ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಆಡಿ ಇಂಡಿಯಾ ಕಂಪನಿಯು ತನ್ನ ಬಹುಬೇಡಿಕೆಯ ಎ4 ಸೆಡಾನ್ ಮಾದರಿಯಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಮಾದರಿಯು ಇದೀಗ ಎರಡು ಬಣ್ಣಗಳ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಆರಂಭಿಕ ಐಷಾರಾಮಿ ಸೆಡಾನ್ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಆಡಿ ಎ4 ಮಾದರಿಯು ಪ್ರೀಮಿಯಂ, ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಎನ್ನುವ ಮೂರು ವೆರಿಯೆಂಟ್‌ಗಳೊಂದಿಗೆ ಹೊಸದಾಗಿ ಟ್ಯಾಂಗೋ ರೆಡ್ ಮತ್ತು ಮ್ಯಾನ್‌ಹ್ಯಾಟನ್ ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಎ4 ಮಾದರಿಯ ಪ್ರೀಮಿಯಂ, ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ವೆರಿಯೆಂಟ್‌ಗಳು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 43.12 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 50.99 ಲಕ್ಷ ಬೆಲೆ ಹೊಂದಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಹೊಸ ಬಣ್ಣಗಳ ಜೊತೆಗೆ ತಾಂತ್ರಿಕ ನವೀಕರಣಗಳೊಂದಿಗೆ ಬಿಡುಗಡೆಯಾಗಿರುವ ಹೊಸ ಎ4 ಸೆಡಾನ್ ಮಾದರಿಯಲ್ಲಿ ಕಂಪನಿಯು ಟ್ಯಾಂಗೋ ರೆಡ್ ಮತ್ತು ಮ್ಯಾನ್‌ಹ್ಯಾಟನ್ ಗ್ರೇ ಬಣ್ಣಗಳ ಆಯ್ಕೆ ಜೊತೆಗೆ ಹೊಸದಾಗಿ ಟ್ರಿಮ್ ಫ್ಲಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್, 19 ಸ್ಪೀಕರ್‌ಗಳು ಮತ್ತು ಬಿಅಂಡ್ಒ ಪ್ರೀಮಿಯಂ ಆಡಿಯೋ ಸಿಸ್ಟಂ ನೀಡಲಾಗಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಉನ್ನತೀಕರಿಸಲಾದ ಇತರೆ ವೈಶಿಷ್ಟ್ಯತೆಗಳೆಂದರೆ 10.1-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಆಡಿ ಕಂಪನಿಯ ವರ್ಚುವಲ್ ಕಾಕ್‌ಪಿಟ್ ಡಿಸ್ಪ್ಲೇ, ಎಲೆಕ್ಟ್ರಿಕ್ ಗ್ಲಾಸ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್, ಲೆದರ್ ಆಸನಗಳು, 30 ಬಣ್ಣಗಳನ್ನು ಹೊಂದಿರುವ ಆಂಬಿಯೆಂಟ್ ಲೈಟಿಂಗ್ ಹೊಂದಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಜೊತೆಗೆ ತ್ರೀ ಜೋನ್ ಆಟೋ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕ್ ಸೌಲಭ್ಯದೊಂದಿಗೆ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ನೀಡಲಾಗಿದ್ದು, ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಫ್ರಂಟ್ ಅಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಸೇರಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಹೊಸ ಆವೃತ್ತಿಯಲ್ಲಿ ಆಡಿ ಕಂಪನಿಯು ಈ ಹಿಂದಿನ ಎಂಜಿನ್ ಆಯ್ಕೆಯನ್ನೇ ಮುಂದುವರಿಸಿದ್ದು, ಇದು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

2.0 ಲೀಟರ್ ಟರ್ಬೊ‌ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ನೊಂದಿಗೆ 187 ಬಿಎಚ್‌ಪಿ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಫ್ರಂಟ್ ವ್ಹೀಲ್ ಶಕ್ತಿ ಪೂರೈಕೆ ಹೊಂದಿರುವ ಆಡಿ ಎ4 ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 204 ಕಿ.ಮೀ ವೇಗವನ್ನು ಹೊಂದಿದ್ದು, ಇದು ಕೇವಲ 7.3 ಸೆಕೆಂಡುಗಳಲ್ಲಿ ಪ್ರತಿಗಂಟೆಗೆ ಸೊನ್ನೆಯಿಂದ 100 ಕಿ.ಮೀ ವೇಗ ಸಾಧಿಸಬಲ್ಲದು.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಹೊಸ ಮಾದರಿಯ ಬಿಡುಗಡೆಯ ಕುರಿತಾಗಿ ಪ್ರತಿಕ್ರಿಯಿಸಿದ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಅವರು ಎ4 ಸೆಡಾನ್ ಮಾದರಿಯು ನಮ್ಮ ಅತ್ಯುತ್ತಮ ಬೇಡಿಕೆಯ ಸೆಡಾನ್ ಮಾದರಿಯಾಗಿದ್ದು, ಅತ್ಯಾಕರ್ಷಕ ಬಣ್ಣಗಳ ವೈಶಿಷ್ಟ್ಯತೆ ಮತ್ತು ಹೊಸ ನವೀಕರಣಗಳು ಗ್ರಾಹಕರ ಆಯ್ಕೆ ಹೆಚ್ಚಿಸಲು ಸಹಕಾರಿಯಾಗುವ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ನವೀಕರಿಸಿದ ಆಡಿ ಎ4 ಮಾದರಿಯು ತನ್ನ ಪ್ರತಿಸ್ಪರ್ಧಿ ಮಾದರಿಗಳಾದ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಮತ್ತು ಬಿಎಂಡಬ್ಲ್ಯು 3 ಸೀರಿಸ್ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಇದು ಈ ವಿಭಾಗದಲ್ಲಿ ಉತ್ತಮ ಬೆಲೆಯೊಂದಿಗೆ ಹಲವಾರು ಹೊಸ ವೈಶಿಷ್ಯತೆ ಹೊಂದಿರುವ ಸೆಡಾನ್ ಮಾದರಿಯಾಗಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಇನ್ನು ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಆಡಿ ಕಂಪನಿಯು ಕೂಡಾ ತನ್ನ ಪ್ರಮುಖ ಐಷಾರಾಮಿ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಮಾಹಿತಿಗಳ ಪ್ರಕಾರ ಆಡಿ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಶೇ. 1ರಿಂದ ಶೇ.2.4 ರಷ್ಟು ಹೆಚ್ಚಳ ಮಾಡಬಹುದು ಎನ್ನಲಾಗಿದ್ದು, ಮುಂದಿನ ತಿಂಗಳು ಹೊಸ ಕಾರುಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳ ಮಾಡುತ್ತಿದೆ.

ಹೊಸ ಬಣ್ಣಗಳ ಆಯ್ಕೆ ಜೊತೆ ಹೆಚ್ಚುವರಿ ವೈಶಿಷ್ಟ್ಯತೆ ಹೊಂದಿರುವ ಆಡಿ ಎ4 ಬಿಡುಗಡೆ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿರುವುದರಿಂದ ಕಳೆದ ಕೆಲ ತಿಂಗಳಿನಲ್ಲಿ ಹೊಸ ಕಾರುಗಳ ಬೆಲೆಯು ಸಾಕಷ್ಟು ಹೆಚ್ಚಳವಾಗಿವೆ.

Most Read Articles

Kannada
Read more on ಆಡಿ audi
English summary
Audi a4 launched with new colours and updated features details
Story first published: Thursday, September 22, 2022, 22:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X