ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು ಟೇಕ್ ಆಫ್ ಆಗಿರೂವ ಬಗ್ಗೆ ವರದಿಯಾಗಿದೆ. ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಬಳಕೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಪರೀಕ್ಷೆಗೊಳಪಡಿಸಲಾಗಿದೆ.

ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ಅಲಡಾ ಏರ್‌ಸ್ಪೀಡರ್ ಎಂಕೆ 3 ಎಂಬ ಹೆಸರಿನ ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು ಮುಂದಿನ ವರ್ಷದ ವೇಳೆಗೆ ಬಳಕೆಗೆ ಬರುವ ನಿರೀಕ್ಷೆಗಳಿವೆ. ಈ ಕಾರು ನಾಲ್ಕು ಮೀಟರ್ ಉದ್ದ ಹೊಂದಿರುವ ಮಲ್ಟಿ-ಕಾಪ್ಟರ್ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಆಗಿದೆ.

ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರನ್ನು ಆಸ್ಟ್ರೇಲಿಯಾದ ವಿಮಾನಯಾನ ಪ್ರಾಧಿಕಾರದ ಅನುಮೋದನೆಯೊಂದಿಗೆ ದಕ್ಷಿಣ ಆಸ್ಟ್ರೇಲಿಯಾದ ಡೈರಿ ಫಾರೆಸ್ಟ್‌ನಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಕಾರು ಟೇಕಾಫ್ ಆಗಿ ಸುರಕ್ಷಿತವಾಗಿ ಇಳಿದಿದೆ.

ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ಈ ಪರೀಕ್ಷಾರ್ಥ ಚಾಲನೆಯ ಯಶಸ್ಸಿನ ನಂತರ, ಶೀಘ್ರದಲ್ಲೇ ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರನ್ನು ಬಳಕೆಗೆ ತರಲು ಉತ್ಪಾದನಾ ಕಂಪನಿಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು 130 ಕೆ.ಜಿ ತೂಕವನ್ನು ಹೊಂದಿದೆ.

ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ಈ ಕಾರ್ ಅನ್ನು ಹೆಚ್ಚು ವೇಗ ಹಾಗೂ ಹೆಚ್ಚುವರಿ ಶ್ರೇಣಿ ತಲುಪುವ ರೀತಿಯಲ್ಲಿ ಹಗುರವಾಗಿ ವಿನ್ಯಾಸಗೊಳಿಸಲಾಗಿದೆ. ಕಂಪನಿಯು ಹೆಚ್ಚಿನ ವೇಗದಲ್ಲಿ ಹಾರಾಡಲುಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರನ್ನು ಎಫ್ 1 ಸ್ಪೋರ್ಟ್ಸ್ ಕಾರ್ ರೂಪದಲ್ಲಿ ಅಭಿವೃದ್ಧಿಪಡಿಸಿದೆ.

ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು ಪ್ರತಿ ಗಂಟೆಗೆ 150 ಕಿ.ಮೀನಿಂದ 250 ಕಿ.ಮೀ ವೇಗದಲ್ಲಿ ಹಾರಬಲ್ಲದು. ಈ ಫ್ಲೈಯಿಂಗ್ ಕಾರನ್ನು ವಿಮಾನದ ಕಾಕ್‌ಪಿಟ್ ಭಾಗದೊಂದಿಗೆ ನಿರ್ಮಿಸಲಾಗಿದೆ.

ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರನ್ನು ಪರಿಶೋಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರನ್ನು ಟೆಲಿರೋಬ್‌ಗಳು ಹಾರಿಸುತ್ತಿವೆ. ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರಿನಲ್ಲಿ ಮನುಷ್ಯರು ಕುಳಿತು ಪ್ರಯಾಣಿಸುವ ಸಾಧ್ಯತೆಗಳು ಹೆಚ್ಚು.

ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ಕಂಪನಿಯು ಸದ್ಯಕ್ಕೆ ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಿಲ್ಲ. ಈ ಕಾರಿನಲ್ಲಿ ರೋಬಾಟ್ ಅನ್ನು ಕಾಕ್‌ಪಿಟ್‌ನಲ್ಲಿ ನಿಲ್ಲಿಸಲಾಗಿದೆ. ಅದನ್ನು ನೆಲದ ಮೇಲೆ ಪೈಲಟ್‌ಗೆ ಜೋಡಿಸಲಾಗಿದೆ. ಪೈಲಟ್ ತಲೆ ತಿರುಗಿಸಿದಾಗ ರೋಬೋಟ್ ಕೂಡ ತನ್ನ ತಲೆಯನ್ನು ತಿರುಗಿಸುತ್ತದೆ ಎಂದು ಕಂಪನಿ ಹೇಳಿದೆ.

ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರನ್ನು 15 ನಿಮಿಷಗಳ ಲಿಥಿಯಂ ಪಾಲಿಮರ್ ಬ್ಯಾಟರಿಯೊಂದಿಗೆ ಪರೀಕ್ಷಿಸಲಾಗುತ್ತಿದೆ. ಬಳಕೆಗೆ ಬಂದ ನಂತರ ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು ಓಲಾ ಹಾಗೂ ಉಬರ್‌ನಂತಹ ರೈಡ್-ಶೇರಿಂಗ್ ಕಂಪನಿಗಳ ಅಡಿಯಲ್ಲಿ ಬರಲಿದೆ ಎಂದು ಕಂಪನಿ ಹೇಳಿದೆ.

ಯಶಸ್ವಿಯಾಗಿ ಟೇಕ್ ಆಫ್ ಆದ ವಿಶ್ವದ ಮೊದಲ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರು

ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರುಗಳು ಶೀಘ್ರದಲ್ಲೇ ಬಳಕೆಗೆ ಬರುವುದು ಖಚಿತ. ಇದಕ್ಕೆ ಸಾಕ್ಷಿಯಾಗಿರುವುದೇ ಆಸ್ಟ್ರೇಲಿಯಾದಲ್ಲಿ ಈಗ ನಡೆಯುತ್ತಿರುವ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರಿನ ಪರೀಕ್ಷಾರ್ಥ ಹಾರಾಟ.

Most Read Articles

Kannada
English summary
World's first electric flying car takes off in Australia. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X