ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋಪೈಲಟ್

ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟೆಸ್ಲಾ ಅತ್ಯಾಧುಕಿನ ತಂತ್ರಜ್ಞಾನ ಹಾಗೂ ಹಲವು ಫೀಚರ್ಸ್‌ಗಳೊಂದಿಗೆ ಇವಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೂ ವಿಶ್ವದ ಹಲವೆಡೆ ಇತ್ತೀಚೆಗೆ ಕೆಲವು ಟೆಸ್ಲಾ ಕಾರುಗಳಲ್ಲಿನ ನ್ಯೂನ್ಯತೆಗಳು ವರದಿಯಾಗುತ್ತಿವೆ.

Recommended Video

Maruti Suzuki Grand Vitara UNVEILED IN Kannada | ಹೈಬ್ರಿಡ್ ಎಸ್‌ಯುವಿ, ಮೈಲೇಜ್, ಪರ್ಫಾಮೆನ್ಸ್, ಫೀಚರ್ಸ್

ಟೆಸ್ಲಾ ಕಾರುಗಳಲ್ಲಿ ಅತಿಮುಖ್ಯವಾಗಿ ಜನಪ್ರಿಯತೆ ಗಳಿಸಿರುವ ಫೀಚರ್ ಎಂದರೆ 'ಸೆಲ್ಫ್-ಡ್ರೈವಿಂಗ್/ಆಟೋಪೈಲಟ್'. ಇದನ್ನು ಒಳಗೊಂಡಂತೆ ಅತ್ಯಾಧುನಿಕ ಚಾಲನಾ ತಂತ್ರಜ್ಞಾನದೊಂದಿಗೆ EV ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆಯಾದರೂ, ಅದರ ನ್ಯೂನತೆಗಳನ್ನು ಸಹ ಹೊಂದಿದೆ.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋ ಪೈಲಟ್

ಇತ್ತೀಚೆಗೆ, ಟೆಸ್ಲಾನ ಸ್ವಯಂ ಚಾಲಿತ ಸಾಫ್ಟ್‌ವೇರ್ ಜಟಕಾಗಾಡಿಯನ್ನು ಟ್ರಕ್‌ನೊಂದಿಗೆ ಗೊಂದಲಗೊಳಿಸುವ ವೀಡಿಯೊ ವೈರಲ್ ಆಗಿದೆ. ಟೆಸ್ಲಾ ಕಾರಿನ ಮುಂದೆ ಕುದುರೆ ಗಾಡಿ ನಿಧಾನವಾಗಿ ಚಲಿಸುತ್ತಿದ್ದರೆ ಈ ಬಂಡಿಯನ್ನು ಪತ್ತೆಹಚ್ಚಲು ವಿಫಲವಾಗಿದೆ. ಟೆಸ್ಲಾ ಈ ಕುದುರೆ ಗಾಡಿಯನ್ನು ಒಂದು ಬಾರಿ ಕಾರು ಇನ್ನೊಮ್ಮೆ ಮನುಷ್ಯ ಮತ್ತೊಮ್ಮೆ ಟ್ರಕ್ ಎಂದು ಗುರುತಿಸುವ ಮೂಲಕ ಚಾಲಕನನ್ನು ಗೊಂದಲಗೊಳಿಸಿದೆ.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋಪೈಲಟ್

ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಸಾಫ್ಟ್‌ವೇರ್‌ಗೆ ಕುದುರೆ ಗಾಡಿಯನ್ನು ಪತ್ತೆಹಚ್ಚಲು ಎಕೆ ಸಾಧ್ಯವಾಗಲಿಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ. ಟೆಸ್ಲಾದವರ ಸ್ವಯಂ-ಚಾಲನಾ ಸಾಫ್ಟ್‌ವೇರ್, ಕುದುರೆ ಗಾಡಿಯನ್ನು ಅದರ ಉದ್ದದ ಕಾರಣದಿಂದ ಟ್ರಕ್‌ನಂತೆ ಕಾಣುವಂತೆ ಮಾಡಿದೆ, ಆದರೆ AI (ಆರ್ಟಿಫಿಷಿಯಲ್ ಇಂಟಲಿಜನ್ಸ್) ಗೊಂದಲಕ್ಕೊಳಗಾಗುವುದನ್ನು ನೋಡಲು ತಮಾಷೆಯಾಗಿದೆ.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋಪೈಲಟ್

ಈ ವಿಡಿಯೋ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಲಾನ್‌ಮಸ್ಕ್‌ ಅವರು ಟ್ರೋಲರ್‌ಗಳಿಗೆ ಆಹಾರವಾಗಿದ್ದಾರೆ. "ಟೆಸ್ಲಾ ವರ್ಸಸ್ ಹಾರ್ಸ್ ಕ್ಯಾರೇಜ್", "ಎಲಾನ್ ಇದನ್ನು ಸರಿಪಡಿಸಬೇಕು" ಮತ್ತು "ಬ್ರೋ ಈಸ್ ಪ್ಲೇಯಿಂಗ್ ಪ್ರಾಪ್ ಹಂಟ್" ಮುಂತಾದ ಟ್ರೋಲ್ಸ್ ನೆಟ್ಟಿನಾದ್ಯಂತ ಹರಿದಾಡುತ್ತಿವೆ.

ಟೆಸ್ಲಾದ ಸ್ವಾಯತ್ತ ಡ್ರೈವಿಂಗ್ ಸಾಫ್ಟ್‌ವೇರ್ ಸಂಪೂರ್ಣವಾಗಿ ಚಾಲಕರಹಿತವಾಗಿಲ್ಲ. ನಿರ್ದಿಷ್ಟ ಸಮಯದವರೆಗೆ ಸ್ಟೀರಿಂಗ್ ವೀಲ್ ಬಳಸದೆಯೇ ಚಾಲಕನಿಗೆ ಸ್ವಯಂಚಾಲಿತವಾಗಿ ಕಾರನ್ನು ಚಾಲನೆ ಮಾಡಲು ಇದು ಅನುಮತಿಸುತ್ತದೆ. ಆದ್ದರಿಂದ, ಚಾಲಕ ಯಾವಾಗಲೂ ಚಾಲಕನ ಸೀಟಿನಲ್ಲಿ ಕುಳಿತುಕೊಳ್ಳುವುದು ಅತ್ಯಗತ್ಯ.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋಪೈಲಟ್

ಟೆಸ್ಲಾದ AI ಸಾಫ್ಟ್‌ವೇರ್ ನಗರದ ರಸ್ತೆಗಳು ಮತ್ತು ಮುಕ್ತಮಾರ್ಗಗಳನ್ನು ಬುದ್ಧಿವಂತಿಕೆಯಿಂದ ನ್ಯಾವಿಗೇಟ್ ಮಾಡಬಹುದು. ಆದರೂ, ಕುದುರೆ ಗಾಡಿಯನ್ನು ಗುರುತಿಸಲು ವಿಫಲವಾದ ಈ ರೀತಿಯ ಸ್ವಯಂಚಾಲಿತ ಕಾರುಗಳು ನಮ್ಮಂತಹ ದಟ್ಟಣೆಯ ದೇಶಗಳಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗುವುದಿಲ್ಲ.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋಪೈಲಟ್

ನಮ್ಮ ದೇಶದ ರಸ್ತೆಗಳು ಎತ್ತಿನ ಗಾಡಿಗಳು, ಸೈಕಲ್ ರಿಕ್ಷಾಗಳು, ಆಟೋ ರಿಕ್ಷಾಗಳು, ರಸ್ತೆಗಳಲ್ಲಿ ಓಡಾಡುವ ಪ್ರಾಣಿಗಳು ಮತ್ತು ರಸ್ತೆಗೆ ಅಡ್ಡಲಾಗಿ ಓಡಾಡುವ ಜನರಿಂದ ತುಂಬಿವೆ. ಅಂತಹ ಗೊಂದಲಮಯ ರಸ್ತೆಗಳಲ್ಲಿ ಸ್ವಯಂಚಾಲಿತ ಕಾರುಗಳು ನಮ್ಮ ರಸ್ತೆಗಳಲ್ಲಿ ಸಂಚರಿಸಿದರೆ, ಅಪಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋಪೈಲಟ್

ಮೊದಲು ಮಾರಾಟಕ್ಕೆ ಅನುಮತಿಸಿ ನಂತರ ಸ್ಥಾವರ ಸ್ಥಾಪಿಸುತ್ತೇವೆ

ಇತ್ತೀಚೆಗೆ, ಟ್ವಿಟರ್‌ನಲ್ಲಿ ಅವರ ಫಾಲೋವರ್ ಒಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, ಭಾರತದಲ್ಲಿ ಮಾರಾಟವನ್ನು ಪ್ರಾರಂಭಿಸಲು ಭಾರತ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇನೆ. ಭಾರತ ಸರ್ಕಾರವು ಮೊದಲು ತನ್ನ ಕಾರುಗಳನ್ನು ಮಾರಾಟ ಮಾಡಲು ಅನುಮತಿಸಿದರೆ, ಆನಂತರ ಮಾತ್ರ ಭಾರತದಲ್ಲಿ ಟೆಸ್ಲಾ ಸ್ಥಾವರವನ್ನು ಸ್ಥಾಪಿಸುವುದಾಗಿ ಹೇಳಿದ್ದರು.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋ ಪೈಲಟ್

ವರದಿಯ ಪ್ರಕಾರ, ಚೀನಾದ ಶಾಂಘೈನಲ್ಲಿ ಗಿಗಾಫ್ಯಾಕ್ಟರಿಯನ್ನು ಪ್ರಾರಂಭಿಸಿದ ನಂತರ, ಟೆಸ್ಲಾ ಈಗ ಇಂಡೋನೇಷ್ಯಾದಲ್ಲಿ ತನ್ನ ಎರಡನೇ ಗಿಗಾಫ್ಯಾಕ್ಟರಿಯನ್ನು ಸ್ಥಾಪಿಸಲು ಯೋಜಿಸುತ್ತಿದೆ. ಟೆಸ್ಲಾ ಕಾರುಗಳ ಆಮದು ತೆರಿಗೆಯನ್ನು ಕಡಿತಗೊಳಿಸಲು ಕಳೆದ ಕೆಲವು ವರ್ಷಗಳಿಂದ ಟೆಸ್ಲಾ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋ ಪೈಲಟ್

ಭಾರತದಲ್ಲಿ ಕಾರುಗಳ ಮೇಲಿನ ಹೆಚ್ಚಿನ ಆಮದು ತೆರಿಗೆಯಿಂದಾಗಿ, ತನ್ನ ಕಾರುಗಳು ದುಬಾರಿಯಾಗಬಹುದು ಎಂದು ಕಂಪನಿಯು ಸರ್ಕಾರಕ್ಕೆ ತಿಳಿಸಿತ್ತು. ಟೆಸ್ಲಾ ಅವರ ಬೇಡಿಕೆಯನ್ನು ಸರ್ಕಾರ ಒಪ್ಪಲಿಲ್ಲ, ಒಂದು ಕಂಪನಿಗಾಗಿ ತೆರಿಗೆ ನೀತಿಗಳನ್ನು ಬದಲಾಯಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋ ಪೈಲಟ್

ಇದಾದ ನಂತರ ಟೆಸ್ಲಾ ಅವರು ಚೀನಾದಿಂದ ಭಾರತಕ್ಕೆ ಕಾರುಗಳನ್ನು ಆಮದು ಮಾಡಿಕೊಳ್ಳುವುದಾಗಿ ಹೇಳಿದರು, ಅದರೆ ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ. ಉತ್ಪಾದನಾ ನೀತಿಗಳನ್ನು ಉಲ್ಲೇಖಿಸಿದ ಭಾರತ ಸರ್ಕಾರ, ಕಂಪನಿಯು ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಿದರೆ, ಅವುಗಳನ್ನು ಭಾರತದಲ್ಲಿಯೇ ತಯಾರಿಸಬೇಕಾಗುತ್ತದೆ ಎಂದು ಹೇಳಿತ್ತು.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋಪೈಲಟ್

ಮಾಹಿತಿಯ ಪ್ರಕಾರ, ಟೆಸ್ಲಾ ಜಾಗತಿಕ ಮಾರುಕಟ್ಟೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಮಾಡೆಲ್ 3 ಕಾರುಗಳನ್ನು ವಿತರಿಸಿದೆ. ಆದರೆ ಭಾರತದಲ್ಲಿ ಬುಕ್ ಮಾಡಿರುವ ಗ್ರಾಹಕರಿಗೆ ಮಾತ್ರ ಕಾರುಗಳನ್ನು ವಿತರಿಸಿಲ್ಲ. ಈ ಕಾರಣದಿಂದಾಗಿ ಭಾರತೀಯ ಗ್ರಾಹಕರು ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಮೇಲೆ ತುಂಬಾ ಕೋಪಗೊಂಡಿದ್ದಾರೆ.

ಜಟಕಾ ಗಾಡಿಯನ್ನು ಗುರುತಿಸಲಾಗದೆ ಚಾಲಕನನ್ನು ಗೊಂದಲಗೊಳಿಸಿದ ಟೆಸ್ಲಾ ಆಟೋ ಪೈಲಟ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದೊಂದಿಗಿನ ಅವರ ವ್ಯವಹಾರ ನೀತಿಗಳನ್ನು ಪ್ರಶ್ನಿಸುತ್ತಾ ಟೆಸ್ಲಾ ಕಾರುಗಳನ್ನು ಬುಕ್ ಮಾಡಿದ ಅನೇಕ ಗ್ರಾಹಕರು ಈಗ ಮರುಪಾವತಿಯನ್ನು ಬಯಸುತ್ತಿದ್ದಾರೆ. ಇದೀಗ ಕುದುರೆ ಗಾಡಿಯನ್ನು ಗುರುತಿಸಲು ವಿಫಲವಾದ ಈ ರೀತಿಯ ಸ್ವಯಂಚಾಲಿತ ಕಾರುಗಳು ನಮ್ಮಂತಹ ದಟ್ಟಣೆಯ ದೇಶಗಳಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗುವುದಿಲ್ಲ ಎಂದು ಭಾರತೀಯರು ತಿಳಿದುಕೊಳ್ಳಬೇಕಿದೆ.

Most Read Articles

Kannada
Read more on ಟೆಸ್ಲಾ tesla
English summary
A Tesla car that confuses the driver by not recognizing the Jataka vehicle
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X