ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಆಡಿ ಇಂಡಿಯಾ(Audi India) ಕಂಪನಿಯು ತನ್ನ ನವೀಕರಿಸಿದ ಕ್ಯೂ7(Q7) ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರು ಮುಂದಿನ ತಿಂಗಳು 3ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ನವೀಕೃತ ಆಡಿ ಕ್ಯೂ7 ಎಸ್‍ಯುವಿಯನ್ನು ಆಡಿ ಕಂಪನಿಯು ಇದೀಗ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಗೊಳಿಸುತ್ತಿದ್ದು, ಮಹಾರಾಷ್ಟ್ರದಲ್ಲಿರುವ ಔರಂಗಾಬಾದ್‌ನಲ್ಲಿರುವ ಆಡಿ ಅಸ್ಲೆಂಬಿ ಘಟಕದಲ್ಲಿ ಹೊಸ ಕಾರಿನ ಉತ್ಪಾದನೆಯು ಅಧಿಕೃತವಾಗಿ ಆರಂಭಗೊಂಡಿದೆ. ಹೊಸ ಕಾರು ಈ ಬಾರಿಗೆ ಸಾಕಷ್ಟು ಹೊಸ ಬದಲಾವಣೆಗಳನ್ನು ಪಡೆದುಕೊಂಡಿರಲಿದ್ದು, ಹೊಸ ಕಾರು ಖರೀದಿಗೆ ರೂ.5 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆ ಕೈಗೊಂಡಿದೆ.

ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಬಿಎಸ್6 ಮಾಲಿನ್ಯ ನಿಯಮ ಜಾರಿ ನಂತರ ಕ್ಯೂ7 ಎಸ್‍ಯುವಿ ಮಾರಾಟವನ್ನು ಸ್ಥಗಿತಗೊಳಿಸಿದ್ದ ಆಡಿ ಕಂಪನಿಯು ಇದೀಗ ಉನ್ನತೀಕರಿಸಲಾದ ಎಂಜಿನ್‌ನೊಂದಿಗೆ 2022ರ ಆಡಿ ಕ್ಯೂ7 ಫೇಸ್‌ಲಿಫ್ಟ್ ಬಿಡುಗಡೆ ಮಾಡುತ್ತಿದ್ದು, ಗಮನಾರ್ಹವಾದ ಕಾಸ್ಮೆಟಿಕ್ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.

ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಹೊಸ ಆಡಿ ಕ್ಯೂ7 ಎಸ್‍ಯುವಿಯಲ್ಲಿ ಆಡಿ ಕಂಪನಿಯು ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ನೀಡಬಹುದಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ 3.0 ಲೀಟರ್ ವಿ6 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ನೀಡಲಾಗುತ್ತಿದ್ದು,ಈ ಎಂಜಿನ್ 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಣೆ ಮಾಡಲಾದ ಮೋಟಾರ್ ಅನ್ನು ಹೊಂದಿದೆ.

ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

3.0 ಲೀಟರ್ ವಿ6 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಮಾದರಿಯು 8 ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಆಡಿ ಕ್ವಾಟ್ರೊ ಎಡಬ್ಲ್ಯುಡಿ ಸಿಸ್ಟಮ್‌ಗೆ ಜೋಡಿಯಾಗಿ ಹೆಚ್ಚು ಪವರ್ ಪಡೆದುಕೊಂಡಿದೆ.

ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಹಾಗೆಯೇ ಹೊಸ ಎಸ್‍ಯುವಿಯ ಆರಂಭಿಕ ಮಾದರಿಯಲ್ಲಿ 2.0 ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸಹ ನೀಡಬಹುದಾಗಿದ್ದು, ಈ ಎಂಜಿನ್ 252 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಬೆಸ್ ಆವೃತ್ತಿಯು ಆಯಿಲ್ ಬರ್ನರ್ ಅನ್ನು ಹೊಂದಿರುವುದಿಲ್ಲವಾದರೂ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗುತ್ತದೆ.

ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಹೊಸ ಆಡಿ ಕ್ಯೂ7 ಎಸ್‍ಯುವಿಯು ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ ಹೊಸ ಕಾರಿನಲ್ಲಿ ದೊಡ್ಡದಾದ, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಹೊಂದಿದ್ದು, ನೇರವಾದ ಸ್ಲ್ಯಾಟ್‌ಗಳು, ಸ್ಪೋರ್ಟಿಯರ್ ಬಂಪರ್ ಎರಡು ಭಾಗಗಳ ಸೈಡ್ ಏರ್ ಇನ್‌ಲೆಟ್‌ಗಳು, ದಪ್ಪ ಕ್ಲಾಡಿಂಗ್ ಮತ್ತು ಎಲ್-ಆಕಾರದ ಏರ್ ಸ್ಪ್ಲಿಟರ್ ಅನ್ನು ಹೊಂದಿರುತ್ತದೆ.

ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಆಡಿ ಲೇಸರ್ ಲೈಟ್ ನೊಂದಿಗೆ HD ಮ್ಯಾಟ್ರಿಕ್ಸ್ ಎಲ್ಇಡಿ ಒಂದು ಆಯ್ಕೆಯಾಗಿ ಬರುತ್ತದೆ. ಅದರ ಕೆಲವು ಇತರೆ ವಿನ್ಯಾಸಗಳು ಹೊಸದಾಗಿ ವಿನ್ಯಾಸಗೊಳಿಸಲಾದ 19-ಇಂಚಿನ ಅಲಾಯ್ ವ್ಹೀಲ್ ನೊಂದಿಗೆ ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕಗೊಂಡಿರುವ ಹೊಸ ಟೈಲ್‌ಲ್ಯಾಂಪ್‌ಗಳು ಮತ್ತು ನವೀಕರಿಸಿದ ರಿಯರ್ ಬಂಪರ್ ಅನ್ನು ಒಳಗೊಂಡಿರುತ್ತದೆ.

ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಸ್ಥಗಿತಗೊಳಿಸಲಾಗಿರುವ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು 11 ಎಂಎಂ ಹೆಚ್ಚುವರಿ ಸ್ಥಳಾವಕಾಶದೊಂದಿಗೆ 5063 ಎಂಎಂ ಉದ್ದ ಹೊಂದಿದ್ದು, ಇದು 1970 ಎಂಎಂ ಅಗಲ ಮತ್ತು 1741 ಎಂಎಂ ಎತ್ತರವನ್ನು ಹೊಂದಿದೆ.

ಫೆಬ್ರುವರಿ 3ರಂದು ಬಿಡುಗಡೆಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಕ್ಯಾಬಿನ್ ಒಳಗೂ ಆಡಿ ಕಂಪನಿಯು ಸಮಗ್ರವಾಗಿ ನವೀಕರಣಗಳನ್ನು ಪರಿಚಯಿಸಿದ್ದು, ಇದು ಪಿಯಾನೋ ಬ್ಲಾಕ್, ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಹೈಲೈಟ್‌ಗಳ ಜೊತೆಗೆ ಸಾಕಷ್ಟು ಸುಧಾರಿತವಾಗಿದೆ.

ಫೆಬ್ರುವರಿ 3ರಂದು ಬಿಡುಗಡೆ ಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಇಂಟಿಗ್ರೇಟೆಡ್ ಆಡಿಯ ಟ್ವಿನ್-ಟಚ್‌ಸ್ಕ್ರೀನ್ ಎಂಎಂಐ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಹೊಸ ಡ್ಯಾಶ್‌ಬೋರ್ಡ್‌ನ ರೂಪದಲ್ಲಿ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ. ಮುಖ್ಯ ಯುನಿಟ್ 10.1-ಇಂಚಿನ ಮತ್ತು 8.6-ಇಂಚಿನ ಎರಡು ಡಿಸ್ ಪ್ಲೇ ಗಳನ್ನು ಹೊಂದಿದ್ದು, ಈ ಎಸ್‍ಯುವಿ ವರ್ಚುವಲ್ ಕಾಕ್‌ಪಿಟ್ ಸಿಸ್ಟಮ್ ಜೊತೆಗೆ 12.3-ಇಂಚಿನ ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ.

ಫೆಬ್ರುವರಿ 3ರಂದು ಬಿಡುಗಡೆ ಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಹೊಸ ಕಾರಿನ ವೈಶಿಷ್ಟ್ಯತೆಗಳು ಕೂಡಾ ಆಕರ್ಷಕವಾಗಿದ್ದು, ಬ್ಯಾಂಗ್ ಮತ್ತು ಒಲುಫ್ಸೆನ್ ಸೌಂಡ್ ಸಿಸ್ಟಮ್, ನಾಲ್ಕು ಝೋನ್ ಕ್ಲೈಮೇಂಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್ ಪ್ಲೇ, ಹೊಸ ಎಲ್‌ಟಿಇ ಸುಧಾರಿತ ಕನೆಕ್ಟಿವಿಟಿ ಸೌಲಭ್ಯಗಳಿವೆ.

ಫೆಬ್ರುವರಿ 3ರಂದು ಬಿಡುಗಡೆ ಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಜೊತೆಗೆ ನ್ಯಾಚುರಲ್ ವಾಯ್ಸ್ ಕಂಟ್ರೋಲ್, ವೈ-ಫೈ ಹಾಟ್‌ಸ್ಪಾಟ್, ಆಡಿ ಕನೆಕ್ಟ್ ಪೋರ್ಟ್‌ಫೋಲಿಯೊ, ಕ್ಲೌಡ್-ಆಧಾರಿತ ಅಮೆಜಾನ್ ವಾಯ್ಸ್ ಸರ್ವಿಸ್, ಎಲೆಕ್ಟ್ರಿಕ್ ಟೈಲ್‌ಗೇಟ್, ಎಲೆಕ್ಟ್ರೋಮೆಕ್ಯಾನಿಕಲ್ ಆಕ್ಟಿವ್ ರೋಲ್ ಸ್ಟೆಬಿಲೈಸೇಶನ್, ಆಲ್-ವೀಲ್ ಸ್ಟೀರಿಂಗ್ ಮತ್ತು ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಹೊಂದಿದೆ.

ಫೆಬ್ರುವರಿ 3ರಂದು ಬಿಡುಗಡೆ ಯಾಗಲಿದೆ ಭಾರತದಲ್ಲಿಯೇ ಅಭಿವೃದ್ದಿಗೊಂಡ ಆಡಿ ಕ್ಯೂ7 ಎಸ್‌ಯುವಿ

ಆಡಿ ಕ್ಯೂ7 ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಯಲ್ಲಿರುವ ಹೊಸ ಬಿಎಂಡಬ್ಕ್ಯು ಎಕ್ಸ್7, ಮರ್ಸಿಡಿಸ್ ಬೆಂಝ್ ಜಿಎಲ್ಎಸ್, ವೊಲ್ವೊ ಎಕ್ಸ್‌ಸಿ90 ಹೈಬ್ರಿಡ್ ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಂಡು ಬಿಡುಗಡೆಯಾಗುತ್ತಿರುವುದರಿಂದ ಬೆಲೆ ಇಳಿಕೆಗೂ ಸಹಕಾರಿಯಾಗಿದೆ.

Most Read Articles

Kannada
Read more on ಆಡಿ audi
English summary
Audi new q7 facelift suv price launch date revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X