ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ದೇಶಾದ್ಯಂತ ಹಬ್ಬದ ಋತುವಿನ ಸಂಭ್ರಮ ಹೆಚ್ಚುತ್ತಿದ್ದು, ಹೊಸ ವಾಹನ ಮಾರಾಟವು ಕೂಡಾ ಜೋರಾಗುತ್ತಿದೆ. ಗ್ರಾಹಕರ ಬೇಡಿಕೆ ಆಧರಿಸಿ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಹಲವು ಹೊಸ ವಾಹನಗಳನ್ನು ಬಿಡುಗಡೆ ಮಾಡಿದ್ದು, ಫೋಕ್ಸ್‌ವ್ಯಾಗನ್ ಇಂಡಿಯಾ(Volkswagen India) ಕಂಪನಿಯು ಸಹ ಪೊಲೊ(Polo) ಮತ್ತು ವೆಂಟೊ(Vento) ಮಾದರಿಗಳಲ್ಲಿ ವಿಶೇಷ ಮಾದರಿಯಾಗಿ ಮ್ಯಾಟ್ ಎಡಿಷನ್(Matt Edition) ಬಿಡುಗಡೆ ಮಾಡಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಪ್ರೀಮಿಯಂ ಕಾರು ಮಾದರಿಗಳಾಗಿರುವ ಪೊಲೊ ಮತ್ತು ವೆಂಟೊ ಮ್ಯಾಟ್ ಎಡಿಷನ್ ಮಾದರಿಗಳನ್ನು ಫೋಕ್ಸ್‌ವ್ಯಾಗನ್ ಕಂಪನಿಯು ನಿಗದಿತ ಅವಧಿಯಲ್ಲಿ ಸೀಮಿತ ಸಂಖ್ಯೆಯ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದ್ದು, ಮ್ಯಾಟ್ ಎಡಿಷನ್ ಸ್ಥಗಿತ ನಂತರ ಸ್ಟ್ಯಾಂಡರ್ಡ್ ಮಾದರಿಗಳ ಮಾರಾಟವು ಎಂದಿನಂತೆ ಖರೀದಿಗೆ ಲಭ್ಯವಿರಲಿವೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಹೊಸ ಮ್ಯಾಟ್ ಎಡಿಷನ್‌ಗಳು ಪೊಲೊ ಹ್ಯಾಚ್‌ಬ್ಯಾಕ್ ಕಾರಿನ ಜಿಟಿ ಆವೃತ್ತಿಯಲ್ಲಿ ಖರೀದಿ ಲಭ್ಯವಿದ್ದರೆ ವೆಂಟೊ ಕಾರಿನ ಹೈ ಲೈನ್ ಮಾದರಿಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.34 ಲಕ್ಷ ಬೆಲೆ ಹೊಂದಿವೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಪೊಲೊ ಮ್ಯಾಟ್ ಎಡಿಷನ್ ಮಾದರಿಯಲ್ಲಿ ಕೇವಲ ಒಂದೇ ಮಾದರಿಯೊಂದಿಗೆ ರೂ. 9.99 ಲಕ್ಷ ಬೆಲೆ ಹೊಂದಿದ್ದರೆ ವೆಂಟೊ ಕಾರಿನಲ್ಲಿ ಹೈ ಲೈನ್ ಮಾದರಿಯ ಮ್ಯಾಟ್ ಎಡಿಷನ್ ಆರಂಭಿಕವಾಗಿ ರೂ.11.94 ಲಕ್ಷದಿಂದ ಹೈ ಎಂಡ್ ಮಾದರಿಯು ರೂ. 13.34 ಲಕ್ಷ ಬೆಲೆ ಹೊಂದಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಮ್ಯಾಟ್ ಎಡಿಷನ್ ಕಾರು ಮಾದರಿಗಳು ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫೀಚರ್ಸ್‌ಗಳನ್ನು ಹೊಂದಿದ್ದು, ಸ್ಪೆಷಲ್ ಎಡಿಷನ್‌ನಲ್ಲಿ ಹೆಚ್ಚುವರಿಯಾಗಿ ಕಾರ್ಬನ್ ಸ್ಟೀಲ್ ಮ್ಯಾಟ್ ಶೇಡ್ ಬಣ್ಣದ ಆಯ್ಕೆ ನೀಡಲಾಗಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಹೊಸ ಕಾರಿನ ಹೊರಮೈ ಜೊತೆಗೆ ಫ್ರಂಟ್ ಗ್ರಿಲ್, ಲಿಪ್ ಸ್ಪಾಯ್ಲರ್, ಬಾಡಿ ಮೊಲ್ಡಿಂಗ್, ರಿಯರ್ ಡಿಫ್ಯೂಸರ್, ಟೈಲ್‌ಗೇಟ್ ಸ್ಪಾಯ್ಲರ್, ಟ್ರಕ್ ಲಿಪ್ ಗಾರ್ನಿಶ್‌ನಲ್ಲಿ ಗ್ಲಾಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ನೀಡಲಾಗಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಹೊಸ ಪೊಲೊ ಮತ್ತು ವೆಂಟೊ ಮ್ಯಾಟ್ ಎಡಿಷನ್ ಮಾದರಿಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಟೆಲ್ಲರ್ ಗ್ರೇ ಮತ್ತು ಬ್ಲ್ಯಾಕ್ ಬಣ್ಣದ ಡ್ಯುಯಲ್ ಟೋನ್ ಇಂಟಿರಿಯಲ್ ಬಣ್ಣದ ಆಯ್ಕೆ ನೀಡಿದ್ದು, ಲೆದರ್ ಆಸನಗಳಲ್ಲಿ ಆಕ್ಲಾಂಟರ್ ಇನ್ಸರ್ಟರ್ ನೀಡಲಾಗಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಜೊತೆಗೆ ಸ್ಪೆಷಲ್ ಎಡಿಷನ್ ಮಾದರಿಗಾಗಿ ಕಂಪನಿಯು ಹೆಚ್ಚುವರಿ ಫಾರ್ ಎವರ್ ಕಾರ್ ಕೇರ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಲ್ಲಿ ಹೊಸ ಕಾರಿನ ಮೇಲೆ 4 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ, 4 ವರ್ಷಗಳ ರೋಡ್ ಸೈಡ್ ಅಸಿಸ್ಟ್ ಮತ್ತು ಸ್ಟ್ಯಾಂಡರ್ಡ್ ಆಗಿರುವ ಮೂರು ಉಚಿತ ಕಾರು ಸರ್ವಿಸ್‌ಗಳನ್ನು ನೀಡುತ್ತದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಇದರೊಂದಿಗೆ ಹೊಸ ಕಾರು ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ತಾಂತ್ರಿಕ ಸೌಲಭ್ಯಗಳು, ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ದೇಶಾದ್ಯಂತ ಲಭ್ಯವಿರುವ ಫೋಕ್ಸ್‌ವ್ಯಾಗನ್ ಅಧಿಕೃತ ಡೀಲರ್ಸ್‌ಗಳಲ್ಲಿ ಮ್ಯಾಟ್ ಎಡಿಷನ್ ಕಾರುಗಳು ಖರೀದಿಗೆ ಲಭ್ಯವಿವೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಇನ್ನು ಫೋಕ್ಸ್‌ವ್ಯಾಗನ್ ವೆಂಟೊ ಕಾರು ಕಂಫರ್ಟ್‌ಲೈನ್, ಹೈಲೈನ್ ಮತ್ತು ಹೈಲೈನ್ ಪ್ಲಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, ಪೊಲೊ ಮತ್ತು ವೆಂಟೊ ಕಾರುಗಳಲ್ಲಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಹೊಸ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನ್ಯುವಲ್ ಗೇರ್‍‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇದರಲ್ಲಿ 6 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಸಹ ನೀಡಲಾಗಿದ್ದು, ಈ ಮೂಲಕ ಪ್ರತಿ ಲೀಟರ್‌ಗೆ 18.24 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಿರುವ Polo ಮತ್ತು Vento Matt Edition ವಿಶೇಷತೆಗಳೇನು?

ಹೊಸ 1.0 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಹೆಚ್ಚಿನ ಪವರ್ ಡ್ರೈವಿಬಿಲಿಟಿ, ಉತ್ತಮ ಕಾರ್ಯಕ್ಷಮತೆ, ಸುಧಾರಿತ ಇಂಧನ ದಕ್ಷತೆಯನ್ನು ಮತ್ತು ಹೆಚ್ಚು ಸಮರ್ಥನೀಯ ಎಂಜಿನ್ ಎಂದು ಜನಪ್ರಿಯತೆಯನ್ನು ಗಳಿಸುತ್ತಿದ್ದು, ವೆಂಟೊ ಕಾರಿನಲ್ಲೂ ಟಿ‍ಎಸ್‍ಐ ಎಂಜಿನ್ ಆಯ್ಕೆ ಉತ್ತಮ ಬೇಡಿಕೆ ತಂದುಕೊಡುತ್ತಿದೆ.

Most Read Articles

Kannada
English summary
You should know about volkswagen polo and vento matt edition
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X