Just In
- 15 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 17 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
ಶೀಘ್ರವೇ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಪಿಯೂಷ್ ಗೋಯಲ್
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಭಾರತದಲ್ಲಿ ಎಕ್ಸ್4 ಸಿಲ್ವರ್ ಶ್ಯಾಡೋ ಎಡಿಷನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
ಜರ್ಮನ್ ಐಷಾರಾಮಿ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ಹೊಸ ಎಕ್ಸ್4 ಸಿಲ್ವರ್ ಶ್ಯಾಡೋ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 71.9 ಲಕ್ಷ ಬೆಲೆ ಹೊಂದಿದೆ.

ಬಿಎಂಡಬ್ಲ್ಯು ಕಂಪನಿಯು ಹೊಸ ಎಕ್ಸ್4 ಸಿಲ್ವರ್ ಶ್ಯಾಡೋ ಮಾದರಿಯನ್ನು ಮೊದಲ ಬಾರಿಗೆ ಚೆನ್ನೈನಲ್ಲಿಯಲ್ಲಿರುವ ಕಾರು ಉತ್ಪಾದನಾ ಘಟಕದಲ್ಲಿ ಮರಜೋಡಣೆ ಕೈಗೊಂಡಿದ್ದು, ಹೊಸ ಕಾರು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಎರಡು ಮಾದರಿಗಳನ್ನು ಖರೀದಿಗೆ ಲಭ್ಯವಿದೆ.

ಹೊಸ ಎಕ್ಸ್4 ಸಿಲ್ವರ್ ಶ್ಯಾಡೋ ಆವೃತ್ತಿಯ ಎಕ್ಸ್‌ಡ್ರೈವ್30ಐ ಮಾದರಿಯು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದರೆ ಎಕ್ಸ್‌ಡ್ರೈವ್30ಡಿ ಮಾದರಿಯು ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಎಕ್ಸ್‌ಡ್ರೈವ್30ಐ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 71.90 ಲಕ್ಷ ಬೆಲೆ ಹೊಂದಿದ್ದರೆ ಎಕ್ಸ್‌ಡ್ರೈವ್30ಡಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 73.90 ಲಕ್ಷ ಬೆಲೆ ಹೊಂದಿದೆ.

ಎಕ್ಸ್4 ಸಿಲ್ವರ್ ಶ್ಯಾಡೋ ಎಡಿಷನ್ ಸ್ಟ್ಯಾಂಡರ್ಡ್ ಬ್ಲ್ಯಾಕ್ ಶ್ಯಾಡೋ ಕೂಪೆ ಮಾದರಿಗಿಂತಲೂ ರೂ. 1.40 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಕಾರಿನಲ್ಲಿ ಹೊಸ ಸ್ಟೈಲಿಶ್ ಉದ್ದೇಶಕ್ಕಾಗಿ ಗ್ಲಾಸಿ ಕ್ರೊಮ್ ನೀಡಲಾಗಿದೆ.

ಸಿಲ್ವರ್ ಶ್ಯಾಡೋ ಮಾದರಿಯಲ್ಲಿ ಕಂಪನಿಯು ಕಪ್ಪು ವಿನ್ಯಾಸದ ಅಂಶಗಳ ಮಿಶ್ರಣ ಮಾಡಿದ್ದು, ವಿಶೇಷ ಆವೃತ್ತಿಯು ಮುಂಭಾಗದಲ್ಲಿ ದೊಡ್ಡ ವಿನ್ಯಾಸವನ್ನು ಹೊಂದಿರುವ ಕಿಡ್ನಿ ಗ್ರಿಲ್‌ಗಳಿಗೆ ಕ್ರೋಮ್ ಸರೌಂಡ್ ಮತ್ತು ಒಳಗೆ ಹೊಳೆಯುವ ವಸ್ತುವನ್ನು ಸೇರಿಸಲಾಗಿದೆ.

ಹೊಸ ಕಾರಿನಲ್ಲಿ ಕ್ರೋಮ್‌ನಲ್ಲಿ ಮಾಡಲಾದ ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ ಹಿಂಭಾಗದಲ್ಲಿ ಟ್ವಿನ್ ಟೈಲ್‌ಪೈಪ್‌ಗಳ ಸುತ್ತುವರಿದಿದ್ದು, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳೆರಡೂ ಅಂವಿಲ್-ಆಕಾರದ ಒಳ ಮತ್ತು ಲಂಬವಾಗಿ ಜೋಡಿಸಲಾದ ಪ್ರತಿಫಲಕಗಳನ್ನು ನೀಡಲಾಗಿದೆ.

ಇನ್ನು ಕಂಪನಿಯು ಹೊಸ ಎಕ್ಸ್4 ಸಿಲ್ವರ್ ಶ್ಯಾಡೋ ಆವೃತ್ತಿಯನ್ನು ಪ್ರಮುಖ ಮೂರು ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತಿದ್ದು, ಕಾರ್ಬನ್ ಬ್ಲಾಕ್, ಫೈಟೋನಿಕ್ ಬ್ಲೂ ಮತ್ತು ಆಲ್ಪೈನ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಎಕ್ಸ್4 ಸಿಲ್ವರ್ ಶ್ಯಾಡೋ ಆವೃತ್ತಿಯ ಒಳಭಾಗವು ಸಹ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳಿಂದ ಕೂಡಿದ್ದು, ವಿಶೇಷವಾಗಿ ಹೊಸ ಕಾರಿನ ಆಸಗಳನ್ನು ಮೋಚಾ ವೆರ್ನಾಸ್ಕಾ ಲೆದರ್‌ನಲ್ಲಿ ಅಲಂಕಾರಿಕ ಹೊಲಿಗೆಯೊಂದಿಗೆ ಅಲಂಕರಿಸಲಾಗಿದೆ.

ಹಾಗೆಯೇ ಎಕ್ಸ್4 ಸಿಲ್ವರ್ ಶ್ಯಾಡೋ ಆವೃತ್ತಿಯಲ್ಲಿ ಕಂಪನಿಯ ಅಲ್ಯೂಮಿನಿಯಂ ರೋಂಬಿಕಲ್ ಡಾರ್ಕ್ ಎಂದು ಕರೆಯುವ ಆಂತರಿಕ ವಿನ್ಯಾಸ ಸಹ ಹೊಂದಿದ್ದು, ಇದನ್ನು ಹೊಸ ಕಾರಿನಲ್ಲಿ ಪರ್ಲ್ ಕ್ರೋಮ್ ಟ್ರಿಮ್ ಫಿನಿಶರ್ ಹೈಲೈಟ್ ಮಾಡಲು ಸಹಕಾರಿಯಾಗಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಎಕ್ಸ್4 ಸಿಲ್ವರ್ ಶ್ಯಾಡೋ ಆವೃತ್ತಿಯಲ್ಲಿ ಕಂಪನಿಯು ಈ ಹಿಂದಿನಂತೆ ಎಕ್ಸ್‌ಡ್ರೈವ್30ಐ ಕೂಪೆಯಲ್ಲಿ 1,998 ಸಿಸಿ ಟರ್ಬೋಚಾರ್ಜ್ಡ್ ಇನ್‌ಲೈನ್ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದ್ದು, ಇದು 5,200 ಆರ್‌ಪಿಎಂ ನಲ್ಲಿ 248 ಬಿಎಚ್‌ಪಿ ಮತ್ತು 1,450 ಆರ್‌ಪಿಎಂನಲ್ಲಿ 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹಾಗೆಯೇ ಎಕ್ಸ್‌ಡ್ರೈವ್30ಡಿ ಹೊಸ ಸಿಲ್ವರ್ ಶ್ಯಾಡೋ ಆವೃತ್ತಿಗೆ ಹೆಚ್ಚು ಶಕ್ತಿಶಾಲಿಯಾದ 3.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಜೋಡಿಸಲಾಗಿದ್ದು, 4,000 ಆರ್‌ಪಿಎಂನಲ್ಲಿ 261 ಬಿಎಚ್‌ಪಿ ಮತ್ತು 2,000 ಆರ್‌ಪಿಎಂನಲ್ಲಿ 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎರಡು ಮಾದರಿಯಲ್ಲೂ ಕಂಪನಿಯು ಸ್ಟ್ಯಾಂಡರ್ಡ್ ಆಗಿ 8-ಸ್ಪೀಡ್ ಟಾರ್ಕ್ ಕನ್ವರ್ಟಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ ಮಾಡಿದ್ದರೆ ಕಂಪನಿಯ ಎಕ್ಸ್‌ಡ್ರೈವ್ ತಂತ್ರಜ್ಞಾನವು ಆಲ್-ವೀಲ್-ಡ್ರೈವ್ ಸಿಸ್ಟಮ್ ಮೂಲಕ ಎಸ್‌ಯುವಿ ಕೂಪೆಯ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ಕಳುಹಿಸುತ್ತದೆ.