ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಬಿಎಂಡಬ್ಲ್ಯು ಗ್ರೂಪ್ ಉತ್ತರ ಅಮೆರಿಕಾದ ಮಾರುಕಟ್ಟೆಗೆ ತನ್ನ ಎಂ8 ಶ್ರೇಣಿಯನ್ನು ನವೀಕರಿಸಿದೆ, ಬಿಎಂಡಬ್ಲ್ಯು ಎಂ8 ಶ್ರೇಣಿಯಲ್ಲಿ ಎಂ8 ಕಾಂಪಿಟೇಷನ್ ಕೂಪೆ, ಎಂ8 ಕಾಂಪಿಟೇಷನ್ ಕನ್ವರ್ಟಿಬಲ್ ಮತ್ತು ಎಂ8 ಕಾಂಪಿಟೇಷನ್ ಗ್ರ್ಯಾನ್ ಕೂಪೆಯನ್ನು ಒಳಗೊಂಡಿದೆ. ಈ ಮಾದರಿಗಳು ಹೊರಭಾಗದಲ್ಲಿ ಮತ್ತು ಒಳಬಾಗದಲ್ಲಿ ಹೊಸ ನವೀಕರಣಗಳನ್ನು ಪಡೆದುಕೊಂಡಿವೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಬಿಎಂಡಬ್ಲ್ಯು 8 ಸೀರಿಸ್ ಹೈ-ಪರ್ಫಾಮೆನ್ಸ್ ಆವೃತ್ತಿಗಳು, ಹೊಸ ಬಾಹ್ಯ ಬಣ್ಣಗಳು ಮತ್ತು ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಅಂಕಿಅಂಶಗಳಿಗೆ ನೇರವಾಗಿ ಹೋಗುವುದಾದರೆ, ಬಿಎಂಡಬ್ಲ್ಯು ಎಂ8 ಕಾಂಪಿಟಿಷನ್ ಕೂಪೆ, ಕನ್ವರ್ಟಿಬಲ್ ಮತ್ತು ಗ್ರ್ಯಾನ್ ಕೂಪೆಗಳು 4.4-ಲೀಟರ್, V8 ಎಂಜಿನ್ ಜೊತೆಗೆ ಎಂ ಟ್ವಿನ್‌ಪವರ್ ಟರ್ಬೊವನ್ನು ಹೊಂದಿದ್ದು, ಇದು 617 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಸ್ಟೆಪ್‌ಟ್ರಾನಿಕ್ ಯುನಿಟ್ ಅನ್ನು ಜೋಡಿಸಲಾಗಿದೆ. ಇದು ಎಲ್ಲಾ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಈ ಹೊಸ ಬಿಎಂಡಬ್ಲ್ಯು ಎಂ8 ಕಾಂಪಿಟೇಷನ್ 3 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಗಂಟೆಗೆ 306 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ, ಈ 8 ಸೀರಿಸ್ ಉತ್ತಮ ಪರ್ಫಾಮೆನ್ಸ್ ಮಾದರಿಗಳನ್ನು ಒಳಗೊಂಡಿದೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಈ ಬಿಎಂಡಬ್ಲ್ಯು ಎಂ8 ಕಾಂಪಿಟೇಷನ್ ಅಡಾಪ್ಟಿವ್ ಎಂ ಸಸ್ಪೆಂಕ್ಷನ್ ದೇಹದ ಚಲನೆ, ರಸ್ತೆ ಮೇಲ್ಮೈ ಪರಿಸ್ಥಿತಿಗಳು ಮತ್ತು ಸ್ಟೀರಿಂಗ್ ಇನ್‌ಪುಟ್‌ನಿಂದ ಪ್ರತಿ ಡ್ಯಾಂಪರ್ ಅನ್ನು ಮಿಲಿಸೆಕೆಂಡ್‌ಗಳಲ್ಲಿ ಪ್ರತ್ಯೇಕವಾಗಿ ಹೊಂದಿಸಲು ಬಳಸುತ್ತದೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಹೊರಭಾಗಕ್ಕೆ ಹೋದಂತೆ, ಬಿಎಂಡಬ್ಲ್ಯು 8 ಸೀರಿಸ್ ಸ್ಕೈಸ್ಕ್ರಾಪರ್ ಗ್ರೇ ಮೆಟಾಲಿಕ್, ಬ್ರೂಕ್ಲಿನ್ ಗ್ರೇ ಮೆಟಾಲಿಕ್, ಮತ್ತು ಐಲ್ ಆಫ್ ಮ್ಯಾನ್ ಗ್ರೀನ್ ಮೆಟಾಲಿಕ್ ಮತ್ತು ಟಾಂಜಾನೈಟ್ ಬ್ಲೂ II ಮೆಟಾಲಿಕ್ ಮತ್ತು ಫ್ರೋಜನ್ ಪ್ಯೂರ್ ಗ್ರೇ ಮೆಟಾಲಿಕ್‌ನಂತಹ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಲೇಸರ್‌ಲೈಟ್‌ನೊಂದಿಗೆ ಅಡಾಪ್ಟಿವ್ ಅಡಾಪ್ಟಿವ್ ಎಲ್ಇಡಿ ಹೆಡ್‌ಲೈಟ್‌ಗಳು ಈಗ ಎಂ ಶ್ಯಾಡೋಲೈನ್ ಇನ್‌ಸರ್ಟ್‌ಗಳನ್ನು ಹೊಂದಿದ್ದು, ಬಿಎಂಡಬ್ಲ್ಯು ಡ್ನಿ ಗ್ರಿಲ್‌ನ ಹೆಚ್ಚಿನ ಗ್ಲೋಸಿ ಬ್ಲ್ಯಾಕ್ ಫ್ರೇಮ್ ಮತ್ತು ಇತರ ನವೀಕರಣವು ಮುಂಭಾಗದಲ್ಲಿ ಬರುತ್ತದೆ. ಬಿಎಂಡಬ್ಲ್ಯು ಸಾಮಾನ್ಯ ಬಿಎಂಡಬ್ಲ್ಯು ರೌಂಡಲ್‌ಗಳ ಬದಲಿಗೆ 1970 ರ ದಶಕದ ಬಿಎಂಡಬ್ಲ್ಯು ಮೋಟಾರ್‌ಸ್ಪೋರ್ಟ್ ಲೋಗೋವನ್ನು ಹುಡ್, ಟ್ರಂಕ್ ಮತ್ತು ವೀಲ್ ಹಬ್ ಕವರ್‌ಗಳ ಮೇಲೆ ಆಯ್ಕೆಯಾಗಿ ನೀಡುತ್ತಿದೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಒಳಗೆ, ಪ್ರಮುಖ ಬದಲಾವಣೆಯು ಹೊಸ ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ಪ್ರೊಫೆಷನಲ್ ರೂಪದಲ್ಲಿ ಬರುತ್ತದೆ, ಇದು 12.3-ಇಂಚಿನ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಮತ್ತು ಡ್ರೈವರ್‌ನ ಮುಂದೆ ಹೆಡ್-ಅಪ್ ಡಿಸ್ಪ್ಲೇ ಮತ್ತು 10.25 ದಿಂದ ಹೆಚ್ಚಿದ ಗಾತ್ರದೊಂದಿಗೆ ಸೆಂಟ್ರಲ್ ಕಂಟ್ರೋಲ್ ಡಿಸ್ ಪ್ಲೇಯನ್ನು ಒಳಗೊಂಡಿದೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

12.3 ಇಂಚುಗಳ ಈ ಪರದೆಯು ವೇಗವಾಗಿದೆ, ಅರ್ಥಗರ್ಭಿತವಾಗಿದೆ ಮತ್ತು ಬಿಎಂಡಬ್ಲ್ಯು ಮ್ಯಾಪ್ ಗಳೊಂದಿಗೆ ನ್ಯಾವಿಗೇಷನ್, ಬಿಎಂಡಬ್ಲ್ಯು ಇಂಟೆಲಿಜೆಂಟ್ ಪರ್ಸನಲ್ ಅಸಿಸ್ಟೆಂಟ್ ಮತ್ತು Apple CarPlay ಮತ್ತು Android Auto ಕನೆಕ್ಟಿವಿಟಿಯನ್ನು ಒಳಗೊಂಡಂತೆ 7 ನೇ ತಲೆಮಾರಿನ ಬಿಎಂಡಬ್ಲ್ಯುಲೈವ್ ಐಡ್ರೈವ್ ಜೊತೆಗೆ ಬರುತ್ತದೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಇದಲ್ಲದೆ ಬಿಎಂಡಬ್ಲ್ಯು ಆಯ್ಕೆಯ ಎಂ ಕಾರ್ಬನ್ ಬಕೆಟ್ ಅನ್ನು ಬಿಎಂಡಬ್ಲ್ಯು ಎಂ8 ಕಾಂಪಿಟೇಷನ್ ಸರಣಿಯಲ್ಲಿ ಸೇರಿಸಿದೆ, ಅದು ಈಗ ಗೋಚರ ಕಾರ್ಬನ್-ಫೈಬರ್ ಬಲವರ್ಧಿತ ಪ್ಲಾಸ್ಟಿಕ್ (CFRP) ಮೇಲ್ಮೈಗಳೊಂದಿಗೆ ವಿನ್ಯಾಸದಲ್ಲಿ ಹಗುರವಾಗಿದೆಹೆಡ್‌ರೆಸ್ಟ್‌ಗಳಲ್ಲಿ ಪ್ರಕಾಶಿತ 'M8' ಬ್ಯಾಡ್ಜ್‌ಗಳನ್ನು ಮತ್ತು ಚಾಲಕನ ಬದಿಯಲ್ಲಿ ಮೆಮೊರಿ ಫಂಕ್ಷನ್ ಅನ್ನು ಹೊಂದಿದೆ.ಅಪ್ಹೋಲ್ಸ್ಟರಿಯನ್ನು ಸಹ 2022 ಕ್ಕೆ ನವೀಕರಿಸಲಾಗಿದೆ ಮತ್ತು ಈಗ ಫುಲ್ ಮೆರಿನೊ ಲೆದರ್ ಮತ್ತು ಅಲ್ಕಾಂಟರಾ ಟ್ರಿಮ್ ಸಂಯೋಜನೆಯಲ್ಲಿ ಬರುತ್ತದೆ,

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಭಾರತೀಯ ಮಾರುಕಟ್ಟೆಯಲ್ಲಿ, ಬಿಎಂಡಬ್ಲ್ಯು ಕಂಪನಿಯು ತನ್ನ ನವೀಕರಿಸಿದ ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.59.90 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯು 30ಐ ಸ್ಪೋರ್ಟ್ಎಕ್ಸ್ ಪ್ಲಸ್ ಮತ್ತು 30ಐ ಎಂ ಸ್ಪೋರ್ಟ್ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಬಿಎಂಡಬ್ಲ್ಯು ಕಂಪನಿಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯ ಖರೀದಿಗಾಗಿ ಬಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಈ ಐಷಾರಾಮಿ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ನವೀಕರಿಸಿದ ಹೊಸ ಬಿಎಂಡಬ್ಲ್ಯು ಎಕ್ಸ್3 ಎಸ್‍ಯುವಿಯು ಹಿಂದಿನ ಮಾದರಿಗಿಂತ ಹೆಚ್ಚು ಸ್ಪೋರ್ಟಿಯರ್ ಲುಕ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯಲ್ಲಿ ಮರುವಿನ್ಯಾಸಗೊಳಿಸಲಾದ ಬಿಎಂಡಬ್ಲ್ಯು ಕಿಡ್ನಿ ಗ್ರಿಲ್, ಫ್ಲಾಟರ್ ಹೆಡ್‌ಲೈಟ್‌ಗಳು ಮತ್ತು ಹೊಸ ಮುಂಭಾಗದ ಏಪ್ರನ್‌ನೊಂದಿಗೆ, ಹೊಸ ಬಿಎಂಡಬ್ಲ್ಯು ಎಕ್ಸ್3 ಸಂಪೂರ್ಣವಾಗಿ ರಿಫ್ರೆಶ್ ವಿನ್ಯಾಸವನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ BMW M8 ಕಾಂಪಿಟೇಷನ್ ರೇಂಜ್ ಅನಾವರಣ

ಬಿಎಂಡಬ್ಲ್ಯು ಎಕ್ಸ್3 ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಇ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಆರು ಏರ್‌ಬ್ಯಾಗ್‌ಗಳು, ಅಟೆನ್ಟಿವ್‌ನೆಸ್ ಅಸಿಸ್ಟೆನ್ಸ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC) ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (CBC), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಜೊತೆಗೆ ಆಟೋ ಹೋಲ್ಡ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬಿಲೈಸರ್ ಮತ್ತು ಕ್ರ್ಯಾಶ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟಿಂಗ್ ಮತ್ತು ಇತರ ಫೀಚರ್ಸ್ ಗಳನ್ನು ನೀಡಿದೆ, ಇನ್ನು ಹೊಸ ಬಿಎಂಡಬ್ಲ್ಯು 8 ಸೀರಿಸ್ ಭಾರತದಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ,

Most Read Articles

Kannada
English summary
Bmw revealed 2022 m8 competition range new updates details
Story first published: Friday, January 28, 2022, 20:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X