ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ಸ್ವೀಡಿಷ್ ಕಾರು ತಯಾರಕ ಕಂಪನಿಯಾದ ವೊಲ್ವೊ ತನ್ನ ಎಸ್90 ಮತ್ತು ಎಕ್ಸ್‌ಸಿ60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಮಾದರಿಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ. ಈ ಹೊಸ ವೊಲ್ವೊ ಮೈಲ್ಡ್-ಹೈಬ್ರಿಡ್ ಎಸ್90 ಮತ್ತು ಎಕ್ಸ್‌ಸಿ60 ಕಾರುಗಳು ವಿನ್ಯಾಸ ನವೀಕರಣಗಳೊಂದಿಗೆ ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿವೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ಹೊಸ ವೊಲ್ವೊ ಎಸ್90 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರಿನ ಬೆಲೆಯು ರೂ.61.9 ಲಕ್ಷಗಳಾದರೆ, ಎಕ್ಸ್‌ಸಿ60 ಕಾರಿನ ಬೆಲೆಯು ರೂ.61.9 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ವೊಲ್ವೊ ಮೂರು-ವರ್ಷಗಳ ವಾರಂಟಿ ಮತ್ತು ಸರ್ವಿಸ್ ಸ್ಕೀಮ್ ಅನ್ನು ಎರಡೂ ಮಾದರಿಗಳಿಗೆ ರೂ.75,000 ಹೆಚ್ಚುವರಿ ವೆಚ್ಚದಲ್ಲಿ ನೀಡುತ್ತಿದೆ. ಈ ಕ್ರಮವು ಸ್ವೀಡಿಷ್ ಕಾರ್ ತಯಾರಕವು ಡೀಸೆಲ್‌ನಿಂದ ಪೆಟ್ರೋಲ್ ಪವರ್‌ಟ್ರೇನ್‌ಗಳಿಗೆ ಮತ್ತು ಅಂತಿಮವಾಗಿ ಈ ದಶಕದ ಅಂತ್ಯದ ವೇಳೆಗೆ ಎಲ್ಲಾ-ಎಲೆಕ್ಟ್ರಿಕ್ ಶ್ರೇಣಿಗೆ ತನ್ನ ಪರಿವರ್ತನೆಗಳನ್ನು ಮಾಡಲು ಸಜ್ಜಾಗುತ್ತಿರುವುದರಿಂದ ವೋಲ್ವೋ ಕ್ಲೀನರ್ ಟೆಕ್ನಾಲಜಿಗಳ ಕಡೆಯ ದಿಕ್ಕಿನಲ್ಲಿ ಸಾಗುತ್ತಿದೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

2030ರ ವೇಳೆಗೆ, ವೊಲ್ವೊನ ಸಾಲಿನಲ್ಲಿರುವ ಪ್ರತಿಯೊಂದು ಮಾದರಿಯು ಎಲೆಕ್ಟ್ರಿಕ್ ಹೊಂದುವ ನಿರೀಕ್ಷೆಯಿದೆ. ಭಾರತೀಯ ಮಾರುಕಟ್ಟೆಯಲ್ಲಿಯೂ ಸಹ ಕಂಪನಿಯು ಈ ಹಣಕಾಸು ವರ್ಷದಲ್ಲಿ ತನ್ನ ಮಾರಾಟವನ್ನು ದ್ವಿಗುಣಗೊಳಿಸಲು ಯೋಜಿಸುತ್ತಿರುವುದರಿಂದ 2022 ರಲ್ಲಿ ಹೊಸ ವೋಲ್ವೋ ಎಕ್ಸ್‌ಸಿ40 ರೀಚಾರ್ಜ್ ಇವಿ ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ಇನ್ನು ಬಿಡುಗಡೆಗೊಂಡ ವೊಲ್ವೊ ಎಕ್ಸ್‌ಸಿ60 ಕಾರಿನ ಬಗ್ಗೆ ಹೇಳುವುದಾದರೆ, ಇದು ಇತ್ತೀಚಿನ ಪೈಲಟ್ ಅಸಿಸ್ಟ್ ಫಂಕ್ಷನ್ ಅನ್ನು ಹೊಂದಿದೆ. ನಂತರ ಇದನ್ನು ಆಂಡ್ರಾಯ್ಡ್-ಚಾಲಿತ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬಿಲ್ಟ್-ಇನ್ ಗೂಗಲ್ ಆಪ್‌ಗಳೊಂದಿಗೆ ವಾಯ್ಸ್ ಅಸಿಸ್ಟ್ ಮತ್ತು ಸರ್ವಿಸ್ ಪ್ಯಾಕ್ ಮಾಡಲಾಗಿದ್ದು, ಜೊತೆಗೆ ಬ್ರ್ಯಾಂಡ್‌ನ 'ಡಿಜಿಟಲ್ ಸೇವೆಗಳು' ಪ್ಯಾಕೇಜ್‌ನೊಂದಿಗೆ ನವೀಕರಿಸಲಾಗುತ್ತದೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ಇನ್ನು ಎಕ್ಸ್‌ಸಿ60 ಕಾರಿನಲ್ಲಿ 2.0-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ 48-ವೋಲ್ಟ್ ಮೈಲ್ಡ್-ಹೈಬ್ರಿಡ್ ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಡಿನ್ ಕಾಂಬಿನೇಶನ್ ಬೆಲ್ಟ್ ಅನ್ನು ಒಳಗೊಂಡಿದೆ. ಈ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಇಂಜಿನ್ ಅನ್ನು ಎಂಟು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ಇನ್ನು ವೊಲ್ವೊ ಎಸ್90 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಮಾದರಿಯು ಎಕ್ಸ್‌ಸಿ60 ನಲ್ಲಿ ಕಾಣುವಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು ಹೊಸ ಗ್ರಿಲ್ ನಂತಹ ಸೂಕ್ಷ್ಮ ವಿನ್ಯಾಸದ ಅಪ್‌ಡೇಟ್‌ಗಳನ್ನು ಪಡೆಯುತ್ತದೆ, ಇದು ಈಗ ಬ್ರಾಂಡ್‌ನ ಹೊಸ ಲೋಗೋವನ್ನು ಹೊಂದಿದೆ, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಹೊಸ ಕ್ರೋಮ್ ಲೈನ್, ಹೊಸ ವ್ಹೀಲ್ ಗಳು ಮತ್ತು ಹೊಸ ಬಾಡಿಯ ಬಣ್ಣಗಳೊಂದಿಗೆ ಬರುತ್ತಿದೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ವೋಲ್ವೋ ಎಕ್ಸ್‌ಸಿ60 ಕಾರನ್ನು ಕ್ರಿಸ್ಟಲ್ ವೈಟ್ ಪರ್ಲ್, ಓಸ್ಮಿಯಮ್ ಗ್ರೇ, ಓನಿಕ್ಸ್ ಬ್ಲ್ಯಾಕ್, ಡೆನಿಮ್ ಬ್ಲೂ, ಪೈನ್ ಗ್ರೇ ಮತ್ತು ಫ್ಯೂಷನ್ ರೆಡ್ ಎಂಬ ಆರು ಬಣ್ಣಗಳ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು,

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ಈ ಎಸ್90 ಕಾರಿನಲ್ಲಿ ಅದೇ 2.0-ಲೀಟರ್, ನಾಲ್ಕು-ಸಿಲಿಂಡರ್ ಮೋಟಾರ್ ಜೊತೆಗೆ 48-ವೋಲ್ಟ್ ಮೈಲ್ಡ್-ಹೈಬ್ರಿಡ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಇದು 247 ಬಿಎಚ್‌ಪಿ ಪವರ್ ಮತ್ತು 350 ಎನ್ಎ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಎಂಜಿನ್ ಅನ್ನು ಎಂಟು-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ಇನ್ನು ವೊಲ್ವೊ ಕಂಪನಿಯು ಭಾರತದಲ್ಲಿ ತನ್ನ ಹೊಚ್ಚ ಹೊಸ ಎಕ್ಸ್‌ಸಿ40 ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಕರೋನಾ ಆತಂಕದಿಂದ ಮುಂದೂಡಲಾಗಿದೆ. ವೊಲ್ವೊ ಕಂಪನಿಯು ಕೂಡಾ ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, 2022ರಿಂದ ಇನ್ನುಳಿದ ಕಾರು ಮಾದರಿಗಳಲ್ಲೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ಹೈಬ್ರಿಡ್ ಎಂಜಿನ್ ವಾಹನ ಉತ್ಪಾದನೆಯಲ್ಲಿ ಈಗಾಗಲೇ ಮುಂಚೂಣಿ ಹೊಂದಿರುವ ವೊಲ್ವೊ ಕಂಪನಿಯು 2023ರ ವೇಳೆಗೆ ಒಟ್ಟು 6 ಕಾರು ಮಾದರಿಗಳನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾರಾಟಮಾಡುವ ಗುರಿಹೊಂದಿದ್ದು, ಇದೇ ವರ್ಷದ ಮಧ್ಯಂತರದಲ್ಲಿ ಭಾರತದಲ್ಲಿ ಮೊದಲ ಇವಿ ಕಾರು ಮಾದರಿಯಾಗಿ ಎಕ್ಸ್‌ಸಿ40 ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆಗಡೆಗೊಳಿಸಲಿದೆ. ಎಕ್ಸ್‌ಸಿ40 ರಿಚಾರ್ಜ್ ಕಾರು ಮಾದರಿಯನ್ನು ಬೆಲ್ಜಿಯಂನಲ್ಲಿರುವ ಘೆಂಟ್‌ ಕಾರು ಉತ್ಪಾದನಾ ಘಟಕದಲ್ಲಿ ನಿರ್ಮಾಣವಾಗುತ್ತಿದ್ದು, ಇದೇ ಘಟಕದಿಂದಲೇ ವೊಲ್ವೊ ಕಂಪನಿಯು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತು ಕೈಗೊಳ್ಳಲಿದೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ಈ ಹೊಸ ಕಾರಿನಲ್ಲಿ ಕಂಪನಿಯು 78kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದೆ.ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ ಸೌಲಭ್ಯ ಹೊಂದಿರುವ ಹೊಸ ಕಾರು 408 ಬಿಎಚ್‌ಪಿ ಪವರ್ಮತ್ತು 660 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಎಲೆಕ್ಟ್ರಿಕ್ ಕಾರು ಮಾದರಿಯಲ್ಲೇ ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಅಧಿಕ ಮೈಲೇಜ್ ಪ್ರೇರಣೆ ಪಡೆದುಕೊಂಡಿರುವ ಹೊಸ ಕಾರು ಪ್ರತಿ ಚಾರ್ಜ್‌ಗೆ ಉತ್ತಮ ರೇಂಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಹೊಸ Volvo S90, XC60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಬಿಡುಗಡೆ

ವೊಲ್ವೊ ಮೈಲ್ಡ್-ಹೈಬ್ರಿಡ್ ಎಸ್90 ಮತ್ತು ಎಕ್ಸ್‌ಸಿ60 ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಕಾರುಗಳು ಕಂಪನಿಯ ನಾಕ್ ಡೌನ್ (ಸಿಕೆಡಿ) ಯುನಿಟ್‌ಗಳಂತೆ ಭಾರತದಲ್ಲಿ ಮಾರಾಟವಾಗುತ್ತವೆ. ವೋಲ್ವೋ ಎಕ್ಸ್‌ಸಿ60 ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ, ಬಿಎಂಡಬ್ಲ್ಯು ಎಕ್ಸ್3, ಮುಂಬರುವ ಆಡಿ ಕ್ಯೂ 5 ಫೇಸ್‌ಲಿಫ್ಟ್ ಮತ್ತು ಜಾಗ್ವಾರ್ ಎಫ್-ಪೇಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ವೊಲ್ವೊ volvo
English summary
Volvo launched 2021 s90 xc60 petrol mild hybrid models in india prices details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X