ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದೆ.

Recommended Video

Maruti Alto K10 Launched At Rs 3.99 Lakh | What’s New On The Hatchback? Dual-Jet VVT & AMT

ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಆಡಿ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಲು ನಿರ್ಧರಿಸಿದೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಆಡಿ ಕಂಪನಿಯು ಕೂಡಾ ತನ್ನ ಪ್ರಮುಖ ಐಷಾರಾಮಿ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಮಾಹಿತಿಗಳ ಪ್ರಕಾರ ಆಡಿ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಶೇ. 1ರಿಂದ ಶೇ.2.4 ರಷ್ಟು ಹೆಚ್ಚಳ ಮಾಡಬಹುದು ಎನ್ನಲಾಗಿದ್ದು, ಹೊಸ ದರ ಪಟ್ಟಿ ಸೆಪ್ಟೆಂಬರ್ ಆರಂಭದಲ್ಲಿ ಪ್ರಕಟವಾಗಲಿದೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಕೋವಿಡ್‌ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, ಬಹುತೇಕ ಕಂಪನಿಗಳು 2022ರಲ್ಲಿಯೇ ಎರಡರಿಂದ ಮೂರು ಬಾರಿ ದರ ಹೆಚ್ಚಿಸಿವೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿರುವುದರಿಂದ ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 60 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ಐಷಾರಾಮಿ ಕಾರುಗಳ ಬೆಲೆಯಲ್ಲಿ ರೂ. 2 ಲಕ್ಷದಿಂದ ರೂ. 5 ಲಕ್ಷದ ತನಕ ದರ ಹೆಚ್ಚಳವಾಗಿವೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಇನ್ನು ಭಾರತದಲ್ಲಿ ಪ್ರಮುಖ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಸಾಮಾನ್ಯ ಇವಿ ಕಾರುಗಳ ಜೊತೆಗೆ ಐಷಾರಾಮಿ ಇವಿ ಕಾರು ಮಾದರಿಗಳು ಸಹ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಕಾರು ಕಂಪನಿಗಳು ವಿವಿಧ ಮಾದರಿಯ ಹಲವು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಆಡಿ ಇಂಡಿಯಾ ಕೂಡಾ ಈಗಾಗಲೇ ಇ-ಟ್ರಾನ್ ಸರಣಿಯಲ್ಲಿ ವಿವಿಧ ಮೂರು ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಇವಿ ಕಾರುಗಳ ಬಿಡುಗಡೆಗೂ ಮುನ್ನ ಆಡಿ ಕಂಪನಿಯು ಭಾರತ ಸರ್ಕಾರಕ್ಕೆ ವಿನಾಯ್ತಿ ಕೋರಿದೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಎಲೆಕ್ಟ್ರಿಕ್ ವಾಹನಗಳ ಅವಡಿಕೆಯಲ್ಲಿ ಪ್ರಾಥಮಿಕ ಹಂತದಲ್ಲಿ ಭಾರತದಲ್ಲಿ ವೇಗವಾಗಿ ಇವಿ ವಾಹನಗಳ ಅಳವಡಿಕೆಗೆ ಅನುಕೂಲಕರವಾಗುವಂತೆ ಆರಂಭಿಕ 3ರಿಂದ 5 ವರ್ಷಗಳ ಕಾಲ ತೆರಿಗೆಯಲ್ಲಿ ವಿನಾಯ್ತಿ ನೀಡುವ ಅಶವ್ಯವಿದೆ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

"ಮಧ್ಯಮ ತೆರಿಗೆ ಮತ್ತು ಸ್ಥಿರ ನೀತಿ" ಯೊಂದಿಗೆ ಭಾರತೀಯ ಐಷಾರಾಮಿ ಇವಿ ಮಾರುಕಟ್ಟೆಯು ಪ್ರಸ್ತುತ ಮಟ್ಟಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗುವ ನೀರಿಕ್ಷೆ ವ್ಯಕ್ತಪಡಿಸಿರುವ ಆಡಿ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ಹೊಸ ಇವಿ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಪ್ರಸ್ತುತ ಮಾರುಕಟ್ಟೆಯಲ್ಲಿ ವಿದೇಶಿ ಮಾರುಕಟ್ಟೆಗಳಿಂದ ನೇರವಾಗಿ ಆಮದು ಮಾಡಿಕೊಳ್ಳುವ ಎಲ್ಲಾ ಮಾದರಿಗಳಿಗೂ ಎರಡು ಹಂತದ ಆಮದು ತೆರಿಗೆ ವಿಧಿಸಲಾಗುತ್ತಿದ್ದು, ರೂ.31 ಲಕ್ಷ ಮೇಲ್ಪಟ್ಟ ದರದ ಕಾರುಗಳಿಗೆ ಶೇ. 60ರಷ್ಟು ಮತ್ತು ರೂ. 31 ಲಕ್ಷ ಮೇಲ್ಪಟ್ಟ ಕಾರುಗಳಿಗೆ ಶೇ. 100 ರಷ್ಟು ಆಮದು ಸುಂಕ ವಿಧಿಸಲಾಗುತ್ತದೆ.

ಸೆಪ್ಟೆಂಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಆಡಿ ಐಷಾರಾಮಿ ಕಾರುಗಳ ಬೆಲೆ

ಅದರಲ್ಲೂ ಎಲೆಕ್ಟ್ರಿಕ್ ಕಾರು ಮಾದರಿಗಳು ಮೊದಲೇ ಇಂಧನ ಚಾಲಿತ ಮಾದರಿಗಿಂತಲೂ ದುಪ್ಟಟ್ಟ ದರ ಹೊಂದಿರುವುದಲ್ಲದೆ ಆಮದು ಸುಂಕದೊಂದಿಗೆ ಮತ್ತಷ್ಟು ದುಬಾರಿಯಾಗಿರಲಿವೆ. ಹೀಗಾಗಿ ಐಷಾರಾಮಿ ಇವಿ ವಾಹನ ವಾಹನ ಮಾರಾಟವು ಸಾಕಷ್ಟು ದುಬಾರಿಯಾಗಿದ್ದು, ಇದೇ ಕಾರಣಕ್ಕೆ ಆರಂಭದಲ್ಲಿ ಇವಿ ವಾಹನ ಅಳವಡಿಕೆ ಸಹಕಾರಿಯಾಗುವಂತೆ ಆಡಿ ಕಂಪನಿಯು ವಿನಾಯ್ತಿ ಕೋರಿದೆ.

Most Read Articles

Kannada
Read more on ಆಡಿ audi
English summary
Audi luxury cars price hike upto 2 4 percent details
Story first published: Tuesday, August 23, 2022, 22:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X