ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಗಳಿಗೂ ತನ್ನ ಜನಪ್ರಿಯ ಮಾದರಿಗಳನ್ನು ರಫ್ತು ಮಾಡುತ್ತಿದೆ. ಕಂಪನಿಯ ಪ್ರಮುಖ ಮಾದರಿಯಾದ ಎರ್ಟಿಗಾ ಇಂಡೋನೇಷ್ಯಾ, ಫಿಲಿಪೈನ್ಸ್, ದಕ್ಷಿಣ ಆಫ್ರಿಕಾ ಮತ್ತು ಥೈಲ್ಯಾಂಡ್‌ನಂತಹ ಹಲವು ಮಾರುಕಟ್ಟೆಗಳಲ್ಲಿ ಜನಪ್ರಿಯ ಆಯ್ಕೆಯಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

2022 ಎರ್ಟಿಗಾ ಫೇಸ್‌ಲಿಫ್ಟ್ ಅನ್ನು ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಸುಜುಕಿ ಇದೀಗ 2022 ಫಿಲಿಪೈನ್ ಇಂಟರ್ನ್ಯಾಷನಲ್ ಮೋಟಾರ್ ಶೋನಲ್ಲಿ (PIMS) ಫಿಲಿಪೈನ್ಸ್‌ಗಾಗಿ ನವೀಕರಿಸಿದ ಎರ್ಟಿಗಾವನ್ನು ಅನಾವರಣಗೊಳಿಸಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಫಿಲಿಪಿನೋ ಎರ್ಟಿಗಾವನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಮೂಲಕ ಮೇಡ್ ಇನ್ ಇಂಡಿಯಾ ಎರ್ಟಿಗಾವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ವಿನ್ಯಾಸ ಮತ್ತು ಸ್ಟೈಲಿಂಗ್‌ನಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲದಿದ್ದರೂ ಅಂತರರಾಷ್ಟ್ರೀಯ-ಸ್ಪೆಕ್ ಎರ್ಟಿಗಾದ ಸಲಕರಣೆಗಳ ಪಟ್ಟಿಯು ಖಂಡಿತವಾಗಿಯೂ ಉತ್ತಮವಾಗಿ ಕಾಣುತ್ತದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಇದು ಇಂಡಿಯಾ-ಸ್ಪೆಕ್ ಎರ್ಟಿಗಾದಲ್ಲಿ ಲಭ್ಯವಿಲ್ಲದ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದರಲ್ಲಿ ಮತ್ತೊಂದು ವ್ಯತ್ಯಾಸವೆಂದರೆ ಲೆಫ್ಟ್ ಓರಿಯೆಂಟೆಡ್ ಡ್ರೈವರ್ಸ್ ಕಾಕ್‌ಪಿಟ್ ಆಗಿದೆ, ಏಕೆಂದರೆ ಫಿಲಿಪೈನ್ಸ್ ಎಡ-ಭಾಗದ ಡ್ರೈವ್ ದೇಶವಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

2023 ಮಾರುತಿ ಎರ್ಟಿಗಾ ನವೀಕರಣಗಳು

ಭಾರತದಲ್ಲಿ ಎರ್ಟಿಗಾಗೆ ನೀಡಲಾದ 7-ಇಂಚಿನ ಟಚ್‌ಸ್ಕ್ರೀನ್‌ಗೆ ಹೋಲಿಸಿದರೆ, ಫಿಲಿಪೈನ್ಸ್‌ನಲ್ಲಿ ನವೀಕರಿಸಿದ ಆವೃತ್ತಿಯು ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆದಿದೆ. ಜೊತೆಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನ ಕ್ರಿಯಾತ್ಮಕ ಅಂಶಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಇದು ಸುಜುಕಿಯ ಸ್ಮಾರ್ಟ್‌ಪ್ಲೇ ಪ್ರೊ ಪ್ಲಾಟ್‌ಫಾರ್ಮ್‌ನಿಂದ ಚಾಲಿತವಾಗಿದ್ದು ವಾಯಿಸ್ ಕಮಾಂಡ್‌ಗಳನ್ನು ಮತ್ತು ಸಂಪರ್ಕಿತ ಕಾರ್ ವೈಶಿಷ್ಟ್ಯಗಳ ಶ್ರೇಣಿಯನ್ನು ಸಪೋರ್ಟ್ ಮಾಡುತ್ತದೆ. ಕೆಲವು ಪ್ರಮುಖ ವೈಶಿಷ್ಟ್ಯಗಳಾದ ಸ್ಟೋಲೆನ್ ವೆಹಿಕಲ್ ನೋಟಿಫಿಕೇಷನ್ ಮತ್ತು ಟ್ರ್ಯಾಕಿಂಗ್, ಟೋ ಅವೇ ಅಲರ್ಟ್ ಮತ್ತು ಟ್ರ್ಯಾಕಿಂಗ್, ಜಿಯೋ-ಫೆನ್ಸ್, ಟೈಮ್ ಫೆನ್ಸ್, ಡ್ರೈವರ್ ಬಿಹೇವಿಯರ್, ಅತಿ ವೇಗದ ಎಚ್ಚರಿಕೆ ಮತ್ತು ರಿಮೋಟ್ ಕಂಟ್ರೋಲ್‌ಗಳನ್ನು ಒಳಗೊಂಡಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಅಂತರಾಷ್ಟ್ರೀಯ-ಸ್ಪೆಕ್ ಎರ್ಟಿಗಾಗೆ ಮತ್ತೊಂದು ಪ್ರಮುಖ ಸೇರ್ಪಡೆಯೆಂದರೇ 360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾವಾಗಿದೆ. ಇದನ್ನು ಭಾರತದಲ್ಲಿ XL6 ಜೊತೆಗೆ ನೀಡಲಾಗುತ್ತದೆ, ಆದರೆ ಭಾರತೀಯ ಎರ್ಟಿಗಾಗೆ ಈ ಫೀಚರ್ ನೀಡಿಲ್ಲ. ಏಕೆಂದರೆ ಎರ್ಟಿಗಾವನ್ನು ಬಜೆಟ್ MPV ಆಗಿ ಇರಿಸಲಾಗಿರುವುದರಿಂದ ನೀಡಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಭಾರತೀಯ ಎರ್ಟಿಗಾಗೆ ಹೋಲಿಸಿದರೆ, XL6 ಪ್ರೀಮಿಯಂ ಪ್ರೊಫೈಲ್ ಅನ್ನು ಹೊಂದಿದೆ. ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳೊಂದಿಗೆ ಬರುತ್ತದೆ. ರನ್ನಿಂಗ್ ಟೈಲ್‌ಗೇಟ್ ಮತ್ತೊಂದು ವೈಶಿಷ್ಟ್ಯವಾಗಿದ್ದು, ಇದನ್ನು ಅಂತರರಾಷ್ಟ್ರೀಯ-ಸ್ಪೆಕ್ ಎರ್ಟಿಗಾದೊಂದಿಗೆ ಪರಿಚಯಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

XL6 ಸೇರಿದಂತೆ ಭಾರತದಲ್ಲಿ ಹಲವಾರು ಇತರ MPV ಗಳು ಸಹ ರನ್ನಿಂಗ್ ಟೈಲ್‌ಗೇಟ್ ಅನ್ನು ಹೊಂದಿಲ್ಲ. ವೆಚ್ಚವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೇಲೆ ಕೇಂದ್ರೀಕರಿಸುವುದು ಸಂಭವನೀಯ ಕಾರಣವೆಂದು ತೋರುತ್ತಿದೆ. ಆದರೆ ಮಾರುತಿ ಈ ಹೊಸ ವೈಶಿಷ್ಟ್ಯಗಳನ್ನು ಎರ್ಟಿಗಾದ ಟಾಪ್-ಸ್ಪೆಕ್ ರೂಪಾಂತರಗಳೊಂದಿಗೆ ಮುಂದಿನ ದಿಗಳಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಪ್ರದರ್ಶನದಲ್ಲಿ ಭಾರತದ ಎರ್ಟಿಗಾ ಅಗ್ರಸ್ಥಾನ

ಅಂತರಾಷ್ಟ್ರೀಯ-ಸ್ಪೆಕ್ ಎರ್ಟಿಗಾವನ್ನು ವೈಶಿಷ್ಟ್ಯಗಳ ವಿಷಯದಲ್ಲಿ ಉತ್ತಮವಾಗಿ ಇರಿಸಲಾಗಿದೆ, ಇದು ಹಳೆಯ K15B ಮೈಲ್ಡ್-ಹೈಬ್ರಿಡ್ ಮೋಟಾರ್‌ನೊಂದಿಗೆ ಬರುತ್ತದೆ. ಇದನ್ನು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ, ಇದು ಭಾರತದಲ್ಲಿ ಮೊದಲು ಫೇಸ್‌ಲಿಫ್ಟ್ ಎರ್ಟಿಗಾದೊಂದಿಗೆ ಲಭ್ಯವಿತ್ತು.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಭಾರತದಲ್ಲಿ ಪ್ರಸ್ತುತ ಎರ್ಟಿಗಾ ಹೊಸ K15C ಸ್ಮಾರ್ಟ್ ಹೈಬ್ರಿಡ್ ಮೋಟಾರ್‌ನೊಂದಿಗೆ ಬರುತ್ತದೆ, ಇದು ಸಂಸ್ಕರಿಸಿದ ಕಾರ್ಯಕ್ಷಮತೆ ಮತ್ತು ಸುಧಾರಿತ ಇಂಧನ ದಕ್ಷತೆಯ ಭರವಸೆ ನೀಡುತ್ತದೆ. K15C 1.5-ಲೀಟರ್ ಪೆಟ್ರೋಲ್ ಮೋಟಾರ್ 102 HP ಗರಿಷ್ಠ ಶಕ್ತಿ ಮತ್ತು 137 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಅಥವಾ 6AT ಗೆ ಜೋಡಿಸಲಾಗಿದೆ. ಇಂಧನ ದಕ್ಷತೆಯು ಮ್ಯಾನುವಲ್‌ನಲ್ಲಿ 20.51 kmpl ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 20.30 kmpl ಆಗಿದೆ. ಮಾರುತಿ ಎರ್ಟಿಗಾ ಸಿಎನ್‌ಜಿ ಆಯ್ಕೆಯೊಂದಿಗೆ ಲಭ್ಯವಿದ್ದು, ಇದು 26.11 ಕಿ.ಮೀ/ಕೆ.ಜಿ ಇಂಧನ ದಕ್ಷತೆಯನ್ನು ನೀಡುತ್ತದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಇಂಟರ್ನ್ಯಾಷನಲ್-ಸ್ಪೆಕ್ ಎರ್ಟಿಗಾದ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಪಾದಚಾರಿ ಗಾಯ ತಗ್ಗಿಸುವ ವ್ಯವಸ್ಥೆ ಸೇರಿವೆ. MPV ಅನ್ನು ಅಲ್ಟ್ರಾ-ಹೈ ಟೆನ್ಸಿಲ್ ಸ್ಟೀಲ್ ಬಳಸಿ ತಯಾರಿಸಲಾಗುತ್ತದೆ. ಘರ್ಷಣೆಯ ಸಂದರ್ಭದಲ್ಲಿ ಪ್ರಭಾವದ ಶಕ್ತಿಯನ್ನು ಹೀರಿಕೊಳ್ಳಲು ಮತ್ತು ಚದುರಿಸಲು ವಿನ್ಯಾಸಗೊಳಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

2019 ರಲ್ಲಿ ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದ ಎರ್ಟಿಗಾ (ಡ್ಯುಯಲ್ ಏರ್‌ಬ್ಯಾಗ್‌ಗಳು) 3-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಇದರ ಪ್ರಾಥಮಿಕ ಪ್ರತಿಸ್ಪರ್ಧಿ ಕಿಯಾ ಕ್ಯಾರೆನ್ಸ್ (6-ಏರ್‌ಬ್ಯಾಗ್‌ಗಳು) 2022 ರಲ್ಲಿ ಪರೀಕ್ಷಿಸಲಾಯಿತು. ಇದು ಸಹ 3-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡ ಹೊಸ ಮಾರುತಿ ಎರ್ಟಿಗಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಎರ್ಟಿಗಾ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಪಿವಿ ಮಾದರಿಗಳಲ್ಲಿ ಒಂದಾಗಿದೆ. ವಿದೇಶಗಳಲ್ಲೂ ತನ್ನ ಬೇಡಿಕೆಯನ್ನು ಉಳಿಸಿಕೊಂಡಿರುವ ಎರ್ಟಿಗಾ ಇದೀಗ ಹೊಸ ಮಾದರಿಯೊಂದಿಗೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಯಾವೆಲ್ಲಾ ದಾಖಲೆಗಳನ್ನು ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Read Articles

Kannada
English summary
2023 Maruti Ertiga Unveiled With Advanced Technology Many Features
Story first published: Wednesday, September 21, 2022, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X