BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ಐಷಾರಾಮಿ ಕಾರುಗಳ ತಯಾರಿಯಲ್ಲಿ ತನ್ನದೇ ಬ್ರ್ಯಾಂಡ್ ಅನ್ನು ಗುರ್ತಿಸಿಕೊಂಡಿರುವ ಪ್ರಮುಖ ಕಾರು ತಯಾರಕ ಸಂಸ್ಥೆ ಬಿಎಂಡಬ್ಲ್ಯು ಈ ವರ್ಷದ ಅಂತ್ಯದೊಳಗೆ ಹತ್ತು ವಿಶೇಷ ಆವೃತ್ತಿಯ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ಜರ್ಮನಿ ಮೂಲದ ಈ ಐಷಾರಾಮಿ ಕಾರು ತಯಾರಕ ಕಂಪನಿ ಇತ್ತೀಚೆಗೆ ಈ ಕುರಿತ ಮಾಹಿತಿಯನ್ನು ಪ್ರಕಟಿಸಿದೆ. ಕಂಪನಿಯು M ಮತ್ತು M ಸ್ಪೋರ್ಟ್ ರೂಪಾಂತರಗಳಲ್ಲಿ 10 ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಇವೆಲ್ಲವನ್ನೂ ಈ ವರ್ಷದ ಕೊನೆಯಲ್ಲಿ ಮಾರಾಟ ಮಾಡಲು ಕಂಪನಿಯು ಯೋಜಿಸಿದೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ಈ ಹತ್ತು ಹೊಸ ಆವೃತ್ತಿಗಳನ್ನು ಪರಿಚಯಿಸಲು ಒಂದು ಕಾರಣವಿದೆ. BMW 'M' ವಿಭಾಗವನ್ನು ಪರಿಚಯಿಸಿ 2022ಕ್ಕೆ 50 ವರ್ಷಗಳು ಕಳೆದಿವೆ. ಈ ಐತಿಹಾಸಿಕ ವರ್ಷದ ಆಚರಣೆಯ ಭಾಗವಾಗಿ M ಮತ್ತು M ಸ್ಪೋರ್ಟ್ ರೂಪಾಂತರಗಳಲ್ಲಿ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡುವುದಾಗಿ ಬಿಎಂಡಬ್ಲ್ಯು ಕಾರು ತಯಾರಕರು ಘೋಷಿಸಿದ್ದಾರೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

M ಎಂಬುದು ಮೋಟಾರ್‌ಸ್ಪೋರ್ಟ್ ಎಂಬ ಅರ್ಥವನ್ನು ನೀಡುವ ಪದವಾಗಿದ್ದು, ಈ ವಿಭಾಗವನ್ನು BMW ಮೇ 24, 1972 ರಂದು ಪ್ರಾರಂಭಿಸಿತು. ಈ ವಿಭಾಗದಲ್ಲಿ ತಯಾರಿಸಲಾದ ಕಾರು ಮಾದರಿಗಳು ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿವೆ. ಹಾಗಾಗಿ ಈ ವಿಭಾಗವು 50 ವರ್ಷಗಳಿಂದ ಸಕ್ರಿಯವಾಗಿದ್ದು ಇನ್ನು ಹಲವು ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ತನ್ನ 50 ನೇ ವಾರ್ಷಿಕೋತ್ಸವವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು BMW ಯೋಜಿಸಿದೆ. ಪ್ರಸ್ತುತ ಮಾರಾಟಕ್ಕೆ ಯೋಜಿಸಲಾಗಿರುವ ಎಲ್ಲಾ ವಿಶೇಷ ಆವೃತ್ತಿಗಳು ಈ ವರ್ಷದೊಳಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಆದ್ದರಿಂದ, BMW ಐಷಾರಾಮಿ ಕಾರು ಉತ್ಸಾಹಿಗಳು ಅದರ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

M ವರ್ಗದಲ್ಲಿ ಮಾರಾಟಕ್ಕೆ ಲಭ್ಯವಿರುವ ವಾಹನಗಳು ರೇಸ್ ಕಾರುಗಳಿಗೆ ಸಮನಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಹಾಗಾಗಿ ಈ ಮಾದರಿಗಳಿಗೆ ರೇಸ್ ಕಾರು ಪ್ರಿಯರಲ್ಲಿ ಉತ್ತಮ ಬೇಡಿಕೆ ಇದೆ. ಹಾಗಾಗಿಯೇ ಬಿಎಂಡಬ್ಲ್ಯು ಹತ್ತು ವಿಶೇಷ ಆವೃತ್ತಿಯ ಎಂ ಮತ್ತು ಎಂ ಸ್ಪೋರ್ಟ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ಇವುಗಳಲ್ಲಿ ಕೆಲವನ್ನು ಸ್ಥಳೀಯವಾಗಿ ನಿರ್ಮಿಸಿ ಅವುಗಳಲ್ಲಿ ಕೆಲವನ್ನು ಸಿಪಿಯು ಮೂಲಕ ಮಾರಾಟ ಮಾಡಲು ಯೋಜಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ವಿಶೇಷ ಆವೃತ್ತಿಯ ಎಂ ಮತ್ತು ಎಂ ಸ್ಪೋರ್ಟ್ ವಾಹನಗಳನ್ನು ಕ್ಲಾಸಿಕ್ ಪೇಂಟ್ ಫಿನಿಶ್ ಮತ್ತು ಅದ್ಭುತ ಡಿಸೈನ್ ಅಕ್ಸೆಂಟ್‌ಗಳೊಂದಿಗೆ ಅಲಂಕರಿಸಲಾಗುವುದು.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

BMW ಪ್ರಕಾರ, ಕಾರು M ವಿಭಾಗದ 50 ವರ್ಷಗಳ ಇತಿಹಾಸದಲ್ಲಿ ಇದುವರೆಗು ಬಳಸದ ಬಣ್ಣದ ಕೋಟ್ ಅನ್ನು ಹೊಂದಿರಲಿದೆ. ಈ ಐವತ್ತು ವರ್ಷಗಳ ಇತಿಹಾಸವನ್ನು ನೆನಪಿಸುವ ರೀತಿಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗುತ್ತಿದೆ. ಇದರ ಜೊತೆಗೆ, 1972 ರಲ್ಲಿ ಬಳಸಿದ ಲೋಗೋವನ್ನು ಈ ಕಾರುಗಳಲ್ಲಿ ಪ್ರದರ್ಶಿಸಲಾಗುತ್ತದೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ಇನ್ನು ಕಂಪನಿಯು ಇದೇ ವರ್ಷದ ಫೆಬ್ರವರಿಯಲ್ಲಿ ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿತ್ತು. ಕಂಪನಿಯ ಭಾರತದ ಸಾಲಿನಲ್ಲಿ ಇದು 10 ನೇ ಉನ್ನತ-ಕಾರ್ಯಕ್ಷಮತೆಯ ಎಂ ಉತ್ಪನ್ನವಾಗಿದೆ. ಹೊಸ ಬಿಎಂಡಬ್ಲ್ಯು ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಮಾದರಿಯು 4 ಸೀರಿಸ್ ಮಾದರಿಯ ವಿನ್ಯಾಸ ಶೈಲಿಯನ್ನು ಆಧರಿಸಿದೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ಇದರ ಎಂಜಿನ್ 501 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ M ಸ್ಟೆಪ್ಟ್ರಾನಿಕ್‌ಗೆ ಸಂಯೋಜಿತವಾಗಿದೆ, ಇದು ಎಕ್ಸ್‌ಡ್ರೈವ್ ಮೂಲಕ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ನೀಡುತ್ತದೆ. ಇದು ಸುಮಾರು 3.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ಸಂಪೂರ್ಣ-ವೇರಿಯಬಲ್, ಸಿಸ್ಟಂ ಎಲೆಕ್ಟ್ರಾನಿಕ್ ನಿಯಂತ್ರಿತ ಮಲ್ಟಿ-ಪ್ಲೇಟ್ ಕ್ಲಚ್ ಮೂಲಕ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳ ನಡುವೆ ಟಾರ್ಕ್ ಅನ್ನು ವಿತರಿಸುತ್ತದೆ, ಎಂ ಆಕ್ಟಿವ್ ಡಿಫರೆನ್ಷಿಯಲ್ ಹಿಂಭಾಗದ ಆಕ್ಸಲ್‌ನಲ್ಲಿ ಟಾರ್ಕ್ ವಿತರಣೆಯನ್ನು ನೋಡಿಕೊಳ್ಳುತ್ತದೆ. ಇನ್ನು ಈ ಕಾರು ಎಂ ಎಕ್ಸ್‌ಡ್ರೈವ್ ಮತ್ತು ಆಕ್ಟಿವ್ ಎಂ ಡಿಫರೆನ್ಷಿಯಲ್ ಎರಡನ್ನೂ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್‌ಗೆ ನೇರವಾಗಿ ಸಂಪರ್ಕಿಸಲಾಗಿದೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ಇದು ಉತ್ತಮ ಚುರುಕುತನ ಮತ್ತು ಅಂಡರ್‌ಸ್ಟಿಯರ್ ಮತ್ತು ಓವರ್‌ಸ್ಟಿಯರ್ ಎರಡರ ಮೇಲೆ ನಿಯಂತ್ರಣವನ್ನು ನೀಡುತ್ತದೆ. ಬಿಎಂಡಬ್ಲ್ಯು ಎಂ4 ಕಾಂಪಿಟೇಶನ್ ಎಕ್ಸ್‌ಡ್ರೈವ್ ಎಂ ಆಕ್ಟಿವ್ ಡಿಫರೆನ್ಷಿಯಲ್ ಹಿಂಭಾಗದ ಆಕ್ಸಲ್‌ನಲ್ಲಿ ಟಾರ್ಕ್ ವಿತರಣೆಯನ್ನು ನೋಡಿಕೊಳ್ಳುತ್ತದೆ.

BMW 'M' ಸರಣಿಗೆ 50 ವರ್ಷದ ಹಿನ್ನೆಲೆ ಭಾರತದಲ್ಲಿ 10 ವಿಶೇಷ ಆವೃತ್ತಿಗಳ ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ರೀತಿಯ ವೈಶಿಷ್ಟ್ಯಗಳೊಂದಿಗೆ ವಿಶೇಷ ಆವೃತ್ತಿಯ ವಾಹನಗಳು ಮತ್ತೊಂದು ಹಂತದ ಆಕರ್ಷಣೆಯಾಗಲಿವೆ. ಇದರ ಜೊತೆಗೆ, ಈವೆಂಟ್‌ಗೆ ಪೂರಕವಾಗಿ ಕಂಪನಿಯು M ಮತ್ತು M ಸ್ಪೋರ್ಟ್ ವಿಶೇಷ ಆವೃತ್ತಿಗಳ ಸರಣಿಯನ್ನು ಪ್ರಾರಂಭಿಸುತ್ತಿದೆ. ಈ ವಾಹನಗಳು ಹೆಚ್ಚು ಆಕರ್ಷಣೀಯವಾಗಿರುವುದು ಮಾತ್ರವಲ್ಲದೆ ಹೆಚ್ಚಿನ ವಿಶೇಷ ವೈಶಿಷ್ಟ್ಯಗಳನ್ನು ಸಹ ಹೊಂದಿರಲಿವೆ. ಅಂದರೆ ಇದು ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದುವ ನಿರೀಕ್ಷೆಯಿದೆ.

Most Read Articles

Kannada
English summary
Bmw confirms ten special edition m and m sport sars variants for india
Story first published: Saturday, June 11, 2022, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X