ಶಾಂಘೈ ಆಟೋ ಶೋದಲ್ಲಿ ಹಾರುವ ವಾಹನ ಪ್ರದರ್ಶಿಸಿದ ಎಕ್ಸ್‌ಪೆಂಗ್

ಸಾಮಾನ್ಯವಾಗಿ ಆಟೋ ಶೋಗಳಲ್ಲಿ ಹೊಸ ವಾಹನಗಳನ್ನು ಹಾಗೂ ಕಾನ್ಸೆಪ್ಟ್ ವಾಹನಗಳನ್ನು ಪ್ರದರ್ಶಿಸಲಾಗುತ್ತದೆ. ಈ ವಾಹನಗಳು ಸಹಜವಾಗಿಯೇ ಗ್ರಾಹಕರನ್ನು ತಮ್ಮತ್ತ ಆಕರ್ಷಿಸುತ್ತವೆ.

ಶಾಂಘೈ ಆಟೋ ಶೋದಲ್ಲಿ ಹಾರುವ ವಾಹನ ಪ್ರದರ್ಶಿಸಿದ ಎಕ್ಸ್‌ಪೆಂಗ್

ಹೀಗೆ ಪ್ರದರ್ಶನಗೊಳ್ಳುವ ವಾಹನಗಳು ವಿಭಿನ್ನವಾಗಿದ್ದರೆ ಆ ವಾಹನಗಳು ಆ ಶೋದಲ್ಲಿ ಮುಂಚೂಣಿಯಲ್ಲಿರುತ್ತವೆ. ನಿನ್ನೆಯಿಂದ ಚೀನಾದ ಶಾಂಘೈನಲ್ಲಿ ಆರಂಭವಾಗಿರುವ ಆಟೋ ಶೋದಲ್ಲಿಯೂ ವಿಭಿನ್ನ ವಾಹನವೊಂದು ಪ್ರದರ್ಶನಗೊಂಡಿದೆ.

ಶಾಂಘೈ ಆಟೋ ಶೋದಲ್ಲಿ ಹಾರುವ ವಾಹನ ಪ್ರದರ್ಶಿಸಿದ ಎಕ್ಸ್‌ಪೆಂಗ್

ಶಾಂಘೈ ಆಟೋ ಪ್ರದರ್ಶನವು ನಿನ್ನೆಯಿಂದ ಅಧಿಕೃತವಾಗಿ ಆರಂಭವಾಗಿದೆ. ಇದಕ್ಕೂ ಮುನ್ನ ಏಪ್ರಿಲ್ 19 ಹಾಗೂ 20 ರಂದು ಪತ್ರಕರ್ತರಿಗೆ ಅವಕಾಶ ನೀಡಲಾಗಿತ್ತು. ಈ ಆಟೋ ಶೋದಲ್ಲಿ ಎಕ್ಸ್‌ಪೆಂಗ್ ಹೆಸರಿನ ಹಾರುವ ವಾಹನವನ್ನು ಪ್ರದರ್ಶನಕ್ಕಿಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಶಾಂಘೈ ಆಟೋ ಶೋದಲ್ಲಿ ಹಾರುವ ವಾಹನ ಪ್ರದರ್ಶಿಸಿದ ಎಕ್ಸ್‌ಪೆಂಗ್

ಆಟೋ ಶೋಗಳಲ್ಲಿ ಹಾರುವ ವಾಹನಗಳನ್ನು ಪ್ರದರ್ಶನಕ್ಕೆ ಇಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ ವರ್ಷ ಬೀಜಿಂಗ್ ಆಟೋ ಶೋದಲ್ಲಿ ಹಾರುವ ವಾಹನದ ಮಾದರಿಯೊಂದನ್ನು ಪ್ರದರ್ಶನಕ್ಕಿಡಲಾಗಿತ್ತು.

ಶಾಂಘೈ ಆಟೋ ಶೋದಲ್ಲಿ ಹಾರುವ ವಾಹನ ಪ್ರದರ್ಶಿಸಿದ ಎಕ್ಸ್‌ಪೆಂಗ್

ಎಕ್ಸ್‌ಪೆಂಗ್ ಹಾರುವ ವಾಹನವನ್ನು ಎಕ್ಸ್‌ಪೆಂಗ್ ಹೈಟೆಕ್ ಕಂಪನಿಯು ವಿನ್ಯಾಸಗೊಳಿಸಿದೆ. ಎಕ್ಸ್‌ಪೆಂಗ್ ವಾಹನವು 5 ಮೀಟರ್‌ನಿಂದ 25 ಮೀಟರ್'ವರೆಗೂ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಾಹನದಲ್ಲಿ ಇಬ್ಬರು ಕುಳಿತುಕೊಳ್ಳಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಶಾಂಘೈ ಆಟೋ ಶೋದಲ್ಲಿ ಹಾರುವ ವಾಹನ ಪ್ರದರ್ಶಿಸಿದ ಎಕ್ಸ್‌ಪೆಂಗ್

ಈ ಎಕ್ಸ್‌ಪೆಂಗ್ ವಾಹನದಲ್ಲಿ 8 ಟರ್ಬೊ ಫ್ಯಾನ್'ಗಳನ್ನು ಅಳವಡಿಸಲಾಗಿದೆ. ಈ ವಾಹನವು ಭವಿಷ್ಯದ ನಗರ ಸಾರಿಗೆಗೆ ಅಗತ್ಯವಿರುವ ಎಲ್ಲಾ ಫೀಚರ್'ಗಳನ್ನು ಹೊಂದಿದೆ. ಎಕ್ಸ್‌ಪೆಂಗ್ ವಾಹನವನ್ನು ಸುಮಾರು 10,000 ಬಾರಿ ಭದ್ರತಾ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ.

ಶಾಂಘೈ ಆಟೋ ಶೋದಲ್ಲಿ ಹಾರುವ ವಾಹನ ಪ್ರದರ್ಶಿಸಿದ ಎಕ್ಸ್‌ಪೆಂಗ್

ಈ ವಾಹನವು ಎಷ್ಟು ವೇಗವಾಗಿ ಸಾಗುತ್ತದೆ. ಹಾಗೂ ಈ ವಾಹನದಲ್ಲಿ ಯಾವ ಸುರಕ್ಷತಾ ಫೀಚರ್'ಗಳನ್ನು ಅಳವಡಿಸಲಾಗಿದೆ ಎಂಬ ಬಗೆ ಯಾವುದೇ ಮಾಹಿತಿ ನೀಡಿಲ್ಲ. ಎಕ್ಸ್‌ಪೆಂಗ್ ಹೈಟೆಕ್ ಕಂಪನಿಯು ಈ ವಾಹನವನ್ನು ಹೆಚ್ಚು ಪ್ರೊಸೆಸ್ ಫ್ರೆಂಡ್ಲಿಯಾಗಿಸಲು ಪ್ರಯತ್ನಿಸುತ್ತಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಶಾಂಘೈ ಆಟೋ ಶೋದಲ್ಲಿ ಹಾರುವ ವಾಹನ ಪ್ರದರ್ಶಿಸಿದ ಎಕ್ಸ್‌ಪೆಂಗ್

ದೈನಂದಿನ ಸಾರಿಗೆಗೆ ಹಾರುವ ವಾಹನಗಳನ್ನು ಬಳಸುವ ವಾತಾವರಣವು ಸೃಷ್ಟಿಯಾಗಲು ಇನ್ನೂ ಹಲವಾರು ವರ್ಷಗಳು ಬೇಕಾಗಬಹುದು. ಇದಕ್ಕೂ ಮುನ್ನ ಈ ವಾಹನಗಳ ಹಾರಾಟಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ.

ಶಾಂಘೈ ಆಟೋ ಶೋದಲ್ಲಿ ಹಾರುವ ವಾಹನ ಪ್ರದರ್ಶಿಸಿದ ಎಕ್ಸ್‌ಪೆಂಗ್

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಗೆ ಈ ಹಾರುವ ವಾಹನಗಳು ಪರಿಹಾರ ನೀಡಬಲ್ಲವು. ಅದಕ್ಕೂ ಮುನ್ನ ಸಂಬಂಧ ಪಟ್ಟ ದೇಶಗಳು ಹಾಗೂ ಸರ್ಕಾರಗಳು ಈ ವಾಹನಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ.

Most Read Articles

Kannada
English summary
Xpeng flying vehicle showcased at Shanghai auto show. Read in Kannada.
Story first published: Wednesday, April 21, 2021, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X