ಆಟೋ ಎಕ್ಸ್‌ಪೋ 2023ಕ್ಕೆ ಎಲ್ಲರೂ ಸಿದ್ಧರಾಗಿ...ಇಲ್ಲಿದೆ ಸ್ಥಳ, ದಿನಾಂಕ, ಟಿಕಟ್ ಬೆಲೆ ಕುರಿತ ಮಾಹಿತಿ

ಭಾರತದ ಅತಿ ದೊಡ್ಡ ದ್ವೈವಾರ್ಷಿಕ ಆಟೋ ಈವೆಂಟ್ ಆದ ದೆಹಲಿ ಆಟೋ ಎಕ್ಸ್‌ಪೋ 2023, 2 ವರ್ಷಗಳ ವಿರಾಮದ ನಂತರ ದೇಶಕ್ಕೆ ಮರಳಿದೆ. ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ಮೋಟಾರು ಪ್ರದರ್ಶನವಾಗಿದ್ದು, ಈ ಆಟೋ ಎಕ್ಸ್‌ಪೋ ಪ್ರದರ್ಶನದ ಬಗ್ಗೆ ನೀವು ತಿಳಿದುಕೊಳ್ಳಬಹುದಾದ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ಬಾರಿಯ ಆಟೋ ಎಕ್ಸ್‌ಪೋ ಮೇಲೆ ಭಾರಿ ನಿರೀಕ್ಷೆಗಳಿದ್ದು, ಮುಂಬರಲಿರುವ ಹೊಸ ಮಾದರಿಗಳಿಗಾಗಿ ಭಾರತದಾದ್ಯಂತ ಆಟೋ ಉತ್ಸಾಹಿಗಳು ಕಾತುರದಿಂದ ಕಾಯುತ್ತಿದ್ದಾರೆ. ದೆಹಲಿ ಆಟೋ ಎಕ್ಸ್‌ಪೋ ಪ್ರದರ್ಶನವು 13 ಜನವರಿ 2023 ರಿಂದ 18ನೇ ತಾರೀಖಿನವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಹಾಗೆಯೇ ಮಾಧ್ಯಮಗಳಿಗಾಗಿ ಜನವರಿ 11 ಮತ್ತು 12 ರಂದು ಬಿಡುಗಡೆ ಮತ್ತು ಪ್ರದರ್ಶನಗಳನ್ನು ಅನಾವರಣಗೊಳಿಸಲಾಗುತ್ತದೆ. ಆಟೋ ಎಕ್ಸ್‌ಪೋದ ಭಾಗವಾಗಿರುವ ಘಟಕ ತಯಾರಕರ ಪ್ರದರ್ಶನವು ಜನವರಿ 12 ರಿಂದ 15 ರವರೆಗೆ ನಡೆಯಲಿದೆ.

ಆಟೋ ಎಕ್ಸ್‌ಪೋ 2023ಕ್ಕೆ ಎಲ್ಲರೂ ಸಿದ್ಧರಾಗಿ...ಇಲ್ಲಿದೆ ಸ್ಥಳ, ದಿನಾಂಕ, ಟಿಕಟ್ ಬೆಲೆ ಕುರಿತ ಮಾಹಿತಿ

ಆಟೋ ಎಕ್ಸ್‌ಪೋ ನಡೆಯುವ ಸ್ಥಳ

ಸಂಪ್ರದಾಯದಂತೆ ಕಾಂಪೊನೆಂಟ್ ಶೋ ಪ್ರಗತಿ ಮೈದಾನದಲ್ಲಿ ನಡೆಯಲಿದ್ದು, ವಾಹನ ತಯಾರಕರು ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಪ್ರದರ್ಶಿಸುತ್ತಾರೆ. ಪ್ರವಾಸಿಗರು ಎಕ್ಸ್‌ಪೋ ಮಾರ್ಟ್ ಅನ್ನು ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದು. ಆಕ್ವಾ ಲೈನ್‌ನಲ್ಲಿ ಪ್ರಸ್ತುತ, ಹತ್ತಿರದ ದೆಹಲಿ ಮೆಟ್ರೋ ನಿಲ್ದಾಣವು ನಾಲೆಡ್ಜ್ ಪಾರ್ಕ್ 2 ಆಗಿದೆ. ಕಾರಿನಲ್ಲಿ ಹೋಗಲು ಆಯ್ಕೆ ಮಾಡುವವರಿಗೆ, ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ನೋಯ್ಡಾ ಕಡೆಗೆ ಬಂದು ನಂತರ ಎಕ್ಸ್‌ಪೋ ಮಾರ್ಟ್‌ಗೆ ಸೇರಲು ಸೂಚಿಸುವ ಚಿಹ್ನೆಗಳನ್ನು ಅನುಸರಿಸಿ.

ಆಟೋ ಎಕ್ಸ್‌ಪೋ ಟಿಕೆಟ್ ಬೆಲೆ
ನೀವು BookMyShow ಗೆ ಲಾಗ್ ಇನ್ ಮಾಡಬಹುದು ಅಥವಾ ಈವೆಂಟ್‌ಗಾಗಿ ಟಿಕೆಟ್‌ಗಳನ್ನು ಖರೀದಿಸಲು ಅಧಿಕೃತ ಆಟೋ ಎಕ್ಸ್‌ಪೋ ಅಪ್ಲಿಕೇಶನ್ ಅನ್ನು ಬಳಸಬಹುದು. ಮೊದಲ ದಿನ, ಜನವರಿ 13 ಅನ್ನು ವ್ಯಾಪಾರ ದಿನವೆಂದು ನಿಗದಿಪಡಿಸಲಾಗಿದೆ. ಹಾಗಾಗಿ ಟಿಕೆಟ್‌ನ ಬೆಲೆ 750 ರೂ. ಇರುತ್ತದೆ. 14 ಮತ್ತು 15 ನೇ ತಾರೀಖುಗಳು ವಾರಾಂತ್ಯದಲ್ಲಿರುವುದರಿಂದ 475 ರೂ., ಇನ್ನು ಉಳಿದ ದಿನಗಳಲ್ಲಿ 350 ರೂ. ಇರುತ್ತದೆ. ನೀವು ಮುಖ್ಯವಾಗಿ ಸೆಲೆಬ್ರಿಟಿಗಳನ್ನು ನೋಡಲು ಬಯಸಿದರೆ 14 ಮತ್ತು 15 ನೇ ದಿನಾಂಕಗಳಲ್ಲಿ ಭೇಟಿ ನೀಡಬಹುದು.

2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಕರ ಪಟ್ಟಿ ಚಿಕ್ಕದಾಗಿದೆ. ನೀವು ನಿರೀಕ್ಷಿಸಬಹುದಾದ ಹೆಸರುಗಳೆಂದರೆ ಮಾರುತಿ ಸುಜುಕಿ, ಹ್ಯುಂಡೈ, KIA, MG ಮೋಟಾರ್ಸ್, ಟಾಟಾ ಮೋಟಾರ್ಸ್ ಮತ್ತು ಟೊಯೋಟಾ. 2023 ಆಟೋ ಎಕ್ಸ್‌ಪೋ ಸುದೀರ್ಘ ಅಂತರದ ನಂತರ ಮರಳುತ್ತಿದೆ. ಆಟೋ ಶೋ, ಗ್ರಾಹಕರು ಮತ್ತು ತಯಾರಕರ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಕಂಪನಿಗಳು ಆಟೋ ಎಕ್ಸ್‌ಪೋದಲ್ಲಿ ಸಾಕಷ್ಟು ಪರಿಕಲ್ಪನೆ ಮತ್ತು ಮುಂಬರುವ ಮಾದರಿಗಳನ್ನು ಪ್ರದರ್ಶಿಸಲು ಸಜ್ಜಾಗಿವೆ.

ಈ ಆಟೋ ಎಕ್ಸ್‌ಪೋ ಮೋಟಾರು ವಾಹನಗಳ ಭವಿಷ್ಯವನ್ನು ಸೂಚಿಸಲಿದೆ. ಇಲ್ಲಿ ಪ್ರದರ್ಶನಗೊಳ್ಳಲಿರುವ ಹೊಸ ಮಾದರಿಗಳು ಆಯಾ ಕಂಪನಿಗಳ ಮೇಲಿನ ಉತ್ಸುಕತೆಯನ್ನು ಹೆಚ್ಚಿಸಲಿದೆ. ಹಾಗಾಗಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲು ಹಲವು ಕಂಪನಿಗಳು ತಮ್ಮ ಹೊಸ ಮಾದರಿಗಳೊಂದಿಗೆ ಸಜ್ಜಾಗಿವೆ. ಜೊತೆಗೆ ಈ ಬಾರಿಯ ಎಕ್ಸ್‌ಪೋದಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ನೋಡುವ ನಿರೀಕ್ಷೆಯಿದೆ. ಈ ಮೂಲಕ ಇವಿಗಳು ನಮ್ಮ ಭವಿಷ್ಯವಾಗಿವೆ ಎಂಬುದನ್ನು ಈ ಆಟೋ ಎಕ್ಸ್‌ಪೋ ನಿರ್ಧರಿಸುವ ಸಾಧ್ಯಯಿದೆ.

ಇನ್ನು ದೇಶೀಯ ಕಂಪನಿಗಳಿಂದ ಹೆಚ್ಚಿನ ಉತ್ಪನ್ನಗಳು ಹೊರಹೊಮ್ಮುವ ನಿರೀಕ್ಷೆಯಿದೆ. ಏಕೆಂದರೆ ಈಗಾಗಲೇ ಆಟೋ ಎಕ್ಸ್‌ಪೋದಲ್ಲಿ ದೇಶಿಯ ಉತ್ಪನ್ನಗಳು ಹೆಚ್ಚಾಗಿರಲಿವೆ ಎಂಬುದರ ಕುರಿತು ಕಳೆದ ಹಲವು ತಿಂಗಳುಗಳಿಂದ ಸುದ್ದಿ ಹರಿದಾಡುತ್ತಿದೆ. ಉಳಿದಂತೆ ಮೇಲೆ ತಿಳಿಸಿರುವ ವಿದೇಶಿ ಕಂಪನಿಗಳು ಕೂಡ ತಮ್ಮ ಭವಿಷ್ಯದ ಉತ್ಪನ್ನಗಳನ್ನು ಪ್ರದರ್ಶಿಸಿ ಭಾರತದಲ್ಲಿ ಉಳಿವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿವೆ. ಈ ಮೂಲಕ ಈ ಬಾರಿಯ ಆಟೋ ಎಕ್ಸ್‌ಪೋ 2023 ಹೆಚ್ಚು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
All set for auto expo 2023 heres info on venue dates ticket prices
Story first published: Friday, December 9, 2022, 14:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X