ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಹೊಸ ವರ್ಷದಿಂದಲೇ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಜನವರಿ 1ರಿಂದ ವೊಲ್ವೊ ಇಂಡಿಯಾ ಕಂಪನಿಯು ಕೂಡಾ ಕಾರುಗಳ ದರ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಬಹುತೇಕ ವಾಹನ ಕಂಪನಿಗಳು ತಮ್ಮ ಹೊಸ ವಾಹನಗಳ ದರ ಪರಿಷ್ಕರಣೆ ಮಾಡಲು ನಿರ್ಧರಿಸಿವೆ. ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆಯ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಜನವರಿ 1ರಿಂದ ವೊಲ್ವೊ ಇಂಡಿಯಾ ಕಂಪನಿಯು ಕೂಡಾ ಪ್ರಮುಖ ಕಾರುಗಳ ಬೆಲೆಯಲ್ಲಿ ಹೆಚ್ಚಳ ಮಾಡಲು ನಿರ್ಧರಿಸಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಮಾಹಿತಿಗಳ ಪ್ರಕಾರ ವೊಲ್ವೊ ಇಂಡಿಯಾ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಶೇ.1ರಿಂದ ಶೇ.3 ರಷ್ಟು ಹೆಚ್ಚಳ ಮಾಡಬಹುದು ಎನ್ನಲಾಗಿದ್ದು, ಹೆಚ್ಚಳವಾದ ಹೊಸ ದರ ಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ವೊಲ್ವೊ ಹೊಸ ಕಾರುಗಳ ಬೆಲೆಯು ರೂ. 1 ಲಕ್ಷದಿಂದ ರೂ. 3 ಲಕ್ಷದ ತನಕ ಹೆಚ್ಚಳವಾಗಬಹುದಾಗಿದ್ದು, ಸೆಮಿಕಂಡಕ್ಟರ್ ಕೊರತೆಯೇ ಕಾರುಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಭಾರತದಲ್ಲಿ ಸದ್ಯ ವೊಲ್ವೊ ಕಂಪನಿಯು ಎಕ್ಸ್‌ಸಿ40, ಎಕ್ಸ್‌ಸಿ60, ಎಕ್ಸ್‌ಸಿ90 ಮತ್ತು ಎಸ್90 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಎಕ್ಸ್‌ಸಿ90 ಬೆಲೆಯಲ್ಲಿ ರೂ. 1 ಲಕ್ಷ, ಎಕ್ಸ್‌ಸಿ 40 ಬೆಲೆಯಲ್ಲಿ ರೂ. 2 ಲಕ್ಷ, ಎಕ್ಸ್‌ಸಿ 60 ಬೆಲೆಯಲ್ಲಿ ರೂ. 1.60 ಲಕ್ಷ ಮತ್ತು ಎಸ್‌90 ಬೆಲೆಯಲ್ಲಿ ರೂ. 3 ಲಕ್ಷ ತನಕ ಏರಿಕೆಯಾಗಲಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲೇ ಬಹುತೇಕ ವಾಹನ ತಯಾರಿಕಾ ಕಂಪನಿಗಳು ಮೂರರಿಂದ ನಾಲ್ಕು ಬಾರಿ ದರ ಹೆಚ್ಚಿಸಿವೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿರುವುದರಿಂದ ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 40 ಸಾವಿರದಿಂದ ರೂ.1 ಲಕ್ಷದಷ್ಟು ಮತ್ತು ಮಧ್ಯಮ ಕ್ರಮಾಂಕದ ಕಾರುಗಳು ರೂ. 50 ಸಾವಿರದಿಂದ ರೂ. 1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಹಾಗೆಯೇ ಕಳೆದ ವರ್ಷದಲ್ಲಿ ಐಷಾರಾಮಿ ಕಾರುಗಳ ಬೆಲೆಯು ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 1.50 ಲಕ್ಷದಿಂದ ರೂ. 4 ಲಕ್ಷದ ತನಕ ದರ ಹೆಚ್ಚಳವಾಗಿದ್ದು, 2022ರಲ್ಲಿ ವಾಹನಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ವಿದೇಶಿ ಮಾರುಕಟ್ಟೆಗಳಿಂದ ಪ್ರಮುಖವಾಗಿ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಜೊತೆಗೆ ಸೆಮಿಕಂಡಕ್ಟರ್ ಕೊರತೆಯೇ ಹೊಸ ವಾಹನ ಬೆಲೆಯಲ್ಲಿ ಹೆಚ್ಚಿನ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಹೊಸ ವಾಹನಗಳಲ್ಲಿ ಹೆಚ್ಚುತ್ತಿರುವ ಕನೆಕ್ಟೆಡ್ ಫೀಚರ್ಸ್‌ಗಳಲ್ಲಿ ಸೆಮಿಕಂಡಕ್ಟರ್ ಅಳವಡಿಕೆಯು ಸಾಕಷ್ಟು ಹೆಚ್ಚುತ್ತಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಹೊಸ ವಾಹನಗಳ ಬೇಡಿಕೆ ಹೆಚ್ಚಿದ್ದರೂ ಕೂಡಾ ಬಿಡಿಭಾಗಗಳ ಕೊರತೆ ಹಿನ್ನಲೆಯಲ್ಲಿ ವಾಹನ ಮಾರಾಟದಲ್ಲಿ ಪ್ರಮುಖ ಕಾರು ಕಂಪನಿಗಳು ಹಿನ್ನಡೆ ಅನುಭವಿಸುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾರಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿರುವುದಲ್ಲದೆ ವಿತರಣೆ ಅವಧಿಯಲ್ಲೂ ಹೆಚ್ಚಳಕ್ಕೆ ಕಾರಣವಾಗಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಎಲೆಕ್ಟ್ರಾನಿಕ್ ಚಿಪ್(ಸೆಮಿ ಕಂಡಕ್ಟರ್) ಕೊರತೆಯು ಆಟೋ ಉತ್ಪಾದನಾ ಕಂಪನಿಗಳಿಗೆ ಸಂಕಷ್ಟಕ್ಕಿಡು ಮಾಡಿದ್ದು, ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಉತ್ಪಾದನೆಯನ್ನು ತೀವ್ರಗೊಳಿಸಲು ಅಗತ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್ ಕೊರತೆಯು ಕಾಡುತ್ತಿದೆ.

ಹೊಸ ವರ್ಷದಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ವೊಲ್ವೊ ಇಂಡಿಯಾ

ಕಳೆದ ವರ್ಷದ ಕೋವಿಡ್ ಅವಧಿಯಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಾಹನ ಬಿಡಿಭಾಗಗಳ ಪೂರೈಕೆ ಸರಪಳಿಯಲ್ಲಿ ಆದ ಅಸ್ತವ್ಯಸ್ತವೇ ಇದೀಗ ಹೊಸ ವಾಹಗಳ ಉತ್ಪಾದನೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದ್ದು, ಸೆಮಿ ಕಂಡಕ್ಟರ್‌ಗಳಿಗಾಗಿ ಭಾರತೀಯ ಆಟೋ ಉದ್ಯಮವು ಸಂಪೂರ್ಣವಾಗಿ ವಿದೇಶಿ ಕಂಪನಿಗಳನ್ನೇ ಅವಲಂಬಿಸಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.

Most Read Articles

Kannada
Read more on ವೊಲ್ವೊ volvo
English summary
Volvo india to increase car price from january 1 st 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X