Just In
- 1 hr ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 2 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 3 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 3 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಇನ್ಪೋಟೈನ್ಮೆಂಟ್ ಸಿಸ್ಟಂ ಸೌಲಭ್ಯ ಪಡೆದುಕೊಳ್ಳಲಿವೆ ಫೋಕ್ಸ್ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್!
ಸ್ಕೋಡಾ ಕಂಪನಿಯು ತನ್ನ ಮಾತೃಸಂಸ್ಥೆಯಾದ ಫೋಕ್ಸ್ವ್ಯಾಗನ್ ಜೊತೆಗೂಡಿ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ತನ್ನ ಹೊಚ್ಚ ಹೊಸ ಕುಶಾಕ್ ಕಂಪ್ಯಾಕ್ಟ್ ಎಸ್ಯುವಿ ಕಾರು ಮಾದರಿಯನ್ನು ಅನಾವರಣಗೊಳಿಸಿ ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರು ಫೋಕ್ಸ್ವ್ಯಾಗನ್ ಕಂಪನಿಯ ಹೊಸ ಟೈಗನ್ ಮಾದರಿಯೊಂದಿಗೆ ಹಲವಾರು ತಾಂತ್ರಿಕ ಅಂಶಗಳನ್ನು ಹಂಚಿಕೊಳ್ಳಲಿವೆ.
ಕುಶಾಕ್ ಮತ್ತು ಟೈಗನ್ ಕಾರುಗಳು ಫೋಕ್ಸ್ವ್ಯಾಗನ್ ಕಂಪನಿಯ ಎಂಕ್ಯೂಬಿ ಎ0 ಪ್ಲ್ಯಾಟ್ಫಾರ್ಮ್ನಲ್ಲಿ ಹೊಸ ಕಾರು ಅಭಿವೃದ್ದಿಗೊಂಡಿದ್ದರೂ ಸಹ ಪ್ರತ್ಯೇಕವಾಗಿ ಮಾರಾಟಗೊಳ್ಳಲಿದ್ದು, ವಿಭಿನ್ನವಾದ ವಿನ್ಯಾಸಗಳ ಮೂಲಕ ತಮ್ಮದೆ ಆದ ಜನಪ್ರಿಯತೆಯೊಂದಿಗೆ ಗ್ರಾಹಕರನ್ನು ಸೆಳೆಯಲಿವೆ. ಹೊಸ ಕಾರು ಮಾದರಿಗಳಿಗಾಗಿ ಫೋಕ್ಸ್ವ್ಯಾಗನ್ ಕಂಪನಿಯು ಹೊಸ ಇನ್ಪೋಟೈನ್ಮೆಂಟ್ ಸಿಸ್ಟಂ ಬಳಕೆ ಮಾಡಲು ನಿರ್ಧರಿಸಿದ್ದು, ಹಲವಾರು ಕನೆಕ್ಟೆಡ್ ಫೀಚರ್ಸ್ ಹೊಂದಿರಲಿದೆ.
ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಸರ್ಪೊಟ್ ಮಾಡುವ 10.1-ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ ಸೌಲಭ್ಯವು ಹಲವಾರು ಕನೆಕ್ಟೆಡ್ ಫೀಚರ್ಸ್ಗಳೊಂದಿಗೆ ಕಾರು ಚಾಲನೆಯನ್ನು ಸುರಕ್ಷಿತಗೊಳಿಸಲಿದ್ದು, ಹೊಸ ಕಾರು ಮಾದರಿಗಳು ಮುಂದಿನ ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿವೆ.
ಹೊಸ ಕಾರು ಮಾದರಿಗಳ ಮೂಲಕ ಫೋಕ್ಸ್ವ್ಯಾಗನ್ ಮತ್ತು ಸ್ಕೋಡಾ ಕಂಪನಿಗಳು ಪ್ರತಿಸ್ಪರ್ಧಿ ಮಾದರಿಗಳಾದ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದ್ದು, ಕಂಪ್ಯಾಕ್ಟ್ ಎಸ್ಯುವಿ ಮಾದರಿಯಲ್ಲೇ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಲಿರುವ ಕುಶಾಕ್ ಮತ್ತು ಟೈಗನ್ ಕಾರುಗಳು ತಾಂತ್ರಿಕವಾಗಿ ಒಂದೇ ಆಗಿದ್ದರೂ ವಿಭಿನ್ನ ವಿನ್ಯಾಸಗಳ ಮೂಲಕ ಭಿನ್ನತೆಯಿಂದ ಗುರುತಿಸಿಕೊಳ್ಳಲಿವೆ.
ವಿಶಾಲವಾದ ಕ್ಯಾಬಿನ್ನೊಂದಿಗೆ ವರ್ಚುವಲ್ ಕಾಕ್ಪಿಟ್ ಹೊಂದಿರುವ ಹೊಸ ಕಾರುಗಳು ಮಲ್ಟಿ ಲೆಯರ್ಡ್ ಡ್ಯಾಶ್ಬೋರ್ಡ್ ಮತ್ತು ವಿವಿಧ ಬಣ್ಣಗಳನ್ನು ಹೊಂದಿರುವ ಆ್ಯಂಬಿಯೆಂಟ್ ಲೈಟಿಂಗ್ಸ್, ಆರಾಮದಾಯಕ ವೆಂಟೆಲೆಟೆಡ್ ಆಸನಗಳು, ಸೆಂಟರ್ ಕನ್ಸೊಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಮಲ್ಟಿ ಫಂಕ್ಷನಲ್ ಸ್ಟಿರಿಂಗ್ ವೀಲ್ಹ್ ಹೊಂದಿದ್ದು, ಎಲೆಕ್ಟ್ರಿಕ್ ಸನ್ರೂಫ್, ಸಿ ಫೋರ್ಟ್ ವೈರ್ಲೆಸ್ ಚಾರ್ಜರ್ ಸೌಲಭ್ಯ ಸೇರಿದಂತೆ ಸುರಕ್ಷತೆಗಾಗಿ ಬೆಸ್ ವೆರಿಯೆಂಟ್ನಲ್ಲಿ 4 ಏರ್ಬ್ಯಾಗ್, ಟಾಪ್ ಎಂಡ್ ಮಾದರಿಯಲ್ಲಿ 6 ಏರ್ಬ್ಯಾಗ್ ಸೌಲಭ್ಯಗಳಿವೆ.
ಹಾಗೆಯೇ ಟಾಪ್ ಎಂಡ್ ಮಾದರಿಗಳಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಮಲ್ಟಿ ಕೂಲಿಷನ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್ಗಳಿವೆ.
ಸ್ಕೋಡಾ ಕಂಪನಿಯು ಹೊಸ ಕುಶಾಕ್ ಕಾರಿನಲ್ಲಿ 1.-0-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಆರಂಭಿಕ ಆವೃತ್ತಿಯು 113-ಬಿಎಚ್ಪಿ, 175-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಹೈ ಎಂಡ್ ಮಾದರಿಯು 148-ಬಿಎಚ್ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!
ಟೈಗನ್ ಹೊಸ ಕಾರಿನಲ್ಲಿ ಪೊಲೊ ಹ್ಯಾಚ್ಬ್ಯಾಕ್ನಲ್ಲಿ ಬಳಕೆ ಮಾಡಲಾಗಿರುವ 108-ಬಿಎಚ್ಪಿ ಸಾಮರ್ಥ್ಯದ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 148-ಬಿಎಚ್ಪಿ ಸಾಮರ್ಥ್ಯದ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಟೈಗನ್ನಲ್ಲಿ ಜೋಡಿಸಲಾಗಿದೆ.
ಸ್ಕೋಡಾ ಕಂಪನಿಯು ಫೋಕ್ಸ್ವ್ಯಾಗನ್ ಟೈಗನ್ ಮಾದರಿಗಿಂತಲೂ ತುಸು ವಿಭಿನ್ನವಾಗಿ ಗುರುತಿಸಲು ಕೆಲವು ಐಷಾರಾಮಿ ಫೀಚರ್ಸ್ಗಳನ್ನು ಸೇರ್ಪಡೆ ಮಾಡಿದ್ದು, ಟೈಗನ್ ಕಾರಿಗಿಂತಲೂ ಕುಶಾಕ್ ಕಾರು ತುಸು ದುಬಾರಿಯಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!
ಟೈಗನ್ ಕಂಪ್ಯಾಕ್ಟ್ ಎಸ್ಯುವಿ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಜನಪಪ್ರಿಯವಾಗಿರುವ ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್ಯುವಿ300, ಟಾಟಾ ನೆಕ್ಸಾನ್ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದರೆ ಸ್ಕೋಡಾ ಕುಶಾಕ್ ಕಾರು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಉತ್ತಮ ಪೈಪೋಟಿ ನೀಡಲಿದ್ದರೆ ಹೊಸ ಟೈಗನ್ ಬೆಲೆಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 9.50 ಲಕ್ಷದಿಂದ ರೂ .14 ಲಕ್ಷ ಮತ್ತು ಸ್ಕೋಡಾ ಕುಶಾಕ್ ಕಾರು ರೂ.11.50 ಲಕ್ಷದಿಂದ ರೂ.16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಬಹುದೆಂದು ನೀರಿಕ್ಷಿಸಲಾಗಿದೆ.