ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ 2022ರ ಆಡಿ ಎಲ್ ಎ8 ಐಷಾರಾಮಿ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

Recommended Video

Kia EV6 ಎಸ್‌ಯುವಿ ಭಾರತದಲ್ಲಿ ಬಿಡುಗಡೆ | Price Rs 59.95 Lakh | Warranty, Deliveries, Variants #Launch

ಇದೀಗ ಆಡಿ ಇಂಡಿಯಾ ತನ್ನ ಮುಂದಿನ ಮಾದರಿಯಾಗಿ ಆಡಿ ಕ್ಯೂ3 ಎಸ್‍ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಜರ್ಮನ್ ಕಾರು ತಯಾರಕ ಆಡಿ ಭಾರತದಲ್ಲಿ ಹೊಸ ಆಡಿ ಕ್ಯೂ3 ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಈ ಆಡಿ ಕ್ಯೂ3 ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು ರೂ.2 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇನ್ನು ಈ ಹೊಸ ಆಡಿ ಕ್ಯೂ3 ಎಸ್‍ಯುವಿಗಾಗಿ ಪ್ಯಾನ್-ಇಂಡಿಯಾ ರೋಡ್‌ಶೋವನ್ನು ಆಡಿ ಘೋಷಿಸಿದೆ. ಕಂಪನಿಯು ದೇಶಾದ್ಯಂತ 29 ಡೀಲರ್‌ಶಿಪ್‌ಗಳಲ್ಲಿ ಜರ್ಮನ್-ಸ್ಪೆಕ್ ಕಾರನ್ನು ಪ್ರದರ್ಶಿಸುತ್ತದೆ. ಆಡಿ ಕ್ಯೂ3 ರೋಡ್‌ಶೋ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಈ ರೋಡ್‌ಶೋ ಬಗ್ಗೆ, ಆಡಿ ಇಂಡಿಯಾದ ಮುಖ್ಯಸ್ಥರಾದ ಬಲ್ಬೀರ್ ಸಿಂಗ್ ಧಿಲ್ಲೋನ ಮಾತನಾಡಿ, ನಾವು ಅತ್ಯಂತ ಉತ್ಸುಕರಾಗಿದ್ದೇವೆ ಮತ್ತು ಭಾರತದಲ್ಲಿ ಹೊಸ ಆಡಿ ಕ್ಯೂ3 ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದೇವೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ವಿತರಣೆಯ ಮೊದಲು, ನಾವು ಗ್ರಾಹಕರಿಗೆ ಹೊಸ ಆಡಿ ಕ್ಯೂ3 ಎಸ್‍ಯುವಿಯ ಹತ್ತಿರದ ನೋಟವನ್ನು ನೀಡಲು ಬಯಸುತ್ತೇವೆ. ನಿರೀಕ್ಷಿತ ಗ್ರಾಹಕರು, ಬ್ರ್ಯಾಂಡ್ ಉತ್ಸಾಹಿಗಳು ಮತ್ತು ಆಡಿ ಕ್ಯೂ3 ಪ್ರೇಮಿಗಳು ಹೊಸ ಆಡಿ ಕ್ಯೂ3 ಅನ್ನು ನೋಡಲು ಉತ್ಸುಕರಾಗುತ್ತಾರೆ, ನಾವು ಅದನ್ನು ಪ್ರದರ್ಶಿಸಲು ಬಯಸುತ್ತೇವೆ ಎಂದು ಹೇಳಿದರು.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಅಹಮದಾಬಾದ್, ಬೆಂಗಳೂರು, ಭುವನೇಶ್ವರ್, ಚಂಡೀಗಢ, ಚೆನ್ನೈ, ಕೊಯಮತ್ತೂರು, ದೆಹಲಿ/ಎನ್‌ಸಿಆರ್, ಗೋವಾ, ಗುವಾಹಟಿ, ಹೈದರಾಬಾದ್, ಇಂದೋರ್, ಜೈಪುರ್, ಜಮ್ಮು, ಕರ್ನಾಲ್, ಕೋಲ್ಕತ್ತಾ, ಕೊಚ್ಚಿ, ಲಕ್ನೋ, ಲುಧಿಯಾನ, ಮಧುರ, ಮುಂಬೈ, ಪುಣೆ, ರಾಜ್‌ಕೋಟ್, ರಾಯ್‌ಪುರ, ಸೂರತ್, ಉದಯಪುರ ಮತ್ತು ವೈಜಾಗ್ ನಲ್ಲಿನ ಆಡಿ ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ರೋಡ್‌ಶೋಗಳು ನಡೆಯಲಿವೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಬುಕ್ಕಿಂಗ್ ಮಾಡಿದ ಮೊದಲ 500 ಗ್ರಾಹಕರು ವಿಸ್ತೃತ ವಾರಂಟಿ ಮತ್ತು ಸಮಗ್ರ ಸೇವಾ ಪ್ಯಾಕೇಜ್ ಸೇರಿದಂತೆ ಮಾಲೀಕತ್ವದ ಪ್ರಯೋಜನಗಳನ್ನು ಪಡೆಯುತ್ತಾರೆ. 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಹೊಸ ಆಡಿ ಕ್ಯೂ3 ಎಸ್‍ಯುವಿ ಬಿಡುಗಡೆಯಾಗಲಿದೆ. ಕೊರೋನಾ ಸೋಂಕಿನ ಕಾರಣ ಈ ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯ ಬಿಡುಗಡೆಯು ತಡೆವಾಗಿದೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಅದೇನೇ ಇದ್ದರೂ, 2022ರ ಆಡಿ ಕ್ಯೂ3 ಮೂಲಕ ಕಂಪನಿಯು ಇಂಡಿಯಾ ಪೋರ್ಟ್‌ಫೋಲಿಯೊದಲ್ಲಿ ಆಡಿ ಕ್ಯೂ2 ಪ್ರೀಮಿಯಂ ಕ್ರಾಸ್‌ಒವರ್ ಅನ್ನು ಒಂದೇ ಪೆಟ್ರೋಲ್ ಎಂಜಿನ್‌ನಂತೆ ರಿಫ್ರೆಶ್ ಮಾಡಿದ ಬಾಹ್ಯ ಶೈಲಿಯೊಂದಿಗೆ ನವೀಕರಿಸಿದ ಕ್ಯಾಬಿನ್ ಮತ್ತು ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಜರ್ಮನಿಯ ಐಷಾರಾಮಿ ಕಾರು ತಯಾರಕ, ಆಡಿ ಇತ್ತೀಚೆಗೆ ಕ್ಯೂ3 ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಆಡಿ ಕ್ಯೂ3 ಫೋಕ್ಸ್‌ವ್ಯಾಗನ್‌ನ ಬಹುಮುಖ MQB ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಅದು ಟಿಗ್ವಾನ್ ಮತ್ತು ಸ್ಕೋಡಾ ಕೊಡಿಯಾಕ್ ಅನ್ನು ಆಧಾರವಾಗಿದೆ. ಇದು ಹಿಂದಿನ ಮಾದರಿಗಿಂತ ಉದ್ದ ಮತ್ತು ಅಗಲವಾಗಿದೆ ಮತ್ತು ಕ್ಯಾಬಿನ್ ಒಳಗೆ ಹೆಚ್ಚಿನ ಸ್ಥಳಾವಕಾಶಕ್ಕಾಗಿ ವೀಲ್‌ಬೇಸ್ ಅನ್ನು ಸಹ ಹೆಚ್ಚಿಸಲಾಗಿದೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಈ ಹೊಸ ಆಡಿ ಕ್ಯೂ3 ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯ ಮುಂಭಾಗದ ಫಾಸಿಕದೊಂದಿಗೆ ಬರುತ್ತದೆ, ಇದು ಆಡಿಯ ಪ್ರಮುಖ ಕ್ಯೂ8 ಎಸ್‍ಯುವಿಯಿಂದ ಇದು ಪ್ರೇರಿತವಾಗಿದೆ. ಇದು ದೊಡ್ಡದಾದ ಮುಂಭಾಗದ ಗ್ರಿಲ್, ಷಡ್ಭುಜಾಕೃತಿಯ ಫಾಗ್ ಲ್ಯಾಂಪ್ ಮತ್ತು ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಬರುತ್ತದೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಈ ಎಸ್‍ಯುವಿ ಹಿಂದಿನ ಮಾದರಿಗೆ ಹೆಚ್ಚಾಗಿ ಹೋಲುತ್ತದೆ; ಇದು ನವೀಕರಿಸಿದ ಎಲ್ಇಡಿ ಟೈಲ್-ಲೈಟ್‌ಗಳು ಮತ್ತು ಪರಿಷ್ಕೃತ ಬಂಪರ್ ಅನ್ನು ಪಡೆಯುತ್ತದೆ. ಈ ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಈ ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕ್ಯಾಬಿನ್ ಒಳಗೆ ಮಾಡಲಾಗುತ್ತದೆ. 2022ರ ಆಡಿ ಕ್ಯೂ3 ಹಲವಾರು ಉನ್ನತ ತಂತ್ರಜ್ಞಾನದ ವೈಶಿಷ್ಟ್ಯಗಳೊಂದಿಗೆ ಎಲ್ಲಾ ಹೊಸ ಕ್ಯಾಬಿನ್‌ನೊಂದಿಗೆ ಬರುತ್ತದೆ. ಇದು 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುವ ಸಾಧ್ಯತೆಗಳಿದೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಈ ಎಸ್‍ಯುವಿಯ ಇತರ ವೈಶಿಷ್ಟ್ಯಗಳಲ್ಲಿ 360 ಡಿಗ್ರಿ ಕ್ಯಾಮೆರಾ, 15-ಸ್ಪೀಕರ್ ಬ್ಯಾಂಗ್ ಮತ್ತು ಒಲುಫ್‌ಸೆನ್ ಸೌಂಡ್ ಸಿಸ್ಟಮ್ ಮತ್ತು ಕ್ರೂಸ್ ಮತ್ತು ಪಾರ್ಕ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಕೂಡ ಸೇರಿವೆ. ಇದರ ಬೂಟ್ ಹೊಂದಾಣಿಕೆಯ ನೆಲವನ್ನು ಹೊಂದಿದೆ ಮತ್ತು 675-ಲೀಟರ್‌ಗಳ ಲಗೇಜ್ ಜಾಗವನ್ನು ನೀಡುತ್ತದೆ ಮತ್ತು ಅದರ ಹಿಂದಿನ ಸೀಟುಗಳನ್ನು ಮಡಚುವ ಮೂಲಕ ಇದರ ಸ್ಪೇಸ್ ಅನ್ನು 1,526-ಲೀಟರ್‌ಗಳಿಗೆ ವಿಸ್ತರಿಸಬಹುದು.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಈ ಹೊಸ ಆಡಿ ಕ್ಯೂ3 ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿ 45 TFSI ಉತ್ಪನ್ನದಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ, ಈ ಎಂಜಿನ್ 228 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ S ಟ್ರಾನಿಕ್ ಮತ್ತು ಕ್ವಾಟ್ರೋ ಡ್ರೈವ್ ಸಿಸ್ಟಮ್‌ಗೆ ಜೋಡಿಸಲಾಗಿದೆ. ಈ ಎಸ್‍ಯುವಿಯು 233 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಪ್ಯಾನ್-ಇಂಡಿಯಾ ರೋಡ್‌ಶೋಗೆ ಸಜ್ಜಾದ ಹೊಸ ಆಡಿ ಕ್ಯೂ3

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಆಡಿ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಆಡಿ ಕ್ಯೂ3 ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ, ಈ ಹೊಸ ಆಡಿ ಕ್ಯೂ3 ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು ಎಕ್ಸ್1, ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ವೊಲ್ವೊ XC40 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಆಡಿ audi
English summary
Audi announces all india road show for new audi q3 suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X