ಮಹೀಂದ್ರಾ ಕಂಪನಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ವೇಗವಾಗಿ ಬೇಡಿಕೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ದೇಶದ ಬಹುತೇಕ ನಗರಗಳಲ್ಲಿ ಕಂಡು ಬರುತ್ತವೆ. ಇತ್ತೀಚೆಗೆ, Zoho ಕಂಪನಿಯ ಸಿಇಒ ಶ್ರೀಧರ್ ವೆಂಬು ಭಾನುವಾರ ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಸ್ವತಃ ತಾವೇ ಚಾಲನೆ ಮಾಡಿದ್ದಾರೆ. ಅವರು ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಚಾಲನೆ ಮಾಡುತ್ತಿರುವ ಕೆಲವು ಚಿತ್ರಗಳನ್ನು ಅವರ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಬಿಲಿಯನೇರ್ ಉದ್ಯಮಿಯಾದ Zoho ಸಿಇಒ ಶ್ರೀಧರ್ ವೆಂಬು ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಪ್ರಾಯೋಗಿಕ ಪ್ರಯಾಣದ ವಾಹನವೆಂದು ಬಣ್ಣಿಸಿದ್ದಾರೆ. ಈ ವಾಹನವನ್ನು ತಮ್ಮ ಸಮೀಪದಲ್ಲಿ ಚಾಲನೆ ಮಾಡಲು ಇಷ್ಟಪಡುವುದಾಗಿ ಅವರು ಹೇಳಿದ್ದಾರೆ. ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಚಾಲನೆ ಮಾಡಿದ ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ಅದರ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಈ ಪೋಸ್ಟ್'ಗೆ ಅವರು ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಎಲೆಕ್ಟ್ರಿಕ್ ವಾಹನದ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಿರುವ ಅವರು, ಈ ಎಲೆಕ್ಟ್ರಿಕ್ ಆಟೋ ರಿಕ್ಷಾವು ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಹಾಗೂ ಪೂರ್ತಿಯಾಗಿ ಚಾರ್ಜ್ ಆದ ನಂತರ 125 ಕಿ.ಮೀ ವ್ಯಾಪ್ತಿ ನೀಡುತ್ತದೆ ಎಂದು ಹೇಳಿದ್ದಾರೆ. ರೂ. 3.5 ಲಕ್ಷಕ್ಕಿಂತ ಕಡಿಮೆ ವೆಚ್ಚದ ಮಹೀಂದ್ರ ಟ್ರಿಯೊ ಎಲೆಕ್ಟ್ರಿಕ್ ಆಟೋರಿಕ್ಷಾ ಕೈಗೆಟುಕುವ ಕುಟುಂಬ ವಾಹನವಾಗಿದೆ ಎಂದು ವೆಂಬು ಹೇಳಿದ್ದಾರೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಅದರ ಪ್ರಮಾಣದೊಂದಿಗೆ ಬೆಲೆಯೂ ಕಡಿಮೆಯಾಗಬಹುದು ಎಂದು ಅವರು ಹೇಳಿದ್ದಾರೆ. ಈ ವಾಹನದ ವಿನ್ಯಾಸವು ಅದನ್ನು ಉತ್ತಮ ವಾಹನವನ್ನಾಗಿ ಮಾಡಬಹುದು. ನಾನು ನನ್ನ ಆಟೋವನ್ನು ಗ್ರಾಮೀಣ ರಸ್ತೆಗಳಲ್ಲಿ ಚಾಲನೆ ಮಾಡಿದಾಗ, ಅದನ್ನು ಎಲ್ಲಿ ಖರೀದಿಸಬೇಕೆಂದು ಜನರು ನನ್ನನ್ನು ಕೇಳಿದರು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಝೋಹೋ ಮುಖ್ಯಸ್ಥರು ಆನಂದ್ ಮಹೀಂದ್ರಾಗೆ ಮನವಿಯನ್ನು ಸಹ ಮಾಡಿದ್ದಾರೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಕುಟುಂಬ ಹಾಗೂ ಮಕ್ಕಳ ಸ್ನೇಹಿ ಆಯ್ಕೆಗಳೊಂದಿಗೆ ತ್ರಿಚಕ್ರ ವಾಹನವನ್ನು ವಿವಿಧ ವಿನ್ಯಾಸ ಹಾಗೂ ಬಣ್ಣಗಳಲ್ಲಿ ನೀಡಬೇಕು ಎಂದು ಅವರು ಆನಂದ್ ಮಹೀಂದ್ರಾರವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಶ್ರೀಧರ್ ವೆಂಬು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದಯವಿಟ್ಟು ಎಲೆಕ್ಟ್ರಿಕ್ ಆಟೋ ಲೈನ್‌ನಲ್ಲಿ ವಿವಿಧ ವಿನ್ಯಾಸಗಳು ಹಾಗೂ ಬಣ್ಣಗಳನ್ನು ಒದಗಿಸಿ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಜೊತೆಗೆ ಕುಟುಂಬ ಹಾಗೂ ಮಕ್ಕಳ ಸ್ನೇಹಿ ಆಯ್ಕೆಗಳನ್ನು ಒದಗಿಸಿ. ಈ ಕಡಿಮೆ ವೆಚ್ಚದ ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸಲು ಉತ್ತಮ ಮಾರುಕಟ್ಟೆ ಪ್ರಚಾರದೊಂದಿಗೆ ಬನ್ನಿ ಎಂದು ಅವರು ಪೋಸ್ಟ್ ಮಾಡಿದ್ದಾರೆ. ನಾನು ಅವರಲ್ಲಿ ಸಾಕಷ್ಟು ಸಾಮರ್ಥ್ಯವನ್ನು ನೋಡುತ್ತೇನೆ. ಇವುಗಳಲ್ಲಿ ಒಂದನ್ನು ಚಾಲನೆ ಮಾಡಲು ನಾನು ಇಷ್ಟಪಡುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಈ ಪೋಸ್ಟ್'ಗೆ ಕೆಲವು ಗಂಟೆಗಳ ನಂತರ ಆನಂದ್ ಮಹೀಂದ್ರಾ ರವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಕಂಪನಿಯ ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಸ್ ಈ ಬಗ್ಗೆ ಕಾರ್ಯನಿರತರಾಗಿದ್ದಾರೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಟ್ವೀಟ್ svembu ಬಗ್ಗೆ ನನಗೆ ಸಂತೋಷವಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಂದ ಹಾಗೆ ಸಂಘಟಿತ ವಲಯದ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ವಿಭಾಗದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಮುಂಚೂಣಿಯಲ್ಲಿದೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಮುಂಬೈ ಮೂಲದ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಗರಿಷ್ಠ ರೂ. 1,000 ಕೋಟಿ ಹೂಡಿಕೆ ಮಾಡಿದೆ. ಇದು ಭಾರತದ ಇತರ ಯಾವುದೇ ಕಂಪನಿಗಳಿಗಿಂತ ಹೆಚ್ಚು. ಮುಂದಿನ ಮೂರು ವರ್ಷಗಳಲ್ಲಿ ಕಂಪನಿಯು ಇವಿ ಮಾರುಕಟ್ಟೆಯಲ್ಲಿ ರೂ. 3,000 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ. ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ಕಾರ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ವರ್ಷ ತನ್ನ eXUV 300 ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾ (ARAI) ಎಲೆಕ್ಟ್ರಿಕ್ ವಾಹನಗಳಿಗಾಗಿ ಫಾಸ್ಟ್ ಚಾರ್ಜರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು ಚಾರ್ಜ್ ಮಾಡಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಚಾರ್ಜರ್‌ಗಳನ್ನು ಅಭಿವೃದ್ಧಿಪಡಿಸುವಂತೆ ARAI ಗೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಮಹೇಂದ್ರ ನಾಥ್ ಪಾಂಡೆ ಹೇಳಿದ್ದಾರೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಈ ಚಾರ್ಜರ್‌ನ ಮೂಲಮಾದರಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಹೊಸ ಉತ್ಪನ್ನವು 2022ರ ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ARAI ಅಭಿವೃದ್ಧಿಪಡಿಸಿರುವ ಹೊಸ ಫಾಸ್ಟ್ ಚಾರ್ಜರ್‌ನ ಬಗ್ಗೆ ಹೆಚ್ಚು ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರ ವಾಹನಗಳ ಚಾರ್ಜಿಂಗ್ ಸಮಯವನ್ನು ಕಡಿಮೆ ಮಾಡಲು ಸಂಶೋಧನೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ARAI ಅಭಿವೃದ್ಧಿಪಡಿಸಿದ ಫಾಸ್ಟ್ ಚಾರ್ಜರ್ ಅನ್ನು ಭಾರತದಾದ್ಯಂತ 70,000 ಪೆಟ್ರೋಲ್ ಬಂಕ್'ಗಳಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ. ಹೆದ್ದಾರಿಗಳಲ್ಲಿ 25 ಕಿ.ಮೀ ಅಂತರದಲ್ಲಿ ಹಾಗೂ ನಗರಗಳಲ್ಲಿ 3 ಕಿ.ಮೀ ಅಂತರದಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು. ಇಲಾಖೆಯ ಈ ಯೋಜನೆಯ ಬಗ್ಗೆ ಉದ್ಯಮದ ಪ್ರಮುಖರಿಗೆ ಸಭೆಯಲ್ಲಿ ಮಾಹಿತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಈ ಸಭೆಯಲ್ಲಿ ಎಂಟು ರಾಜ್ಯಗಳ ಸಾರಿಗೆ ಸಚಿವರು, 19 ರಾಜ್ಯಗಳ ಉನ್ನತ ಅಧಿಕಾರಿಗಳು ಹಾಗೂ ವಾಹನ ಉದ್ಯಮದ ಪ್ರಮುಖರು ಭಾಗವಹಿಸಿದ್ದರು. ಈ ಸಭೆಯಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಹಾಗೂ ಹೂಡಿಕೆಗಳನ್ನು ಆಕರ್ಷಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಲಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲನೆ ಮಾಡಿದ Zoho ಕಂಪನಿ ಸಿಇಒ

ಇದಕ್ಕಾಗಿ ದೇಶದ 70 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಯೋಜನೆ ಸಿದ್ಧಪಡಿಸಲಾಗಿದೆ. ಚಾರ್ಜಿಂಗ್ ಕೇಂದ್ರಗಳನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ ಮೆಟ್ರೋ ನಗರಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗುತ್ತದೆ. ಈ ಯೋಜನೆ ಯಶಸ್ವಿಯಾದ ನಂತರ ಇತರ ನಗರಗಳಲ್ಲೂ ತೆರೆಯಲಾಗುತ್ತದೆ.

Most Read Articles

Kannada
English summary
Zoho company ceo drives mahindra treo electric rickshaw details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X