ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಸಿಟ್ರನ್ ಇಂಡಿಯಾ ಕಳೆದ ತಿಂಗಳು ದೇಶದಲ್ಲಿ ಹೊಸ C3 ಸಬ್-ಕಾಂಪ್ಯಾಕ್ಟ್ SUV ಅನ್ನು ಬಿಡುಗಡೆ ಮಾಡಿತ್ತು. ಕಂಪನಿಯು ಭಾರತದಲ್ಲಿ ಇತ್ತೀಚೆಗೆ ಲಗ್ಗೆಯಿಟ್ಟರು ತನ್ನ ಪ್ರಮಾಣಿತ ಮಾದರಿಗಳಿಂದ ಗ್ರಾಹಕರಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಇದೀಗ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಇದರ ಭಾಗವಾಗಿ ಕಂಪನಿಯು ಒಂದೇ ದಿನದಲ್ಲಿ ದೆಹಲಿಯಲ್ಲಿ 75 ಸಿಟ್ರನ್ C3 ಕಾರುಗಳನ್ನು ವಿತರಿಸಿದೆ. ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ವಿಶೇಷ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಕಂಪನಿ ಹೆಳಿಕೊಂಡಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಇದೀಗ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಇದರ ಭಾಗವಾಗಿ ಕಂಪನಿಯು ಒಂದೇ ದಿನದಲ್ಲಿ ದೆಹಲಿಯಲ್ಲಿ 75 ಸಿಟ್ರನ್ C3 ಕಾರುಗಳನ್ನು ವಿತರಿಸಿದೆ. ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ವಿಶೇಷ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಕಂಪನಿ ಹೆಳಿಕೊಂಡಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಕಂಪನಿಯ ಪ್ರಕಾರ, ದೆಹಲಿಯಲ್ಲಿರುವ ತನ್ನ ಡೀಲರ್ ಪಾಲುದಾರ ಪ್ಯಾರಿಸ್ ಮೋಟೋಕಾರ್ಪ್ ಮೂಲಕ 75 ಹೊಸ ಸಿಟ್ರನ್ C3 ಕಾರುಗಳನ್ನು ಗ್ರಾಹಕರಿಗೆ ಪ್ರಸ್ತುತಪಡಿಸಲಾಗಿದೆ. ಮೆಗಾ ಗ್ರಾಹಕ ವಿತರಣಾ ಕಾರ್ಯಕ್ರಮವು ಹೊಸದಿಲ್ಲಿಯ ಅಶೋಕ್ ಹೋಟೆಲ್‌ನಲ್ಲಿ ನಡೆಯಿತು. ಈ ಹೊಸ ಸಿಟ್ರನ್ C3 ಬೆಲೆಯು 5.70 ಲಕ್ಷ ರೂ. (ಎಕ್ಸ್ ಶೋ ರೂಂ)ನಿಂದ ಪ್ರಾರಂಭವಾಗುತ್ತದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಎಲ್ಲಾ ಮುಂಗಡ ಬುಕ್ ಮಾಡಿದ C3 ಗ್ರಾಹಕರಿಗೆ ಸಿಟ್ರನ್ ಇಂಡಿಯಾದ ಬ್ರಾಂಡ್ ಹೆಡ್ ಸೌರಭ್ ವತ್ಸಾ, ಡೀಲರ್ ಪ್ರಿನ್ಸಿಪಾಲ್ ಹಿಮಾಂಶು ಅಗರ್ವಾಲ್ ಮತ್ತು ಸಿಇಒ ಅನಿಲ್ ಛತ್ವಾಲ್ ಜಂಟಿಯಾಗಿ ಕೀಗಳನ್ನು ಹಸ್ತಾಂತರಿಸಿದರು. ಹೊಸ ಸಿಟ್ರನ್ C3 ಕೆಲವು SUV-ತರಹದ ಅಂಶಗಳನ್ನು ಹೊಂದಿರುವ ಹ್ಯಾಚ್‌ಬ್ಯಾಕ್ ಆಗಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಇದನ್ನು ಭಾರತದಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಆರಂಭಿಕ ಮಾದರಿಯು 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ತ್ರಿ-ಸಿಲಿಂಡರ್ ಪ್ಯೂರ್‌ಟೆಕ್ 82 ಪೆಟ್ರೋಲ್ ಎಂಜಿನ್‌ ಮತ್ತು ಹೈ ಎಂಡ್ ಮಾದರಿಯಲ್ಲಿ ಟರ್ಬೊ ಚಾರ್ಜ್ ವೈಶಿಷ್ಟ್ಯತೆಯ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಆರಂಭಿಕ ವೆರಿಯೆಂಟ್‌ನಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆ ನೀಡಿದ್ದರೆ ಹೈ ಎಂಡ್ ಮಾದರಿಯಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಿದ್ದು, ಹೊಸ ಕಾರಿನಲ್ಲಿ ಸದ್ಯಕ್ಕೆ ಮ್ಯಾನುವಲ್ ಆಯ್ಕೆ ಮಾತ್ರ ನೀಡುತ್ತಿರುವ ಮುಂಬರುವ ದಿನಗಳಲ್ಲಿ ಆಟೋಮ್ಯಾಟಿಕ್ ಆವೃತ್ತಿ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿರುವ ಆರಂಭಿಕ ಮಾದರಿಯು 82 ಬಿಎಚ್‌ಪಿ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ 6-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿರುವ ಟರ್ಬೊ ಪೆಟ್ರೋಲ್ ಆವೃತ್ತಿಯು 110 ಬಿಎಚ್‌ಪಿ, 190 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಲೈವ್ ವೆರಿಯೆಂಟ್‌ನಲ್ಲಿ 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮಾತ್ರ ಆಯ್ಕೆ ಲಭ್ಯವಿದ್ದರೆ ಫೀಲ್ ವೆರಿಯೆಂಟ್‌ನಲ್ಲಿ ನ್ಯಾಚುರಲಿ ಆಸ್ಪರೆಟೆಡ್ ಮತ್ತು ಟರ್ಬೊ ಪೆಟ್ರೋಲ್ ಆಯ್ಕೆ ಲಭ್ಯವಿದೆ. ಹಾಗೆಯೇ ಹೊಸ ಮೈಕ್ರೊ ಎಸ್‌ಯುವಿಯು ಪ್ರತಿಸ್ಪರ್ಧಿ ಕಾರು ಮಾದರಿಗಿಂತಲೂ ಸಾಕಷ್ಟು ಆಕರ್ಷಕವಾಗಿದ್ದು, ದೊಡ್ಡದಾದ ಗ್ರಿಲ್‌ನೊಂದಿಗೆ ಕ್ರೋಮ್ ಫಿನ್ಸಿಂಗ್ ಹೊಂದಿರುವ ಸಿಟ್ರನ್ ಲೊಗೊ, ವಿಭಜಿತವಾಗಿರುವ ಹೆಡ್‌ಲ್ಯಾಂಪ್, ಡಿಆರ್‌ಎಲ್, ಲೊಗೊಗೆ ಹೊಂದಾಣಿಕೆಯಾಗುವ ಎಕ್ಸ್ ಶೇಫ್ ಡಿಸೈನ್‌ನೊಂದಿಗೆ ಗಮನಸೆಳೆಯುತ್ತದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಎರಡು ಬದಿಯಲ್ಲೂ ಸ್ಕಫ್ ಪ್ಲೇಟ್, ಏರ್ ಪ್ಯಾಕೇಟ್ ಡಿಸೈನ್, ಅಲಾಯ್ ವ್ಹೀಲ್, ರೂಫ್ ರೈಲ್ಸ್, ಡ್ಯುಯಲ್ ಟೋನ್ ರೂಫ್, ಸ್ಪ್ಲಿಟ್ ಟೈಲ್ ಲ್ಯಾಂಪ್ ಮತ್ತು 180 ಗ್ರೌಂಡ್ ಕಿಯರೆನ್ಸ್ ಆಕರ್ಷಕವಾಗಿದೆ. ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಬಿಡಿಭಾಗಗಗಳಿಂತಲೂ ಹೆಚ್ಚು ಆಕರ್ಷವಾಗಿರುವ ಮತ್ತು ಚಾಲನೆಗೆ ಪೂರಕವಾದ ಆಕ್ಸೆಸರಿಸ್ ಪ್ಯಾಕೇಜ್ ಸಹ ಪರಿಚಯಿಸಲಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸುಮಾರು 78 ಆಕ್ಸೆಸರಿಸ್‌ಗಳನ್ನು ಒಳಗೊಂಡಿರಲಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಹೊಸ ಕಾರಿನ ಕ್ಯಾಬಿನ್ ವೈಶಿಷ್ಟ್ಯತೆಯು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍‌ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಕ್ವಿಕ್ ಚಾರ್ಜಿಂಗ್ ಯುಎಸ್‌ಬಿ ಸಾಕೆಟ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೊಲ್, 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಸಿ3 ಮಾದರಿಯ ಮತ್ತೊಂದು ವಿಶೇಷವೆಂದರೆ ಕಂಪನಿಯು ಬಜೆಟ್ ಕಾರಿನಲ್ಲೂ ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯವನ್ನು ನೀಡುತ್ತಿದ್ದು, ಎಲ್ಇಡಿ ಡಿಆರ್‌ಎಲ್‌, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಫೋಲ್ಡ್-ಫ್ಲಾಟ್ ಹಿಂದಿನ ಸೀಟ್, ಒನ್-ಟಚ್ ಡೌನ್ ವಿಂಡೋಸ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಇದಲ್ಲದೆ ಹೊಸ ಕಾರಿನಲ್ಲಿ ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಹೊಸ ಕಾರು ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ 653 ಎಂಎಂ ಲೆಗ್‌ರೂಂನೊಂದಿಗೆ 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್, ಸ್ಮಾರ್ಟ್‌ಫೋನ್ ಹೋಲ್ಡರ್ ಮತ್ತು ಸೆಂಟರ್ ಕನ್ಸೊಲ್ ಹೊಂದಿದೆ.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಇನ್ನು ಸಿಟ್ರನ್ C3 ನ ಪರಿಚಯಾತ್ಮಕ ಬೆಲೆಗಳು ರೂ. 5.70 ಲಕ್ಷದಿಂದ ರೂ. 8.05 ಲಕ್ಷದವರೆಗೆ ಇವೆ. ಕಂಪನಿಯು ಇದನ್ನು 19 ನಗರಗಳಾದ್ಯಂತ 20 ಲಾ ಮೈಸನ್ ಸಿಟ್ರನ್ ಶೋರೂಮ್‌ಗಳ ಮೂಲಕ ಮಾರಾಟ ಮಾಡುತ್ತಿದೆ. ಕಾರ್ಖಾನೆಯಿಂದ ನೇರವಾಗಿ 90 ಕ್ಕೂ ಹೆಚ್ಚು ನಗರಗಳಲ್ಲಿನ ಮನೆಗಳಿಗೆ ತಲುಪಿಸಲು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು.

ಒಂದೇ ದಿನ 75 C3 ಕಾರುಗಳನ್ನು ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಸಿಟ್ರನ್ ಕಂಪನಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಿ3 ಮಾದರಿಯೊಂದಿಗೆ ಹೆಚ್ಚಿನ ಬೇಡಿಕೆಯ ನೀರಿಕ್ಷೆಯಲ್ಲಿರುವ ಕಂಪನಿಯು ಹೊಸ ಕಾರನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಬೆಲೆ ವಿಚಾರವಾಗಿ ಟಾಟಾ ಪಂಚ್ ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

Most Read Articles

Kannada
English summary
Citroen delivers 75 C3s in Delhi on a single day to celebrate Independence Day
Story first published: Friday, August 19, 2022, 17:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X