ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಹೊಸ ವಾಹನಗಳಿಗೆ ಗ್ರಾಹಕರ ಬೇಡಿಕೆ ಹೆಚ್ಚುತ್ತಿದ್ದರೂ ಬಿಡಿಭಾಗಗಳ ಪೂರೈಕೆ ಆಗುತ್ತಿರುವ ವಿಳಂಬವು ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದ್ದು, ಇದೀಗ ಮತ್ತೊಂದು ಬಿಕ್ಕಟ್ಟು ಎದುರಾಗಿದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಕೋವಿಡ್‌ ನಂತರ ರಷ್ಯಾ ಮತ್ತು ಯುಕ್ರೇನ್ ಯುದ್ದದ ಪರಿಣಾಮ ಈಗಾಗಲೇ ಸಾಕಷ್ಟು ಸಂಕಷ್ಟದ ಪರಿಸ್ಥಿತಿ ಎದುರಿಸಿರುವ ಜಾಗತಿಕ ಆಟೋ ಉದ್ಯಮಕ್ಕೆ ಇದೀಗ ಮತ್ತೊಂದು ಜಾಗತಿಕ ಬಿಕ್ಟಟ್ಟು ಎದುರಾಗಿದೆ. ಚೀನಾ ಮತ್ತು ತೈವಾನ್ ನಡುವಿನ ಆಂತರಿಕ ಬಿಕ್ಕಟ್ಟು ಪರಿಸ್ಥಿತಿಯು ಉದ್ವಿಗ್ನತೆಗೆ ತಿರುಗಿದರೆ ಸೆಮಿ ಕಂಡಕ್ಟರ್ ಉತ್ಪಾದನಾ ಕಂಪನಿಗಳು ಅಪಾಯಕ್ಕೆ ಒಳಗಾಗಬಹುದಾಗಿದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಸೆಮಿಕಂಡಕ್ಟರ್ ಚಿಪ್ ಆಧುನಿಕ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಹೊಸ ತಲೆಮಾರಿನ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿದ್ದು, ಈಗಾಗಲೇ ಕಳೆದ ಎರಡು ವರ್ಷಗಳಿಂದ ಚಿಪ್ ಪೂರೈಕೆಯಲ್ಲಿನ ಕೊರತೆ ಎದುರಿಸುತ್ತಿರುವ ಆಟೋ ಉತ್ಪಾದನಾ ಕಂಪನಿಗಳಿಗೆ ಇದೀಗ ಚೀನಾ ಮತ್ತು ತೈವಾನ್ ನಡುವಿನ ಬಿಕ್ಕಟ್ಟು ಮತ್ತಷ್ಟು ಹೊಡೆತ ನೀಡಲಿದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಇದಕ್ಕೆ ಕಾರಣವೆಂದರೆ ಜಾಗತಿಕ ಮಾರುಕಟ್ಟೆಗೆ ಪೂರೈಕೆಯಾಗುವ ಅರ್ಧದಷ್ಟು ಸೆಮಿಕಂಡಕ್ಟರ್ ಪೂರೈಕೆ ಕಂಪನಿಗಳು ತೈವಾನ್‌ನಲ್ಲಿ ನೆಲೆಗೊಂಡಿದ್ದು, ಆಂತರಿಕ ಬಿಕ್ಕಟ್ಟು ಪರಿಸ್ಥಿತಿಯು ಉದ್ವಿಗ್ನತೆಗೆ ತಿರುಗಿದರೆ ಅದು ಖಂಡಿತವಾಗಿಯೂ ಆಟೋ ಉದ್ಯಮಕ್ಕೆ ಭಾರೀ ಹೊಡೆತ ಕೊಡಲಿದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳಿಗೆ ಉತ್ತಮ ಬೇಡಿಕೆಯಿದ್ದರೂ ಸೆಮಿಕಂಡಕ್ಟರ್ ಪೂರೈಕೆಯಲ್ಲಿನ ಕೊರತೆ ಪರಿಣಾಮ ಹಲವು ಕಂಪನಿಗಳು ಸರಿಯಾದ ಸಮಯಕ್ಕೆ ಕಾರು ವಿತರಣೆ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದು, ಚೀನಾ ಮತ್ತು ತೈವಾನ್ ನಡುವಿನ ಪರಿಸ್ಥಿತಿಯು ಉದ್ವಿಗ್ನತೆಗೆ ತಿರುಗಿದರೆ ಅದು ಮತ್ತಷ್ಟು ಗಂಭೀರ ಪರಿಣಾಮ ಉಂಟುಮಾಡುತ್ತದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಕೋವಿಡ್ ಸಮಯದಲ್ಲಿ ಸೆಮಿಕಂಡಕ್ಟರ್ ಕೊರತೆಯ ಪರಿಣಾಮ ಹಲವು ಕಾರು ಕಂಪನಿಗಳು ಹಲವು ತಿಂಗಳುಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸಿದ್ದರ ಬಗ್ಗೆ ವರದಿಯಾಗಿದ್ದವು. ಇದೀಗ ತೈವಾನ್‌ನಿಂದ ಪೂರೈಕೆಯಾಗುತ್ತಿರುವ ಸೆಮಿಕಂಡಕ್ಟರ್ ಸ್ಥಗಿತಗೊಂಡರೆ ಹೊಸ ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬಿರಲಿದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್(TSMC) ವಿಶ್ವದ ಅತಿದೊಡ್ಡ ಕಾಂಟ್ರಾಕ್ಟ್ ಚಿಪ್ ತಯಾರಕ ಮತ್ತು ತೈವಾನ್‌ನ ಅತ್ಯಮೂಲ್ಯ ಕಂಪನಿಯಾಗಿದ್ದು, ಇದು ಚೀನಾದೊಂದಿಗೆ ಉದ್ವಿಗ್ನತೆ ಹೆಚ್ಚಾದರೆ ಕಾರ್ಯಾಚರಣೆಯನ್ನು ಯಾವುದೇ ಸಮಯದಲ್ಲಿ ಸ್ಥಗಿತ ಮಾಡಬಹುದಾಗಿ ಈಗಾಗಲೇ ಎಚ್ಚರಿಕೆ ಸಹ ನೀಡಿದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಸೆಮಿಕಂಡಕ್ಟರ್ ಉತ್ಪಾದನೆಯು ಜಾಗತಿಕ ಪೂರೈಕೆ ಸರಪಳಿಯ ಮೇಲೆ ಅವಲಂಬಿತವಾಗಿರುವುದರಿಂದ ಯಾವುದೇ ಸಂದರ್ಭದಲ್ಲಿ ಉತ್ಪಾದನೆ ಸ್ಥಗಿತ ಎಚ್ಚರಿಕೆ ನೀಡಲಾಗಿದ್ದು, ಚಿಪ್ ಉತ್ಪಾದನೆ ಸ್ಥಗಿತವಾದರೆ ಕೇವಲ ಆಟೋ ಉದ್ಯಮ ಮೇಲೆ ಮಾತ್ರವಲ್ಲ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಅದರಲ್ಲೂ ಸಾಗರೋತ್ತರ ಸೆಮಿಕಂಡಕ್ಟರ್ ಪೂರೈಕೆಯ ಮೇಲೆಯೇ ಪೂರ್ತಿಯಾಗಿ ನೆಚ್ಚಿಕೊಂಡಿರುವ ಭಾರತೀಯ ಆಟೋ ಉದ್ಯಮಕ್ಕೆ ಇದು ಸಾಕಷ್ಟು ಹೊಡೆತ ನೀಡಲಿದ್ದು, ಸೆಮಿಕಂಡಕ್ಟರ್ ಪೂರೈಕೆ ತಡವಾದರೆ ಹೊಸ ವಾಹನಗಳಿಗೆ ಬುಕಿಂಗ್ ಮಾಡಿ ವಿತರಣೆಗೆ ಕಾಯುತ್ತಿರುವ ಗ್ರಾಹಕರು ಇನ್ನಷ್ಟು ದಿನಗಳ ಕಾಲ ಕಾಯಬೇಕಾಗಬಹುದು.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಸೆಮಿಕಂಡಕ್ಟರ್ ಉಪಯೋಗವೇನು?

ಇತ್ತೀಚೆಗೆ ಹೊಸದಾಗಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಪ್ರತಿಯೊಂದು ಆಧುನಿಕ ವಾಹನ ಮಾದರಿಗಳಲ್ಲಿ ಸೆಮಿ ಕಂಡಕ್ಟರ್(ಅರೆವಾಹಕಗಳು) ಅತ್ಯವಶ್ಯಕವಾಗಿದ್ದು, ಸೆಮಿಕಂಡಕ್ಟರ್ ಇಲ್ಲದೆಯೇ ಹೊಸ ಕಾರುಗಳಿಗೆ ವಿವಿಧ ಐಷಾರಾಮಿ ಸೌಲಭ್ಯಗಳನ್ನು ಜೋಡಣೆ ಮಾಡಲು ಸಾಧ್ಯವಿಲ್ಲ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿಲಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ತೈವಾನ್ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವು ಕಡಿತಗೊಂಡರೆ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಎಲೆಕ್ಟ್ರಾನಿಕ್ ಚಿಪ್ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಪ್ರಮುಖ ಪಾತ್ರವಹಿಸಲಿದ್ದು, ಹೊಸ ತಲೆಮಾರಿನ ಕಾರುಗಳಲ್ಲಿರುವ ಡಿಸ್ ಪ್ಲೇ, ಮಲ್ಟಿ ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್ ಕಂಟ್ರೋಲ್, ಆಟೋ ಫೋಲ್ಡಿಂಗ್ ಒಆರ್‌ವಿಎಂ, ಡಿಜಿಟಲ್ ಕೀ ಮತ್ತು ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳು ಕಾರ್ಯನಿರ್ವಹಿಸಲು ಇದು ಸಹಕಾರಿಯಾಗಲಿದೆ.

ಚೀನಾ-ತೈವಾನ್ ಬಿಕ್ಕಟ್ಟು: ಆಟೋ ಉದ್ಯಮಕ್ಕೆ ಮತ್ತೊಂದು ಆಘಾತ!

ಎಲೆಕ್ಟ್ರಾನಿಕ್ ಚಿಪ್‌ಗಳು ಲ್ಯಾಪ್‌ಟಾಪ್‌, ಮೊಬೈಲ್‌ ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದನೆಗೂ ಹೆಚ್ಚಿನ ಮಟ್ಟದಲ್ಲಿ ಅವಶ್ಯಕತೆಯಿದ್ದು, ಇದೀಗ ಸೆಮಿಕಂಡಕ್ಟರ್ ಉತ್ಪಾದನೆ ಮೇಲೆ ಎದುರಾಗುತ್ತಿರುವ ಯುದ್ದದ ಕಾರ್ಮೊಡವು ಆಟೋ ಉತ್ಪಾದನಾ ಕಂಪನಿಗಳಿಗೆ ಹೆಚ್ಚಿನ ಹೊಡೆತ ನೀಡಲಿದೆ ಎನ್ನಲಾಗಿದೆ.

Most Read Articles

Kannada
English summary
China taiwan tensions may cause to semiconductor manufacturing details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X