Just In
- 43 min ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 49 min ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 2 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
- 2 hrs ago
ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಇಂದು ಬಿಡುಗಡೆ: ಹೇಗರಲಿವೆ ವಿನ್ಯಾಸ, ಬೆಲೆ, ವೈಶಿಷ್ಟ್ಯಗಳು!
Don't Miss!
- News
ಮನೆ ಬಾಡಿಗೆ ಮೇಲೂ ಶೇಕಡಾ 18ರಷ್ಟು ಜಿಎಸ್ಟಿ ಕಟ್ಟಬೇಕಾ?: ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
- Technology
ಸದ್ದಿಲ್ಲದೇ ಮತ್ತೆ ಹೊಸ ಪ್ಲ್ಯಾನ್ ಪರಿಚಯಿಸಿದ 'ಜಿಯೋ'!..180GB ಡೇಟಾ ಪಕ್ಕಾ!
- Movies
ನೇರ ನುಡಿಯ ಸ್ವಾಭಿಮಾನಿ ಗಾಯಕ ಶಿವಮೊಗ್ಗ ಸುಬ್ಬಣ್ಣ: ಗಾಯಕಿ ಬಿ. ಕೆ ಸುಮಿತ್ರಾ ಸಂದರ್ಶನ
- Finance
ತೆರಿಗೆ ದರ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಪ್ರಯೋಜನ ನೋಡಿ!
- Sports
Asia Cup 2022: ರಾಹುಲ್ ಅಲ್ಲ, ಈತ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿ; ಪಾಕ್ ಕ್ರಿಕೆಟಿಗ
- Travel
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
- Lifestyle
ಹಣ್ಣು ಹೇಗೆ ಸೇವಿಸಬೇಕು? : ಹಣ್ಣು ಸೇವನೆ ವೇಳೆ ಈ ರೀತಿಯ ಮಿಸ್ಟೇಕ್ ನೀವು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಿ
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಕ್ಯೂ3 ಎಂಟ್ರಿ ಲೆವಲ್ ಎಸ್ಯುವಿ
ಆಡಿ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಹೊಸ ಕಾರು ಮಾದರಿಗಳಲ್ಲಿ ಕ್ಯೂ3 ಎಸ್ಯುವಿ ಕೂಡಾ ಒಂದಾಗಿದೆ.

ಪ್ರತಿಸ್ಪರ್ಧಿ ಮಾದರಿಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಆಡಿ ಇಂಡಿಯಾ ಕಂಪನಿಯು ಹೊಸ ಮಾದರಿಗಳೊಂದಿಗೆ ಬೇಡಿಕೆ ಸುಧಾರಿಸಿಕೊಳ್ಳುವ ನೀರಿಕ್ಷೆಯಲ್ಲಿದ್ದು, ಶೀಘ್ರದಲ್ಲಿಯೇ ಕಂಪನಿಯು ಎಂಟ್ರಿ ಲೆವಲ್ ಐಷಾರಾಮಿ ಕಾರು ಮಾದರಿಗಳನ್ನು ಖರೀದಿಸುವ ಗ್ರಾಹಕರನ್ನು ಗುರಿಯಾಗಿಸಿ ಕ್ಯೂ3 ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಎಂಟ್ರಿ ಲೆವಲ್ ಐಷಾರಾಮಿ ಕಾರು ಮಾರಾಟ ವಿಭಾಗವು ಸಾಕಷ್ಟು ಬೆಳವಣಿಗೆ ಕಾಣುತ್ತಿದ್ದು, ಈ ಹಿನ್ನಲೆಯಲ್ಲಿ ಆಡಿ ಕಂಪನಿಯು ತನ್ನ ಮಾತೃಸಂಸ್ಥೆಯಾದ ಫೋಕ್ಸ್ವ್ಯಾಗನ್ ಕಂಪನಿಯ ಎಂಕ್ಯೂಬಿ ಪ್ಲ್ಯಾಟ್ಫಾರ್ಮ್ ಆಧರಿಸಿ ಹೊಸ ಕ್ಯೂ3 ನಿರ್ಮಾಣ ಮಾಡಲಾಗಿದೆ.

2019ರಲ್ಲಿ ಮೊದಲ ಬಾರಿಗೆ ಬಿಡುಗಡೆಯ ನಂತರ ಕ್ಯೂ3 ಮಾದರಿಯ ಮಾರಾಟವನ್ನು ಇತ್ತೀಚೆಗೆ ಜಾರಿಗೆ ಬಂದ ಹೊಸ ಎಮಿಷನ್ ಮಾನದಂಡದಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಹೊಸ ಮಾದರಿಯನ್ನು ಸುಧಾರಿತ ತಂತ್ರಜ್ಞಾನ ಪ್ರೇರಿತ ಪ್ಲ್ಯಾಟ್ಫಾರ್ಮ್ ಆಧರಿಸಿ ನಿರ್ಮಾಣ ಮಾಡಲಾಗಿದ್ದು, ಹೊಸ ಮಾದರಿಯ ಮೇಲೆ ಕಂಪನಿಯು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಫೋಕ್ಸ್ವ್ಯಾಗನ್ ಕಂಪನಿಯ ಹೊಸ ಪ್ಲ್ಯಾಟ್ಫಾರ್ಮ್ನಲ್ಲಿ ಈಗಾಗಲೇ ಟಿಗ್ವಾನ್ ಎಸ್ಯುವಿ ಮತ್ತು ಸ್ಕೋಡಾ ಕಂಪನಿಯ ಕೊಡಿಯಾಕ್ ಎಸ್ಯುವಿಗಳು ಉತ್ಪಾದನೆಗೊಳ್ಳುತ್ತಿದ್ದು, ಇದೀಗ ಹೊಸ ಆಡಿ ಕ್ಯೂ3 ಮಾದರಿಯು ಕೂಡಾ ಹೊಸ ಪ್ಲ್ಯಾಟ್ಫಾರ್ಮ್ ಆಧರಿಸಿ ಮಾರಾಟಗೊಳ್ಳಲಿದೆ.

ಹೊಸ ಪ್ಲ್ಯಾಟ್ಫಾರ್ಮ್ನಿಂದಾಗಿ ಉತ್ಪಾದನಾ ವೆಚ್ಚಗಳು ಗಣನೀಯವಾಗಿ ತಗ್ಗುವುದಲ್ಲದೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳ ಜೋಡಣೆಗೆ ನೆರವಾಗಲಿದ್ದು, ಇದು ಭಾರತದಲ್ಲಿ ಎಂಟ್ರಿ ಲೆವಲ್ ಐಷಾರಾಮಿ ಕಾರು ಖರೀದಿ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ.

ಕ್ಯೂ3 ಹೊಸ ಮಾದರಿಯಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ಗಳೊಂದಿಗೆ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ಲ್ಯಾಂಪ್ಗಳು, ಮುಂಭಾಗದಲ್ಲಿ ದೊಡ್ಡದಾದ ಗ್ರಿಲ್, ವಿನೂತನ ವಿನ್ಯಾಸದ ಫಾಗ್ ಲ್ಯಾಂಪ್, ಸುತ್ತುವರೆದಿರುವ ಬ್ಲ್ಯಾಕ್ಡ್-ಔಟ್ ಸೈಡ್ ಸ್ಕರ್ಟ್ಗಳು ಮತ್ತು ನವೀಕರಿಸಿದ ಎಲ್ಇಡಿ ಟೈಲ್ ಲೈಟ್ಗಳನ್ನು ಹೊಂದಿರುತ್ತದೆ.

ವೈಶಿಷ್ಟ್ಯಗಳ ವಿಷಯದಲ್ಲಿ ಹೊಸ ಆಡಿ ಕ್ಯೂ3 ಎಸ್ಯುವಿಯು ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳೊಂದಿಗೆ ಉತ್ತಮ ಮಾದರಿಯಾಗಲಿದ್ದು, ಹೊಸ ಕಾರಿನಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 10.1-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸ್ಕ್ರೀನ್, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ ಸಿಸ್ಟಂ ಮತ್ತು ಡ್ರೈವರ್ ಅಸಿಸ್ಟ್ ಜೊತೆಗೆ ಕನೆಕ್ಟ್ ಪ್ಯಾಕೇಜ್ ಸೂಟ್ ಹೊಂದಿರಲಿದೆ.

ಹೊಸ ತಲೆಮಾರಿನ ಕ್ಯೂ3 ಮಾದರಿಯು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ 3 ಪವರ್ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದ್ದರೂ ಭಾರತದಲ್ಲಿ ಹೊಸ ಆವೃತ್ತಿಯು 190 ಬಿಎಚ್ಪಿ ವೈಶಿಷ್ಟ್ಯತೆಯ 2.0-ಲೀಟರ್ ಟರ್ಬೋಚಾರ್ಜ್ಡ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ನೊಂದಿಗೆ ಲಭ್ಯವಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದಲ್ಲದೆ ಹೊಸ ಎಂಜಿನ್ ಅನ್ನು ಆಡಿ ಕಂಪನಿಯು ಅತ್ಯುತ್ತಮ 7-ಸ್ಪೀಡ್ ಡಿಸಿಟಿ ಗೇರ್ಬಾಕ್ಸ್ನೊಂದಿಗೆ ಜೋಡಿಸಲಿದ್ದು, ಇದು ಮರ್ಸಿಡಿಸ್ ಬೆಂಝ್ ಜಿಎಲ್ಎ, ವೊಲ್ವೊ ಎಕ್ಸ್ಸಿ40 ಮತ್ತು ಬಿಎಂಡಬ್ಲ್ಯು ಎಕ್ಸ್1 ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಇನ್ನು ಭಾರತದಲ್ಲಿ ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚಿನ ತೆರಿಗೆ ದರಗಳು ಕಾರು ಮಾರಾಟದ ಮೇಲೆ ಪರಿಣಾಮ ಬೀರುತ್ತಿವೆ ಎಂದಿರುವ ಆಡಿ ಕಂಪನಿಯು ಐಷಾರಾಮಿ ಕಾರು ತಯಾರಕ ಕಂಪನಿಗಳಿಗೆ ನೆರವು ನೀಡಲು ಸರ್ಕಾರ ಸುಂಕವನ್ನು ಕಡಿತಗೊಳಿಸಬೇಕು ಮನವಿ ಮಾಡಿತ್ತು.

ಐಷಾರಾಮಿ ಕಾರುಗಳ ವಿಭಾಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಆಡಿ ಕಂಪನಿಯು ದೇಶದಲ್ಲಿ ಐಷಾರಾಮಿ ಕಾರುಗಳ ಪಾಲು 2% ಗಿಂತ ಕಡಿಮೆಯಿದ್ದು, ಕಳೆದ ಒಂದು ದಶಕದಿಂದ ಇದೇ ಪರಿಸ್ಥಿತಿ ಇದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿದ್ದ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್, ಭಾರತದಲ್ಲಿ ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಐಷಾರಾಮಿ ಕಾರು ವಿಭಾಗವು ಸ್ಥಬ್ದವಾಗಿದೆ ಎಂದು ಹೇಳಿದ್ದರು.

ಇತರೆ ಕಾರು ವಿಭಾಗಗಳು ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಐಷಾರಾಮಿ ಕಾರುಗಳ ವಾರ್ಷಿಕ ಮಾರಾಟವು 40,000 ಯುನಿಟ್ಗಳನ್ನು ಮೀರಿ ಬೆಳೆಯುತ್ತಿಲ್ಲ ಎಂದಿದ್ದ ಆಡಿ ಮುಖ್ಯಸ್ಥರು ಕೋವಿಡ್ ಮತ್ತು ಕಂಡಕ್ಟರ್ ಚಿಪ್ಗಳ ಕೊರತೆಯಿಂದಾಗಿ ಮಾರಾಟ ಅಂಕಿ ಅಂಶಗಳ ಮೇಲೆ ಪರಿಣಾಮ ಬೀರಬಹುದು ಎಂದಿದ್ದರು.

ಇದೀಗ ಪರಿಸ್ಥಿತಿ ತುಸು ಸುಧಾರಿಸಿರುವುದರಿಂದ ಹೊಸ ಕಾರು ಉತ್ಪನ್ನಗಳೊಂದಿಗೆ ಆಡಿ ಕಂಪನಿಯು ಇದೀಗ ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಕಂಪನಿಯು ಮುಂದಿನ ತಿಂಗಳು ಹೊಸ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.