ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

2020-2021 ರ ನಡುವಿನ ಅವಧಿಯಲ್ಲಿ ಹೊಸ ಕಾರುಗಳ ಬಿಡುಗಡೆ ವಿಷಯದಲ್ಲಿ ಮಾರುತಿ ಸುಜುಕಿ ಹೇಳಿಕೊಳ್ಳುವ ಮಟ್ಟಿಗೆ ಯಾವದೇ ಮಾದರಿಯನ್ನು ಪರಿಚಯಿಸಿರಲಿಲ್ಲ. ಆದರೇ 2022 ರ ವರ್ಷವು ಹೊಸ ಬಲೆನೊ ಮತ್ತು ಬ್ರೆಜ್ಜಾ ರೂಪದಲ್ಲಿ ಕೆಲವು ಅಚ್ಚರಿಯ ಮಾದರಿಗಳು ಸದ್ದು ಮಾಡಿದ್ದವು. ಜೊತೆಗೆ ಆಲ್ಟೊ ಕೆ10 ಮತ್ತು ಗ್ರ್ಯಾಂಡ್ ವಿಟಾರಾಗಳನ್ನು ಪರಿಚಯಿಸಿ ಕಂಪನಿಯು ಗ್ರಾಹಕರಲ್ಲಿ ಉತ್ಸಾಹ ಹೆಚ್ಚಿಸಿದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಇದೀಗ ಈ ಹೊಸ ಮಾದರಿಗಳ ಪರಿಚಯಿಸುವಿಕೆಯನ್ನು ಮಾರುತಿ ಸುಜುಕಿ ಇನ್ನೂ ನಿಲ್ಲಿಸಿಲ್ಲ, ಏಕೆಂದರೆ ಇದು 2023 ರಲ್ಲಿ ತನ್ನ ಹಲವು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಮೂಲಗಳ ಪ್ರಕಾರ ಮಾರಿತಿಯಿಂದ 2023 ರಲ್ಲಿ ಮೂರು ಹೊಸ ಕಾರುಗಳು ಬರಲಿವೆ. ಈ ಕುರಿತ ಮತ್ತಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಮಾರುತಿ ಸುಜುಕಿ ಬಲೆನೋ ಕ್ರಾಸ್

ಮುಂಬರುವ ತಿಂಗಳುಗಳಲ್ಲಿ NEXA ಶೋರೂಂಗಳಲ್ಲಿ ಸದ್ದು ಮಾಡಲಿರುವುದು ಕೇವಲ ಗ್ರಾಂಡ್ ವಿಟಾರಾ ಮಾತ್ರವಲ್ಲ. ಏಕೆಂದರೆ ಮಾರುತಿ ಸುಜುಕಿ ಈಗಾಗಲೇ ಬಲೆನೊ ಹ್ಯಾಚ್‌ಬ್ಯಾಕ್‌ನ ಪ್ರೀಮಿಯಂ ಆವೃತ್ತಿಯನ್ನು ಸಿದ್ಧಪಡಿಸುತ್ತಿದೆ, ಇದು ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಆಟೋ ಎಕ್ಸ್‌ಪೋ 2020 ರಲ್ಲಿ ಮಾರುತಿ ಸುಜುಕಿ ಪ್ರದರ್ಶಿಸಿದ ಫ್ಯೂಚುರೊ-ಇ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದ ಹೊಸ ಬಲೆನೊ ಕ್ರಾಸ್ ಬಲೆನೊ ಹ್ಯಾಚ್‌ಬ್ಯಾಕ್‌ನ ಎಸ್‌ಯುವಿ-ಪ್ರೇರಿತ ಆವೃತ್ತಿಯಾಗಿದ್ದು, ಎತ್ತರದ ಗ್ರೌಂಡ್ ಕ್ಲಿಯರೆನ್ಸ್, ವಿಶಿಷ್ಟವಾದ ಮುಂಭಾಗ ಮತ್ತು ಹಿಂಭಾಗದ ಪ್ರೊಫೈಲ್‌ಗಳು ಮತ್ತು ಸುತ್ತಲೂ ಬಾಡಿ ಕ್ಲಾಡಿಂಗ್ ಹೊಂದಿದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಹೊಸ ಮಾರುತಿ ಸುಜುಕಿ ಬಲೆನೊ ಕ್ರಾಸ್ 1.0-ಲೀಟರ್ ಮೂರು-ಸಿಲಿಂಡರ್ ಬೂಸ್ಟರ್‌ಜೆಟ್ ಪೆಟ್ರೋಲ್ ಎಂಜಿನ್‌ನ ಕಮ್ ಬ್ಯಾಕ್ ಎಂದು ಹೇಳಲಾಗುತ್ತದೆ. ಒಂದು ವೇಳೆ ಇದಾಗದಿದ್ದರೇ, ಗ್ರ್ಯಾಂಡ್ ವಿಟಾರಾದಿಂದ 1.5-ಲೀಟರ್ ನಾಲ್ಕು ಸಿಲಿಂಡರ್ ನ್ಯಾಚುರಲ್ಲಿ-ಆಸ್ಪಿರೇಟೆಡ್ K15C ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಮಾರುತಿ ಸುಜುಕಿ ಜಿಮ್ನಿ

ಹಲವು ವರ್ಷಗಳಿಂದ ಮಾರುತಿ ಸುಜುಕಿಯಿಂದ ಬಹುನಿರೀಕ್ಷಿತ ಬಿಡುಗಡೆಯು ಹೊಸ ಜಿಮ್ನಿ ಎಂದೇ ಹೇಳಲಾಗುತ್ತಿದೆ. ಮೂರು-ಬಾಗಿಲಿನ ಸುಜುಕಿ ಜಿಮ್ನಿಯು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಲವು ವರ್ಷಗಳಿಂದ ಲಭ್ಯವಿದ್ದರೂ, ಭಾರತೀಯ ಮಾರುಕಟ್ಟೆಯು ಈ ಎಸ್‌ಯುವಿಯ ಐದು-ಬಾಗಿಲಿನ ಆವೃತ್ತಿಯನ್ನು ಪಡೆಯುತ್ತಿದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಹೊಸ ಐದು-ಬಾಗಿಲಿನ ಮಾರುತಿ ಸುಜುಕಿ ಜಿಮ್ನಿಯು ಮೂರು-ಬಾಗಿಲಿನ ಜಿಮ್ನಿಯಂತೆಯೇ ಅದೇ ಬಾಕ್ಸಿ ಮತ್ತು ನೇರ ವಿನ್ಯಾಸವನ್ನು ಹೊಂದಿರುತ್ತದೆ. ದುಂಡಗಿನ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ಟೈರ್‌ನಂತಹ ನಿಯೋ-ರೆಟ್ರೊ ವಿನ್ಯಾಸದ ಮುಖ್ಯಾಂಶಗಳೊಂದಿಗೆ ಬರಲಿದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಆಟೋ ಎಕ್ಸ್‌ಪೋ 2023 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದ್ದು, ಹೊಸ ಜಿಮ್ನಿ ಗ್ರ್ಯಾಂಡ್ ವಿಟಾರಾದಿಂದ ಅದೇ 1.5-ಲೀಟರ್ ನಾಲ್ಕು ಸಿಲಿಂಡರ್ ನ್ಯಾಚುರಲ್ಲಿ-ಆಸ್ಪಿರೇಟೆಡ್ K15C ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಮಾರುತಿ ಸುಜುಕಿ ಸ್ವಿಫ್ಟ್

ಪ್ರಸ್ತುತ ಮೂರನೇ ತಲೆಮಾರಿನ ಸ್ವಿಫ್ಟ್ ಈಗಾಗಲೇ ತನ್ನ ಲೈಫ್ ಸೈಕಲ್‌ನಲ್ಲಿ ಅಂತ್ಯವನ್ನು ತಲುಪಿದೆ. ಹೊಸ ನಾಲ್ಕನೇ ತಲೆಮಾರಿನ ಮಾದರಿಯನ್ನು ಈಗಾಗಲೇ ಯುರೋಪಿಯನ್ ರಸ್ತೆಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಸ್ತುತ-ಜೆನ್ ಸ್ವಿಫ್ಟ್‌ಗೆ ಹೋಲಿಸಿದರೆ, ಹೊಸ ಮಾದರಿಯು ದೊಡ್ಡ ಆಯಾಮಗಳನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಆದರೆ ಇದು ಈಗ-ಐಕಾನಿಕ್ ಸಿಲೂಯೆಟ್ ಮತ್ತು ಕಾರಿನ ಸ್ಕ್ವಾಟೆಡ್ ನಿಲುವುಗಳೊಂದಿಗೆ ರಾಜಿಯಾಗುವುದಿಲ್ಲ. ಹೊಸ ನಾಲ್ಕನೇ-ಪೀಳಿಗೆಯ ಮಾರುತಿ ಸುಜುಕಿ ಸ್ವಿಫ್ಟ್ ಸಹ ಹೊಸ-ಜೆನ್ ವೈಶಿಷ್ಟ್ಯಗಳೊಂದಿಗೆ ಹೆಡ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳಂತಹ ಹೊಸ-ಜೆನ್ ವೈಶಿಷ್ಟ್ಯಗಳೊಂದಿಗೆ ಪುನರ್ನಿರ್ಮಾಣದ ಒಳಾಂಗಣವನ್ನು ಪಡೆಯಲಿದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಹುಡ್ ಅಡಿಯಲ್ಲಿ ಇದು ಹೊಸ-ಪೀಳಿಗೆಯ 1.2-ಲೀಟರ್ ನಾಲ್ಕು ಸಿಲಿಂಡರ್ K12C ಡ್ಯುಯಲ್ಜೆಟ್ 90 PS ಪೆಟ್ರೋಲ್ ಎಂಜಿನ್ ರೂಪದಲ್ಲಿ ಅದೇ ಟೆಕ್‌ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಸುಜುಕಿ ಕಂಪನಿಯು ಹಬ್ಬದ ಸೀಸನ್‌ನಲ್ಲಿ ಆಲ್ಟೋ ಕೆ10 ಕಾರಿನ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ಮಾರುತಿ ಆಲ್ಟೊ ಕೆ10 ಕಾರಿನ ಮೇಲೆ ಒಟ್ಟು 25,000 ರೂ, ವರೆಗಿನ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಲ್ಲದೆ, ಮಾರುತಿ ಸುಜುಕಿ ಕಂಪನಿಯು ಇತರ ಮಾದರಿಗಳಲ್ಲಿಯೂ ಸಹ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೇಲೆ ರೂ.29,000 ವರೆಗೆ ಪ್ರಯೋಜನಗಳನ್ನು ನೀಡುತ್ತಿದ್ದಾರೆ.

ಮಾರುತಿ ಸುಜುಕಿಯಿಂದ 2023 ರಲ್ಲಿ ಬಿಡುಗಡೆಗೆ ಸಜ್ಜಾಗಿರುವ 3 ಬಹುನಿರೀಕ್ಷಿತ ಕಾರುಗಳಿವು!

ಇದರೊಂದಿಗೆ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನ ಮೇಲೆ ರೂ.40,000 ವರೆಗಿನ ಪ್ರಯೋಜನಗಳನ್ನು ಪಡೆಯಬಹುದು. ಇನ್ನು ಮಾರುತಿ ಸುಜುಕಿ ಸೆಲೆರಿಯೊ ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊದಂತಹ ಮಾದರಿಗಳು 59,000 ರೂ, ವರೆಗಿನ ಆಕರ್ಷಕ ರಿಯಾಯಿತುಯನ್ನು ಪಡೆಯುತ್ತವೆ.

Most Read Articles

Kannada
English summary
3 Most Awaited Cars from Maruti Suzuki Set to Launch in 2023
Story first published: Friday, September 30, 2022, 13:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X