ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಸ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಎಸ್‌ಯುವಿ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 36.67 ಲಕ್ಷ ಬೆಲೆ ಹೊಂದಿದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಭಾರತದಲ್ಲಿ ಮೊದಲ ಬಾರಿಗೆ 2020ರಲ್ಲಿ ಬಿಡುಗಡೆಯಾಗಿದ್ದಾಗ ವಿವಿಧ ತಾಂತ್ರಿಕ ಅಂಶಗಳೊಂದಿಗೆ ಫೀಲ್ ಮತ್ತು ಶೈನ್ ಎನ್ನುವ ಎರಡು ವೆರಿಯೆಂಟ್ ಹೊಂದಿದ್ದ ಸಿ5 ಏರ್‌ಕ್ರಾಸ್ ಕಾರು ಮಾದರಿಯು ಇದೀಗ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಕೇವಲ ಶೈನ್ ಟಾಪ್ ಎಂಡ್ ವೆರಿಯೆಂಟ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಸಿ5 ಏರ್‌ಕ್ರಾಸ್ ಎಸ್‌ಯುವಿಯು ಈ ಹಿಂದಿನ ಮಾದರಿಗಿಂತಲೂ ರೂ. 2.89 ಲಕ್ಷದಷ್ಟು ದುಬಾರಿಯಾಗಿದ್ದು, ಫೇಸ್‌ಲಿಫ್ಟ್ ಮಾದರಿಯಲ್ಲಿ ಕಂಪನಿಯು ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಹೊಸ ಸಿ5 ಏರ್‌ಕ್ರಾಸ್ ಎಸ್‌ಯುವಿಯಲ್ಲಿ ಸಿಟ್ರನ್ ಕಂಪನಿಯು ಮುಂಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿದ್ದು, ಮರುವಿನ್ಯಾಸಗೊಳಿಸಿದ ಫ್ರಂಟ್ ಫಾಸಿಯಾ, ವಿಭಜನೆಗೊಂಡಿರುವ ಸಿಂಗಲ್ ಪೀಸ್ ಎಲ್ಇಡಿ ಹೆಡ್‌ಲ್ಯಾಂಪ್‌ ಜೊತೆ ವ್ಯಾರ್ಪ್, ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಸ್, ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಆಕರ್ಷಕ ವಿನ್ಯಾಸದ ಲೊಗೊ ಜೋಡಿಸಲಾಗಿದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಹಾಗೆಯೇ ಫ್ರಂಟ್ ಬಂಪರ್ ಮತ್ತು ಸೆಂಟ್ರಲ್ ಏರ್‌ ಇನ್‌ಟೆಕ್ ವಿನ್ಯಾಸವು ಏರೋಡೈನಾಮಿಕ್ ಸುಧಾರಣೆಗೊಳಿಸಲು ಸಹಕಾರಿಯಾಗಿದ್ದು, ವಿಸ್ತರಿತ ಫ್ಲಕ್ಸ್ ಸಿಲ್ವರ್ ಸ್ಕೀಡ್ ಪ್ಲೇಟ್, 18 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಹೊಂದಿರಲಿದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಇದರೊಂದಿಗೆ ಸೈಡ್ ಪ್ರೊಫೈಲ್ ಈ ಹಿಂದಿನ ಮಾದರಿಯೆಂತೆ ಮುಂದುವರೆದಿದ್ದು, ಹಿಂಭಾಗದ ವಿನ್ಯಾಸದಲ್ಲಿನ ಬದಲಾವಣಗಾಗಿ ಮರುವಿನ್ಯಾಸಗೊಳಿಸಲಾದ ಆಯತಾಕಾರದ ಟೈಲ್‌ಲ್ಯಾಂಪ್ ಮತ್ತು ಸ್ಪೋರ್ಟಿ ಸ್ಪಾಯ್ಲರ್ ಒಳಗೊಂಡಿದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಹೊಸ ಕಾರಿನಲ್ಲಿ ಹೊರಭಾಗದಲ್ಲಿ ಮಾತ್ರವಲ್ಲದೆ ಒಳಾಂಗಣ ಸೌಲಭ್ಯವು ಸಹ ಉನ್ನತೀಕರಣಗೊಂಡಿದ್ದು, ಫೇಸ್‌ಲಿಫ್ಟ್ ಮಾದರಿಯಲ್ಲಿ ಈ ಹಿಂದಿನ 8 ಇಂಚಿನ ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಬದಲಾಗಿ 10 ಇಂಚಿನ ಇನ್ಪೋಟೈನ್‌ಮೆಂಟ್ ಯುನಿಟ್ ಜೊತೆಗೆ ಕ್ಯೂಬ್ ವಿನ್ಯಾಸದ ಎಸಿ ವೆಂಟ್ಸ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಂ ಸುಲಭ ಬಳಕೆಗಾಗಿ ಟಚ್-ಆಧಾರಿತ ಶಾರ್ಟ್‌ಕಟ್ ಕೀಗಳನ್ನು ಉಳಿಸಿಕೊಳ್ಳಲಾಗಿದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಒಳಾಂಗಣ ವಿನ್ಯಾಸದಲ್ಲಿ ಸೆಂಟ್ರಲ್ ಕನ್ಸೊಲ್ ಕೂಡಾ ಇದೀಗ ತುಸು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಸಾಂಪ್ರದಾಯಿಕ ಗೇರ್ ಲಿವರ್ ಅನ್ನು ಬದಲಿಸುವ ಹೊಸ ಟಾಗಲ್ ಸ್ವಿಚ್‌ನೊಂದಿಗೆ ಡ್ರೈವ್‌ಗಳ ಮೋಡ್‌ಗಳನ್ನು ಬದಲಾಯಿಸಲು ವೃತ್ತಾಕಾರದ ಡಯಲ್, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ನವೀಕರಿಸಿದ ಗ್ರಾಫಿಕ್ಸ್ ಮತ್ತು ಇಂಟರ್ಫೇಸ್ ಅನ್ನು ಒಳಗೊಂಡಿದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಇದಲ್ಲದೆೇ ಫೇಸ್‌ಲಿಫ್ಟ್ ಮಾದರಿಯಲ್ಲಿ ಎರಡನೇ ಸಾಲಿನಲ್ಲಿರುವ ಆಸನಗಳು ಪ್ರತ್ಯೇಕ ನಿಯಂತ್ರಣ ಸೌಲಭ್ಯದೊಂದಿಗೆ ಸ್ಲೈಡಿಂಗ್ ಜೊತೆ ಒರಗಿಕೊಳ್ಳುವ ಮತ್ತು ಹಿಂತೆಗೆದುಕೊಳ್ಳಬಹುದಾಗಿದ್ದು, 15 ಎಂಎಂ ಹೆಚ್ಚುವರಿ ಪ್ಯಾಡಿಂಗ್‌ನೊಂದಿಗೆ ಇದೀಗ ಇನ್ನಷ್ಟು ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಿವೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಜೊತೆಗೆ ಹೊಸ ಕಾರಿನಲ್ಲಿ ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್ ಓಪನಿಂಗ್, ಹ್ಯಾಂಡ್ಸ್-ಫ್ರೀ ಪಾರ್ಕಿಂಗ್ ಮತ್ತು ಸುರಕ್ಷೆತೆಗಾಗಿ ಆರು ಏರ್‌ಬ್ಯಾಗ್‌ಗಳು, ಇಎಸ್‌ಸಿ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯ ಒಳಗೊಂಡಿದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಸಿ5 ಏರ್‌ಕ್ರಾಸ್ ಮಾದರಿಯು ತನ್ನ ವಿಭಾಗದ ಮಾದರಿಗಳಲ್ಲಿಯೇ ಹೆಚ್ಚಿನ ಬೂಟ್‌ಸ್ಪೆಸ್ ಹೊಂದಿದ್ದು, 580 ಲೀಟರ್‌ನಷ್ಟು ಲಗೇಜ್ ಸ್ಥಳಾವಕಾಶದೊಂದಿಗೆ ಅಗತ್ಯಕತೆಗೆ ಅನುಗುಣವಾಗಿ ಬೂಟ್‌ಸ್ಪೆಸ್ ಅನ್ನು 1,630 ಲೀಟರ್‌ಗಳಿಗೆ ವಿಸ್ತರಿಸುವ ಅವಕಾಶ ನೀಡುತ್ತದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಇನ್ನು ಹೊಸ ಫೇಸ್‌ಲಿಫ್ಟ್ ಕಾರಿನಲ್ಲಿ ಸಿಟ್ರನ್ ಕಂಪನಿಯು ಈ ಹಿಂದಿನ ಮಾದರಿಯಲ್ಲಿದ್ದ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮುಂದುವರಿಸಿದ್ದು, ಇದು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 177 ಬಿಎಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್

ಹೊಸ ಕಾರಿನಲ್ಲಿ 2.0 ಡೀಸೆಲ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಪ್ರತಿಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ಇಂಧನ ಕಾರ್ಯಕ್ಷಮತೆ ಹೊಂದಿದ್ದು, ಇದು ಪ್ರತಿ ಲೀಟರ್‌ಗೆ 17.50 ಕಿ.ಮೀ ಮೈಲೇಜ್ ಮೂಲಕ ಹ್ಯುಂಡೈ ಟ್ಯುಸಾನ್, ಜೀಪ್ ಕಂಪಾಸ್ ಮತ್ತು ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‌ಯುವಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

Most Read Articles

Kannada
English summary
Citroen c5 aircross facelift launched in india at rs 36 67 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X