಿವಸ್ ಕ್ರಾಸ್ಒವರ್ ಎಂಕ್ಯೂಬಿ ಎ 0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇನ್ನು ಈ ಟೈಗೋ ಮಾದರಿಯು ಕೂಡ ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇನ್ನು ಈ ಕ್ರಾಸ್ಒವರ್ ಬೋಲ್ಡ್ ಗ್ರಿಲ್ ಅಪ್ ಫ್ರಂಟ್ ಸ್ಪೋರ್ಟಿಂಗ್ ರೆಸ್ಟೈಲ್ಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಇಂಟಿಗ್ರೇಟೆಡ್ ಡಿಆರ್‌ಎಲ್ ಮತ್ತು ಹೊಸ ಲಂಬವಾಗಿ ಜೋಡಿಸಲಾದ ಫಾಗ್ ಲ್ಯಾಂಪ್ ಗಳನ್ನು ಹೊಂದಿವೆ.

ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ಈ ಹೊಸ ಕ್ರಾಸ್ಒವರ್ ನಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಮತ್ತು ಬಂಪರ್ ಒರಟಾದ ಲುಕ್ ನೀಡುತ್ತದೆ. ಇನ್ನು ಈ ಎಸ್‍ಯುವಿಗೆ ಸ್ಪೋರ್ಟಿ ಲುಕ್ ನೀಡುವ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ.

ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ಇನ್ನು ಈ ಹೊಸ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್ 4,266 ಎಂಎಂ ಉದ್ದ, 1,757 ಎಂಎಂ ಅಗಲ ಮತ್ತು 1,493 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 2,566 ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ಈ ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಇಂಟಿರಿಯರ್ ಹೊಸ ಪೊಲೋ ಕಾರಿಗೆ ಹೋಲುತ್ತವೆ. ಇ ಕ್ರಾಸ್‌ಒವರ್ ನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 6.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದ್ದು, ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಟಚ್ ಸೆನ್ಸಿಟಿವ್ ಕ್ಲೈಮೇಟ್ ಕಂಟ್ರೋಲ್ ಮತ್ತು ಫೋಕ್ಸ್‌ವ್ಯಾಗನ್‌ನ ಐಕ್ಯೂ.ಡ್ರೈವ್ ಪ್ಯಾಕೇಜ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ಇನ್ನು ಈ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್ ನಲ್ಲಿ ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಮೊದಲನೆಯದು 1.0-ಲೀಟರ್, 3-ಸಿಲಿಂಡರ್, ಟಿಎಸ್ಐ ಎಂಜಿನ್ ಆಗಿದೆ. ಈ ಎಂಜಿನ್ 94 ಬಿಹೆಚ್‍ಪಿ ಅಥವಾ 109 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ಎರಡನೆಯದು 1.5-ಲೀಟರ್, ಟಿಎಸ್ಐ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 148 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡಿಎಸ್ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟೈಗೋ ಕಾಂಪ್ಯಾಕ್ಟ್ ಕ್ರಾಸ್‌ಒವರ್

ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಟೈಗೋ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಕ್ಕೆ ಸಾಧ್ಯತೆಗಳಿಲ್ಲ, ಈ ಫೋಕ್ಸ್‌ವ್ಯಾಗನ್ ಟೈಗೋ ಎಸ್‍ಯುವಿಯು ಯುರೋಪಿನ ಮಾರುಕಟ್ಟೆಗಳಲ್ಲಿ ಈ ವರ್ಷ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Volkswagen Taigo Compact Crossover Unveiled. Read In Kannada.
Story first published: Friday, July 30, 2021, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X