ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಸ್ಕೋಡಾ ಕುಶಾಕ್ ಎಸ್‌ಯುವಿಯು ಜೂನ್ 28ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಸ್ಕೋಡಾದ ಹೊಸ ಎಸ್‌ಯುವಿ ಬಿಡುಗಡೆಯ ಬಗ್ಗೆ ತಿಳಿಯಲು ಗ್ರಾಹಕರು ಉತ್ಸುಕರಾಗಿದ್ದಾರೆ. ಹೊಸ ಸ್ಕೋಡಾ ಕುಶಾಕ್ ಎಸ್‌ಯುವಿಯ ವಿತರಣೆಯನ್ನು ಆಗಸ್ಟ್ ತಿಂಗಳಿನಲ್ಲಿ ಆರಂಭಿಸಲಾಗುವುದು.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಈ ಬಗ್ಗೆ ಕಂಪನಿಯ ಭಾರತೀಯ ನಿರ್ದೇಶಕ ಜಾಕ್ ಹೋಲಿಸ್ ಟ್ವಿಟರ್'ನಲ್ಲಿ ಮಾಹಿತಿ ನೀಡಿದ್ದಾರೆ. ಟ್ವಿಟರ್‌ನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಜೂನ್ 28ರಂದು ಸ್ಕೋಡಾ ಕುಶಾಕ್ ಬೆಲೆಯನ್ನು ಪ್ರಕಟಿಸಲಾಗುವುದು. ಆಗಸ್ಟ್ ಆರಂಭದಿಂದ ಕಾರನ್ನು ಮಾರಾಟಗಾರರಿಗೆ ರವಾನಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಮಾರಾಟಗಾರರಿಗೆ ಕಾರುಗಳನ್ನು ರವಾನಿಸಿದ ನಂತರ ಅಂದರೆ ಆಗಸ್ಟ್ ಮೊದಲ ವಾರದಿಂದ ಕಾರಿನ ವಿತರಣೆಯನ್ನು ಆರಂಭಿಸಲಾಗುವುದು. ಜೂನ್ 28ರಿಂದ ಕಾರಿನ ಬುಕ್ಕಿಂಗ್ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಸ್ಕೋಡಾ ಕುಶಾಕ್ ಎಸ್‌ಯುವಿಯನ್ನು ಎಂಕ್ಯೂಎಒ -ಇನ್ ಪ್ಲಾಟ್‌ಫಾರಂನಲ್ಲಿ ಉತ್ಪಾದಿಸಲಾಗಿದೆ. ಈ ಪ್ಲಾಟ್‌ಫಾರಂ ಕಂಪನಿಯ ಗ್ಲೋಬಲ್ ಎಂಕ್ಯೂಎಒ ಪ್ಲಾಟ್‌ಫಾರಂನ ಭಾರತೀಯ ಆವೃತ್ತಿಯಾಗಿದೆ.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಕುಶಾಕ್ ಎಸ್‌ಯುವಿಯ ಉತ್ಪಾದನೆಯಲ್ಲಿ ಸ್ಕೋಡಾ 95%ನಷ್ಟು ಸ್ಥಳೀಕರಣವನ್ನು ಅಳವಡಿಸಿಕೊಂಡಿದೆ. ಭವಿಷ್ಯದಲ್ಲಿ ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲುನಿರ್ಧರಿಸಲಾಗಿದೆ. ಸ್ಕೋಡಾ ಕುಶಾಕ್ ಎಸ್‌ಯುವಿಯ ಮುಂಭಾಗದಲ್ಲಿ ದೊಡ್ಡ ಗಾತ್ರದ ಗ್ರಿಲ್ ನೀಡಲಾಗಿದೆ.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಕುಶಾಕ್ ಎಸ್‌ಯುವಿಯಲ್ಲಿ ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಫಾಗ್ ಲ್ಯಾಂಪ್, ಎಲ್ಇಡಿ ಟೇಲ್ ಲೈಟ್'ಗಳಿವೆ. ಇದರ ಜೊತೆಗೆ ಈ ಎಸ್‌ಯುವಿಯ ಮುಂಭಾಗದಲ್ಲಿ ದೊಡ್ಡ ಏರ್ ಡ್ಯಾಮ್ ಹಾಗೂ ನೇರವಾದ ಬಾನೆಟ್ ನೀಡಲಾಗಿದೆ.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಇನ್ನು ಈ ಎಸ್‌ಯುವಿಯ ಹಿಂಭಾಗದಲ್ಲಿ ಇನ್ವರ್ಟೆಡ್ ಎಲ್ ಶೇಪಿನ ಎಲ್ಇಡಿ ಟೇಲ್ ಲೈಟ್, ಮೇಲ್ಭಾಗದಲ್ಲಿ ಸ್ಟಾಪ್ ಲೈಟ್ ನೀಡಲಾಗಿದೆ. ಇವುಗಳ ಜೊತೆಗೆ ಶಾರ್ಕ್ ಫಿನ್ ಆಂಟೆನಾ, ರೇರ್ ವೈಪರ್ ಹಾಗೂ ದೊಡ್ಡ ರೇರ್ ಬಂಪರ್ ನೀಡಲಾಗಿದೆ.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಸ್ಕೋಡಾ ಕುಶಾಕ್ ಎಸ್‌ಯುವಿಯಲ್ಲಿ ಅಲಾಯ್ ವ್ಹೀಲ್, ರೂಫ್ ರೇಲ್, ಸನ್‌ರೂಫ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ. ಸ್ಕೋಡಾ ಕುಶಾಕ್‌ನಲ್ಲಿ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಇವುಗಳಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್, ಇಎಸ್‌ಸಿ, ಹಿಲ್-ಹೋಲ್ಡ್ ಕಂಟ್ರೋಲ್, ರೇನ್ ಹಾಗೂ ಲೈಟ್ ಸೆನ್ಸಾರ್, ಕ್ರೂಸ್ ಕಂಟ್ರೋಲ್ ಹಾಗೂ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನಂತಹ ಫೀಚರ್'ಗಳು ಸೇರಿವೆ.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಸ್ಕೋಡಾ ಕುಶಾಕ್ ಎಸ್‌ಯುವಿಯನ್ನು ಎರಡು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು. ಮೊದಲ ಎಂಜಿನ್ 1.0-ಲೀಟರ್ ಮೂರು ಸಿಲಿಂಡರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಗಿರಲಿದೆ. ಈ ಎಂಜಿನ್ 110 ಬಿಹೆಚ್‌ಪಿ ಪವರ್ ಹಾಗೂ 175 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಕೋಡಾ ಕುಶಾಕ್ ಎಸ್‌ಯುವಿ ವಿತರಣೆ ಬಗ್ಗೆ ಮಾಹಿತಿ ನೀಡಿದ ಕಂಪನಿ ನಿರ್ದೇಶಕ

ಇನ್ನು ಎರಡನೇ ಎಂಜಿನ್ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಗಿದ್ದು, 150 ಬಿಹೆಚ್‌ಪಿ ಪವರ್ ಹಾಗೂ 250 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರನ್ನು 6-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Zac Hollis tweets about Skoda Kushaq delivery. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X