Just In
- 12 min ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
- 1 hr ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
- 1 hr ago
ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ಬಿಡುಗಡೆ
- 2 hrs ago
ಪ್ರಯಾಣಿಕ ಕಾರು ಮಾದರಿಗಳಿಗಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ಟೈರ್ ಬಿಡುಗಡೆ ಮಾಡಿದ ಮೈಕೆಲಿನ್
Don't Miss!
- Finance
ಇನ್ಸ್ಟಾಗ್ರಾಂನಲ್ಲಿ ಅಧಿಕ ಸಂಭಾವನೆ ಪಡೆಯುವ ಸೆಲೆಬ್ರೆಟಿಗಳು ಇವರೇ ನೋಡಿ..
- Sports
ನಮ್ಮೂರ ಪ್ರತಿಭೆ: ತಾಯಿಯಂತೆಯೇ ಕ್ರೀಡಾ ಸಾಧನೆಯ ಹಾದಿಯಲ್ಲಿ ಮಗಳು ಉನ್ನತಿ ಅಯ್ಯಪ್ಪ
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- News
ಅಸ್ಸಾಂ ಪ್ರವಾಹ: ಅಸ್ಸಾಂ ಸಿಎಂ ಪರಿಹಾರ ನಿಧಿಗೆ ರಿಲಯನ್ಸ್ ಫೌಂಡೇಶನ್ 25 ಕೋಟಿ ರೂ.
- Movies
ಅಖಿಲಾಂಡೇಶ್ವರಿಯನ್ನು ಆಟ ಆಡಿಸಲು ಬಂದ ಅರುಂಧತಿ: ಯಾರೀಕೆ?
- Technology
ಪೊಕೊ F4 5G V/S ಪೊಕೊ F3 GT: ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್?
- Lifestyle
ಅಪಘಾತದಿಂದ ಕ್ಷಣಾರ್ಧದಲ್ಲಿ ಮಗುವಿನ ರಕ್ಷಿಸಿ, ತಾಯಿಯ ಮೊಬೈಲ್ ಪುಡಿ ಮಾಡಿದ ಸೈನಿಕ: ಸೈನಿಕನ ಕಾರ್ಯಕ್ಕೆ ನೆಟ್ಟಿಗರು ಫುಲ್ ಫಿದಾ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಬಿಡುಗಡೆಯಾಗಲಿದೆ ಬಿಎಂಡಬ್ಲ್ಯು ನಿರ್ಮಾಣದ ಎಂಟ್ರಿ ಲೆವಲ್ ಇವಿ ಕಾರು ಐಎಕ್ಸ್1 ಎಸ್ಯುವಿ
ಬಿಎಂಡಬ್ಲ್ಯು ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಹೊಸ ಇವಿ ಕಾರುಗಳ ಅಭಿವೃದ್ದಿ ಮತ್ತು ಮಾರಾಟವನ್ನು ತೀವ್ರಗೊಳಿಸುತ್ತಿದ್ದು, ಮರ್ಸಿಡಿಸ್ ಬೆಂಝ್ ಕಂಪನಿಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

ಐಷಾರಾಮಿ ಕಾರುಗಳ ಮಾರಾಟ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಗೆ ಮತ್ತು ಬಿಎಂಡಬ್ಲ್ಯು ಕಂಪನಿಯ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಬಿಎಂಡಬ್ಲ್ಯು ಹೊಸ ಕಾರು ಉತ್ಪನ್ನಗಳು ಮರ್ಸಿಡಿಸ್ಗೆ ಪೈಪೋಟಿ ನೀಡುವ ತವಕದಲ್ಲಿವೆ. ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲೂ ಸಹ ತನ್ನ ಪ್ರಮುಖ ಇವಿ ಕಾರುಗಳನ್ನು ಪರಿಚಯಿಸುತ್ತಿದ್ದು, ಹೊಸ ಕಾರುಗಳ ಐಷಾರಾಮಿ ವಿಭಾಗದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿವೆ.

ಭಾರತದಲ್ಲಿ ಸದ್ಯ ವಿವಿಧ ಸರಣಿಗಳಲ್ಲಿ ಒಟ್ಟು 18 ಕಾರುಗಳ ಮಾರಾಟ ಹೊಂದಿರುವ ಬಿಎಂಡಬ್ಲ್ಯು ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಪ್ರಮುಖ ಆಕರ್ಷಣೆಯಾಗಿವೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ವಿವಿಧ ರಾಷ್ಟ್ರಗಳು 2030ರಿಂದಲೇ ಸಂಪೂರ್ಣವಾಗಿ ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ಕಾರುಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸಹ ಹೆಚ್ಚಿಸಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ನಿರ್ಣಯದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

2021ರಲ್ಲೇ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಬರೋಬ್ಬರಿ 8 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ಮುಂಬರುವ ದಿನಗಳಲ್ಲಿ ವಿವಿಧ ಕಾರು ಕಂಪನಿಗಳು ಮತ್ತಷ್ಟು ಇವಿ ವಾಹನಗಳ ಮಾರಾಟವನ್ನು ಹೆಚ್ಚಿಸಲು ಸಜ್ಜಾಗುತ್ತಿವೆ.

ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಕೂಡಾ ಈಗಾಗಲೇ ವಿವಿಧ ಮಾದರಿಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಜ್ಜುಗೊಂಡಿದ್ದು, 2022ರ ವೇಳೆಗೆ ಶೇ.20 ರಷ್ಟು ಕಾರುಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳ ಮಾರಾಟವನ್ನು ಹೊಂದಿರುವುದಾಗಿ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಕಾರು ಮಾರಾಟ ಮಾಡುತ್ತಿರುವ ಬಿಎಂಡಬ್ಲ್ಯು ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ತನ್ನ ಬಹುನೀರಿಕ್ಷಿತ ಐಎಕ್ಸ್1 ಎಂಟ್ರಿ ಲೆವಲ್ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಸ್ಟ್ಯಾಂಡರ್ಡ್ ಎಕ್ಸ್1 ಎಸ್ಯುವಿ ಮಾದರಿಯನ್ನು ಆಧರಸಿರುವ ಐಎಕ್ಸ್1 ಇವಿ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ನೊಂದಿಗೆ ವಿಶೇಷ ಫೀಚರ್ಸ್ಗಳನ್ನು ಹೊಂದಿರಲಿದ್ದು, ಹೊಸ ಕಾರು ಬಿಡುಗಡೆಗಾಗಿ ಕಂಪನಿಯು ಸ್ವಿಡನ್ನಲ್ಲಿರುವ ತನ್ನ ಟೆಸ್ಟಿಂಗ್ ಟ್ರ್ಯಾಕ್ನಲ್ಲಿ ಕಾರಿನ ಕಾರ್ಯಕ್ಷಮತೆಯನ್ನು ಪರೀಕ್ಷಿಸುತ್ತಿದೆ.

ಗ್ರಾಹಕರ ಬೇಡಿಕೆಯೆಂತೆ ವಿವಿಧ ಸೆಗ್ಮೆಂಟ್ ಇವಿ ಕಾರುಗಳನ್ನು ಮಾರಾಟ ಮಾಡಲಿರುವ ಬಿಎಂಡಬ್ಲ್ಯು ಕಂಪನಿಯು ಹೊಸ ಎಂಟ್ರಿ ಲೆವಲ್ ಇವಿ ಕಾರಿನ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಕಾರಿನ ಕುರಿತಾಗಿ ಇನ್ನು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಡ್ಯುಯಲ್ ಮೋಟಾರ್ ಸೆಟ್ಅಪ್ ಹೊಂದಲಿರುವ ಹೊಸ ಕಾರು ಪ್ರತಿ ಚಾರ್ಜ್ಗೆ 420 ಕಿ.ಮೀ ನಿಂದ 450 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಪರ್ಫಾಮೆನ್ಸ್ ಜೊತೆಗೆ ಅತ್ಯುತ್ತಮ ಬ್ಯಾಟರಿ ಕಾರ್ಯಕ್ಷಮತೆ ಪ್ರದರ್ಶಸುತ್ತದೆ.

ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಐಎಕ್ಸ್ ಇವಿ ಮಾದರಿಯು ತುಸು ದುಬಾರಿ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಐಎಕ್ಸ್1 ಮಾದರಿಯು ಮಧ್ಯಮ ಕ್ರಮಾಂಕದಲ್ಲಿರುವ ಇವಿ ಐಷಾರಾಮಿ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ.

ಐಎಕ್ಸ್ ಎಲೆಕ್ಟ್ರಿಕ್ ಎಸ್ಯುವಿ ಮಾದರಿಯು ಒಂದೇ ವೆರಿಯೆಂಟ್ನಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್ಶೋರೂಂ ಪ್ರಕಾರ ರೂ. 1.16 ಕೋಟಿ ಬೆಲೆ ಹೊಂದಿದೆ. ಹೊಸ ಕಾರು ದುಬಾರಿ ಬೆಲೆ ನಡುವೆಯೂ ಮೊದಲ ಹಂತದಲ್ಲಿ ಖರೀದಿಗೆ ಲಭ್ಯವಿದ್ದ ನೂರು ಯುನಿಟ್ಗಳು ಮಾರಾಟಗೊಂಡಿದ್ದು, 2022ರ ಜೂನ್ ನಂತರ ಮುಂದಿನ ಯುನಿಟ್ಗಳ ಖರೀದಿಗಾಗಿ ಬುಕ್ಕಿಂಗ್ ಆರಂಭವಾಗಲಿದೆ.

ಬಿಎಂಡಬ್ಲ್ಯು ಕಂಪನಿಯು ಐಎಕ್ಸ್ ಎಕ್ಸ್ಡ್ರೈವ್40 ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದಕ್ಕಾಗಿ ಕಂಪನಿಯು ಹೊಸ ಕಾರಿನಲ್ಲಿ 76.6kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ.

ಎಕ್ಸ್ಡ್ರೈವ್40 ಮಾದರಿಯು 76.6kWh ಬ್ಯಾಟರಿ ಪ್ಯಾಕ್ ಮೂಲಕ ಗರಿಷ್ಠ 425 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದರೆ ಎಕ್ಸ್ಡ್ರೈವ್50 ಮಾದರಿಯು ಪ್ರತಿ ಚಾರ್ಜ್ಗೆ 611 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ. ಆದರೆ ಬಿಎಂಡಬ್ಲ್ಯು ಕಂಪನಿಯು ಸದ್ಯಕ್ಕೆ ಭಾರತದಲ್ಲಿ ಎಕ್ಸ್ಡ್ರೈವ್40 ಮಾದರಿಯನ್ನು ಮಾತ್ರವೇ ಮಾರಾಟ ಮಾಡಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆ ಆಧರಿಸಿ ಹೈ ಎಂಡ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.